ನಮ್ಮ ದೇಶದ ನೋಟುಗಳಲ್ಲಿ ಗಾಂಧೀ ಯುಗಕ್ಕೆ ಬೀಳುತ್ತಾ ಅಂತ್ಯ? RBI ಮಾಡಲು ಹೊರಟಿರುವ ದೊಡ್ಡ ಬದಲಾವಣೆ ಏನು ಗೊತ್ತಾ

0 3

ನಮ್ಮ ದೇಶದ ಕರೆನ್ಸಿ ನೋಟುಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರವಿದೆ. ನೋಟುಗಳ ಮೇಲೆ ಗಾಂಧೀಜಿಯವರ ಭಾವಚಿತ್ರ ಇರಲು ಕಾರಣವೇನು, ನಮ್ಮ ದೇಶದ ಕರೆನ್ಸಿ ನೋಟುಗಳ ಇತಿಹಾಸ, ಇನ್ನಿತರ ಕೆಲವು ಇಂಟರೆಸ್ಟಿಂಗ್ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ನಮ್ಮ ದೇಶದ 100 ರೂಪಾಯಿಯಿಂದ 2,000 ರೂಪಾಯಿ ನೋಟಿನ ಮೇಲೆ ಗಾಂಧೀಜಿಯ ಭಾವಚಿತ್ರವಿದೆ ಆದರೆ ಈ ವಿಷಯದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲು ಆರ್ ಬಿಐ ಚಿಂತನೆ ನಡೆಸುತ್ತಿದೆ. ನೋಟಿನ ಮೇಲೆ ಗಾಂಧೀಜಿ ಅವರ ಭಾವಚಿತ್ರದೊಂದಿಗೆ ಕ್ಷಿಪಣಿ ಮಾನವ ಎಂದೆ ಹೆಸರಾದ ಎಪಿಜೆ ಅಬ್ದುಲ್ ಕಲಾಂ ಹಾಗೂ ದೇಶದ ಶ್ರೇಷ್ಠ ಸಾಹಿತಿ ರವೀಂದ್ರನಾಥ್ ಟ್ಯಾಗೋರ್ ಅವರ ಭಾವಚಿತ್ರವನ್ನು ಮುದ್ರಿಸಲು ಚಿಂತನೆ ನಡೆಸುತ್ತಿದೆ.

ನಮ್ಮ ದೇಶದಲ್ಲಿ ನೋಟುಗಳ ಮೇಲೆ ಒಬ್ಬ ನಾಯಕನ ಭಾವಚಿತ್ರವಿರುವಂತೆ, ಚೀನಾ ದೇಶದಲ್ಲಿಯೂ ನೋಟುಗಳ ಮೇಲೆ ಆ ದೇಶದ ನಾಯಕನ ಭಾವಚಿತ್ರವಿದೆ. ಪಾಕಿಸ್ತಾನ ದೇಶದ ನೋಟುಗಳ ಮೇಲೆ ಮಹಮದ್ ಅಲಿ ಜಿನ್ನಾ ಅವರ ಭಾವಚಿತ್ರವಿದೆ. ರಷ್ಯಾ ದೇಶದ ನೋಟುಗಳ ಮೇಲೆ ಬೇರೆ ಬೇರೆ ನಾಯಕರ ಭಾವಚಿತ್ರವನ್ನು ಮುದ್ರಿಸಲಾಗುತ್ತದೆ, ಕೇವಲ ನಾಯಕರ ಚಿತ್ರವನ್ನು ಮಾತ್ರ ನೋಟಿನ ಮೇಲೆ ಮುದ್ರಿಸದೆ ಅಲ್ಲಿನ ಕೆಲವು ನಗರಗಳ ಚಿತ್ರವನ್ನು ಕೂಡ ಮುದ್ರಿಸಲಾಗುತ್ತದೆ.

ಅಮೆರಿಕ ದೇಶದ ನೋಟುಗಳ ಮೇಲೆಯೂ ಹಲವು ನಾಯಕರ ಭಾವಚಿತ್ರವನ್ನು ನೋಡಬಹುದು. ಜಪಾನ್ ದೇಶದಲ್ಲಿಯೂ ಬೇರೆಬೇರೆ ನೋಟುಗಳಲ್ಲಿ ಬೇರೆಬೇರೆ ನಾಯಕರ ಭಾವಚಿತ್ರವಿರುತ್ತದೆ. ಭಾರತ ಸ್ವತಂತ್ರಗೊಂಡಾಗ ಅಂದರೆ 1969ರಲ್ಲಿ ಭಾರತೀಯ ನೋಟಿನಲ್ಲಿ ಮಹಾತ್ಮ ಗಾಂಧೀಜಿ ಅವರ ಫೋಟೊ ಇರಲಿಲ್ಲ. ಈ ಬದಲಾವಣೆ ಆಗಿದ್ದು 1969 ರಲ್ಲಿ ಗಾಂಧಿ ಜಯಂತಿಯಂದು ನಿರ್ಧಾರ ತೆಗೆದುಕೊಂಡು ಗಾಂಧೀಜಿ ಅವರ ಭಾವಚಿತ್ರವಿರುವ ನೋಟನ್ನು ಬಿಡುಗಡೆ ಮಾಡಲಾಯಿತು. ಈಗಿನ ನೋಟುಗಳಲ್ಲಿ ಕಂಡುಬರುವ ಗಾಂಧೀಜಿಯ ಭಾವಚಿತ್ರ 1969 ರಲ್ಲಿ ಬಿಡುಗಡೆಯಾದ ನೋಟುಗಳಲ್ಲಿ ಇರಲಿಲ್ಲ ಹಾಗೂ ಬೇರೆ ಬೇರೆ ನೋಟುಗಳಲ್ಲಿ ಬೇರೆ ಬೇರೆ ಚಿತ್ರ ಇತ್ತು 1996 ರವರೆಗೂ ಈ ಪದ್ಧತಿ ಜಾರಿಯಲ್ಲಿತ್ತು.

1996ರಲ್ಲಿ ಸರ್ಕಾರ ಮಹತ್ವದ ಬದಲಾವಣೆಯನ್ನು ಮಾಡಿತ್ತು. ಸರ್ಕಾರ ಹೊಸ ಸಿರೀಸ್ ನೋಟುಗಳನ್ನು ಬಿಡುಗಡೆ ಮಾಡುತ್ತದೆ. ನೋಟುಗಳಿಗೆ ಮಹಾತ್ಮಾಗಾಂಧಿ ಸಿರೀಸ್ ನೋಟು ಎಂದು ಕರೆಯಲಾಗುತ್ತದೆ. ಈ ಸಿರೀಸ್ ನಲ್ಲಿ ಬಿಡುಗಡೆಯಾದ ಎಲ್ಲಾ ನೋಟುಗಳ ಮೇಲೆ ಗಾಂಧೀಜಿಯವರ ಭಾವಚಿತ್ರವನ್ನು ಮುದ್ರಿಸಲಾಗಿತ್ತು. ಈ ಬದಲಾವಣೆಗೆ ಮುಖ್ಯ ಕಾರಣ ಕೋಟಾ ನೋಟುಗಳ ಹಾವಳಿಯನ್ನು ತಪ್ಪಿಸುವುದು. ಒಂದೆ ರೀತಿಯ ನೋಟುಗಳನ್ನು ಸಿದ್ಧಪಡಿಸಿ ವಾಟರ್ ಮಾರ್ಕ್ ಹಾಕಿ ನಕಲಿ ನೋಟುಗಳಿಗೆ ಕಡಿವಾಣ ಹಾಕುವುದು ಸರ್ಕಾರದ ಉದ್ದೇಶವಾಗಿತ್ತು.

ಒಬ್ಬ ನಾಯಕನ ಭಾವಚಿತ್ರವನ್ನು ನೋಟಿನ ಮೇಲೆ ಮುದ್ರಿಸಬೇಕು ಎಂದು ಬಂದಾಗ ಗಾಂಧೀಜಿ ಅವರ ಭಾವಚಿತ್ರವನ್ನು ಮುದ್ರಿಸಬೇಕೆಂದು ನಿರ್ಧಾರವನ್ನು ಕೈಗೊಳ್ಳಲಾಯಿತು. ಇಡಿ ಜಗತ್ತಿಗೆ ಗಾಂಧೀಜಿಯವರ ಬಗ್ಗೆ ಗೊತ್ತಿತ್ತು ಹಾಗೂ ಇಡಿ ಜಗತ್ತು ಅವರನ್ನು ಗೌರವಿಸುತ್ತಿತ್ತು. ಈ ರೀತಿಯ ನೋಟುಗಳನ್ನು ನಾವು ಇಂದಿಗೂ ಕಾಣಬಹುದು.

ನೋಟು ಅಮಾನ್ಯೀಕರಣವಾದಾಗ 2,000 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಲಾಯಿತು. ಈ ನೋಟುಗಳ ಮೇಲೆಯೂ ಗಾಂಧೀಜಿಯವರ ಭಾವಚಿತ್ರವನ್ನು ಮುದ್ರಿಸಲಾಗಿದೆ ಆದರೆ ನೋಟು ಮುದ್ರಣದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಯಿತು. ಬೇರೆಬೇರೆ ಬಣ್ಣದಲ್ಲಿ ನೋಟುಗಳನ್ನು ಮುದ್ರಿಸಲಾಯಿತು ‌ಹಾಗೂ ನೋಟಿನ ಡಿಸೈನ್ ನಲ್ಲಿಯೂ ಬದಲಾವಣೆಯಾಯಿತು. ಇದೀಗ ಭಾರತದ ಹೊಸ ಸಿರೀಸ್ ನೋಟುಗಳನ್ನು ಬಿಡುಗಡೆ ಮಾಡಲು ಚಿಂತನೆ ನಡೆಸುತ್ತಿದೆ.

ಈ ಚಿಂತನೆಯಲ್ಲಿ ಹಲವು ನಾಯಕರ ಭಾವಚಿತ್ರ ಭಾರತೀಯ ನೋಟುಗಳಲ್ಲಿ ಮುದ್ರಣ ಆಗಬಹುದು ಆದರೆ ರವೀಂದ್ರನಾಥ್ ಟ್ಯಾಗೋರ್ ಹಾಗೂ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರು ಅಂತಿಮವಾಗಿ ಕೇಳಿಬರುತ್ತಿದೆ. ಈ ಯೋಜನೆ ಜಾರಿಗೆ ತರುವುದು ಅಷ್ಟು ಸುಲಭವಲ್ಲ ಭಾರತದ ಬೇರೆ ಬೇರೆ ಭಾಗದಲ್ಲಿರುವ ಜನರು ತಮ್ಮ ನಾಯಕನ ಭಾವಚಿತ್ರವನ್ನು ಮುದ್ರಿಸಬೇಕೆಂದು ಒತ್ತಡ ಹೇರಬಹುದು‌ ಆದ್ದರಿಂದ ಸದ್ಯದಲ್ಲಿ ರವೀಂದ್ರನಾಥ ಟ್ಯಾಗೋರ್ ಹಾಗೂ ಅಬ್ದುಲ್ ಕಲಾಂ ಅವರ ಭಾವಚಿತ್ರವನ್ನು ಮಾತ್ರ ಮುದ್ರಿಸಲು ಆರ್ ಬಿಐ ನಿರ್ಧಾರ ಮಾಡಿದೆ.

ಹೊಸ ಸಿರೀಸ್ ನ ನೋಟುಗಳು ಯಾವ ಡಿಸೈನ್ ನಲ್ಲಿ ಇರಬೇಕೆಂಬುದು ಕೂಡ ಚರ್ಚೆಯಾಗುತ್ತಿದೆ. ಗಾಂಧೀಜಿಯವರ ಭಾವಚಿತ್ರದೊಂದಿಗೆ ಟ್ಯಾಗೋರ್ ಹಾಗೂ ಅಬ್ದುಲ್ ಕಲಾಂ ಅವರ ಭಾವಚಿತ್ರ ಇರುವ ವಾಟರ್ ಮಾರ್ಕ್ ಮಾದರಿಯನ್ನು ಕಳುಹಿಸಲಾಗಿದೆ ಅದನ್ನು ಸರ್ಕಾರ ಅನುಮತಿಸಬೇಕು. ಒಟ್ಟಿನಲ್ಲಿ ನಮ್ಮ ಭಾರತ ದೇಶದ ಕರೆನ್ಸಿ ನೋಟುಗಳ ಮುದ್ರಣದಲ್ಲಿ ಇನ್ನೂ ಬದಲಾವಣೆಗಳನ್ನು ನೋಡಬಹುದು. ದೇಶದ ಕರೆನ್ಸಿ ನೋಟುಗಳ ಮೇಲೆ ಯಾವ ನಾಯಕರ ಭಾವಚಿತ್ರ ಮುದ್ರಿತವಾಗಬೇಕು ಎಂಬುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

Leave A Reply

Your email address will not be published.