ಇತ್ತೀಚಿನ ದಿನಗಳಲ್ಲಿ ತನ್ನ ನಟನೆಯ ಮೂಲಕ ಜನಮನಗೆದ್ದ ನಟಿ ಸಾಯಿ ಪಲ್ಲವಿ. ಪ್ರತಿಭಾವಂತ ನಟಿ ಸಾಯಿ ಪಲ್ಲವಿ ಸಿನಿಮಾ ಮೂಲಕ ಮಾತ್ರವಲ್ಲದೆ ಜೀವನ ಶೈಲಿಯಲ್ಲಿ ಕೂಡಾ ಜನರ ಮನ ಗೆದ್ದಿದ್ದಾರೆ. ಈ ಮೂಲಕ ತಾನೊಬ್ಬ ಸರಳ ವ್ಯಕ್ತಿತ್ವ ಹೊಂದಿರುವ ನಟಿ ಎನ್ನುವುದನ್ನು ನಿರೂಪಿಸಿದ್ದಾರೆ. ಇನ್ನು ಸಾಯಿ ಪಲ್ಲವಿ ಅವರಿಗೆ ಒಬ್ಬಳು ತಂಗಿ ಕೂಡಾ ಇದ್ದು ಅವರೂ ಸಹ ಸಿನಿಮಾ ರಂಗಕ್ಕೆ ಬರಲು ತಯಾರಿ ನಡೆಸುತ್ತಾ ಇದ್ದಾರೆ. ತಂಗಿಯ ಎಲ್ಲಾ ಕೆಲಸಕ್ಕೂ ಸಹಾಯ ಮಾಡುವ ನಟಿ ಸಾಯಿ ಪಲ್ಲವಿ ತಂಗಿಯ ಸಿನಿಮಾ ರಂಗ ಪ್ರವೇಶಕ್ಕೂ ಕಾರಣ ಆಗಿದ್ದಾರೆ. ಅವರ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದಾಗ ಅಕ್ಕ ತಂಗಿ ಇಬ್ಬರ ಬಾಂಧವ್ಯ ಹೇಗೆ ಎನ್ನುವುದು ನಮಗೆ ತಿಳಿಯುತ್ತದೆ.

ನಟಿ ಸಾಯಿ ಪಲ್ಲವಿ, ಸಾಮಾಜಿಕ ಜಾಲತಾಣದಲ್ಲಿ ಇದ್ದಾರಾದರೂ ಅಷ್ಟೇನು ಸಕ್ರಿಯವಲ್ಲ. ಆಗಾಗ್ಗೆ ಅಷ್ಟೆ ಪೋಸ್ಟ್‌ಗಳನ್ನು ಮಾಡುತ್ತಿರುತ್ತಾರೆ. ತಮ್ಮ ಸಿನಿಮಾ ಬಗ್ಗೆಯೂ ಪೋಸ್ಟ್ ಮಾಡುವುದು ಕಡಿಮೆಯೇ. ಆದರೆ ಸಾಯಿ ಪಲ್ಲವಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ತಮ್ಮ ಹಾಗೂ ತಮ್ಮ ತಂಗಿಯ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ತಂಗಿಯ ಬಗ್ಗೆ ಭಾವುಕವಾಗಿ ಬರೆದಿರುವ ಸಾಯಿ ಪಲ್ಲವಿ, ತಂಗಿಯ ತ್ಯಾಗ, ಪ್ರೀತಿ, ತಾಳ್ಮೆ, ಜಾಣ್ಮೆ, ಮಾತು ಎಲ್ಲವನ್ನೂ ಹೊಗಳಿದ್ದು, ತಂಗಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಸಾಯಿ ಪಲ್ಲವಿ ತಂಗಿ ಪೂಜಾ ಕನ್ನನ್ ಹುಟ್ಟುಹಬ್ಬದ ದಿನ ಸಾಯಿ ಪಲ್ಲವಿ ಕೆಲವು ವಾಕ್ಯಗಳನ್ನು ತನ್ನ ತಂಗಿಯ ಬಗ್ಗೆ ಬರೆದಿದ್ದಾರೆ ಅದು ಈ ರೀತಿಯಾಗಿದೆ. ಸಾಯಿ ಪಲ್ಲವಿ ಮತ್ತು ಪೂಜಾ ಕನ್ನನ್ ಬಹಳ ಆತ್ಮೀಯರಾಗಿದ್ದು, ಆಗಾಗ್ಗೆ ಸಾಯಿ ಪಲ್ಲವಿ ತಂಗಿಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ನನ್ನ ತಂಗಿ ತ್ಯಾಗಮಯಿ ಎನ್ನುವ ಸಾಯಿ ಪಲ್ಲವಿ
ನೀನು ಮಾಡಿದ ತ್ಯಾಗ, ನೀನು ಮರೆಮಾಚಿದ ಸಹಾಯಗಳು, ನನ್ನ ಜೀವನಕ್ಕೆ ನೀನು ತುಂಬಿದ ಅರ್ಥ, ನೀನು ತುಂಬಿದ ನಗು, ನನ್ನ ಜೀವನದಲ್ಲಿ ನೀನು ಇರುವುದೇ ನಾನು ಮಾಡಿದ ಪುಣ್ಯ ಎಂದು ತಂಗಿಯನ್ನು ಹೊಗಳಿ ಅಟ್ಟಕ್ಕೆ ಏರಿಸಿದ್ದಾರೆ ಸಾಯಿ ಪಲ್ಲವಿ. ನಿನಗೆ 100 ವರ್ಷವಾಗಿದ್ದರೂ ಸಹ ನೀನು ನನಗೆ ಮಗುವೇ, ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಎಂದು ಅರ್ಥವಾಗಬೇಕೆಂದರೆ ನೀನು ನಾನಾಗಬೇಕು, ನಿನ್ನ ಹುಟ್ಟುಹಬ್ಬದ ದಿನ ನಿನ್ನನ್ನು ಪಡೆದ ನಾನು ಎಷ್ಟು ಅದೃಷ್ಟಶಾಲಿ ಎಂದು ಅರ್ಥವಾಗುವ ದಿನ ಎಂದು ಸಾಯಿ ಪಲ್ಲವಿ ತಂಗಿ ಪೂಜಾಗಾಗಿ ಹೇಳಿದ್ದಾರೆ.

ಪದವಿ ಮುಗಿಸಿದ ಸಾಯಿ ಪಲ್ಲವಿ ತಂಗಿ ಪೂಜಾ ನೋಡಲು ಸ್ವಲ್ಪ ಸಾಯಿ ಪಲ್ಲವಿ ಅವರನ್ನೇ ಹೋಲುತ್ತಾರೆ. ಸಿನಿಮಾ ಪ್ರವೇಶಿಸಲು ಸಾಯಿ ಪಲ್ಲವಿ ತಂಗಿ ತಯಾರು ನಡೆಸುತ್ತಾ ಇದ್ದಾರೆ. ಸಾಯಿ ಪಲ್ಲವಿ ತಂಗಿಯ ಹೆಸರು ಪೂಜಾ ಕನ್ನನ್, ಆಕೆ ಈಗಾಗಲೇ ಕೆಲವು ಶಾರ್ಟ್ ಸಿನಿಮಾಗಳಲ್ಲಿ ನಟಿಸಿದ್ದು, ಸಿನಿಮಾ ಉದ್ಯಮಕ್ಕೆ ಪ್ರವೇಶಿಸುವ ಹಾದಿಯಲ್ಲಿದ್ದಾರೆ. ಸಿನಿಮಾ ಒಂದರ ಶೂಟಿಂಗ್‌ನಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಇದೀಗ ಖ್ಯಾತ ಸ್ಟಂಟ್ ಕೊರಿಯೋಗ್ರಫರ್ ಸ್ಟಂಟ್ ಸೆಲ್ವ ನಿರ್ದೇಶನ ಮಾಡುತ್ತಿರುವ ಎ ಎಲ್ ವಿಜಯ್ ಚಿತ್ರಕಥೆ ಬರೆದಿರುವ ಸಿನಿಮಾ ಒಂದರಲ್ಲಿ ನಟಿ ಸಾಯಿ ಪಲ್ಲವಿ ತಂಗಿ ಪೂಜಾ ನಾಯಕಿಯಾಗಿ ಅಭಿನಯ ಮಾಡಲಿದ್ದಾರೆ. ಈ ಚಿತ್ರದಲ್ಲಿ ಸ್ಟಂಟ್ ಸೆಲ್ವ ಕೂಡಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಈ ಸಿನಿಮಾದ ಶೂಟಿಂಗ್ ಪ್ರಕ್ರಿಯೆ ಇನ್ನೇನು ಶೀಘ್ರದಲ್ಲಿ ಆರಂಭ ಆಗಲಿದೆ.

Leave a Reply

Your email address will not be published. Required fields are marked *