Ultimate magazine theme for WordPress.

ರಶ್ಮಿಕಾ ಮಂದಣ್ಣಗೆ ಮತ್ತೊಮ್ಮೆ ಖಡಕ್ ಟಾಂಗ್ ಕೊಟ್ಟ ರಿಷಬ್ ಶೆಟ್ಟಿ

0 2

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಕನ್ನಡ ಚಿತ್ರರಂಗಕ್ಕೆ ಸೇರಿದಂತೆ ಚಿತ್ರ ಜಗತ್ತಿಗೆ ಪರಿಚಯಿಸಿದ ಸಿನಿಮಾ ಎಂದರೆ ಅದು ಕಿರಿಕ್ ಪಾರ್ಟಿ ಸಿನಿಮಾ. ಕೊಡಗಿನ ಕುಮಾರಿಯಾಗಿದ್ದ ಅವರನ್ನು ಕನ್ನಡ ಚಿತ್ರರಂಗದ ಎಲ್ಲರ ನೆಚ್ಚಿನ ಸಾನ್ವಿಯನ್ನಾಗಿ ಮಾಡಿದ್ದು ಕಿರಿಕ್ ಪಾರ್ಟಿ ಸಿನಿಮಾ ಎಂದರೆ ತಪ್ಪಾಗಲಾರದು. ಕೇವಲ ರಶ್ಮಿಕ ಮಂದಣ್ಣ ಮಾತ್ರವಲ್ಲದೆ ರಕ್ಷಿತ್ ಶೆಟ್ಟಿ ರಿಷಬ್ ಶೆಟ್ಟಿ ಹಾಗೂ ಸಂಯುಕ್ತ ಹೆಗಡೆ ಅವರಂತಹ ಕಲಾವಿದರಿಗೂ ಕೂಡ ಚಿತ್ರರಂಗದಲ್ಲಿ ದೊಡ್ಡಮಟ್ಟದ ಗುರುತನ್ನು ನೀಡಿದ ಸಿನಿಮಾ ಇದು.

ರಶ್ಮಿಕಾ ಮಂದಣ್ಣ ಅವರು ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದ ನಂತರ ನೇರವಾಗಿ ತೆಲುಗು ಚಿತ್ರರಂಗಕ್ಕೆ ಹೋದ ನಂತರ ಕನ್ನಡ ಚಿತ್ರರಂಗವನ್ನು ಸಂಪೂರ್ಣವಾಗಿ ಮರೆತರು ಎಂದು ಹೇಳಿದರು ಕೂಡ ತಪ್ಪಾಗಲಾರದು. ಅದಾದ ನಂತರ ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ನಟಿಸಿದ್ದು ಮೂರರಿಂದ ನಾಲ್ಕು ಸಿನಿಮಾಗಳು ಅಷ್ಟೇ ಎಂದು ಹೇಳಬಹುದಾಗಿದೆ. ಇನ್ನು ಕನ್ನಡ ಚಿತ್ರರಂಗದ ಕುರಿತಂತೆ ಅಸಡ್ಡೆಯನ್ನು ಕೂಡ ಆಗಾಗ ತೋರಿಸುತ್ತಲೇ ಬಂದಿದ್ದಾರೆ.

ಇನ್ನು ಅದರಲ್ಲೂ ವಿಶೇಷವಾಗಿ ಇತ್ತೀಚೆಗೆ ಹಿಂದಿ ಯೂಟ್ಯೂಬ್ ಚಾನಲ್ ಒಂದರ ಸಂದರ್ಶನ ಒಂದರಲ್ಲಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಚಿತ್ರತಂಡ ಕುರಿತಂತೆ ರಿಜೆಕ್ಟ್ ಮಾಡಿರುವ ರೀತಿಯಲ್ಲಿ ಮಾತನಾಡುವ ಮೂಲಕ ಕಿರಿಕ್ ಪಾರ್ಟಿ ಚಿತ್ರತಂಡಕ್ಕೆ ಪರೋಕ್ಷವಾಗಿಯೇ ಅವಹೇಳನ ಮಾಡಿದ್ದಾರೆ ಎಂದು ಹೇಳಬಹುದಾಗಿದೆ.

ಇದಕ್ಕೆ ಸರಿಯಾದ ಉತ್ತರ ಎನ್ನುವಂತೆ ಇತ್ತೀಚಿಗಷ್ಟೇ ರಿಷಬ್ ಶೆಟ್ಟಿ ಅವರು ಕಿರಿಕ್ ಪಾರ್ಟಿ 2 ಸಿನಿಮಾ ಮಾಡ್ತೀರಂತೆ ಅದರಲ್ಲಿ ರಶ್ಮಿಕಾ ಮಂದಣ್ಣ ಅವರು ಕೂಡ ಇರ್ತಾರ ಎನ್ನುವುದಾಗಿ ಇಂಟರ್ವ್ಯೂನಲ್ಲಿ ಕೇಳಿದಾಗ ರಿಷಬ್ ಶೆಟ್ಟಿ ಅವರು ಮೊದಲ ಭಾಗದ ಇಂಟರ್ವಲ್ಗಿಂತಲೂ ಮುಂಚೇನೆ ಅವರ ಪಾತ್ರ ಮರಣ ಹೊಂದಿದೆ ಆ ಪಾತ್ರವನ್ನು ಹೇಗೆ ಎರಡನೇ ಪಾರ್ಟ್ ನಲ್ಲಿಯೂ ಕೂಡ ತೋರಿಸಲು ಸಾಧ್ಯ ಎಂಬುದಾಗಿ ಹೇಳುವ ಮೂಲಕ ರಶ್ಮಿಕ ಮಂದಣ್ಣ ಅವರನ್ನು ಮುಂದಿನ ಯಾವುದೇ ಸಿನಿಮಾಗಳಲ್ಲಿ ಕೂಡ ಹಾಕಿಕೊಳ್ಳುವುದು ಅನುಮಾನ ಎಂಬುದನ್ನು ಪರೋಕ್ಷವಾಗಿಯ ರಿಷಬ್ ಶೆಟ್ಟಿ ಹೇಳುವ ಮೂಲಕ ರಶ್ಮಿಕಾ ಮಂದಣ್ಣ ಅವರ ಇತ್ತೀಚಿನ ನಡವಳಿಕೆಗಳಿಗೆ ಸರಿಯಾದ ಉತ್ತರವನ್ನು ನೀಡಿದ್ದಾರೆ ಎಂದು ಹೇಳಬಹುದಾಗಿದೆ.

Leave A Reply

Your email address will not be published.