ಮಂಡ್ಯದ ಗಂಡು ಅಂಬರೀಶ್ ಅಂದ್ರೆ ಅಭಿಮಾನಿಗಳ ಆರಾಧ್ಯದೈವ.‌ ಅಂಬಿಯ ಮಗ್ದ ಮನಸಿನ ಒರಟು ಮಾತಿಗೆ ತಲೆ ಬಾಗದವರೆ ಇಲ್ಲ. ಆದರೆ, ರೆಬೆಲ್ ಸ್ಟಾರ್ ನಮ್ಮನ್ನೆಲ್ಲಾ ಅಗಲಿ 2 ವರ್ಷ ತುಂಬಿದೆ‌. ವ್ಯಕ್ತಿ ಸತ್ತರು ಅಂಬಿ ಮೇಲಿನ ಪ್ರೀತಿ, ಅಭಿಮಾನ ಕಡಿಮೆ ಆಗಿಲ್ಲ. ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಕಲಿಯುಗ ಕರ್ಣನಿಗೆ ಅಭಿಮಾನಿಗಳು ಪ್ರೀತಿಯಿಂದ ಗುಡಿ ಕಟ್ಟಿದ್ದಾರೆ. ಅಂಬರೀಶ್‌ ಅವರ ವ್ಯಕ್ತಿತ್ವದ ನೆನಪನ್ನ ಮುಂದಿನ ಪೀಳಿಗೆಗೆಯೂ ತಿಳಿಯುವಂತೆ ಮಾಡುತ್ತಿದ್ದಾರೆ‌. ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಅವರು 2018 ನವೆಂಬರ್ 24 ರಂದು ಇಹಲೋಕ ತ್ಯಜಿಸಿದರು. ಮೆಚ್ಚಿನ ನಟನ ಕಳೆದುಕೊಂಡ ಕೋಟ್ಯಾಂತರ ಅಭಿಮಾನಿಗಳು ದುಃಖದ ಮಡುವಿನಲ್ಲಿ ಮುಳುಗಿದರು. ಅಭಿಮಾನಿಗಳು ಅಂಬಿ ಬದುಕಿದ್ದಾಗ ತೋರಿದ್ದ ಪ್ರೀತಿ, ಅಭಿಮಾವನ್ನೇ ಅವರ ಸಾವಿನ ನಂತರವೂ ಮುಂದುವ ರೆಸಿದ್ದಾರೆ. ನಲ್ಮೆಯ ನಟನಿಗೆ ಗುಡಿಕಟ್ಟಿ ಪೂಜಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಅದೇ ರೀತಿ ಮಂಡ್ಯದಲ್ಲೊಬ್ಬ ಅಪ್ಪಟ ಅಂಬಿ ಅಭಿಮಾನಿ ಇದ್ದಾರೆ ಇವರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳ ಪಾಲಿನ ರೆಬೆಲ್ ಸ್ಟಾರ್ ನಾಯಕನಾಗಿ, ರಾಜಕೀಯದಲ್ಲಿ‌ ಅಜಾತ ಶತ್ರುವಾಗಿ ಸಾಕಷ್ಟು ಹೆಸರು ಮಾಡಿದ್ದರು. ಅಂಬರೀಷ್​ ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರ ನೆನಪುಗಳು ಮಾತ್ರ ಅಭಿಮಾನಿಗಳ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆ.  ಅಭಿಮಾನಿಗಳಲ್ಲೊ ಅವರ ಮೇಲಿನ ಪ್ರೀತಿ ಮಾತ್ರ ಕೊಂಚವೂ ಕಡಿಮೆ ಆಗಿಲ್ಲ. ಇದಕ್ಕೆ ಸಾಕ್ಷಿ ಮಂಡ್ಯ ಜಿಲ್ಲೆಯಲ್ಲಿ ಅಂಬರೀಷ್​ ಅವರ ಅಪ್ಪಟ ಅಭಿಮಾನಿಯೊಬ್ಬರು ರೆಬೆಲ್​ ಸ್ಟಾರ್​ ಅವರಂತೆಯೇ ಡೈಲಾಗ್ ಹೊಡೆಯುತ್ತಾ ಅವರಂತೆಯೇ ವೇಷ ಧರಿಸಿ, ಅವರ ಅಭಿನಯವನ್ನು ಅನುಕರಣೆ ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಈಗ ಜೂನಿಯರ್​ ಅಂಬಿ ಎಂದೇ ಖ್ಯಾತರಾಗಿದ್ದಾರೆ.  ಈ ಮೂಲಕ ಅಂಬಿ ಅವರ ನೆನಪುಗಳನ್ನು ಸದಾ ಹಸಿರಾಗಿಸಲು ಶ್ರಮಿಸುತ್ತಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೊಸಗಾವಿ ಗ್ರಾಮದ ಡಿ.ಪುಟ್ಟಸ್ವಾಮಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಜೂನಿಯರ್​ ಅಂಬರೀಷ್​ ಆಗಿ ಮಿಂಚುತ್ತಿರುವ ವ್ಯಕ್ತಿ. ಈತ  ಅಂಬರೀಷ್​ ಅವರ ಅಪ್ಪಟ ಅಭಿಮಾನಿಯಾಗಿದ್ದು, ಅವರಂತೆಯೇ ಅಭಿನಯದ ಮಾಡುತ್ತಾ, ಅವರ ಮ್ಯಾನರಿಸಂ, ಸ್ಟೈಲ್​, ಭಾಷೆ ಎಲ್ಲವನ್ನೂ ಅನುಕರಣೆ ಮಾಡುತ್ತಾರೆ. ಅಂಬರೀಷ್​ ಅವರ ಸಿನಿಮಾದ ಹಾಡುಗಳು, ದೃಶ್ಯಗಳು ಸೇರಿದಂತೆ  ಅಭಿನಯ, ಮ್ಯಾನರಿಸಂ, ಭಾಷೆ, ಸ್ಟೈಲ್ ಅಳವಡಿಸಿಕೊಂಡು ಅಂಬಿ ಅಭಿನಯದ ಚಿತ್ರದ ಹಾಡು ಇಲ್ಲವೇ ಚಿತ್ರದ ದೃಶ್ಯವನ್ನು ಡಬ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುತ್ತಿರುತ್ತಾರೆ. ಇವರ ನಟನೆ ಹಾಗೂ ಇವರ ಮ್ಯಾನರಿಸಂ ನೋಡಿ ಜನರು ಇವರನ್ನು ಜೂಜೂನಿಯರ್ ಅಂಬರೀಷ್ ಎಂದೇ ಕರೆಯಲು ಶುರು ಮಾಡಿದ್ದಾರೆ‌. ಇವರು ಇದುವರೆಗೂ ಅಂಬಿ ಅಭಿನಯದ ಚಿತ್ರಗಳ ನೂರಾರು ಡಬ್ ವಿಡಿಯೋಗಳನ್ನು ಈ ಹಿಂದೆ ಟಿಕ್​ಟಾಕ್ ಹಾಗೂ ಈಗ ಮೋಜ್​, ರುಪೋಸ್ ಆ್ಯಪ್​ಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಶೇಷ ಅಂದ್ರೆ ಈತ ಅಂಬಿ ಚಿತ್ರದಲ್ಲಿನ ಲೊಕೇಶನ್​ ಹಾಗೂ ಕಾಸ್ಟ್ಯೂ ಮ್ ಗಳನ್ನು ಸಿನಿಮಾದಲ್ಲಿರುವಂತೆಯೇ ಆಯ್ಕೆ ಮಾಡಿಕೊಂಡು ಅಲ್ಲಿ ತಮ್ಮ ವಿಡಿಯೋ ರೆಕಾರ್ಡ್​ ಮಾಡುತ್ತಾರೆ. ನಂತರ ಅದನ್ನು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡುತ್ತಾರೆ.

ಇವರ ಈ ವಿಡಿಯೋ ನೋಡಿದವರು ಇವರನ್ನು ಜೂನಿಯರ್​ ಅಂಬಿ ಎಂದು ಕರೆಯಲು ಆರಂಭಿಸಿದ್ದಾರೆ. ಇವರು ಎಲ್ಲೇ ಹೋದರೂ ಜನರು ಇವರನ್ನ ಜೂನಿಯರ್ ಅಂಬಿ ಎಂದೇ ಗುರುತಿಸುತ್ತಿದ್ದಾರೆ. ಟಿಕ್ ಟಾಕ್​ ನಿಷೇಧವಾದ ನಂತರ ಕೆಲ ಸಮಯ ಸುಮ್ಮನಿದ್ದ ಪುಟ್ಟಸ್ವಾಮಿ ಈಗ ಬದಲಿ ಆ್ಯಪ್​ಗಳಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ.  ಮೋಜ್, ರುಪೋಸ್, ಸ್ನೇಕೀ ಸೇರಿದಂತೆ ಫೇಸ್​ಬುಕ್​ನಲ್ಲಿ ಮತ್ತೆ ಅಂಬಿ ಅಭಿನಯದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಬಾರಿ ಮತ್ತೊಂದು ವಿಶೇಷ  ಕಲಾ ಪ್ರದರ್ಶನ ಮಾಡ್ತಿದ್ದು, ಮಹಿಳಾ ಕಲಾವಿದರನ್ನು ಕೂಡ ತಮ್ಮ ಈ ವಿಡಿಯೋದಲ್ಲಿ ಬಳಸಿಕೊಂಡು ಅಭಿನಯಸುತ್ತಾ ಅಂಬಿ ಅವರ ಮ್ಯಾನರಿಸಂ ತೋರಿಸಲು ಮುಂದಾಗಿದ್ದಾರೆ. ತಮ್ಮೊಂದಿಗೆ ವಿಡಿಯೋದಲ್ಲಿ ಕಾಣಿಸಿಕೊಳ್ಳುವ ಮಹಿಳಾ ಕಲಾವಿದರಿಗೆ ತಮ್ಮ ಸ್ವಂತ ಖರ್ಚಿನಿಂದ ಕಾಸ್ಟ್ಯೂಮ್​ ವ್ಯವಸ್ಥೆ ಮಡಿಸುತ್ತಾರಂತೆ. ಜೊತೆಗೆ ಲೋಕೇಷನ್​ಗೆ ತಾವೇ ಅವರನ್ನು ಕರೆದುಕೊಂಡು ಹೋಗುತ್ತಾರಂತೆ. ರೆಬೆಲ್​ ಸ್ಟಾರ್​ ಅಂಬರೀಷ್​ ಭೌತಿಕವಾಗಿ ಮರೆಯಾಗಿದ್ರು  ಮಾನಸಿಕವಾಗಿ ಅಭಿಮಾನಿಗಳ ಎದೆಯಲ್ಲಿ ಇನ್ನು ಹೃದಯ ಸಾಮ್ರಾಟನಾಗಿ ಮೆರೆಯತ್ತಿದ್ದಾರೆ. ಅದೆಷ್ಟೋ ಅಪ್ಪಟ ಅಭಿಮಾನಿಗಳು ಅಂಬರೀಷ್​ ಅವರನ್ನು ಇನ್ನು ತಮ್ಮ ಆರಾಧ್ಯ ದೈವವೆಂದು ಪೂಜಿಸುತ್ತಿದ್ದಾರೆ.

Leave a Reply

Your email address will not be published. Required fields are marked *