ಆ ವ್ಯಕ್ತಿ ಫಿನಾಲೆಗೆ ಹೋಗೊದುತುಂಬಾನೇ ಕಡಿಮೆ

0 3

ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುವ ಪ್ರಮುಖ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಇತ್ತೀಚಿಗೆ ಪ್ರಾರಂಭವಾಗಿದ್ದು ಇದೀಗ ಮೂರನೇ ವಾರವು ಮುಗಿದಿದೆ. ಪ್ರತಿ ವಾರ ಒಬ್ಬರು ಹೊರ ಬರುತ್ತಾರೆ ಅದರಂತೆ ಮೂರನೇ ವಾರ ಬ್ರಹ್ಮಗಂಟು ಸೀರಿಯಲ್ ನ ಗೀತಾ ಅವರು ಹೊರಬಂದಿದ್ದಾರೆ. ಅವರ ಮಾತುಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ಕನ್ನಡದ ಅತ್ಯಂತ ಫೇಮಸ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ನಡೆಯುತ್ತಿದೆ. ಮೂರನೇ ವಾರ ಮುಗಿದಿದ್ದು. ಮೊದಲನೇ ವಾರ ಧನುಶ್ರೀ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಎರಡನೇ ವಾರ ನಿರ್ಮಲಾ ಅವರು ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಇದೀಗ ಗೀತಾ ಅವರು ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ನಾಮಿನೇಟ್ ಆಗಿದ್ದ ಅರವಿಂದ, ನಿಧಿ ಸುಬ್ಬಯ್ಯ, ದಿವ್ಯ ಸುರೇಶ್, ಪ್ರಶಾಂತ್ ಅವರು ಸೇವ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದಕ್ಕೆ ನನಗೆ ಬಹಳ ಹೆಮ್ಮೆ ಇದೆ, ನಾನು ಉತ್ತಮವಾಗಿ ಆಟ ಆಡಿದ್ದೇನೆ ಎಂದು ಗೀತಾ ಅವರು ಹೇಳಿದ್ದಾರೆ. ಗೀತಾ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದಕ್ಕೆ ಒಂದು ವಾರಕ್ಕೆ 40,000 ರೂಪಾಯಿಯಂತೆ ಮೂರು ವಾರಕ್ಕೆ 1,20,000 ರೂಪಾಯಿ ಸಂಭಾವನೆ ಪಡೆದಿದ್ದಾರೆ. ಗೀತಾ ಅವರು ಹೊರಬಂದ ನಂತರ ಟಿವಿ 9 ಗೆ ಅವರು ಕೆಲವು ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಯಾವ ಸ್ಪರ್ಧಿ ಬಿಗ್ ಬಾಸ್ ಫೈನಲಿಸ್ಟ್ ಆಗಬಾರದು ಎಂಬ ಪ್ರಶ್ನೆಗೆ ಅವರು ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಎಫರ್ಟ್ ಹಾಕುತ್ತಿದ್ದಾರೆ ಮತ್ತು ಕೇವಲ ಮೂರು ವಾರದಲ್ಲಿ ಯಾವ ಸ್ಪರ್ಧಿ ಹೇಗೆ ಆಟ ಆಡುತ್ತಿದ್ದಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಸದ್ಯಕ್ಕೆ ವೈಷ್ಣವಿ ಅವರು ಸೈಲೆಂಟ್ ಆಗಿ ಇರುತ್ತಾರೆ, ಅವರು ಡಿಸರ್ವಿಂಗ್ ಇಲ್ಲ ಅನಿಸುತ್ತದೆ ನಂತರದ ದಿನಗಳಲ್ಲಿ ಅವರು ಚೆನ್ನಾಗಿ ಆಟ ಆಡಿ ಡಿಸರ್ವಿಂಗ್ ನೇಚರ್ ಬರಬಹುದು. ಬಿಗ್ ಬಾಸ್ ಮನೆಯಲ್ಲಿ ಏನು ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಶಮಂತ್ ಅವರು ಎಲಿಮಿನೇಟ್ ಆಗುತ್ತಾರೆ ಎಂದುಕೊಂಡಿದ್ದೆ ಅವರು ಟಾಸ್ಕ್ ವಿಷಯದಲ್ಲಿ ಡಲ್ ಇದ್ದರು, ಬೇರೆಯವರೊಂದಿಗೆ ಬೆರೆಯುವ ವಿಷಯದಲ್ಲೂ ಡಲ್ ಇದ್ದರು. ಅವರನ್ನು ಮನೆಯಲ್ಲಿ ಹುಡುಕುವುದೇ ಒಂದು ಟಾಸ್ಕ್ ಆಗುತ್ತಿತ್ತು ಎಂದು ಗೀತಾ ಅವರು ಹೇಳಿದರು. ಅಲ್ಲದೆ ಅವರು ನಾನು ಹೊರ ಬಂದಿರುವುದಕ್ಕೆ ನನಗೆ ವಿಷಾದವಿಲ್ಲ, ಖುಷಿಯಿಂದ ಮನೆ ಒಳಗೆ ಹೋಗಿದ್ದೆ ಅಷ್ಟೇ ಖುಷಿಯಿಂದ ಹೊರ ಬಂದಿದ್ದೇನೆ. ಬಿಗ್ ಬಾಸ್ ಮನೆಯಲ್ಲಿ ನನಗೆ ಒಳ್ಳೆಯ ಅನುಭವ ಸಿಕ್ಕಿದೆ, ಬಹಳ ಹೊಸ ವಿಷಯಗಳನ್ನು ಕಲಿತೆ, ಹೊರ ಬರುವಾಗ ಖುಷಿ ಕೊಡುವ ಮೆಮೊರೀಸ್ ಗಳೊಂದಿಗೆ ಬಂದಿದ್ದೇನೆ. ನನ್ನ ಇಡೀ ಲೈಫ್ ಜರ್ನಿ ಒಂದಕಡೆಯಾದರೆ, ಬಿಗ್ ಬಾಸ್ ಜರ್ನಿ ಇನ್ನೊಂದು ಕಡೆ ಇರುತ್ತದೆ, ಬಿಗ್ ಬಾಸ್ ಜರ್ನಿ ನನ್ನ ಮನಸ್ಸಿಗೆ ಹತ್ತಿರವಾಗಿರುತ್ತದೆ ಎಂದು ಬ್ರಹ್ಮಗಂಟು ಸೀರಿಯಲ್ ಗುಂಡಮ್ಮ ಗೀತಾ ಪಾತ್ರಧಾರಿ ಭಾರತಿ ಭಟ್ ಅವರು ತಮ್ಮ ಬಿಗ್ ಬಾಸ್ ಜರ್ನಿಯ ಬಗ್ಗೆ ಅನುಭವದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಮುಂದಿನ ವಾರ ಬಿಗ್ ಬಾಸ್ ಮನೆಯಿಂದ ಯಾವ ಸ್ಪರ್ಧಿ ಮನೆಯಿಂದ ಹೊರ ಬರುತ್ತಾರೆ ಎಂದು ಕಾದು ನೋಡಬೇಕಾಗಿದೆ.

Leave A Reply

Your email address will not be published.