ರಾಜ್ ಮನೆತನದಲ್ಲಿ ಬೆಳೆದಿರುವ ಶಿವಣ್ಣ ಅಷ್ಟು ಸಿಂಪಲ್ ಆಗಿ ಇರೋದಕ್ಕೆ ಹೇಗೆ ಸಾಧ್ಯ? ರವಿಚಂದ್ರನ್ ಏನ್ ಅಂದ್ರು ನೋಡಿ

0 1

ನಮ್ಮ ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಒಂದೆರಡು ಸಿನಿಮಾ ಹಿಟ್ ಆದರೆ ಸಾಕು ನಟ-ನಟಿ, ನಿರ್ದೇಶಕರಿಗೆ ಅಹಂಕಾರ ಬರುತ್ತದೆ ಭೂಮಿಯ ಮೇಲೆ ಇರದೆ ಆಕಾಶದಲ್ಲಿ ತೇಲುತ್ತಿರುತ್ತಾರೆ. ಹೀಗಿರುವಾಗ ಹಲವು ಹಿಟ್ ಸಿನಿಮಾ ಕೊಟ್ಟ ಶಿವಣ್ಣ ಅವರು ಬಹಳ ಸರಳವಾಗಿ ಕಾಣಿಸುತ್ತಾರೆ. ಅವರ ಬಗ್ಗೆ ಡಿಕೆಡಿ ವೇದಿಕೆಯಲ್ಲಿ ರವಿಚಂದ್ರನ್ ಅವರ ಮಾತುಗಳು ಹಾಗೂ ಶಿವಣ್ಣ ಅವರ ಸರಳತೆಯ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಒಂದೆರಡು ಸಿನಿಮಾ ಮಾಡಿ ಅಭಿಮಾನಿಗಳೊಂದಿಗೆ ಮಾತನಾಡುವುದಿರಲಿ ಮುಂದಿನ ಸಿನಿಮಾ ಬಗ್ಗೆ ನಿರ್ದೇಶಕರಿಗೆ, ತಂತ್ರಜ್ಞರಿಗೆ ಸರಿಯಾದ ಪ್ರತಿಕ್ರಿಯೆಯು ಕೊಡುವುದಿಲ್ಲ ಎಂಬುದು ಹಲವು ನಟ ನಟಿಯರ ಬಗ್ಗೆ ಅಭಿಪ್ರಾಯವಿದೆ. ಕೆಲವರು ಹುಟ್ಟಿನಿಂದಲೆ ಫೇಮಸ್ ಆಗಿದ್ದರೂ ಜೀವನಪೂರ್ತಿ ಸರಳತೆಯೊಂದಿಗೆ ಬದುಕುತ್ತಿರುತ್ತಾರೆ ಅಂಥವರಲ್ಲಿ ಉದಾಹರಣೆಯೆಂದರೆ ಶಿವರಾಜಕುಮಾರ್. ಅಣ್ಣಾವ್ರ ಮಕ್ಕಳಲ್ಲಿ ಇರುವ ಮುಗ್ಧತೆ, ಪ್ರಾಮಾಣಿಕತೆ ಬಹುಶಃ ಬೇರೆ ಯಾರಲ್ಲಿಯೂ ಕಂಡುಬರುವುದಿಲ್ಲ.

ಡಿಕೆಡಿ ವೇದಿಕೆಯಲ್ಲಿ ಜಡ್ಜ್ ಆಗಿರುವ ರವಿಚಂದ್ರನ್ ಅವರು ನೇರಾನೇರ ಮಾತುಗಳನ್ನು ಆಡುತ್ತಾರೆ ಅವರು ಯಾರಿಗೂ ಹೆದರುವುದಿಲ್ಲ ತಪ್ಪನ್ನು ಕಂಡಲ್ಲಿ ಅದನ್ನು ಹಿಂದೆ ಮುಂದೆ ನೋಡದೆ ಹೇಳಿಬಿಡುತ್ತಾರೆ ಹಾಗೆಯೆ ಅವರು ಯಾರನ್ನಾದರೂ ಹೋಗಳುವುದು ಕಡಿಮೆ. ಡಿಕೆಡಿ ಮಹಾಸಂಗಮದಲ್ಲಿ ಒಂದೆ ವೇದಿಕೆಯಲ್ಲಿ ರವಿಚಂದ್ರನ್ ಹಾಗೂ ಶಿವಣ್ಣ ಅವರು ಇದ್ದರು. ರವಿಚಂದ್ರನ್ ಅವರು ಶಿವಣ್ಣ ಅವರ ಬಗ್ಗೆ ಕೆಲವು ಮಾತುಗಳನ್ನಾಡಿದರು, ಅವರ ಮಾತುಗಳನ್ನು ಕೇಳಿಸಿಕೊಂಡವರಿಗೆ ಹೌದು ಶಿವಣ್ಣ ಅವರಿಗೆ ಇಷ್ಟು ಸರಳತೆ ಹೇಗೆ ಸಾಧ್ಯ ಎಂದು ಅನಿಸುತ್ತದೆ.

ರವಿಚಂದ್ರನ್ ಅವರು ಡಾಕ್ಟರ್ ರಾಜಕುಮಾರ್ ಅವರ ಮಗನಾಗಿ ಇಷ್ಟು ಸರಳವಾಗಿರುವುದು ಅಷ್ಟು ಸುಲಭವಲ್ಲ, ಶಿವಣ್ಣ ಅವರು ಹುಟ್ಟಿದಾಗಿನಿಂದಲೂ ಹೋರಾಟವನ್ನು ಮಾಡುತ್ತಿದ್ದಾರೆ, ತನ್ನೊಳಗಿನ ಅಹಂಕಾರವನ್ನು ಕರಗಿಸುವ ಕೆಲಸವನ್ನು ಮಾಡುತ್ತಾರೆ, ತನ್ನೊಳಗಿನ ಸ್ವಾರ್ಥವನ್ನು ಸುಟ್ಟುಹಾಕುವ ಕೆಲಸ ಮಾಡುತ್ತಿದ್ದಾರೆ. ಸೂಪರ್ ಸ್ಟಾರ್ ಮಗ ಎಂದರೆ ಅಹಂಕಾರ ಬಂದೆ ಬರುತ್ತದೆ ಆದರೆ ಶಿವಣ್ಣ ಅವರು ಒಮ್ಮೆಯೂ ಅಹಂಕಾರದಿಂದ ನಡೆದುಕೊಂಡಿಲ್ಲ. ಅಣ್ಣಾವ್ರ ಮಗನಾಗಿ ಇಷ್ಟು ತಾಳ್ಮೆಯಿಂದ, ಇಷ್ಟು ಸರಳತೆಯಿಂದ ಇರಲು ಸಾಧ್ಯವೆ ಇಲ್ಲ. ಅಭಿಮಾನಿಗಳೊಂದಿಗೆ ಮಾತನಾಡುವಾಗಲೂ, ಪತ್ರಕರ್ತರೊಂದಿಗೆ ಇರುವ ಸಮಯದಲ್ಲಿ ಎಲ್ಲಿಯೂ ತನ್ನ ಸರಳತೆಯನ್ನು ಬಿಟ್ಟುಕೊಟ್ಟಿಲ್ಲ.

ವೈಯಕ್ತಿಕ ಜೀವನದಲ್ಲಿ ಒಂದೆ ಒಂದು ಕಪ್ಪು ಚುಕ್ಕೆಯನ್ನು ಇದುವರೆಗೂ ನೋಡಿಲ್ಲ. ಶಿವಣ್ಣ ಅವರು ಹುಟ್ಟಿದ್ದು 1962 ಚೆನ್ನೈನಲ್ಲಿ, 59 ರಿಂದ 60 ವರ್ಷ ವಯಸ್ಸಿನ ಶಿವಣ್ಣ ಅವರಲ್ಲಿ ಅದೆ ಯೌವನದ ಕಳೆ, ಎನರ್ಜಿ ಹೇಗೆ ಇರಲು ಸಾಧ್ಯ ಎಂಬ ಪ್ರಶ್ನೆ ಬರುತ್ತದೆ. ಪ್ರಾರಂಭದಲ್ಲಿ ರಾಜಕುಮಾರ್ ಅವರಿಗೆ ಶಿವಣ್ಣ ಅವರು ಸಿನಿಮಾ ರಂಗಕ್ಕೆ ಬರುವುದು ಇಷ್ಟವಿರಲಿಲ್ಲ ಆದರೆ ಶಿವಣ್ಣ ಅವರಿಗೆ ಆಕ್ಟಿಂಗ್ ಬಗ್ಗೆ ಮನಸ್ಸಿತ್ತು ನಂತರ ಆಕ್ಟಿಂಗ್ ಕ್ಲಾಸ್ ಗೆ ಹೋಗುತ್ತಾರೆ. ಡ್ಯಾನ್ಸ್ ಕಲಿಯುತ್ತಾರೆ ನಂತರ ಸಿನಿಮಾದಲ್ಲಿ ನಟಿಸುತ್ತಾರೆ. ಆರಂಭದಲ್ಲಿಯೆ ಶಿವಣ್ಣ ಶತಕವನ್ನು ಬಾರಿಸುತ್ತಾರೆ.

ಆನಂದ್, ರಥಸಪ್ತಮಿ ಸಿನೆಮಾಗಳು ಯಶಸ್ಸನ್ನು ಪಡೆದಿದೆ. ಹ್ಯಾಟ್ರಿಕ್ ಹೀರೊ ಎಂತಲೆ ಫೇಮಸ್ ಆಗುತ್ತಾರೆ. ಮೃತ್ಯುಂಜಯ, ಮುತ್ತಣ್ಣ, ಗಡಿಬಿಡಿ ಅಳಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ ಅವರು ನಟಿಸಿದ ಓಂ ಚಿತ್ರ ದೇಶದಲ್ಲಿ ಭಾರಿ ಸುದ್ದಿ ಮಾಡಿತ್ತು, ಈ ಸಿನಿಮಾದ ಯಶಸ್ಸಿಗೆ ಉಪೇಂದ್ರ ಅವರ ಕೊಡುಗೆಯೂ ಇದೆ. ಜನ್ಮದ ಜೋಡಿ ಆ ಕಾಲದಲ್ಲಿಯೆ ಬಾರಿ ಹಿಟ್ ಆಗಿತ್ತು. ಜೋಡಿಹಕ್ಕಿ, ಕುರುಬನ ರಾಣಿ, ತವರಿಗೆ ಬಾ ತಂಗಿ, ಅಣ್ಣ ತಂಗಿ, ತವರಿನ ಸಿರಿ, ಜೋಗಿ, ಟಗರು, ಲೀಡರ್ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಈಗಲೂ ಕೂಡ ಅವರು ಸಿನಿಮಾ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ. ಶಿವಣ್ಣ ಎಲ್ಲರೊಂದಿಗೆ ಆತ್ಮೀಯತೆಯಿಂದ ಬೆರೆಯುತ್ತಾರೆ. ಯಾವುದೆ ಸಮಾರಂಭಗಳಿಗೆ ಅವರನ್ನು ಕರೆದರೆ ಅಷ್ಟೆ ಪ್ರೀತಿಯಿಂದ ಹೋಗುತ್ತಾರೆ. ಡಿಕೆಡಿ ವೇದಿಕೆಯಲ್ಲಿ ಲಕ್ಷ್ಮಿ ಅವರು ಕೂಡ ಡಾಕ್ಟರ್ ರಾಜಕುಮಾರ್ ಅವರಲ್ಲಿರುವ ಸರಳತೆಗೆ ಶಿವಣ್ಣ ಅವರು ಹೀಗಿರಲು ಕಾರಣ ಎಂದು ಹೇಳಿದರು. ಡಾಕ್ಟರ್ ರಾಜಕುಮಾರ್ ಅವರು ಕೂಡ ಕನ್ನಡ ಇಂಡಸ್ಟ್ರಿಯಲ್ಲಿ ಬಹುದೊಡ್ಡ ಹೆಸರು ಮಾಡಿದ್ದರೂ ಸರಳತೆಯಿಂದ ಬದುಕಿದ್ದಾರೆ.

ಅವರ ಪತ್ನಿ ಪಾರ್ವತಮ್ಮ ರಾಜಕುಮಾರ್ ಅವರು ಕೂಡ ಕನ್ನಡ ಚಿತ್ರರಂಗದ ಫೇಮಸ್ ನಿರ್ಮಾಪಕಿ ಆಗಿದ್ದರೂ ಸರಳವಾಗಿ ಬದುಕಿದ್ದಾರೆ, ಇವರಿಬ್ಬರ ಸರಳತೆ. ಅವರ ಮಕ್ಕಳಿಗೂ ಬಂದಿದೆ. ಅವರ ವೈಯಕ್ತಿಕ ಜೀವನದಲ್ಲಿಯೂ ಶಿವಣ್ಣ ಹಾಗೂ ಗೀತಾ ಅವರು ಅನ್ಯೋನ್ಯವಾಗಿ ಇದ್ದಾರೆ. ಶಿವಣ್ಣ ಅವರ ಮಕ್ಕಳು ಸಹ ಹೆಚ್ಚಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ ಅವರು ಕೂಡ ಶಿವಣ್ಣ ಅವರಂತೆ ಸರಳತೆಯನ್ನು ಅಳವಡಿಸಿಕೊಂಡಿದ್ದಾರೆ. ಸರಳತೆಯ ಸಾಕಾರ ಮೂರ್ತಿಯಂತಿರುವ ಶಿವಣ್ಣ ಹೆಚ್ಚು ಸಿನಿಮಾಗಳಲ್ಲಿ ನಟಿಸಲಿ ಎಂದು ಆಶಿಸೋಣ.

Leave A Reply

Your email address will not be published.