ನಟಿ ಆಶಿಕಾ ರಂಗನಾಥ್ ಅವರ ಹೊಸ ಡಾನ್ಸ್ ನೋಡಿ ಅಭಿಮಾನಿಗಳು ಫುಲ್ ಫಿದಾ

0 19

ನಟಿ ಆಶಿಕಾ ರಂಗನಾಥ್​ ಅವರಿಗೆ ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆ ಹೆಚ್ಚುತ್ತಿದೆ. ಸ್ಟಾರ್​ ನಟರ ಜತೆ ಅವರು ತೆರೆಹಂಚಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ತೆರೆಗೆ ಬಂದ ಮದಗಜ ಸಿನಿಮಾ ಯಶಸ್ಸು ಕಂಡಿತ್ತು. ಈ ಚಿತ್ರದಲ್ಲಿ ಅವರು ಶ್ರೀಮುರಳಿ ಜತೆ ತೆರೆಹಂಚಿಕೊಂಡಿದ್ದರು. ಈಗ ಆಶಿಕಾ ಕೈಯಲ್ಲಿ ಹಲವು ಸಿನಿಮಾಗಳಿವೆ. ಅವರು ಎಷ್ಟೇ ಬ್ಯುಸಿ ಇದ್ದರೂ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿರುತ್ತಾರೆ.

ಆಶಿಕಾ ಅವರು ನಟನೆ ಜತೆಗೆ ಡ್ಯಾನ್ಸ್ ಮೂಲಕವೂ ಗುರುತಿಸಿಕೊಂಡಿದ್ದಾರೆ. ‘ರ‍್ಯಾಂಬೋ 2’ ಸಿನಿಮಾದ ‘ಚುಟು ಚುಟು.’ ಹಾಡಿನಲ್ಲಿ ಆಶಿಕಾ ಮಸ್ತ್​ ಸ್ಟೆಪ್​ ಹಾಕಿದ್ದರು. ಈ ಹಾಡು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿತ್ತು. ಈ ಹಾಡಿನಿಂದ ಆಶಿಕಾ ಬೇಡಿಕೆ ಕೂಡ ಹೆಚ್ಚಿದೆ. ‘ಕೋಟಿಗೊಬ್ಬ 3’ ಸಿನಿಮಾದಲ್ಲಿ ಆಶಿಕಾ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದರು. ‘ಅವತಾರ ಪುರುಷ’ ಮೊದಲಾದ ಚಿತ್ರಗಳು ರಿಲೀಸ್​ಗೆ ರೆಡಿ ಇವೆ.

ಕಳೆದ ಎರಡು ವರ್ಷದಿಂದ ಚಿತ್ರಮಂದಿರಗಳಿಗೆ ಹೋಗದೆ ಹೊಸ ಸಿನಿಮಾ ನೋಡದೆ ಬೇಸರ ಗೊಂಡಿದ್ದ ಸಿನಿ ಪ್ರಿಯರಿಗೆ ಈ ವರ್ಷದಲ್ಲಿ ಭರಪೂರ ಮನೋರಂಜನೆ ಸಿಗುತ್ತಿದೆ. ಒಂದಾದರ ಮೇಲೊಂದರಂತೆ ಒಳ್ಳೆಯ ಕನ್ನಡ ಸಿನಿಮಾಗಳು ತೆರೆ ಮೇಲೆ ಬರುತ್ತಿದೆ. ಇದೇ ರೀತಿ ಇದೀಗ ಇವತ್ತು ಯುಗಾದಿ ಹಬ್ಬದ ದಿನದಲ್ಲಿ ಸಿನಿ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದೆ. ಸ್ಯಾಂಡಲ್ ವುಡ್ ನ ಆಪಲ್ ಬ್ಯೂಟಿ ಆಶಿಕಾ ರಂಗನಾಥ್ ಹಾಗೂ ಶರಣ್ ನಟಿಸಿರುವ ಅವತಾರ ಪುರುಷ ಸಿನಿಮಾದ ಹೀರೋ ಹೋಂಡಾ ವಿಡಿಯೋ ಸಾಂಗ್‌‌ ರಿಲೀಸ್ ಆಗಿದೆ.

ಅವತಾರ ಪುರುಷ ಸಿನಿಮಾ ತಂಡ ಅದ್ದೂರಿಯಾಗಿ ಅಯೋಜಿಸಿದ ಈ ಕಾರ್ಯಕ್ರಮದಲ್ಲಿ ನಟಿ ಆಶಿಕಾ ರಂಗನಾಥ್ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದು, ಆ ಹಾಡಿಗೆ ನಟ ಶರಣ್ ಜೊತೆ ಅದ್ಭುತವಾಗಿ ಸ್ಟೆಪ್ ಹಾಕಿದ್ದಾರೆ. ಅಶಿಕಾ ಅವರ ಲುಕ್ ಹಾಗೂ ಸಖತ್ ಆಗಿರುವ ಡ್ಯಾನ್ಸ್ ‌ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಅಶಿಕಾ ರಂಗನಾಥ್ ಹಾಗೂ ಶರಣ್ ಜೋಡಿ ರ್ಯಾಂಬೋ ಸಿನಿಮಾದ ಮೂಲಕ ಹಿಟ್ ಆಗಿತ್ತು.

ಅ ಸಿನಿಮಾದ ಉತ್ತರ ಕರ್ನಾಟಕ ಶೈಲಿಯ ಚುಟು ಚುಟು ಹಾಡು ಕೂಡ ಸಂಗೀತ ಪ್ರಿಯರ, ಪಡ್ಡೆ ಹೈಕ್ಳ ಫೆವರಿಟ್ ಹಾಡಾಗಿತ್ತು. ಇದೀಗ ಈ ಅವತಾರ ಪುರುಷ ಸಿನಿಮಾದ ಹೀರೋ ಹೋಂಡಾ ಹಾಡು ಕೂಡ ಉತ್ತರ ಕರ್ನಾಟಕ ಶೈಲಿಯ ಹಾಡೇ ಆಗಿದೆ. ವಿಶೇಷ ಅಂದರೆ ಚುಟು ಚುಟು ಹಾಡಿಗೆ ಹಾಗೂ ಈ ಹೀರೋ ಹೋಂಡಾ ಹಾಡಿಗೆ ಅರ್ಜುನ್ ಜನ್ಯಾ ಅವರದ್ದೇ ಸಂಗೀತ ಸಂಯೋಜನೆ ಮಾಡಿದ್ದಾರೆ. ಹೀಗಾಗಿ ಈ ಹಾಡು ಕೂಡ ಹಿಟ್ ಆಗುವುದರಲ್ಲಿ ಸಂದೇಹವಿಲ್ಲ.

ಅದರಲ್ಲೂ ಮುದ್ದು ಮೊಗದ ಚೆಲುವೆ ಆಶಿಕಾ ರಂಗನಾಥ್ ಅವರ ಅಭಿಮಾನಿಗಳಿಗೆ ಕಾರ್ಯಕ್ರಮ ದಲ್ಲಿ ಅಶಿಕಾ ಅವರ ಡ್ಯಾನ್ಸ್ ನೋಡಿ ಸಿನಿಮಾ ನೋಡಲು ಕಾತರರಾಗಿದ್ದಾರೆ. ಅಶಿಕಾ ರಂಗನಾಥ್ ಅವರು, 2016ರಲ್ಲಿ ಕ್ರೇಜಿ ಬಾಯ್ ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಚೆಲುವೆ. ಚುಟು ಚುಟು ಚೆಲುವೆ, ಆಪಲ್ ಬ್ಯೂಟಿ ಏಂದು ಕರೆಯಲ್ಪಡುವ ಆಶಿಕಾ. ಸುಮಾರು 14 ಸಿನಿಮಾಗಳಲ್ಲಿ ನಟಿಸಿದ್ದಾರೆ.

Leave A Reply

Your email address will not be published.