ಪೊಲೀಸ್ ಇಲಾಖೆಯಲ್ಲಿ ಹೊಸ ನೇಮಕಾತಿ

0 2

ಪೊಲೀಸ್ ಇಲಾಖೆಯಿಂದ ಹೊಸ ನೇಮಖಾತಿಯನ್ನು ಕರೆಯಲಾಗಿದೆ. ತಂತ್ರಜ್ಞರು ಹಾಗೂ ಸಹಾಯಕರು ಹುದ್ದೆಗಳಿಗೆ ಕರೆ ನೀಡಲಾಗಿದೆ. 27 ಅಕ್ಟೋಬರ್ 2020 ರಿಂದ ಅಪ್ಲಿಕೇಶನ್ ತುಂಬಬಹುದು. ಇದಕ್ಕೆ ಸಂಬಂಧಿಸಿದಂತೆ ನೆ’ಗೆಟಿವ್ ಮಾರ್ಕ್ಸ್ ಮತ್ತು ಸಿಲೇಬಸ್ ಗಳ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಸಾಮಾನ್ಯ ವರ್ಗ, ಪ್ರವರ್ಗ 2A, 2B, 3A, 3B ದವರು 250 ರೂಪಾಯಿ ಕಟ್ಟಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗಳು 100 ರೂಪಾಯಿ ಕಟ್ಟಬೇಕು. ಈ ಹಣಗಳು ಅಪ್ಲಿಕೇಶನ್ ಫೀಸ್ ಗಳಾಗಿವೆ. ಈ ಅಪ್ಲಿಕೇಶನ್ ತುಂಬುವ ಕೊನೆಯ ದಿನಾಂಕ 25 ನವೆಂಬರ್ 2020. ಇಲ್ಲಿ ಒಟ್ಟಾರೆಯಾಗಿ ಮೂರು ರೀತಿಯ ಹುದ್ದೆಗಳಿಗೆ ಕರೆ ನೀಡಲಾಗಿದೆ. ಅವುಗಳೆಂದರೆ ಪ್ರಯೋಗಾಲಯ ಸಹಾಯಕರು, ಇ.ಇ.ಜಿ. ತಂತ್ರಜ್ಞರು, ಪ್ರಯೋಗಾಲಯ ಸೇವಕರು.

ವಿದ್ಯಾರ್ಹತೆಯ ಬಗ್ಗೆ ಹೇಳುವುದಾದರೆ ಇ.ಇ.ಜಿ. ತಂತ್ರಜ್ಞರ ಪದವಿಗೆ ಅಪ್ಲಿಕೇಶನ್ ಹಾಕುವವರು ವಿಜ್ಞಾನ ಪದವಿ ಹೊಂದಿರಬೇಕು. ಇ.ಇ.ಜಿ ತಾಂತ್ರಿಕ ಕೋರ್ಸ್ ನ ಬಗ್ಗೆ ವಿದ್ಯಾರ್ಹತೆ ಹೊಂದಿರಬೇಕು. ಪ್ರಯೋಗಾಲಯ ಸಹಾಯಕರ ಪದವಿಗೆ ಅಪ್ಲಿಕೇಶನ್ ತುಂಬುವುದಾದರೆ ಫೋಟೋಗ್ರಾಫಿಯಲ್ಲಿ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರಬೇಕು ಅಥವಾ ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆಗಳಿಂದ ಪದವಿ ಹೊಂದಿರಬಹುದು. ಅದರ ಜೊತೆಗೆ ಒಂದು ವರ್ಷದ ಅನುಭವ ಹೊಂದಿರಬೇಕಾಗುತ್ತದೆ. ಪ್ರಯೋಗಾಲಯ ಸೇವಕರು ಪದವಿಗೆ ಅಪ್ಲಿಕೇಶನ್ ತುಂಬುವುದಾದರೆ ಪಿಯುಸಿ ಅಥವಾ 10+2 ವಿಜ್ಞಾನ ವಿಷಯದಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿಯ ಬಗ್ಗೆ ಹೇಳುವುದಾದರೆ ಸಾಮಾನ್ಯ ವರ್ಗದವರು 35ವರ್ಷ, 2A, 2B, 3A, 3B 38ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ1ಕ್ಕೆ 40ವರ್ಷ ವಯೋಮಿತಿ ಹೊಂದಿರಬೇಕು. ಲಿಖಿತ ಪರೀಕ್ಷೆಯ ಮೇಲೆ ಸೆಲೆಕ್ಷನ್ ನಡೆಯುತ್ತದೆ. ಮೊದಲ ಎರಡು ಹುದ್ದೆಗಳಿಗೆ ಎರಡು ಪ್ರಶ್ನೆ ಪತ್ರಿಕೆ ಇರುತ್ತದೆ. ಮೂರನೆಯ ಹುದ್ದೆಗೆ ಒಂದು ಪ್ರಶ್ನೆ ಪತ್ರಿಕೆ ಇದ್ದು ಯಾವುದೇ ರೀತಿಯ ಋಣಾತ್ಮಕ ಅಂಕಗಳು ಇರುವುದಿಲ್ಲ. ವೇತನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಮೊದಲ ಹುದ್ದೆಗೆ ಶುರುವಿನಲ್ಲಿ 27,630, ಎರಡನೇ ಹುದ್ದೆಗೆ 21400, ಮೂರನೇ ಹುದ್ದೆಗೆ 18,600 ಇರುತ್ತದೆ.

Leave A Reply

Your email address will not be published.