Ration Card: ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಗುಡ್ ನ್ಯೂಸ್, ರೇಷನ್ ನಲ್ಲಿ ಮಹತ್ವದ ಬದಲಾವಣೆ

0 281

ಕರ್ನಾಟಕದ ಜನತೆಗೆ ಒಂದು ಶುಭ ಸಮಾಚಾರವನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರ (Karnataka Congress Government) ನೀಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ (CM Siddharamayya) ಅವರು ಆಯ್ಕೆ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಕರ್ನಾಟಕ ಸರ್ಕಾರಕ್ಕೆ ರಾಜ್ಯದ ಜನ ಸಾಮಾನ್ಯರ ನಿರೀಕ್ಷೆಗಳು ಮತ್ತು ಆಶ್ವಾಸನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಇದರಿಂದ ಇದೀಗ ಎಲ್ಲಾ BPL, APL ಹಾಗೂ ಅಂತ್ಯೋದಯ ರೇಶನ್ ಕಾರ್ಡುದಾರರಿಗೆ ಈಗಾಗಲೇ ಕಾಗ್ರೆಸ್ ಸರ್ಕಾರದ ಗ್ಯಾರೆಂಟಿ ಅಡಿಯಲ್ಲಿ 10 ಕೆಜಿ ಅಕ್ಕಿಯನ್ನು ವಿತರಣೆ ಮಾಡುತ್ತೇವೆ ಎಂದು ಈ ಕೂಡಲೇ ಒಪ್ಪಿಗೆಯನ್ನು ಕೊಡುವುದರ ಮೂಲಕ ಪ್ರಸ್ತುತ ಈ ತಿಂಗಳಿನಿಂದಲೇ ಆರಂಭವಾಗಿ ಪ್ರತೀ ರೇಶನ್ ಕಾರ್ಡ್ ಹೊಂದಿರುವ ಸದಸ್ಯರಿಗೆ 10 ಕೇಜಿ ಅಕ್ಕಿಯನ್ನು ವಿತರಣೆ ಮಾಡುವುದಕ್ಕೆ ಆದೇಶವನ್ನು ಹೊರಡಿಸಲಾಗಿದೆ.

ಸರ್ಕಾರ ಬಡವರಿಗೆ ಕಡಿಮೆ ದರದಲ್ಲಿ ಪಡಿತರ ನೀಡುವ ಉದ್ದೇಶದಿಂದ ಪಡಿತರ ಯೋಜನೆ ಜಾರಿಗೆ ತಂದಿದೆ. ಹಳ್ಳಿಯಿಂದ ನಗರದವರೆಗೆ ಎಲ್ಲೆಡೆ ನಿಮಗೆ ಪಡಿತರ ಸಿಗುತ್ತದೆ. ಯಾವುದೇ ಪಡಿತರ ಅಂಗಡಿಯಲ್ಲಿ ರೇಷನ್ ಕಾರ್ಡ್ ತೋರಿಸಿ ನೀವು ಪಡಿತರ ಪಡೆಯಬಹುದು. ಈ ಪಡಿತರ ಚೀಟಿ ಅಥವಾ ರೇಶನ್ ಕಾರ್ಡ್ ಬಗ್ಗೆ, ಈಗಿನ ಸರ್ಕಾರದ ಗ್ಯಾರೆಂಟಿ ಪಡೆಯಲು ಇದು ಹೇಗೆ ಪ್ರಯೋಜನ ಆಗಬಹುದು? ಎನ್ನುವುದನ್ನು ನಾವು ಇಲ್ಲಿ ನೋಡಬಹುದು.

ಹಾಗೆಯೇ ಅಕ್ಕಿಯ ಜೊತೆಗೆ ಸಕ್ಕರೆ, ಉಪ್ಪು, ಗೋಧಿ, ಬೇಳೆ ಕಾಳುಗಳು ಹಾಗೂ ಸೀಮೆ ಎಣ್ಣೆಯನ್ನು ವಿತರಣೆ ಮಾಡುವುದರ ಬಗ್ಗೆ ಮಾಹಿತಿಯೂ ಲಭ್ಯವಾಗಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿಗಳನ್ನು ಪಡೆದುಕೊಳ್ಳಲು ಈಗ ಸದಸ್ಯರು BPL ರೇಶನ್ ಕಾರ್ಡ್ ಅನ್ನು ಕಡ್ಡಾಯವಾಗಿ ಹೊಂದಿರಬೇಕು. ಹಾಗೂ ಕೇಂದ್ರ ಸರ್ಕಾರದ (Central Government) ವಿವಿಧ ಯೋಜನೆಗಳ ಲಾಭವನ್ನು ಪಡೆಯಲು ಕೂಡಾ BPL ಹಾಗೂ ಅಂತ್ಯೋದಯ ರೇಶನ್ ಕಾರ್ಡ್ ಗಳು ಪ್ರಮುಖವಾದ ದಾಖಲೆಗಳು ಆಗಿವೆ.

ಈ ಕಾರಣಕ್ಕೆ ಇದೀಗ ರಾಜ್ಯ ಸರ್ಕಾರದ ಪಡಿತರ ವಿತರಕರ ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕೃತವಾಗಿ ಪಾತ್ರವನ್ನು ಬರೆದಿದ್ದು, ಅದರಲ್ಲಿ ರೇಶನ್ ವಿತರಣೆ ಮಾಡುವ ಸಂದರ್ಭದಲ್ಲಿ ಅಕ್ಕಿಯ ಜೊತೆಗೆ ಇನ್ನಿತರೆ ಸಾಮಗ್ರಿಗಳು ಸಕ್ಕರೆ, ಉಪ್ಪು, ಗೋಧಿ ಹಾಗೂ ಬೇಳೆ ಕಾಳುಗಳನ್ನು ಮತ್ತು ಸೀಮೆ ಎಣ್ಣೆಯನ್ನು ವಿತರಣೆ ಮಾಡುವಂತೆ ಇದೀಗ ರಾಜ್ಯ ಸರ್ಕಾರದ ಪಡಿತರ ವಿತರಕರ ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ಮನವಿ ಪತ್ರವನ್ನು ಸಲ್ಲಿಸಿದೆ.

ಈ ಹಿಂದೆ 5 ವರ್ಷಗಳ ಸಮ್ಮಿಶ್ರ ಸರ್ಕಾರದಲ್ಲಿ ಯಾವೆಲ್ಲ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡಲಾಗುತ್ತಿತ್ತೋ ಅದನ್ನ ಮತ್ತೆ ವಿತರಣೆ ಮಾಡುವಂತೆ ರಾಜ್ಯ ಸರ್ಕಾರದ ಪಡಿತರ ವಿತರಕರ ಸಂಘವು ಮುಖ್ಯಮಂತ್ರಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದೆ. ಈ ಮನವಿ ಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಗೆ ಸ್ಪಂದನೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ..LPG Gas Price: ಎಲ್‌ಪಿಜಿ ಗ್ಯಾಸ್ ಬಳಕೆದಾರರಿಗೆ ಗುಡ್ ನ್ಯೂಸ್, ಗ್ಯಾಸ್ ಬೆಲೆಯಲ್ಲಿ ಮಹತ್ವದ ಬದಲಾವಣೆ

Leave A Reply

Your email address will not be published.