ಬಡತನದಿಂದ ಸಿರಿತನಕ್ಕೆ ಬಂದ ಅಂಬಾನಿಯವರ ಯಶಸ್ಸಿನ ಹಾದಿ ಹೇಗಿತ್ತು ನೋಡಿ

0 2

ಮುಖೇಶ್ ಅಂಬಾನಿ ಇಂದು ಶ್ರೀಮಂತ ಮನುಷ್ಯ. ಫೇಸ್ಬುಕ್ ಕಂಪನಿಯವರು ಜಿಯೋ ಕಂಪನಿಯ ಜೊತೆ ಹೂಡಿಕೆ ಮಾಡಿದ್ದಾರೆ. ನಾವು ಇಲ್ಲಿ ಮುಖೇಶ್ ಅಂಬಾನಿ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮುಖೇಶ್ ಅಂಬಾನಿ ಅವರು ಏಪ್ರಿಲ್ 19ರಂದು 1957ರಲ್ಲಿ ಜನಿಸಿದರು. ಈಗಿನ ಯೆಮೆನ್ ದೇಶದಲ್ಲಿ ಹುಟ್ಟಿದ್ದರು. ತಂದೆಯ ಹೆಸರು ಧೀರೂಬಾಯಿ ಅಂಬಾನಿ. ತಾಯಿಯ ಹೆಸರು ಕೋಕಿಲಾ. ಅನಿಲ್ ಅಂಬಾನಿ ಇವರ ತಮ್ಮ.ಇವರಿಗೆ ಇಬ್ಬರು ಸಹೋದರಿಯರು ಇದ್ದಾರೆ. ಮುಖೇಶ್ ಅಂಬಾನಿ ಅವರಿಗೆ ಒಂದು ವರ್ಷ ಇದ್ದಾಗ ಧೀರೂಬಾಯಿ ಅಂಬಾನಿ ಭಾರತಕ್ಕೆ ಬಂದು ಮಸಾಲೆ ಪದಾರ್ಥಗಳು ಮತ್ತು ಬಟ್ಟೆಗಳ ತಯಾರಿಕೆಯನ್ನು ಶುರು ಮಾಡಿದರು. 1970ರವರೆಗೆ ಮುಂಬೈನಲ್ಲಿ 2ಬಿ.ಎಚ್.ಕೆ. ಮನೆಯಲ್ಲಿ ಇವರ ಕುಟುಂಬ ವಾಸವಿತ್ತು.

ಇವರು ಭಾರತಕ್ಕೆ ಬಂದ ಮೇಲೆ ಆರ್ಥಿಕ ಪರಿಸ್ಥಿತಿ ಸುಧಾರಿಸಿತು. ಶಾಲಾದಿನಗಳಲ್ಲಿ ಇವರಿಗೆ ಹಾಕಿ ಎಂದರೆ ಬಹಳ ಇಷ್ಟವಿತ್ತು. ಇವತ್ತು ಅಂಬಾನಿ ಉದ್ಯಮಿ ಆಗಿರದಿದ್ದರೆ ಹಾಕಿ ಆಟಗಾರ ಆಗುತ್ತಿದ್ದರೇನೋ. ಮುಖೇಶ್ ಅಂಬಾನಿ ಹೈಸ್ಕೂಲ್ ಸ್ನೇಹಿತರು ಯಾರೆಂದರೆ ಗೋದ್ರೇಜ್ ಕಂಪನಿಯ ಚೇರ್ಮನ್ ಆದಿ ಗೋದ್ರೇಜ್ ಮತ್ತು ಮಹೀಂದ್ರಾ ಕಂಪನಿಯ ಚೇರ್ಮನ್ ಆನಂದ್ ಮಹೀಂದ್ರಾ ಮತ್ತು ಉದ್ಯಮಿ ಆನಂದ್ ಜೈನ್. ಮುಖೇಶ್ ಅಂಬಾನಿ ಯಾವಾಗಲೂ ಮ’ದ್ಯಪಾನ ಮಾಡಲಿಲ್ಲ. ಇವರು ಶುದ್ಧಸಸ್ಯಾಹಾರಿ. 1980ರಲ್ಲಿ ಇಂದಿರಾಗಾಂಧಿ ಸರ್ಕಾರವು ಪಾಲಿಸ್ಟರ್ ನೂಲು ತಯಾರಿಸಲು ಧೀರೂಬಾಯಿ ಅಂಬಾನಿ ಲೈಸನ್ಸ್ ಕೊಟ್ಟಿತ್ತು. 1986ರಲ್ಲಿ ಧೀರೂಬಾಯಿ ಅಂಬಾನಿಗೆ ಸ್ಟ್ರೋಕ್ ಆದಾಗ ಎಲ್ಲಾ ಜವಾಬ್ದಾರಿ ಇವರ ಮೇಲೆ ಬಿತ್ತು.

ಮುಖೇಶ್ ಅಂಬಾನಿ ರಿಲಯನ್ಸ್ ಇನ್ಫೋಕಾಮ್ ಸ್ಥಾಪಿಸಿದ್ದರು. ಇನ್ಫೋಕಾಮ್ ಎಂದರೆ ಇಂದಿನ ರಿಲಯನ್ಸ್ ಕಮ್ಯುನಿಕೇಶನ್. 1999ರಲ್ಲಿ ಗುಜರಾತಿನ ಜಾಮ್ನಗರದಲ್ಲಿ ತೈಲ ಸಂಸ್ಕರಣಾ ಘಟಕವನ್ನು ಸ್ಥಾಪಿಸಿದ್ದರು. ಇದು ವಿಶ್ವದ ಅತಿ ದೊಡ್ಡ ತೈಲ ಘಟಕವಾಗಿದೆ. ಧೀರುಬಾಯಿ ಅಂಬಾನಿ ಅವರಿಗೆ ಮತ್ತೆ 2002ರಲ್ಲಿ ಸ್ಟ್ರೋಕ್ ಹೊಡೆದು ವಿಧಿವಶರಾದರು. ಆಗ ಅಂಬಾನಿ ಸಾಮ್ರಾಜ್ಯದ ಒಡೆಯ ಸ್ಥಾನಕ್ಕೆ ಮತ್ತು ಆಸ್ತಿಗಳ ಬಗ್ಗೆ ಪ್ರಶ್ನೆ ಹುಟ್ಟಿತು. ಆಗ ಮುಖೇಶ್ ಅಂಬಾನಿಯ ತಾಯಿ ಇಡೀ ಆಸ್ತಿಯನ್ನು ಸಮಾನವಾಗಿ ತನ್ನ ಇಬ್ಬರೂ ಪುತ್ರರಿಗೆ ಹಂಚಿದಳು. 2016ರ ಸೆಪ್ಟೆಂಬರ್ ನಲ್ಲಿ ಜಿಯೋ ಸೇವೆಯನ್ನು ಆರಂಭಿಸಿದರು.

ಬಹಳ ಯಶಸ್ಸು ಕಂಡು ಕಂಪನಿಯ ಷೇರುಗಳು ರಾಕೆಟ್ ವೇಗಕ್ಕೆ ಹೋಯಿತು. ನಂತರ ಫ್ರೀ ಜಿಯೋ ಫೋನ್ ನ್ನು ಲಾಂಚ್ ಮಾಡಲಾಯಿತು. ಈಗ ಮಾರ್ಕ್ಸ್ಝುಕರ್ ಬರ್ಗ್ ಅವರ ಫೇಸ್ಬುಕ್ ಕಂಪನಿ ಜಿಯೋ ಜೊತೆ ಕೈ ಜೋಡಿಸಿ 43,574 ಕೋಟಿ ಹೂಡಿಕೆ ಮಾಡಿ ಶೇಕಡಾ 9.99ರಷ್ಟು ಷೇರುಗಳನ್ನು ಖರೀದಿ ಮಾಡಿದೆ. ಇವರು ಎಷ್ಟೇ ಶ್ರೀಮಂತರಾದರೂ ತೋರಿಸಿಕೊಳ್ಳದೇ ಒಂದು ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸುತ್ತಾರೆ. ಇವರು ವಾರಕ್ಕೆ 2 ರಿಂದ 3 ಸಿನೆಮಾ ನೋಡುತ್ತಾರೆ. ಈಗ ಮುಂಬೈನಲ್ಲಿ 27 ಅಂತಸ್ತಿರೋ ಮನೆಯಲ್ಲಿ ವಾಸವಾಗಿದ್ದಾರೆ. ಇದರ ಬೆಲೆ 7000ಕೋಟಿ ರೂಪಾಯಿ. ಇದು ಜಗತ್ತಿನ ಅತ್ಯಂತ ದುಬಾರಿ ವಸತಿ ಕಟ್ಟಡ ಎನಿಸಿಕೊಂಡಿದೆ.

ಇಲ್ಲಿ ಸಿನೆಮಾ ಥಿಯೇಟರ್, ಸ್ವಿಮ್ಮಿಂಗ್ ಫೂಲ್ ಗಳು ಇವೆ. ಇಲ್ಲಿ 600ಜನ ಕೆಲಸಗಾರರು ಇದ್ದಾರೆ. ಧೀರುಬಾಯಿ ಅಂಬಾನಿ ಒಂದು ಡ್ಯಾನ್ಸ್ ಕಾರ್ಯಕ್ರಮಕ್ಕೆ ಹೋದಾಗ ಅಲ್ಲಿ ನೀತಾ ಅವರನ್ನು ನೋಡಿ ಅವರೇ ತನ್ನ ಸೊಸೆಯಾಗಬೇಕೆಂದು 1985ರಲ್ಲಿ ಮುಖೇಶ್ ಅಂಬಾನಿಯ ಜೊತೆ ಮದುವೆ ಮಾಡಿಸಿದರು. ಇವರಿಗೆ ಮೂವರು ಮಕ್ಕಳು ಅನಂತ್, ಆಕಾಶ್ ಹಾಗೂ ನಿಶಾ. 2007ರಲ್ಲಿ ತಮ್ಮ ಪತ್ನಿಯ ಹುಟ್ಟುಹಬ್ಬಕ್ಕೆ ಮುಖೇಶ್ ಅಂಬಾನಿ ಅವರು 400ಕೋಟಿಯ ಏರ್ ಬಸ್ ವಿಮಾನವನ್ನು ಉಡುಗೊರೆಯಾಗಿ ನೀಡಿದ್ದರು. 2008ರಲ್ಲಿ 800ಕೋಟಿ ಕೊಟ್ಟು ಮುಂಬೈ ಇಂಡಿಯನ್ಸ್ ತಂಡವನ್ನು ಖರೀದಿ ಮಾಡಿದರು.

Leave A Reply

Your email address will not be published.