ಲಾಕ್ ಡೌನ್ ನಿಂದ ಬಡ ಜನರಿಗೆ ಸಂಕಷ್ಟ ಉಂಟಾದರಿಂದ ಹೆಂಡತಿಯ ಒಡವೆ ಮಾರಿ ಆಹಾರ ಪೂರೈಸಿದ ದಂಪತಿ!

0 1

ಮನುಷ್ಯ ಎಷ್ಟೇ ದೊಡ್ಡವನಾಗಿದ್ದರು ಆತನಿಗೆ ಮಾನವೀಯತೆ ಮುಖ್ಯ ಅನ್ನೋದು ತಿಳಿದಿರಬೇಕು. ಹೌದು ನಿಜಕ್ಕೂ ಇಲ್ಲಿ ತಿಳಿಯಬೇಕಾದ ವಿಷಯ ಈ ಕೊರೋನಾ ಟೈಮ್ ನಲ್ಲಿ ಶ್ರೀಮಂತ ಬಡವ ಅನ್ನೋದು ಮುಖ್ಯ ಅಲ್ಲ ಒಂದು ಜೀವ ಉಳಿಯಬೇಕಾದ್ದದ್ದು ಮುಖ್ಯವಾಗುತ್ತದೆ. ದೇಶದಲ್ಲಿ ಹೀಗಾಗಲೇ ಸಾವಿರಾರು ಜನ ಕರೋನ ದಿಂದ ಮೃತಪಟ್ಟಿದ್ದು ಜನರು ಇನ್ನು ಹೆಚ್ಚೆತ್ತಿಕೊಳ್ಳಬೇಕಾಗಿದೆ. ಅಗತ್ಯ ಕೆಲಸಗಳಿಗೆ ಮಾತ್ರ ಮನೆಯಿಂದ ಹೊರಬರಬೇಕಾಗಿದ್ದು ಮನೆಯಲ್ಲೇ ಇದ್ದು ಕರೋನ ವಿರುದ್ಧ ಹೋರಾಡಬೇಕಾಗಿದೆ.

ಇನ್ನು ವಿಷ್ಯಕ್ಕೆ ಬರೋಣ ಈ ದಂಪತಿ ಹೇಳಲು ಶ್ರೀಮಂತರೇನಲ್ಲ ಆದ್ರೆ ಇವರು ಮಾಡಿರುವಂತ ಕೆಲಸಕ್ಕೆ ಜನರ ಮನಗೆದ್ದಿದ್ದಾರೆ, ಮಾನವೀಯತೆ ಮುಖ್ಯ ಅನ್ನೋದನ್ನ ಈ ಮೂಲಕ ತಿಳಿಸಿದ್ದಾರೆ. ಅಷ್ಟಕ್ಕೂ ಇವರು ಯಾರು ಅನ್ನೋದನ್ನ ತಿಳಿಯುವುದಾದರೆ ರಾಯ್ ಎಂಬುದಾಗಿ ಪಾಟ್ನಾ ಮೂಲದವರು ತನ್ನಲ್ಲಿ ಇದ್ದಂತ ಹಣವೆಲ್ಲ ಖಾಲಿಯಾದ ನಂತರ ಬಡ ಕುಟುಂಬಗಳಿಗೆ ಅಡಿಗೆ ಸಾಮಗ್ರಿ ಒದಗಿಸಲು ತನ್ನ ಹೆಂಡತಿಯ ಚಿನ್ನದ ಆಭರಣಗಳನ್ನು ಮಾರಾಟ ಮಾಡಿದ್ದಾನೆ. ಈ ಕೆಲಸಕ್ಕೆ ಮುಂದಾಗಲು ಮುಖ್ಯ ಕಾರಣ ಇದೆ. ಮಾರ್ಚ್ 24 ರಂದು ಮಗುವೊಂದು ಹಸಿವಿನಿಂದ ಕುಳಿತಿರುವುದು ಕಂಡು ನನ್ನ ಮನಸ್ಸು ಕರಗಿದೆ ಎಂಬುದಾಗಿ ಹೇಳಿದ್ದಾರೆ.

ಮತ್ತೊಂದು ವಿಶೇಷತೆ ಏನು ಅಂದ್ರೆ ತಾನು ದುಡಿದ ಹಣದಲ್ಲೇ ಬೇರೆಯವರಿಗೆ ಸಹಾಯ ಮಾಡುತ್ತಿದ್ದಾರೆ ಹಾಗೂ ತಾನು ಬೇರೆಯವರಿಗೆ ಆಹಾರ ಪೂರೈಸಿದ ಮೇಲೆ ಇವರು ಮನೆಗೆ ಬಂದು ಊಟ ಮಾಡುತ್ತಾರೆ. ಬ್ಯಾಂಕಿನಿಂದ ಸುಮಾರು 2.5 ಲಕ್ಷ ರೂ.ಗಳಷ್ಟು ತನ್ನ ಉಳಿತಾಯ ಖಾಲಿಯಾದ ನಂತರ ರಾಯ್ ಗೆ ಆಹಾರ ವಿತರಣೆ ಮಾಡುವುದು ಕಠಿಣವಾಗಿತ್ತು. ಅದರಿಂದ ನಿರಾಶನಾಗಿದ್ದ ಆತನಿಗೆ ಅವನ ಪತ್ನಿ ಮನೀಶಾ ಕುಮಾರಿ ಜನರಿಗೆ ಸೇವೆ ಸಲ್ಲಿಸಲು 2 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಮಾರಲು ಹೇಳಿದ್ದಾರೆ. “ಬಡವರು ಹಸಿವಿನಿಂದ ಮಲಗಿದ್ದರೆನಾವು ಚಿನ್ನದ ಆಭರಣ ಧರಿಸಿ ಓದಾಡಿದರೆ ಅದು ನಮಗೆ ಶೋಭೆಯಲ್ಲ. ನಾವು ಮನುಷ್ಯರಾಗಿರುವುದು ವ್ಯರ್ಥ. ಎಂದು ಅವರು ರಾಯ್‌ಗೆ ಹೇಳಿದ್ದಾರೆ. ಅಲ್ಲದೆ ತನ್ನ ಚಿನ್ನ ಮಾರಾಟ ಮಾಡಲು ಕೇಳಿದ್ದಾಳೆ. ಆದ್ದರಿಂದ ಒಡವೆ ಮಾಡಿ ಈ ಸೇವೆ ಸಲ್ಲಿಸುತ್ತಿದ್ದಾರೆ.

ರಾಯ್ಕ ಅವರು ಳೆದ 69 ದಿನಗಳಲ್ಲಿ, 250 ಹಳ್ಳಿಗಳ ಬಡ ಕುಟುಂಬಗಳಿಗೆ ಸೇವೆ ಸಲ್ಲಿಸಿದ್ದೇನೆ. ನಾನು ಅವರ ಮನೆಗಳಿಗೆ ತರಕಾರಿಗಳು, ಆಹಾರ ಪದಾರ್ಥಗಳನ್ನು ನೀಡಿದ್ದಾರೆ, 7 ರಿಂದ 8 ಲಕ್ಷಕ್ಕಿಂತ ಹೆಚ್ಚಿನ ಆಹಾರ ಮತ್ತು ಔಷಧಿಗಳು, ಮಾಸ್ಕ್ ಗಳು, ಸ್ಯಾನಿಟೈಜರ್‌ಗಳನ್ನು ವಿತರಿಸಿದ್ದಾರೆ.”ನಾನು 3 ಲಕ್ಷ ರೂ.ಗಿಂತ ಹೆಚ್ಚಿನ ಸಾಲವನ್ನು ಹೊಂದಿದ್ದೇನೆ. ಆದರೆ ಜನರಿಗೆ ಸೇವೆ ಸಲ್ಲಿಸಿದ್ದಾರೆ.

Leave A Reply

Your email address will not be published.