Ration Card List: ಇದೀಗ ಗ್ಯಾರಂಟಿ ಯೋಜನೆಗಳ ನಡುವೆ 3ಲಕ್ಷ ರೇಷನ್ ಕಾರ್ಡ್ ರದ್ದಾಗಿದೆ, ಈ ಪತಿಯಲ್ಲಿ ನಿಮ್ಮ ರೇಷನ್ ಕಾರ್ಡ್ ಇದೆಯಾ ಚೆಕ್ ಮಾಡಿಕೊಳ್ಳಿ

0 52,695

Ration Card List 2023: ಗ್ಯಾರೆಂಟಿ ಸ್ಕೀಮ್ ಗಾಗಿ ರೇಷನ್ ಕಾರ್ಡ್ ಮಾಡಿಸಲು ಮುಗಿಬಿದ್ದ ಜನ ಅನರ್ಹರು ಕೂಡ ಬಿಪಿಎಲ್ ಕಾರ್ಡ್ ಮಾಡಿಸುತ್ತಿದ್ದಾರೆ ಆದ ಕಾರಣ ಸರ್ಕಾರ ಅನರ್ಹರು ಬಿಪಿಎಲ್ (BPL Card) ಕಾರ್ಡ್ಗಳನ್ನು ಹೊಂದಿರುವುದನ್ನು ಪತ್ತೆ ಹಚ್ಚುವ ಕಾರ್ಯ ಮಾಡುತ್ತಿದೆ. ನಿಮ್ಮ ಹೆಸರು ಪಟ್ಟಿಯಲ್ಲಿದೆ ಎಂದು ಒಮ್ಮೆ ಪರಿಶೀಲನೆ ಮಾಡಿಕೊಳ್ಳಿ.

ಕಾಂಗ್ರೆಸ್ ಸರ್ಕಾರ (Congress govt) ಕೆಲವು ಗ್ಯಾರೆಂಟಿಯನ್ನು ಜಾರಿಗೊಳಿಸಲು ಮುಂದಾಗಿದೆ ಅದರಲ್ಲಿ ಕೆಲವು ಯೋಜನೆಗೆ ಅರ್ಜಿ ಸಲ್ಲಿಸಲು ಬಿಪಿಎಲ್ ಕಾರ್ಡನ್ನು ಹೊಂದಿರಬೇಕಾಗುತ್ತದೆ. ಬಿಪಿಎಲ್ (BPL Card) ಕಾರ್ಡ್ ಹೊಂದಿದರೆ ಅವರಿಗೆ ಆಹಾರದ ಸೌಲಭ್ಯ ಇರುತ್ತದೆ ಹಾಗೂ ಈಗ ಕಾಂಗ್ರೆಸ್ ಸರ್ಕಾರ ಗೆದ್ದು ಬಂದಿರುವುದರಿಂದ ಕೆಲವು ಯೋಜನೆಗಳ ಫಲವನ್ನು ಪಡೆದುಕೊಳ್ಳಬೇಕೆಂದರೆ ಬಿಪಿಎಲ್ ಕಾರ್ಡ್ಗಳನ್ನು ಹೊಂದಿರಬೇಕು. ಈ ಕಾರಣದಿಂದಾಗಿ ಅನರ್ಹರು ಬಿಪಿಎಲ್ ಕಾರ್ಡುಗಳನ್ನು ಮಾಡಿಸಲು ಕೆಲವರು ಮುಂದಾಗಿದ್ದಾರೆ. ಕಾರ್ಡ್ ಅನ್ನು ಮಾಡಿಸದೆ ಇದ್ದವರು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು.

ಗ್ಯಾರೆಂಟಿ ಸ್ಕೀಮ್ ನ ಪ್ರಯೋಜನ ಪಡೆಯಲು ಅನರ್ಹರು ಮತ್ತು ನಕಲಿ ಬಿಪಿಎಲ್ ಮತ್ತು AAY ಕಾರ್ಡ್ ಹೊಂದಿರುವ ಫಲಾನುಭವಿಗಳನ್ನು ಗುರುತಿಸವ ಕಾರ್ಯವನ್ನು ತುಂಬಾ ಪರಿಣಾಮಕಾರಿಯಾಗಿ ಆಹಾರ ಇಲಾಖೆ ನಿರ್ವಹಿಸುತ್ತಿದೆ. ಮೊದಲಿನಿಂದಲೂ ನಕಲಿ ಫಲಾನುಭವಿಗಳನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದರು ಆದರೆ ಈಗ ನಕಲಿ ಕಾರ್ಡ್ ಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸರ್ಕಾರ ನಕಲಿ ಕಾರ್ಡ್ ಗಳನ್ನು ಪತ್ತೆಹಲು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಸುಮಾರು ಮೂರು ಲಕ್ಷ ಬಿಪಿಎಲ್ ಕಾರ್ಡ್ ಗಳು ರದ್ದಾಗುವ ಸಾಧ್ಯತೆ ಇದೆ. ನಿಮ್ಮ ಹೆಸರು ಇದೆಯಾ ಎಂದು ನೀವು ಕೂಡ ಚೆಕ್ ಮಾಡಿಕೊಳ್ಳಿ ಸರ್ಕಾರ ನಕಲಿ ಕಾರ್ಡ್ ಗಳನ್ನು ಪತ್ತೆಹಚ್ಚಲು ಮುಂದಾಗಿದೆ. ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಅನರ್ಹರ ಕಾರ್ಡುಗಳನ್ನು ರದ್ದುಗೊಳಿಸಿ ಅವರಿಗೆ ನೋಟಿಸ್ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ.

ಆಕ್ಟಿವ್ ( active) ಆಗಿರುವ BPL ಕಾರ್ಡ್ ಚೆಕ್ ಮಾಡುವ ವಿಧಾನ:- ಮೊದಲಿಗೆ ಅಧಿಕೃತ ವೆಬ್ಸೈಟ್ಗೆ ಹೋಗಬೇಕು, ನಂತರ ಅಲ್ಲಿ ಕೇಳಿರುವಂತಹ ಮಾಹಿತಿಯನ್ನು ಭರ್ತಿ ಮಾಡಿ ಊರು, ಗ್ರಾಮ ಪಂಚಾಯತಿ, ಜಿಲ್ಲೆಯ ಮಾಹಿತಿಯನ್ನು ಕೇಳುತ್ತಾರೆ ಹಾಗೂ ನಿಮ್ಮ ಕಾರ್ಡ್ AAY/ BPL card ಒಂದು ಸೆಲೆಕ್ಟ್ ಮಾಡಿ RD ನಂಬರನ್ನು ನಮೂದಿಸಿ. ನಿಮ್ಮ ಕಾರ್ಡು ಆಕ್ಟಿವ್ ಆಗಿದ್ದರೆ ಅದರಲ್ಲಿ ನಿಮ್ಮ ಹಾಗೂ ಕುಟುಂಬದ ಹೆಸರನ್ನು ಕಾಣಿಸುತ್ತದೆ. (ಇದನ್ನೂ ಓದಿ) Udyogini Yojane: ಮಹಿಳೆಯರು ಸ್ವಂತ ಉದ್ಯೋಗ ಮಾಡಲು ಸರ್ಕಾರದಿಂದ 3 ಲಕ್ಷ ಸಾಲ ಸೌಲಭ್ಯ, ಆಸಕ್ತರು ಕೂಡಲೇ ಅರ್ಜಿಹಾಕಿ

Leave A Reply

Your email address will not be published.