ಪ್ರತಿಯೊಬ್ಬರಿಗೂ ತಮ್ಮ ಭವಿಷ್ಯದಲ್ಲಿ ಏನಾಗುತ್ತೇವೆ ಎಂಬುದರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇರುತ್ತದೆ. ಜ್ಯೋತಿಷ್ಯಶಾಸ್ತ್ರದಲ್ಲಿ ನಮ್ಮ ಹೆಸರಿನ ಮೊದಲ ಅಕ್ಷರ ಯಾವುದು ಎನ್ನುವುದರ ಮೇಲೆ ನಮ್ಮ ಸ್ವಭಾವ, ಭವಿಷ್ಯವನ್ನು ತಿಳಿಯಬಹುದು. ಹಾಗಾದರೆ ಎ ಇಂದ ಜೆಡ್ ವರೆಗೂ ಅಕ್ಷರ ಹೊಂದಿರುವ ಹೆಸರಿನವರು ಯಾವ ಸ್ವಭಾವವನ್ನು ಹೊಂದಿದ್ದಾರೆ ಎಂದು ಈ ಲೇಖನದಲ್ಲಿ ನೋಡೋಣ.

ನಮ್ಮ ಹೆಸರಿನ ಮೊದಲ ಅಕ್ಷರದಲ್ಲಿ ನಮ್ಮ ಸ್ವಭಾವ ಹೇಗಿದೆ ಎಂದು ತಿಳಿದುಕೊಳ್ಳಬಹುದು. ಜ್ಯೋತಿಷ್ಯಶಾಸ್ತ್ರದಲ್ಲಿ ಅಕ್ಷರದ ಮೂಲಕ ವ್ಯಕ್ತಿಯ ಗುಣಗಳನ್ನು ತಿಳಿದುಕೊಳ್ಳಬಹುದಾಗಿದೆ ಅಲ್ಲದೆ ಅದೃಷ್ಟವನ್ನು ತಿಳಿದುಕೊಳ್ಳಬಹುದಾಗಿದೆ. A ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಎಲ್ಲಾ ಕೆಲಸಗಳನ್ನು ಸಾಧಿಸುವ ವ್ಯಕ್ತಿಗಳಾಗಿರುತ್ತಾರೆ, ಕದ್ದುಮುಚ್ಚಿ ಮಾತನಾಡದೆ ನೇರವಾಗಿ ಮಾತನಾಡುವ ಗುಣವನ್ನು ಹೊಂದಿರುತ್ತಾರೆ. B ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ತಮಗೆ ಸಿಕ್ಕ ಅವಕಾಶದಲ್ಲಿ ತೃಪ್ತಿ ಪಡುವ ಜನರಾಗಿರುತ್ತಾರೆ. ಇವರಿಗೆ ಬಹಳ ಕೋಪ ಬರುತ್ತದೆ.

C ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರಿಗೆ ಥಿಂಕಿಂಗ್ ಪವರ್ ಹೆಚ್ಚಾಗಿರುತ್ತದೆ, ಇವರು ಕನಸಿನಲ್ಲಿ ರಾಜನಂತೆ ಇರುತ್ತಾರೆ. D ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಎಲ್ಲರ ಜೊತೆ ಬೆರೆಯುತ್ತಾರೆ ಆದರೆ ಕೆಲವರನ್ನು ಮಾತ್ರ ಇಷ್ಟಪಡುತ್ತಾರೆ. ಇವರು ಬಹಳ ಉತ್ಸಾಹದಾಯಕ ವ್ಯಕ್ತಿಗಳಾಗಿರುತ್ತಾರೆ. E ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಭವಿಷ್ಯಕ್ಕಾಗಿ ಹೆಚ್ಚು ಯೋಚನೆ ಮಾಡುವ ವ್ಯಕ್ತಿಗಳಾಗಿರುತ್ತಾರೆ.

ಇವರು ಲೈಂ ಗಿಕ ಮತ್ತು ದೈಹಿಕ ಯೋಜನೆಯನ್ನು ಹೆಚ್ಚಾಗಿ ಮಾಡುತ್ತಾರೆ. F ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಭಕ್ತಿ, ಪೂಜೆಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಇವರು ಕುಟುಂಬದ ಮೇಲೆ ಹೆಚ್ಚು ಪ್ರೀತಿಯನ್ನು ತೋರಿಸುತ್ತಾರೆ. G ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಉದಾರ ಭಾವನೆಯನ್ನು ಹೊಂದಿರುತ್ತಾರೆ. ಇವರು ಹೊಸ ಹೊಸ ಆಲೋಚನೆಗಳನ್ನು ಮಾಡುತ್ತಾರೆ.

H ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಸ್ವಂತ ಗೌರವದ ಸ್ವಭಾವವನ್ನು ಹೊಂದಿರುತ್ತಾರೆ. ಹೊರಗಡೆ ಕಠಿಣವಾಗಿ ಇದ್ದರೂ ಇವರ ಮನಸ್ಸು ಬಹಳ ಪ್ರಶಾಂತವಾಗಿರುತ್ತದೆ. ಇವರು ಸ್ಥಿರವಾದ ಮನೋಭಾವದಿಂದ ಹೋರಾಡುತ್ತಾರೆ. I ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರ ಆತ್ಮವಿಶ್ವಾಸವು ಹೆಚ್ಚಾಗಿರುತ್ತದೆ. ಅವರು ಎಚ್ಚರದಿಂದ ಹೆಜ್ಜೆಯನ್ನು ಇಡುತ್ತಾರೆ. J ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರಿಗೆ ಸ್ವಂತ ನಿರ್ಣಯದಿಂದ ಹೆಚ್ಚು ಸಾಧಿಸುವ ಶಕ್ತಿ ಇವರಲ್ಲಿರುತ್ತದೆ. ಬೇರೆಯವರ ಸಹಾಯವಿಲ್ಲದೆ ಇವರು ಕಲಿಕೆಯಲ್ಲಿ ಮುಂದಿರುತ್ತಾರೆ. K ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಮನೋಶಕ್ತಿಯನ್ನು ಹೊಂದಿರುತ್ತಾರೆ. ಕಷ್ಟ ಬಿದ್ದರೆ ಗೆಲುವು ಖಚಿತ ಸಂತೋಷವೆ ಇವರ ಶಕ್ತಿ ಆಗಿರುತ್ತದೆ.

L ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಸಮಸ್ಯೆಗಳನ್ನು 10 ರೀತಿ ಆಲೋಚಿಸುತ್ತಾರೆ. ಇವರ ಮಾತಿನಿಂದ ಎಲ್ಲರ ಗಮನವನ್ನು ಸೆಳೆಯುತ್ತಾರೆ. M ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಒಬ್ಬಂಟಿಯಾಗಿ ಗಂಭೀರವಾಗಿ ಬಹಳ ಆಳದಲ್ಲಿ ಯೋಚಿಸುವ ವ್ಯಕ್ತಿಗಳಾಗಿರುತ್ತಾರೆ. ಇವರು ಅತಿಯಾದ ವಿಶ್ವಾಸ ಹೊಂದಿರುತ್ತಾರೆ ಮತ್ತು ಬುದ್ಧಿವಂತರಾಗಿರುತ್ತಾರೆ. N ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಒಂದು ಕಡೆ ನಿಲ್ಲದ ಸ್ವಭಾವದವರು, ಕಾಲಿನಲ್ಲಿ ಚಕ್ರದ ಜೀವನ. ಇವರು ಹಿಡಿದುಕೊಂಡ ಕೆಲಸಗಳನ್ನು ಅರ್ಧದಲ್ಲೆ ಬಿಟ್ಟು ಬಿಡುತ್ತಾರೆ.

O ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ದೃಢವಾದ ಅಭಿಪ್ರಾಯವನ್ನು ಹೊಂದಿರುತ್ತಾರೆ. ವ್ಯವಹಾರದಲ್ಲಿ ಗೆಲವು ಸಾಧಿಸುವವರೆಗೂ ಹಿಂತಿರುಗುವುದಿಲ್ಲ. ಇವರಲ್ಲಿ ನಾಯಕತ್ವ ಗುಣಗಳು ಹೆಚ್ಚಿರುತ್ತದೆ. P ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಆಳವಾದ ಮತ್ತು ಗಾಢವಾದ ಮನಸ್ಸಿನವರಾಗಿರುತ್ತಾರೆ. ಅವರ ಕಷ್ಟವನ್ನು ಅವರೆ ಫೇಸ್ ಮಾಡುತ್ತಾರೆ. ಅವರು ಬೇರೆಯವರಿಗೆ ಬೇಗ ಅರ್ಥವಾಗುವುದಿಲ್ಲ.

Q ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಗೆಲುವಿಗಾಗಿ ಹೋರಾಡುವ ಗುಣದವರಾಗಿರುತ್ತಾರೆ. ಇವರು ನಾಯಕತ್ವದ ಗುಣವನ್ನು ಹೊಂದಿರುತ್ತಾರೆ. R ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಪ್ರಜೆಗಳಿಗೆ ಉತ್ತಮ ಸೇವೆ ಸಲ್ಲಿಸುವ ಗುಣ ಹೊಂದಿರುತ್ತಾರೆ, ಅವರನ್ನು ಅವರೆ ಮರೆತು ಹೋಗುತ್ತಾರೆ. S ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಯಾವುದಾದರೂ ಸಮಸ್ಯೆ ಬಂದರೆ ಅವರು ವಿಚಲಿತರಾಗಿ ಎಲ್ಲರನ್ನು ವಿಚಲಿತರಾಗುವಂತೆ ಮಾಡುತ್ತಾರೆ. ಇವರು ಬಹಳ ಹಾಸ್ಯ ವ್ಯಕ್ತಿಗಳಾಗಿರುತ್ತಾರೆ.

T ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಯಾರಿಗೂ ಅರ್ಥವಾಗದ ಗುಣದವರು. ಇರುವುದನ್ನು ಇದ್ದಹಾಗೆ ಹೇಳುವ ಸ್ವಭಾವವನ್ನು ಹೊಂದಿರುತ್ತಾರೆ. ಪ್ರತಿ ವಿಷಯದಲ್ಲೂ ಹೋರಾಡುವ ಶಕ್ತಿಯನ್ನು ಹೊಂದಿರುತ್ತಾರೆ. U ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಚಂಚಲ ಸ್ವಭಾವದವರು, ಬಹಳ ಆಳವಾಗಿ ಯೋಚಿಸುವುದರಿಂದ ಇವರಲ್ಲಿ ಆತ್ಮವಿಶ್ವಾಸ ಕಡಿಮೆ ಇರುತ್ತದೆ. ಆಧ್ಯಾತ್ಮಿಕ ವಿಷಯದಲ್ಲಿ ಇವರು ಮುಂದೆ ಇರುತ್ತಾರೆ, ಇವರಿಗೆ ದೈವ ಶಕ್ತಿ ಹೆಚ್ಚಾಗಿರುತ್ತದೆ.

V ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಹಣ ಗಳಿಸುವುದರಲ್ಲಿ ಮುಂದೆ ಇರುತ್ತಾರೆ. ಇವರು ಕಲಿತ ಬುದ್ಧಿಯನ್ನು ಪ್ರಯೋಗಿಸಿ ತಪ್ಪು ಮಾಡುತ್ತಾರೆ, ದೃಢ ನಿರ್ಧಾರವೆ ಇವರ ಗೆಲುವಿನ ಒಂದು ಮಾರ್ಗವಾಗಿರುತ್ತದೆ. W ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಮಾಡುವ ಕೆಲಸವನ್ನು ಬಹಳ ನಿಷ್ಠೆಯಿಂದ ಮಾಡುತ್ತಾರೆ. ಹೊಂದಾಣಿಕೆಯ ಸ್ವಭಾವ ಇವರಿಗೆ ಕಡಿಮೆ ಇರುತ್ತದೆ. X ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಗೊತ್ತಿಲ್ಲದ ವಿಷಯವನ್ನು ಇತರರಿಗೆ ತಿಳಿಸುವವರು, ಇವರ ಜ್ಞಾನವು ಬಹುದೊಡ್ಡದು.

Y ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಏಕಾಂತದಲ್ಲಿ ಇರುವುದನ್ನು ಇವರು ಇಷ್ಟಪಡುತ್ತಾರೆ. ಯಾವ ವಿಷಯಕ್ಕಾದರೂ ಇವರ ಮನಸ್ಸಿನಲ್ಲಿ ನೋವನ್ನು ಪಡುತ್ತಿರುತ್ತಾರೆ. Z ಇವರು ಕೋಪದ ಸ್ವಭಾವದವರು, ಇವರ ಅಭಿಪ್ರಾಯವು ವಿಚಿತ್ರವಾಗಿರುತ್ತದೆ. ಜನರ ಸೇವೆ ಮಾಡುವುದರಲ್ಲಿ ಇವರು ಎತ್ತಿದ ಕೈ. ಹೆಸರಿನ ಮೊದಲ ಅಕ್ಷರದಿಂದ ಅವರ ಗುಣ ಸ್ವಭಾವವನ್ನು ತಿಳಿಯಬಹುದು. ನಿಮ್ಮ ಹೆಸರು ಯಾವ ಅಕ್ಷರದಿಂದ ಶುರುವಾಗುತ್ತದೆ ನೋಡಿ.

Leave a Reply

Your email address will not be published. Required fields are marked *