ಬಾಯಲ್ಲಿ ಇಟ್ರೆ ಬೇಗನೆ ಕರಗುವಂತ, ರುಚಿಯಾದ ರವೇ ಉಂಡೆ ಮಾಡುವ ಸುಲಭ ವಿಧಾನ

0 5

ರವೆ ಉಂಡೆ ಯಾರಿಗೆ ತಾನೇ ಇಷ್ಟ ಆಗಲ್ಲ. ಭಾರತೀಯ ಸಿಹಿ ತಿಂಡಿಗಳಲ್ಲಿ ರವೆ ಉಂಡೆ ತುಂಬಾ ಫೇಮಸ್. ಇದನ್ನ ಒಂದು ರೀತಿ ಸಾಂಪ್ರದಾಯಕ ಸಿಹಿ ತಿಂಡಿ ಎಂದರು ತಪ್ಪೇನೂ ಇಲ್ಲ. ಹಾಗಾಗಿ ಈ ಲೇಖನದ ಮೂಲಕ ತುಂಬಾ ಸಾಫ್ಟ್ ಆಗಿ ಬಾಯಲ್ಲಿ ಇಟ್ಟರೆ ಕರಗುವ ಹಾಗೆ ರುಚಿಯಾಗಿ ಹೊಸದಾದ ಸುಲಭವಾದ ವಿಧಾನದಲ್ಲಿ ರವೆ ಉಂಡೆ ಹೇಗೆ ಮಾಡೋದು ಅನ್ನೋದರ ಬಗ್ಗೆ ನೋಡೋಣ.

ರವೆ ಉಂಡೆ ಮಾಡೋಕೆ ಏನೇನು ಬೇಕು ಅನ್ನೋದನ್ನ ನೋಡೋಣ. ಚಿರೋಟಿ ರವೆ 1 ಕಪ್
ಹಾಲು, ಸಕ್ಕರೆ 1 ಕಪ್ ( ರವೆಯ ಅಳತೆ), ಒಣ ಕೊಬ್ಬರಿ ತುರಿ, ತುಪ್ಪ, ದ್ರಾಕ್ಷಿ, ಗೋಡಂಬಿ, ಪಿಸ್ತಾ
ಬಾದಾಮಿ, ಎಣ್ಣೆ ಕರಿಯಲು. ಇನ್ನು ರವೆ ಉಂಡೆ ಮಾಡೊಕೆ ಏನೆಲ್ಲ ಬೇಕು ಅನ್ನೋದನ್ನ ನೋಡಿ ಆಯ್ತು ಇನ್ನು ಹೇಗೆ ಮಾಡೋದು ಅನ್ನೋದನ್ನ ನೋಡೋಣ.

ಮಾಡುವ ವಿಧಾನ: ಒಂದು ಬೌಲ್ ಗೆ ಚಿರೋಟಿ ರವೆ ಹಾಕಿಕೊಂಡು ಅದಕ್ಕೆ ಕಾಯಿಸಿ ಆರಿಸಿದ ಹಾಲನ್ನು ಸ್ವಲ್ಪ ಸ್ವಲ್ಪ ಆಗಿ ಹಾಕಿಕೊಂಡು ಚಪಾತಿ ಹಿಟ್ಟಿಗಿಂತ ಸ್ವಲ್ಪ ತೆಳುವಾಗಿ ಕಳಸಿಕೊಳ್ಳಬೇಕು. ರವೆ ನೆನೆದ ಮೇಲೆ ಸ್ವಲ್ಪ ಗಟ್ಟಿ ಆಗತ್ತೆ ಹಾಗಾಗಿ ಸ್ವಲ್ಪ ತೆಳುವಾಗಿಯೇ ಕಲಸಿಟ್ಟುಕೊಳ್ಳಬೇಕು. ನಂತರ 15 ನಿಮಿಷ ನೆನೆಯಲು ಬಿಡಬೇಕು. ನಂತರ ರವೆ ತೆಗೆದುಕೊಂಡ ಅಳತೆ ಕಪ್ ನಲ್ಲಿಯೇ ಒಂದು ಕಪ್ ಸಕ್ಕರೆ ತೆಗೆದುಕೊಂಡು ಅದನ್ನ ಮಿಕ್ಸಿ ಜಾರಿಗೆ ಹಾಕಿ ಪೌಡರ್ ಮಾಡಿಟ್ಟುಕೊಳ್ಳಬೇಕು.

15 ನಿಮಿಷಗಳ ನಂತರ ನೆನೆಯಲು ಇಟ್ಟ ರವೆಯನ್ನ, ಕೈ ಹೇ ತುಪ್ಪ ಸವರಿಕೊಂಡು ಚಿಕ್ಕ ಚಿಕ್ಕ ಉಂಡೆಗಳಾಗಿ ಮಾಡಿಕೊಂಡು ಅದನ್ನ ಅಂಗೈ ಅಲ್ಲಿ ತಟ್ಟಿ ಎಣ್ಣೆಯಲ್ಲಿ ಸ್ವಲ್ಪ ಕೆಂಪಗೆ ಆಗುವವರೆಗೂ ಕರಿದುಕೊಳ್ಳಬೇಕು. ಹೀಗೆ ಮಾಡುವುದರಿಂದ ನಾವು ಮೊದಲೇ ರವೆಯನ್ನ ಹುರಿದುಕೊಳ್ಳುವ ಸಮಯ ಉಳಿಯತ್ತೆ ಮತ್ತೆ ಕೆಲವರಿವೆ ಯಾವ ಹದಕ್ಕೆ ರವೆಯನ್ನ ಹುರಿದುಕೊಳ್ಳಬೇಕು ಅನ್ನೋದು ಗೊತ್ತಾಗಲ್ಲ ಹಾಗಾಗಿ ಇದು ಬೆಸ್ಟ್ ಐಡಿಯ ಅನ್ನಬಹುದು. ಎಣ್ಣೆಯಲ್ಲಿ ಕರಿದುಕೊಂಡ ನಂತರ ಅದೇ ಬೌಲ್ ಗೆ ತೆಗೆದಿಟ್ಟುಕೊಳಬೇಕು.

ಇನ್ನೊಂದು ಪ್ಯಾನ್ ನಲ್ಲಿ ತುಪ್ಪ ಹಾಕಿ, ಗೋಡಂಬಿ, ಬಾದಾಮಿ, ಪಿಸ್ತಾ, ದ್ರಾಕ್ಷಿ ಎಲ್ಲವನ್ನು ಹೊರಿದು ತೆಗೆದಿಟ್ಟುಕೊಳ್ಳಬೇಕು. ನಂತರ ಕರಿದಿಟ್ಟುಕೊಂಡ ರವೆಯ ಪಟ್ಟಿಸ್ ಗಳನ್ನ ಚಿಕ್ಕ ಚಿಕ್ಕದಾಗಿ ಚುರು ಮಾಡಿಕೊಂಡು ಮಿಕ್ಸಿ ಜಾರಿಗೆ ಹಾಕಿ ಪೂರ್ತಿಯಾಗಿ ಪೌಡರ್ ಮಾಡಿಕೊಳ್ಳಬೇಕು. ನಂತರ ಅದನ್ನ ಒಂದು ಬಾಣಲೆಗೆ ಹಾಕಿಕೊಂಡು, ಅದಕ್ಕೆ ಇಂದು ಕಪ್ ಪುಡಿ ಮಾಡಿಕೊಂಡ ಸಕ್ಕರೆ ಪುಡಿಯನ್ನೂ ಸೇರಿಸಿ, ಅದಕ್ಕೆ ಸ್ವಲ್ಪ ಕೊಬ್ಬರಿ ತುರಿ ಸೇರಿಸಿ, ಅದಕ್ಕೆ ತುಪ್ಪದಲ್ಲಿ ಹೊರಿದು ಇಟ್ಟುಕೊಂಡ ಡ್ರೈ ಫ್ರೂಟ್ಸ್ ಹಾಗೆ ಒಂದು ಟೀ ಸ್ಪೂನ್ ತುಪ್ಪ ಸೇರಿಸಿ ಬಿಸಿ ಇರುವಾಗಲೇ ಕೈಯಲ್ಲಿ ಚೆನ್ನಾಗಿ ಕಳಸಿಕೊಳ್ಳಬೇಕು. ಹೀಗೆ ಚೆನ್ನಾಗಿ ಬಿಸಿ ಇರುವಾಗಲೇ ಕಲಸಿಕೊಂಡರೆ ಸಕ್ಕರೆಯ ಪುಡಿ ಚೆನ್ನಾಗಿ ಎಲ್ಲದರ ಜೊತೆಗೆ ರವೆಯ ಬಿಸಿಗೆ ಕರಗಿ ಪಾಕ ಬಂದಂತೆ ಆಗಿ ಹಿಡಿದುಕೊಳ್ಳತ್ತೆ. ಆದರೂ ತುಂಬಾ ಗಟ್ಟಿ ಅಂತ ಅನಿಸಿದರೆ, 1 ಸ್ಪೂನ್ ಕಾಯಿಸದ ಹಾಲನ್ನ ಸೇರಿಸಿ ಕಲಸಿಕೊಳ್ಳಿ. ಸಕ್ಕರೆ ನೀರು ಬಿಟ್ಟುಕೊಂಡು ಹದ ಬರತ್ತೆ. ನಂತರ ಯಾವ ಗಾತ್ರದಲ್ಲಿ ಬೇಕೋ ಹಾಗೆ ಉಂಡೆ ಕಟ್ಟಬೇಕು. ಎಲ್ಲದರ ಪ್ರಮಾಣ ಹದವಾಗಿ ಇದ್ರೆ ಬಹಳ ಬೇಗ ಉಂಡೆ ಸರಿಯಾಗಿಯೂ ಕಟ್ಟೋಕೆ ಬರತ್ತೆ. ನಂತರ ಇಂದೇರದು ಗಂಟೆ ಬಿಟ್ಟು ತಿನ್ನೋಕೆ ಚೆನ್ನಾಗಿ ಇರತ್ತೆ. ಎಷ್ಟೇ ಹಿಟ್ಟು ಇಟ್ಟರೂ ಕೂಡಾ ಸಾಫ್ಟ್ ಆಗಿಯೇ ಇರತ್ತೆ. ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

Leave A Reply

Your email address will not be published.