ಭಾರತದಲ್ಲಿ ಈ ಒಬ್ಬ ವ್ಯಕ್ತಿಯ ಹೆಸರನ್ನು ಕೇಳದವರಿಲ್ಲ ಅವರ ಸಾಧನೆಗೆ ಚಪ್ಪಾಳೆ ತಟ್ಟದವರಿಲ್ಲ ಅನೇಕ ಉದ್ಯಮಿಗಳಿಗೆ ಇವರ ವ್ಯಕ್ತಿತ್ವ ಮತ್ತು ಸಾಧನೆ ಸ್ಫೂರ್ತಿಯಾಗಿದೆ.ಅವರು ಬೇರಾರೂ ಅಲ್ಲ ಅವರೇ ಭಾರತದ ಹೆಮ್ಮೆಯ ಸುಪುತ್ರ ರತನ್ ಟಾಟಾ.ರತನ್ ಟಾಟಾ ಉದಾತ್ತ ಕುಟುಂಬದಿಂದ ಬಂದಿದ್ದರೂ ಅವರು ಎಂದಿಗೂ ಅಧಿಕಾರ ಅಥವಾ ಹಣದ ಹಿಂದೆ ಬಿದ್ದವರಲ್ಲ. ಟಾಟಾ ಹೆಸರಿನಲ್ಲಿ ಅನೇಕ ಕಂಪನಿಗಳನ್ನು ದೊಡ್ಡದಾಗಿ ಬೆಳೆಸಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದವರು ರತನ್ ಟಾಟಾ. ಸದ್ದಿಲ್ಲದೆ ಸಮಾಜ ಸೇವೆ ಮಾಡುತ್ತಾ ಇಂದಿನ ಯುವ ಜನತೆಗೆ ದೊಡ್ಡ ಸ್ಫೂರ್ತಿಯಾಗಿದ್ದಾರೆ. ಟಾಟಾ ಸನ್ಸ್‌ ನ ಮಾಜಿ ಅಧ್ಯಕ್ಷರಾದ ಅವರು ಚಿಂತನೆ ಮತ್ತು ಶಕ್ತಿಯಲ್ಲಿ ದೊಡ್ಡ ನಂಬಿಕೆಯುಳ್ಳವರು. ಅವರ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯಲ್ಲಿ ಟಾಟಾ ಮೋಟಾರ್ಸ್ ಫೋರ್ಡ್ ಮೋಟಾರ್ಸ್‌ನೊಂದಿಗೆ ಐತಿಹಾಸಿಕ ಒಪ್ಪಂದವನ್ನು ಪಡೆಯಲು ಸಾಧ್ಯವಾಯಿತು.

1937 ಡಿಸೆಂಬರ್ 28 ರಂದು ಮುಂಬೈ ನಲ್ಲಿ ಜನಿಸಿದ ರತನ್ ಟಾಟಾರ ತಂದೆ ನವಲ್ ಟಾಟಾ ಇವರ ತಾಯಿಯ ಹೆಸರು ಸೂನಿ ಟಾಟಾ ಅವರು ಕೇವಲ 10 ವರ್ಷದವರಾಗಿದ್ದಾಗ ಅವರ ಪೋಷಕರು 1948ರಲ್ಲಿ ಬೇರ್ಪಟ್ಟರು. ಅವರನ್ನು ಅವರ ಅಜ್ಜಿ ನವಾಜ್ಬಾಯಿ ಟಾಟಾ ಅವರು ಬೆಳೆಸಿದರು.
ನಂತರ 1961 ರಲ್ಲಿ ಟಾಟ ಸ್ಟೀಲ್ ಕಂಪನಿಯಲ್ಲಿ ಒಬ್ಬ ಸಾಮಾನ್ಯ ವರ್ಕರ್ ಆಗಿ ಫೀಲ್ಡ್ ವರ್ಕ್ ನಲ್ಲಿ ಕೆಲಸ ಶುರುಮಾಡುತ್ತಾರೆ .1975 ರಲ್ಲಿ ಬಿಸಿನೆಸ್ ಶಿಕ್ಷಣವನ್ನು ಮುಗಿಸುತ್ತಾರೆ.1991 ರಲ್ಲಿ ಜಿ ಆರ್ ಡಿ ಟಾಟ ನಂತರ ಇವರು ಅವರ ಸ್ಥಾನವನ್ನು ತೆಗೆದುಕೊಳ್ಳುತ್ತಾರೆ.ಇವರ ಸಾಮಾಜಿಕ ಕಳಕಳಿಯನ್ನು ಸಮಾಜಕ್ಕೆ ಇವರು ನೀಡಿದ ಕೊಡುಗೆಗಳನ್ನು ಗಮನಿಸಿ 2000 ದಲ್ಲಿ ಪದ್ಮಭೂಷಣ ಪ್ರಶಸ್ತಿ ಮತ್ತು 2008 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿತ್ತು.2012 ರಲ್ಲಿ ತಮ್ಮ ಪದವಿಗೆ ರಾಜೀನಾಮೆ ನೀಡುತ್ತಾರೆ.

ಹಾಗಾದ್ರೆ ಇವತ್ತಿನ ಲೇಖನದಲ್ಲಿ ಇವರ ಬಿಸಿನೆಸ್ ನ ನಿರ್ಧಾರಗಳು ಮತ್ತು ಆ ನಿರ್ಧಾರದಿಂದ ನಾವು ಕಲಿಯಬಹುದಾದ ಪಾಯಿಂಟ್ ಏನು ಅನ್ನೋದನ್ನ ನೋಡೋಣ. ಮೊದಲನೆಯದಾಗಿ 1961 ರಲ್ಲಿ ಇವರು ತಮ್ಮ ಸಾಧಾರಣ ಜೀವನವನ್ನು ಪ್ರಾರಂಭಿಸುತ್ತಾರೆ. ಐಬಿಎಂ ನಿಂದ ಇವರಿಗೆ ಕೆಲಸಕ್ಕೆ ಆಫರ್ ಬರುತ್ತದೆ ಆದ್ರೆ ಅದನ್ನು ನಿರಾಕರಿಸಿ ಟಾಟಾ ಸ್ಟೀಲ್ ನಲ್ಲಿ ಲೇಮೆನ್ ವರ್ಕರ್ ಆಗಿ ಕೆಲಸ ಶುರುಮಾಡುತ್ತಾರೆ. ಇದರಿಂದ ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಸಿದ್ದಾಂತಕ್ಕಿಂತ ಕ್ಷೇತ್ರ ಕಾರ್ಯ ಮುಖ್ಯ ( Field work is more important than the theory)

ಎರಡನೆಯದಾಗಿ ನಾವೆಲ್ಲರೂ ಕೇಳಿರುವ ಹಾಗೆ ಟಾಟಾ ಡೊಕೊಮೊ ಡೊಕೊಮೊ ಅನ್ನೋದು ಜಪಾನ್ ನ ಬೆಸ್ಟ್ ಕಂಪನಿ ಟಾಟಾ ಅವರನ್ನು ನಂಬಿ ಹದಿಮೂರು ಸಾವಿರ ಕೋಟಿಯಷ್ಟು ಹೂಡಿಕೆ ಮಾಡುತ್ತಾರೆ.ಕಾರಣಾಂತರಗಳಿಂದ ಟಾಟಾ ಟೆಲಿಸರ್ವಿಸಸ್ ಗಳು ಅಷ್ಟೇನೂ ಲಾಭ ಮಾಡುವುದಿಲ್ಲ .ಹಾಗಾಗಿ ಅವರು ಅವರ ಹೂಡಿಕೆಯನ್ನು ವಾಪಸ್ಸು ತೆಗೆದುಕೊಳ್ಳುತ್ತಾರೆ.ಸೈರಸ್ ಮಿಸ್ತ್ರಿ ಅವರು RBI ನವರು ಇದಕ್ಕೆ ಅನುಮತಿಸುವುದಿಲ್ಲ ಎಂದು ಕೋರ್ಟ್ ಗೆ ಹೋಗುತ್ತಾರೆ.ಇದು ರತನ್ ಟಾಟಾ ಅವರಿಗೆ ತಿಳಿದು ಅವರನ್ನು ತಮ್ಮ ಕಂಪನಿಯಿಂದ ಸೈರಸ್ ಮಿಸ್ತ್ರಿ ಅವರನ್ನು ವಜಾ ಗೊಳ್ಳಿಸುತ್ತಾರೆ. ಇದಕ್ಕೆ ಕಾರಣ ಕಂಪನಿಯ ಎಥಿಕ್ಸ್ . ಕಂಪನಿಯ ಲಾಭಕ್ಕಿಂತ ಕಂಪನಿಯ ಎಥಿಕ್ಸ್ ನನಗೆ ಬಹಳ ಮುಖ್ಯ ಎಂದು ಒಂದು ಕಡೆ ರತನ್ ಟಾಟಾ ಅವರೇ ಹೇಳುತ್ತಾರೆ.

ಇದರಿಂದ ನಾವು ಟ್ಲಿದುಕೊಳ್ಳಬಹುದಾದ ವಿಷಯ ಏನಂದ್ರೆ ವ್ಯಾಪಾರದಲ್ಲಿ ಮೌಲ್ಯಗಳು ಮುಖ್ಯ ಪಾತ್ರ ವಹಿಸುತ್ತವೆ ( values play an important role in business) ಮೂರನೆಯದಾಗಿ ಟಾಟಾ ಇಂಡಿಕಾ ಕಾರನ್ನು ಲಾಂಚ್ ಮಾಡುತ್ತಾರೆ ತಮ್ಮ ಮೋಟಾರ್ಸ್ ಕಂಪನಿ ಕಡೆಯಿಂದ. ಹಲವಾರು ಕಾರಣಗಳಿಂದ ತುಂಬಾ ನಷ್ಟ ಹೊಂದಿದ ಕಂಪನಿಯನ್ನು ಮಾರಲು ನಿರ್ಧರಿಸಿ ಫೋರ್ಡ್ ಅವರನ್ನು ಮೀಟ್ ಮಾಡುತ್ತಾರೆ. ಮೀಟ್ ಮಾಡಿದ ಸಂದರ್ಭದಲ್ಲಿ ಫೋರ್ಡ್ ಕಂಪನಿಯವರು ಅಪಹಾಸ್ಯವಾಗಿ ಒಂದು ಕಾರನ್ನು ಮ್ಯಾನುಫ್ಯಾಕ್ಚರಿಂಗ್ ಮಾಡೋಕೆ ಬರೋಲ್ಲ ಅಂದ ಮೇಲೆ ಯಾಕ್ ಕಂಪನಿ ಶುರು ಮಾಡಿದ್ರಿ ಎಂದಾಗ ಮ್ಯಾನೇಜ್ಮೆಂಟ್ ಗೆ ಅಷ್ಟೇ ಅಲ್ಲದೆ ರತನ್ ಟಾಟಾ ಅವರಿಗೂ ನೋವ್ ಉಂಟು ಮಾಡುತ್ತದೆ ಹಾಗಾಗಿ ತಮ್ಮ ನಿರ್ಧಾರವನ್ನು ಅಲ್ಲೇ ಕೈ ಬಿಟ್ಟು ತಾವು ತಮ್ಮ ಕಂಪನಿಯನ್ನು ಮಾರುವುದಿಲ್ಲ ಎಂದ್ಹೇಳಿ ಅಲ್ಲಿಂದ ಹೊರಟು ಬಿಡುತ್ತಾರೆ.

ಕೆಲ ವರ್ಷಗಳ ನಂತರ ಫೋರ್ಡ್ ನಷ್ಟ ಅನುಭವಿಸಲು ಶುರುಮಾಡುತ್ತದೆ ಆಗ ಅವರು ತಮ್ಮ ಕಂಪನಿಯ ಬೆಸ್ಟ್ ಬ್ರಾಂಡ್ ಆಗಿದ್ದ ಜಾಗ್ವಾರ್ ಮತ್ತು ಲಾಂಡ್ ರೋವರ್ ನ ಸೇಲ್ ಗೆ ಇಡುತ್ತಾರೆ ಆಗ ಅದನ್ನು ರತನ್ ಟಾಟಾ ಅವರೇ ಪರ್ಚೆಸ್ ಮಾಡುತ್ತಾರೆ. ಇದರಿಂದ ನಾವು ಅರ್ಥ ಮಾಡಿಕೊಳ್ಳಬೇಕು ಎಷ್ಟೋ ಸಂದರ್ಭಗಳಲ್ಲಿ ನಮ್ಗೆ ಅವಮಾನ ಆದಾಗ ಕೋಪ ಬರುತ್ತದೆ ಆ ಕ್ಷಣ ಕೋಪವನ್ನ ನಿಯಂತ್ರಿಸಿ ತಮ್ಮ ಕೆಲಸದ ಮೂಲಕ ನಾವ್ ಏನು ಅನ್ನೋದನ್ನ ನಮ್ಮ ಎದುರಾಳಿಗಳಿಗೆ ತಿಳಿಸಬೇಕು ಭಾವನೆಗಳಿಗೆ ಕಡಿವಾಣ ಹಾಕಬೇಕು. (Take the stones people throw at you ,and use them to build a monument) ಟಾಟ ಕಂಪನಿ ಹೊಸ ಹೊಸ ಆಲೋಚನೆಗಳ ಕೇಂದ್ರವಾದ ಕಂಪನಿಗಳನ್ನು ತೆಗೆದುಕೊಂಡು ಅದನ್ನು ಇನ್ನೂ ಉತ್ತಮಗೊಳಿಸಿರುವುದು ಉಂಟು ಅದ್ರಲ್ಲಿ ಒಂದು Tetly ಅನ್ನೋ ಕಂಪನಿಯನ್ನು 450 ಮಿಲಿಯನ್ ಡಾಲರ್ ಕೊಟ್ಟು ಪಡೆದುಕೊಳ್ಳುವ ನಿರ್ಧಾರ ಮಾಡಿದಾಗ ಎಲ್ಲರೂ ಅದನ್ನು ವಿರೋಧಿಸಿದ್ದರು ಆದ್ರೂ ಧೃತಿಗೆಡದೆ ಟೆಟ್ಲಿ ಅನ್ನೋ ಹೆಸರನ್ನು ಟಾಟಾ ಟೀ ಯಾಗಿ ಬದಲಾಯಿಸುತ್ತಾರೆ. ಟಾಟ ಟೀ ಕಂಪನಿ ಟೀ ಕಂಪನಿಗಳಲ್ಲಿ ಪ್ರಪಂಚದ ಎರಡನೇ ಸ್ಥಾನದಲ್ಲಿ ನಿಲ್ಲುತ್ತದೆ.

ಇದರಿಂದ ನಾವು ಒಂದು ಅಂಶವನ್ನು ಗಮನಿಸಬಹುದು ಮೊದಲಿಗೆ ನಾವು ಬೋಲ್ಡ್ ಆಗಿ ನಿರ್ಧಾರ ಮಾಡೋದನ್ನ ಕಲೀಬೇಕು ಅದೆಷ್ಟೇ ವಿರೋಧವಿದ್ದರೂ ನಮ್ಮ ಕೆಲಸದ ಮೇಲೆ ನಮಗೆ ನಂಬಿಕೆ ಇದ್ದರೆ ನಾವು ಮಾಡುವ ಕೆಲಸದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಒಂದು ಸಂದರ್ಶನದಲ್ಲಿ ರತನ್ ಟಾಟಾ ಅವರೇ ಹೇಳುತ್ತಾರೆ Take Chances and risk ಈಗೆಲ್ಲಾ ದೊಡ್ಡ ದೊಡ್ಡ ಕಂಪನಿಗಳಾಗಿ ಬೆಳೆದಿರುವ ಕಂಪನಿಗಳು ಶುರುವಾಗಿದ್ದು ಸಣ್ಣ ಪುಟ್ಟ ಶೆಡ್ ಗಳಿದ್ದಾನೆ. ಅವತ್ತು ಅವರುಗಳೆಲ್ಲ ಧೈರ್ಯ ಮಾಡಿ ರಿಸ್ಕ್ ತೆಗೆದುಕೊಳ್ಳದೆ ಹೋಗಿದ್ದರೆ ಇಷ್ಟು ದೊಡ್ಡ ಕಂಪನಿಗಳು ಏಳುತ್ತಿರಲಿಲ್ಲ ವರ್ಡ್ ಬೆಸ್ಟ್ ಕಂಪನಿಗಳಾಗುತ್ತಿರಲಿಲ್ಲ. ನಾವು ಒಂದು ಸಣ್ಣ ಚೌಕಟ್ಟಿನಲ್ಲಿ ಬದುಕುವ ಬದಲು ರಿಸ್ಕ್ ತೆಗೆದುಕೊಂಡು ಮುಂದುವರೆಯುವುದು ಒಳ್ಳೇದು.

ರತನ್ ಟಾಟಾ ಅವರು ಎಂದೂ ತಮ್ಮನ್ನು ತಾವು ಬಿಸಿನೆಸ್ ಮ್ಯಾನ್ ಎಂದು ಹೇಳಿಕೊಳ್ಳುವುದಿಲ್ಲ. ಬದಲಿಗೆ ಅವರು ತಮ್ಮನ್ನು ತಾವು ಇಂಡಸ್ಟ್ರಿಯಲ್ಲಿಸ್ಟ್ ಹಾಗೆ ಪರೋಪಕಾರಿ ( philanthropist ) ಎಂದು ಹೇಳಿಕೊಳ್ಳುತ್ತಾರೆ. ಇದಕ್ಕೆ ಕಾರಣ ಕಂಪನಿಯಲ್ಲಿ ಬರುವ 65% ನಷ್ಟು ಚಾರಿಟಿಯಾಗಿ ಸಮಾಜಕ್ಕೆ ಒಳ್ಳೆ ಕೆಲಸಗಳಿಗೆ ನೀಡುತ್ತಾರೆ. ನಿಜವಾದ ಶ್ರೀಮಂತಿಕೆ ಇರೋದು ಕೂಡಿಟ್ಟುಕೊಳ್ಳುವುದರಲ್ಲಿ ಅಲ್ಲ ಕೊಡುವುದರಲ್ಲಿ ಎನ್ನುವುದನ್ನು ರತನ್ ಟಾಟಾ ಅವರಿಂದ ನಾವು ಕಲಿಯಬಹುದು.

Leave a Reply

Your email address will not be published. Required fields are marked *