Ration Card under Govt Schemes: ನಮ್ಮ ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರ್ಕಾದ ಅಧಿಕಾರದಲ್ಲಿದೆ. ವಿಧಾನಸಭಾ ಚುನಾವಣೆ ವೇಳೆಯಲ್ಲಿ ಕಾಂಗ್ರೆಸ್ ಸರ್ಕಾರವು ಜನರಿಗೆ ಕೆಲವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಭರವಸೆ ನೀಡಿ, ಜನರ ನಂಬಿಕೆ ಗಳಿಸಿ, ಎಲೆಕ್ಷನ್ ನಲ್ಲಿ ಗೆದ್ದಿತು. ಇದರಿಂದ ಬಿಜೆಪಿ ಪಕ್ಷಕ್ಕೆ ಹಿನ್ನಡೆ ಆಯಿತು ಎಂದು ಹೇಳಬಹುದು. ಹಾಗಾಗಿ ಮುಂಬರುವ ಎಲೆಕ್ಷನ್ ನಲ್ಲಿ ಗೆಲ್ಲಲೇಬೇಕು ಎಂದು ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ.

ಮುಂದಿನ ದಿನಗಳಲ್ಲಿ ತೆಲಂಗಾಣ, ಮಧ್ಯಪ್ರದೇಶ, ಮಿಜೋರಾ, ರಾಜಸ್ಥಾನ್ ಮತ್ತು ಛತ್ತೀಸ್ಘಡ್ ಈ 5 ರಾಜ್ಯಗಳಲ್ಲಿ ವಿಧಾನಸಭಾ ಎಲೆಕ್ಷನ್ ನಡೆಯಲಿದೆ. ಹಾಗಾಗಿ ಇಲ್ಲೆಲ್ಲಾ ಗೆಲ್ಲಬೇಕು ಎಂದು ಬಿಜೆಪಿ ಹೊಸ ಯೋಜನೆಗಳನ್ನಿ ಜಾರಿಗೆ ತರುತ್ತಿದೆ. ಕೇಂದ್ರ ಸಚಿವ ಅಮಿತಾ ಶಾ ಅವರು ಇತ್ತೀಚೆಗೆ ಛತ್ತೀಸ್ಘಡಕ್ಕೆ ಭೇಟಿ ನೀಡಿದ್ದರು, ಆ ವೇಳೆ ಅವರು ಮೋದಿ ಅವರ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಅಧಿಕಾರದಲ್ಲಿರುವ ಭೂಪೇಶ್ ಅವರು ಹಗರಣಕ್ಕೆ ಸಿಲುಕಿಕೊಂಡಿದ್ದಾರೆ.

ಆದರೆ ಬೇರೆ ಯಾವುದೇ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಈವರೆಗೂ 300 ಯೋಜನೆಗಳನ್ನು ಘೋಷಿಸಿ, ಯಾವುದನ್ನು ಜಾರಿಗೆ ತಂದಿಲ್ಲ ಎಂದು ಹೇಳಿದ್ದಾರೆ ಅಮಿತ್ ಶಾ. ಈ ವೇಳೆ ಮೋದಿ ಅವರ ಕೇಂದ್ರ ಸರ್ಕಾರವು ರಾಣಿ ದುರ್ಗಾವತಿ ಯೋಜನೆ ಎನ್ನುವ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು, ಆ ಯೋಜನೆಯ ಮೂಲಕ ಮನೆಯಲ್ಲಿ ಹೆಣ್ಣುಮಗು ಹುಟ್ಟಿದರೆ, ಮಗುವಿನ ವಿದ್ಯಾಭ್ಯಾಸಕ್ಕೆ 1.5 ಲಕ್ಷದವರೆಗು ಸರ್ಕಾರದಿಂದ ಸಹಾಯ ಸಿಗುತ್ತದೆ ಎಂದು ಮಾಹಿತಿ ಸಿಕ್ಕಿದೆ.

ಛತ್ತೀಸ್ಘಡದ ಹೆಣ್ಣುಮಕ್ಕಳಿಗೆ ಆರ್ಥಿಕ ಸಮಸ್ಯೆ ಇರುವುದರಿಂದ ಈ ಯೋಜನೆ ಸಹಾಯ ಮಾಡುತ್ತದೆ. ಇದೊಂದೇ ಅಲ್ಲದೆ ಇನ್ನು ಹಲವು ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ ಎಂದ್ ತಿಳಿಸುತ್ತೇವೆ ನೋಡಿ.. ಬಿಪಿಎಲ್ ಕಾರ್ಡ್ ಇರುವ ಕುಟುಂಬದ ಹೆಣ್ಣುಮಗು ದೊಡ್ಡವಳಾದ ಮೇಲೆ 1.5ಲಕ್ಷ ರೂಪಾಯಿ ಸಿಗುತ್ತದೆ. ಮದುವೆ ಆಗಿರುವ ಮಹಿಳೆಯರಿಗೆ ವರ್ಷಕ್ಕೆ 12 ಸಾವಿರ ರೂಪಾಯಿ ಸಹಾಯ ಹಣ ಸಿಗುತ್ತದೆ.

ರಾಜ್ಯದಲ್ಲಿ 5 ಸಾವಿರಕ್ಕಿಂತ ಹೆಚ್ಚು ಜನೌಷಾಧಿ ಕೇಂದ್ರಗಳನ್ನು ಸಹ ತೆರೆಯಲಾಗುತ್ತದೆ.
ಆಯುಶ್ಮಾನ್ ಕಾರ್ಡ್ ಮಾಡಿಸಿರುವವರಿಗೆ 5 ಲಕ್ಷ ಇನ್ಷುರೆನ್ಸ್ ಸಿಗುತ್ತದೆ. ಕಷ್ಟದಲ್ಲಿ ಇರುವವರಿಗೆ ಅನಾರೋಗ್ಯ ಉಂಟಾದರೆ, ಸಿಎಂ ಪರಿಹಾರ ನಿಧಿಯ ಮೂಲಕ, 10ಲಕ್ಷದ ವರೆಗು ಚಿಕಿತ್ಸೆಗೆ ಹಣ ಪಡೆಯಬಹುದು. ಹೀಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಈ ಪ್ರಯತ್ನ ಬಿಜೆಪಿಗೆ ಯಶಸ್ಸು ಸಿಗುತ್ತಾ ಎಂದು ಕಾದು ನೋಡಬೇಕಿದೆ.

By AS Naik

Leave a Reply

Your email address will not be published. Required fields are marked *