ಜನರ ಒಳಿತಿಗಾಗಿ ತಯಾರಾಗಿದ್ದ ಟಾಟಾ ನ್ಯಾನೋ ಕಾರ್ ಇದ್ದಕಿದ್ದಂತೆ ಕಣ್ಮರೆಯಾಗಿದ್ಯಾಕೆ ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ವಿಚಾರ

0 99

ರತನ್ ಟಾಟಾ ಅವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ ಪ್ರಪಂಚ ಶ್ರೀಮಂತ ವರ್ಗದ ವ್ಯವಹಾರ ನಡೆಸುತ್ತಿದ್ದ ಬ್ಯುಸಿನೆಸ್ ಮ್ಯಾನ್ ಗಳಲ್ಲಿ ಇವರು ಕೂಡ ಒಬ್ಬರು ಇವರು ನಮ್ಮ ಭಾರತೀಯರು ಎಂದು ಹೇಳಿಕೊಳ್ಳಲು ನಮ್ಮ ದೇಶದ ಹೆಮ್ಮೆ ಕಷ್ಟ ಕಾಲದಲ್ಲಿ ತನ್ನ ಕೈಲಾದಷ್ಟು ಸಹಾಯ ಮಾಡಿದ್ದಾರೆ ಹಾಗೂ ಕೈಗಾರಿಕಾ ಉದ್ಯಮದಲ್ಲಿ ತನದೇ ಅದ ಛಾಪನ್ನು ಮೂಡಿಸಿದ್ದಾರೆ ಅಪ್ಪಟ ದೇಶ ಭಕ್ತ ಕೂಡ ಆಗಿದ್ದಾರೆ ಇವರು ಯುವಕರಿಗೆ ಅಂತಾನೆ ಹಲವಾರು ಸ್ಮಾರ್ಟ್ ಆ್ಯಪ್ ಅನ್ನು ಶುರುಮಾಡಿದ್ದು ಅದನ್ನು ನಮ್ಮ ಯುವಕರು ಅವರ ಕನಸನ್ನು ನನಸಾಗಿಸಲು ಪಣ ತೊಟ್ಟಿದ್ದಾರೆ

ಟಾಟಾ ಅವರು ಕೋಟ್ಯಾಧಿಪತಿ ಆಗಿದ್ದರು ಕೂಡ ದೇಶದ ಬಡವರ್ಗ ಹಾಗೂ ಮಾದ್ಯಮ ವರ್ಗದವರ ಮೇಲೆ ಕಾಳಜಿ ಇರುವ ವ್ಯಕ್ತಿ ಹಾಗೂ ಅವರು ಯಾವುದಾದರೂ ಹೊಸ ಯೋಜನೆ ಕಾರ್ಯರೂಪಕ್ಕೆ ತರುವ ಮೊದಲು ಬಡವರ ಬಗ್ಗೆ ಯೋಚಿಸಿ ಅವರಿಗೆ ಉಪಯುಕ್ತ ಆಗುವ ಹಾಗೆ ನಿರ್ಮಾಣ ಮಾಡುತಲಿದ್ದರು ಒಮ್ಮೆ ರತನ್ ಅವರು ತಮ್ಮ ಪ್ರಯಾಣ ಮಾಡುವ ವೇಳೆಯಲ್ಲಿ ಒಬ್ಬ ವ್ಯಕ್ತಿ ಬೈಕಿನಲ್ಲಿ ತನ್ನ ಸಂಸಾರದ ಎಲ್ಲರನ್ನೂ ಕೂಡಿಸಿಕೊಂಡು ಒಂದೇ ಬೈಕ್ ಅಲ್ಲಿ ಪ್ರಯಾಸದಿಂದ ಪ್ರಯಾಣಿಸಿದ್ದನ್ನು ನೋಡಿದ ಟಾಟಾ ಅವರು ಇಂಥಾ ಪರಿಸ್ಥಿತಿ ಇರುವ ಜನರು ನಮ್ಮ ದೇಶದಲ್ಲಿ ತುಂಬಾ ಮಂದಿ ಇದ್ದಾರೆ ಎಂದು ಯೋಚಿಸಿ ಇವರಿಗೆ ಜಾಸ್ತಿ ಹಣವನ್ನು ವೆಚ್ಚ ಮಾಡಿ ಕಾರ್ ಅನ್ನು ಕೊಂಡುಕೊಳ್ಳುವ ಸಾಧ್ಯತೆ ಕಡಿಮೆ

ಹಾಗಾಗಿ ಸಾಮಾನ್ಯ ಜನರಿಗೆ ಅನುಕೂಲ ಆಗುವಂತೆ ಕಾರು ಅನ್ನು ನಿರ್ಮಾಣ ಮಾಡಿ ಅದರ ಸದುಪಯೋಗ ಬಡ ಹಾಗೂ ಮಧ್ಯಮ ವರ್ಗದ ಜನತೆ ಆಗಲಿ ಎಂಬ ಮನೋಇಚ್ಚೆಯಂತೆ ತಯಾರಿ ಆದ ಕಾರು ನಾವೆಲ್ಲರೂ ನೋಡಿರುವ ಕಾರು ಅದುವೇ ಟಾಟಾ ನ್ಯಾನೋ ಕಾರು ಆರಂಭದಲ್ಲಿ ಉತ್ತಮ ಬೇಡಿಕೆ ಹಾಗೂ ಒಳ್ಳೆಯ ಅಭಿಪ್ರಾಯ ಕೇಳಿಬಂದವು ಆರಂಭದಲ್ಲಿ ಬೈಕ್ ಬೆಲೆ ಅಷ್ಟೆ ಇರುವ ಈ ಕಾರಿನ ಮೇಲೆ ಜನರು ವ್ಯಾಮೋಹ ಉಂಟಾಗಿ ಕೊಂಡುಕೊಳ್ಳುವ ಸಂಖ್ಯೆ ಜಾಸ್ತಿ ಆಗಿತ್ತು ಅಮೇರಿಕಾದ ಅಧ್ಯಕ್ಷ ಒಬಾಮಾ ಕೂಡ ಈ ಕಾರಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಟಾಟಾ ಅವರು ಗುಜರಾತ್ ಹಾಗೂ ಉತ್ತರ ಪ್ರದೇಶ ನಿರ್ಮಾಣ ಮಾಡಲು ಯೋಚಿಸುತ್ತಾರೆ

2008ರ ಸಮಯದಲ್ಲಿ ನ್ಯಾನೋ ಕಾರಿನ ವ್ಯಾಪಾರ ವಹಿವಾಟು ಉತ್ತುಂಗಕ್ಕೆ ಏರಿಕೆ ಆಗಿದ್ದು ಕ್ರಮೇಣ ಮುಂದಿನ ಮೂರು ವರ್ಷದಲ್ಲಿ ಬೆಲೆ ಕುಸಿಯಲು ಆರಂಭ ಆಗುವುದು ಹೀಗಾಗಲು ಕಾರಣವೇನು ಎಂಬುದರ ಬಗ್ಗೆ ಅರಿಯೋಣ 2011 ರಲ್ಲಿ ಒಂದು ಲಕ್ಷ ಆದೇಶ ಬಂದಿದ್ದು 2012 ರಲ್ಲಿ 50000 ಹಾಗೂ 2013 ರ ಹೊತ್ತಿಗೆ 1500 ಅಷ್ಟೆ ಬಂದವು ಕ್ರಮೇಣ ಆರ್ಡರ್ ಕುಸಿಯಲು ಶುರುವಾದವು 2018 ಅಲ್ಲಿ ನ್ಯಾನೋ ಕಾರು ಸಂಪೂರ್ಣ ಆಗಿ ಮುಚ್ಚಿ ಹೋಗಿದೆ ಎಂಬ ವಿಷಯ ತುಂಬಾ ಜನರಿಗೆ ಗೊತ್ತು ಯಾಕೆ ಹೀಗೆ ಆಯಿತು ಎಂದು ನೋಡಿದಾಗ ಭಾರತೀಯ ಜನರು ಕಡಿಮೆ ಸಿಗುವ ವಸ್ತು ಕಳಪೆ ಹಾಗೂ ಉಪಯೋಗಕ್ಕೆ ದಕ್ಕಲ್ಲ ಎಂಬ ಮನೋಭಾವ ಹೊಂದಿರುವ ವ್ಯಕ್ತಿಗಳು

ಹಾಗಾಗಿ ಬೆಲೆ ಜಾಸ್ತಿ ಇರುವ ಕಡೆ ಗಮನ ಹರಿಸಲು ಪ್ರಾರಂಭ ಮಾಡಿದರು ಆದರೆ ಟಾಟಾ ಅವರು ಜನರ ಕಷ್ಟ ಅರಿತರು ವಿನಃ ವ್ಯವಹಾರಿಕವಾಗಿ ಚಿಂತನೆ ಮಾಡಿಲ್ಲ ಹಾಗಾಗಿ ಇವರಿಗೆ ಈ ಯೋಜನೆಯ ಮೂಲಕ ದೊಡ್ಡ ಪಾಠ ಕಲಿಸಿಕೊಟ್ಟಿದೆ ಜನರು ಕಡಿಮೆ ಬೆಲೆ ಹಾಗೂ ಒಳ್ಳೆಯ ಭಾವನೆ ಇಲ್ಲದೆ ನ್ಯಾನೋ ಕಾರಿನ ಬಗ್ಗೆ ಋಣಾತ್ಮಕವಾಗಿ ಹೇಳಿಕೆಯನ್ನು ನೀಡಲು ಆರಂಭ ಮಾಡಿದರು ಇದರಿಂದ ನ್ಯಾನೋ ಕಾರು ಇದ್ದವರಿಗೂ ಇದು ಒಂದು ತರಹ ಮುಜುಗರ ಸನ್ನಿವೇಶ ಸೃಷ್ಟಿ ಆಗಿತ್ತು

ಒಬ್ಬರ ಮನೆಯಲ್ಲಿ ಒಂದು ಕಾರು ಇದೆ ಅಂದರೆ ಅವರ ಶ್ರೀಮಂತಿಕೆ ಹಾಗೂ ಆತನ ಪ್ರತಿಷ್ಟೆ ಪ್ರಶ್ನೆ ಆಗಿದೆ ಐಶಾರಾಮಿ ಜೀವನ ಸಾಲ ಆದರೂ ಸರಿ ಬಾರಿ ಮೊತ್ತದ ಕಾರು ಕೊಂಡುಕೊಳ್ಳುವ ಜನ ಮದ್ಯೆ ನ್ಯಾನೋ ಕಾರು ತೆಗೆದುಕೊಂಡು ಜನರ ನೋಡಿ ಅವರನ್ನು ಹಾಸ್ಯ ಮಾಡುವ ಮನೋಗುಣ ಹೊಂದಿದ್ದು ಹಾಗಾಗಿ ಜನರು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ ಎರಡನೆಯ ಸಮಸ್ಯೆ ಎಂದರೆ ಒಬ್ಬ ಸದೃಢ ಪಬ್ಲಿಕ್ ರೆಲೇಶನ್ ಕೊರತೆ ಇವರ ಕೆಲಸವೆಂದರೆ ಗ್ರಾಹಕರಿಗೆ ಅವರ ಪ್ರೋಡಕ್ಸ್ ನ ಮಾಹಿತಿ ನೀಡುವುದು ತನ್ನ ಪ್ರಾಡಕ್ಟ್ ಮೇಲೆ ಜನರಲ್ಲಿ ಒಳ್ಳೆಯ ಅಭಿಪ್ರಾಯ ಇಲ್ಲವೆಂದು ತಿಳಿದಾಗ ಅದರ ಬಗ್ಗೆ ಜಾಹೀರಾತು ನೀಡಿ ಒಳ್ಳೆಯ ಅಭಿಪ್ರಾಯ ಬರಿಸುವುದು ಆದರೆ ಟಾಟಾ ಸಂಸ್ಥೆ ಇದರ ಬಗ್ಗೆ ಯೋಚಿಸಲು ಹೋಗಲಿಲ್ಲ

ಇನ್ನೂ ಆ ಸಮಯದಲ್ಲಿ ವಿಶ್ವದಲ್ಲಿ ಒಂದು ಲಕ್ಷಕ್ಕೆ ಕಾರು ಸಿಗುವುದು ಅಂದರೆ ಅದು ನ್ಯಾನೋ ಕಾರು ಆಗಿತ್ತು ಆ ಸಮಯದಲ್ಲಿ ಒಂದಷ್ಟು ವಿಲಕ್ಷಣ ಘಟನೆ ನಡೆಯಿತು ಅದೆಂದರೆ ನ್ಯಾನೋ ಕಾರು ಕಳಪೆ ಗುಣಮಟ್ಟದ ಕಾರು ಹಾಗೂ ಅದರ ಭಾಗಗಳು ಕೂಡ ಅಷ್ಟೊಂದು ಚೆನ್ನಾಗಿ ಇಲ್ಲ ಮತ್ತು ಬಾಳಿಕೆ ಕೂಡ ಕಡಿಮೆ ಮುಂತಾದ ಮಾತು ಕೇಳಿಬರುತ್ತದೆ ಅಂಥಹಾ ಸಮಯದಲ್ಲಿ ಕೆಲವೊಂದು ಕಡೆ ಕಾರು ಬೆಂಕಿ ಹತ್ತಿಕೊಂಡು ಸುಟ್ಟು ಹೋದ ಘಟನೆ ವರದಿ ಆಗುತ್ತೆ ಇಂತಹ ಸಮಯದಲ್ಲಿ ಈ ಸಂಸ್ಥೆ ಮೇಲೆ ಅಸಹನೆಗೊಂಡಿದ್ದ ಬೇರೆ ಕಾರಿನ ಸಂಸ್ಥೆಯವರು ಇದನ್ನೆ ದಾಳವಾಗಿ ಇಟ್ಟುಕೊಂಡು ತಮ್ಮ ಜಾಹೀರಾತಿನಲ್ಲಿ ಅದನ್ನೆ ಮುಖ್ಯ ಅಂಶ ಎನ್ನುವ ಹಾಗೆ ಬಿಂಬಿಸುತ್ತಾರೆ ಇದರಿಂದ ಜನರಲ್ಲಿ ಅನುಮಾನ ಹಾಗೂ ಕಾರಿನ ಮೇಲೆ ಇದ್ದ ಆಸಕ್ತಿ ಕಡಿಮೆ ಆಗಲು ಸಾದ್ಯವಾಯಿತು

ಎಲೆಕ್ಟ್ರಾನಿಕ್ ವಸ್ತುಗಳ ಅತಿಯಾದ ಬಳಕೆ ಹಾಗೂ ತಾಪಮಾನದ ವ್ಯತ್ಯಾಸದಿಂದ ಮೊಬೈಲ್ ಮುಂತಾದ ವಸ್ತುಗಳು ಸ್ಫೋಟಗೊಂಡ ಬಗ್ಗೆ ಮಾಹಿತಿ ಇದೆ ಆದರೆ ಬೇರೆ ಸಂಸ್ಥೆ ಟಾಟಾ ಅವರ ಕಾರಿನ ಬಗ್ಗೆ ಕುಹಕ ಹಾಗೂ ಆ ಕಾರಿನ ತೇಜೋವಧೆ ಮಾಡಲು ಮುಂದಾಗುತ್ತಾರೆ ಆದರೆ ಪಬ್ಲಿಕ್ ರೇಲೇಶನ್ ಅವರು ಕೂಡ ಇದರ ಬಗ್ಗೆ ಯೋಚಿಸಲು ಹೋಗಲಿಲ್ಲ ಹಾಗಾಗಿ ನ್ಯಾನೋ ಕಾರಿನ ಅವನತಿ ಸಾದ್ಯ ಆಗಿದೆ ಇನ್ನೂ ಡೆಲಿವರಿ ಟೈಮಿಂಗ್ ಅಲ್ಲು ಕೂಡ ವ್ಯತ್ಯಾಸ ಆಗಿದ್ದು ಅದರ ಪ್ರಮಾದ ಬಗ್ಗೆ ಹೇಳ್ತೀನಿ ಬಂಗಾಳದಲ್ಲಿ ಒಂದು ಘಟಕ ಅನ್ನು ತೆಗೆಯಬೇಕು ಮತ್ತು pre booking ವ್ಯವಸ್ಥೆ ಅನ್ನು ನಿರ್ಮಿಸಿ ಜನರಿಗೆ ಮೊದಲೇ ಸರಬರಾಜು ಮಾಡುವ ಬಗ್ಗೆ ಆಶ್ವಾಸನೆ ನೀಡಿತ್ತು ಅದುಕ್ಕೆ ತಕ್ಕಂತೆ ಅನೇಕ ಜನರು ಕೂಡ ಬುಕ್ ಮಾಡಲು ಮುಗಿಬಿದ್ದಿದ್ದಾರೆ

ಆದರೆ ಬಂಗಾಳದಲ್ಲಿ ಅನೇಕರು ರೈತ ಕುಟುಂಬ ಹೊಂದಿದ್ದು ಟಾಟಾ ಅವರಿಗೆ ತಮ್ಮ ಜಾಗವನ್ನು ನೀಡಲು ಹಿಂದೇಟು ಹಾಕಿ ದೊಡ್ಡ ಆಂದೋಲನವೇ ಸೃಷ್ಟಿ ಆಗಿತ್ತು ಹಾಗಾಗಿ ಜಾಗ ಅಭಾವದಿಂದ ಡೆಲಿವರಿ ಅನ್ನು ಸರಿಯಾದ ಸಮಯಕ್ಕೆ ಗ್ರಾಹಕರಿಗೆ ತಲುಪಲು ಸಾಧ್ಯ ಆಗಲಿಲ್ಲ ಇದರಿಂದ ಜನರಿಗೆ ಅದರ ಮೇಲೆ ಆಸಕ್ತಿ ಆಗಿತ್ತು ಹಾಗೂ ನಂಬಿಕೆ ಕೂಡ ಹೊರಟು ಹೋಗಿತ್ತು ಇನ್ನೂ ಜನರಿಗೆ ಒಂದು ಲಕ್ಷಕ್ಕೆ ಕಾರು ಅನ್ನು ನೀಡುವ ಬಗ್ಗೆ ಹೇಳಿದ್ದು ಕುಸಿದ ವೇಳೆಯಲ್ಲಿ ಸರಿಯಾದ ಮಾರ್ಕೆಟಿಂಗ್ ಇಲ್ಲದೆ ಕಾರನ್ನು ದುಬಾರಿ ಬೆಲೆಗೂ ಕೂಡ ಮಾರಾಟ ಮಾಡುವ ಪ್ರಸಂಗ ನಡೆಯಿತು

ಇಷ್ಟೆಲ್ಲಾ ಘಟನೆಯಲ್ಲಿ ನಮಗೆ ತಿಳಿಯುವುದು ಎಂದರೆ ಸ್ವದೇಶಿ ವಸ್ತುವಿನ ಮೇಲೆ ಇರುವ ವ್ಯಾಮೋಹ ಕಡಿಮೆ ಇದ್ದು ವಿದೇಶಿ ವಸ್ತುಗಳ ಮೇಲೆ ನಮೆಗೆಲ್ಲ ವ್ಯಾಮೋಹ ಜಾಸ್ತಿ ಎನ್ನುವುದು ದುಬಾರಿ ಬೆಲೆ ನಾವು ಇಷ್ಟ ಪಡುವ ನಾವು ಕಡಿಮೆ ಸಿಗುವ ವಸ್ತುವನ್ನು ತೆಗಳುವ ಮನೋಭಾವ ಹೊಂದಿರುವ ಜನ ಭಾರತೀಯರು ಇದರಿಂದ ಟಾಟಾ ಸಂಸ್ಥೆಗೆ ಒಂದು ಒಳ್ಳೆಯ ನೀತಿ ಪಾಠ ಸಿಕ್ಕಿದೆ ಎಂದು ಹೇಳಬಹುದು..

Leave A Reply

Your email address will not be published.