Kanthara Kannada Movie Updates 2022 ಇದು ಕನ್ನಡ ಚಿತ್ರರಂಗಕ್ಕೆ ಅವಿಸ್ಮರಣೀಯ ವರ್ಷವಾಗಿದೆ. ಪ್ಯಾನ್ ಇಂಡಿಯಾ ಹಿಟ್‌ಗಳನ್ನು ಗಳಿಸಿದೆ. ಈ ವರ್ಷದ ಆರಂಭದಲ್ಲಿ ದಿವಂಗತ ಪುನೀತ್ ರಾಜ್‌ಕುಮಾರ್ ಅವರ ‘ಜೇಮ್ಸ್’ ಸೂಪರ್‌ ಹಿಟ್‌ ಕಂಡಿತು. ಬಳಿಕ ಯಶ್ ಅವರ ‘ಕೆಜಿಎಫ್ 2’ ಅದ್ಭುತ ಕಲೆಕ್ಷನ್‌ಗಳೊಂದಿಗೆ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತು. ಆ ನಂತರ ಬಂದ ರಕ್ಷಿತ್ ಶೆಟ್ಟಿ ಅವರ ‘777 ಚಾರ್ಲಿ’ ಸಿನಿ ಪ್ರೇಕ್ಷಕರ ಮನಗೆದ್ದಿತು. 3D ಯಲ್ಲಿ ತಯಾರಾದ ಸುದೀಪ್ ಅವರ ‘ವಿಕ್ರಾಂತ್ ರೋಣ’ ಸಹ ಹಿಟ್‌ ಸಿನಿಮಾ ಸಾಲಿಗೆ ಸೇರಿತು. ಮೊದಲು ಕನ್ನಡದಲ್ಲಿ ರಿಲೀಸ್‌ ಆಗಿ ಆ ನಂತರ ಬೇರೆ ಭಾಷೆಗಳಿಗೆ ಡಬ್‌ ಆಗಿ ಇದೀಗ ಎಲ್ಲೆಡೆ ಸುಂಟರಗಾಳಿ ಎಬ್ಬಿಸಿದ ಸಿನಿಮಾ ಕಾಂತಾರ.

ಸಿನಿಮಾದ ಕತೆ, ನಿರ್ದೇಶನ, ನಟನೆ ಎಲ್ಲವೂ ಅದ್ಭುತ ಎಂದು ಸಿನಿ ಪ್ರಿಯರು ಹಾಡಿ ಹೊಗಳುತ್ತಿದ್ದಾರೆ. ರಿಷಬ್ ಶೆಟ್ಟಿ ಅವರ ‘ಕಾಂತಾರ’ ಚಿತ್ರವು ಬಾಕ್ಸ್ ಆಫೀಸ್ ಕಲೆಕ್ಷನ್‌ಗಳಲ್ಲಿ ಎಲ್ಲಾ ನಿರೀಕ್ಷೆಗಳನ್ನು ಮೀರಿಸುವ ಮೂಲಕ ಪ್ರಪಂಚದಾದ್ಯಂತ ಪ್ರೇಕ್ಷಕರ ಮನ ಸೆಳೆಯುತ್ತಿದೆ. ‘ಕಾಂತಾರ’ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ ಮತ್ತು ಈಗ ಈ ಚಿತ್ರವು ಕರ್ನಾಟಕದ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವಾಗಿದೆ. ಹಾಗಾದ್ರೆ ಕಾಂತಾರ ಸಿನಿಮಾದ ಒಟ್ಟೂ ಗಳಿಕೆ ಎಷ್ಟು ಮತ್ತು ನಟರಿಗೆ ನೀಡಿದ ಸಂಭಾವನೆ ಎಷ್ಟು ಇರಬಹುದು? ಅನ್ನೋದನ್ನ ಈ ಲೇಖನದಲ್ಲಿ ನೋಡೋಣ.

ಸ್ನೇಹಿತರೆ, ಕಾಂತರಾ ಸಿನಿಮಾ ನಮ್ಮ ಕನ್ನಡ ಸಿನಿಮಾ ರಂಗದ ಪ್ರತಿಷ್ಠೆಯನ್ನೇ ಮತ್ತೊಂದು ಎತ್ತರಕ್ಕೆ ತೆಗೆದುಕೊಂಡು ಹೋಯಿತು ಎಂದರೆ ತಪ್ಪಾಗಲಿಕ್ಕಿಲ್ಲ. ಸೆಪ್ಟೆಂಬರ್ 30ನೇ ತಾರೀಕು ಕೇವಲ ಕನ್ನಡ ಭಾಷೆಯಲ್ಲಿ ತೆರೆ ಕಂಡಂತಹ ಈ ಸಿನಿಮಾ ಬಿಡುಗಡೆಯಾದ ಕೇವಲ ಮೂರು ದಿನಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದು ಇನ್ನಷ್ಟು ಸ್ಕ್ರೀನ್ಗಳನ್ನು ಹೆಚ್ಚಿಸಿಕೊಂಡು ಹೌಸ್ಫುಲ್ ಕಲೆಕ್ಷನ್ ಆಗಿತ್ತು. ಹೀಗೆ ಸಿನಿಮಾ ಬಿಡುಗಡೆಯಾಗಿ 10 ದಿನಗಳು ಕಳೆದ ನಂತರ ಹೊಂಬಾಳೆ ಫಿಲಂ ಹಾಗೂ ನಿರ್ದೇಶಕ ರಿಶಬ್ ಶೆಟ್ಟಿ ಅವರು ಮಾತನಾಡಿ ತೀರ್ಮಾನಿಸಿ, ಕಾಂತಾರ ಸಿನಿಮಾವನ್ನು ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದರು. ಹೀಗೆ ಸಿನಿಮಾ ಹಿಂದಿ ಭಾಷೆಯಲ್ಲಿ ಬಿಡುಗಡೆಯಾದ ಕೇವಲ 11 ದಿನಕ್ಕೆ ಕೆಜಿಎಫ್ ರೆಕಾರ್ಡನ್ನು ಅಳಿಸಿ ಹಾಕಿ ತನ್ನದೇ ಆದ ವಿಶೇಷ ದಾಖಲೆಯನ್ನು ಸಹ ಬರೆದಿಟ್ಟಿತ್ತು.

ಹೊಂಬಾಳೆ ಫಿಲಂಸ್ ನಿರ್ಮಿಸಿರುವ ‘ಕಾಂತಾರ’ ಪ್ಯಾನ್ ಇಂಡಿಯಾ ಮಾರುಕಟ್ಟೆಯಲ್ಲಿ ಇತಿಹಾಸ ಸೃಷ್ಟಿಸುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಕಲೆಕ್ಷನ್‌ನ ಬೆಳವಣಿಗೆಯ ಅಂಕಿಅಂಶಗಳು ಅತ್ಯದ್ಭುತ ಮಟ್ಟದಲ್ಲಿವೆ ಮತ್ತು ಈಗ ಹಿಂದಿ ಮಾರುಕಟ್ಟೆಯಲ್ಲಿ 75 ಕೋಟಿ ಮಾರ್ಕ್ ಅನ್ನು ತಲುಪಿದೆ. ಕಾಂತಾರ ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಸತತವಾಗಿ ಬೆಳೆಯುತ್ತಿದೆ, ಒಟ್ಟು 81.05 ಕೋಟಿ ಕಲೆಕ್ಷನ್‌ಗಳನ್ನು ತಲುಪಿದೆ. ಒಟ್ಟಾರೆ ವಿಶ್ವಾದ್ಯಂತ ಸಿನಿಮಾದ ಗಳಿಕೆ 400 ಕೋಟಿ ರೂ. ಗಡಿ ತಲುಪಿರುವ ಕುರಿತು ಮಾಹಿತಿ ಕೇಳಿಬಂದಿದೆ. ಮಾಧ್ಯಮದವರ ಜೊತೆ ಇದೆ ಸಂದರ್ಭದಲ್ಲಿ ಕಾಂತಾರ ಸಿನಿಮಾದ ಕುರಿತು ಸ್ವರಾಜ್ ಶೆಟ್ಟಿ ಅದೇ ಗುರುವನ ಪಾತ್ರ ಮಾಡಿದ್ದರಲ್ಲ ಅವರೇ ಸ್ವರಾಜ್ ಶೆಟ್ಟಿ ಅವರು ಸಂದರ್ಶನ ಒಂದರಲ್ಲಿ ಮಾತನಾಡಿ ತಮಗೆ ಕಾಂತಾರ ಸಿನಿಮಾದಲ್ಲೀ ನತಿಸಿದ್ದಕ್ಕೆ ಕೊಟ್ಟಂತಹ ಸಂಭಾವನೆಯ ಬಗ್ಗೆ ಹೇಳಿಕೊಂಡಿದ್ದರು.

ಹುಚ್ಚ 2 ಎಂಬ ಸಿನಿಮಾದಲ್ಲಿ ಪೋಷಕ ಪಾತ್ರ ಒಂದರಲ್ಲಿ ಅಭಿನಯಿಸುವ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದಂತಹ ಸ್ವರಾಜ ಶೆಟ್ಟಿ ಅವರು ಡ್ರಾಮಾ ಕಂಪನಿಯ ಪ್ರತಿಷ್ಠಿತ ಆರ್ಟಿಸ್ಟ್. ನಿರ್ದೇಶಕರಿಗೆ ಇವರನ್ನು ತಮ್ಮ ಸಿನಿಮಾದಲ್ಲಿ ನಟಿಸುವಂತೆ ಕೇಳಿದೊಡನೆ ಒಪ್ಪಿಕೊಂಡು ಗುರುವಾ ಪಾತ್ರಕ್ಕೆ ಬಹಳ ಮುಗ್ಧ ಅಭಿನಯ ಮಾಡುವ ಮೂಲಕ ಜನರ ಮನ್ನಣೆ ಪಡೆದಿದ್ದರು. ಹೀಗಿರುವಾಗ ಸಂದರ್ಶನ ಒಂದರಲ್ಲಿ ತಮ್ಮ ರನ್ಯುಮರೇಷನ್ ಕುರಿತು ಮಾತನಾಡಿರುವ ಇವರು ನಾನು ದೊಡ್ಡ ಸ್ಟಾರ್ ಕಲಾವಿದ ಏನಲ್ಲ ಸಣ್ಣ ಡ್ರಾಮಾ ಆರ್ಟಿಸ್ಟ್. ಕಾಂತರಾ ಸಿನಿಮಾದಲ್ಲಿ ಶಿವನ ತಮ್ಮ ಗುರುವನ ಪಾತ್ರದಲ್ಲಿ ಅಭಿನಯಿಸಿದಂತಹ ಸ್ವರಾಜ್ ಶೆಟ್ಟಿಯವರಿಗೆ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗಿದ್ದವು, ಕೇವಲ ಡ್ರಾಮಗಳಲ್ಲಿ ಹಾಗೂ ಸಣ್ಣಪುಟ್ಟ ಸೀರಿಯಲ್ ಗಳಲ್ಲಿ ನಟನೆ ಮಾಡಿಕೊಂಡು ತಕ್ಕಮಟ್ಟಿಗೆ ಗುರುತಿಸಿಕೊಂಡಿದ್ದಂತಹ ನಟ ಸ್ವರಾಜ್ ಶೆಟ್ಟಿಯವರಿಗೆ ಕಾಂತಾರ ಸಿನೆಮಾ ಮೂಲಕ ಹೊಸ ಬ್ರೇಕ್ ಸಿಕ್ಕಿತು ಎಂದರೆ ತಪ್ಪಾಗಲಿಕ್ಕಿಲ್ಲ.

ನನಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದೇ ನನ್ನ ಭಾಗ್ಯ ಇದರಿಂದ ಜನರು ನನ್ನನ್ನು ಗುರುತಿಸುತ್ತಿದ್ದಾರೆ. ಇದಕ್ಕಿಂತ ಇನ್ನೇನು ಬೇಕು? ಹಾಗೆ ಸಂಭಾವನೆಯೂ ಕೂಡ ತಕ್ಕನಾಗಿ ಕೊಟ್ಟಿದ್ದಾರೆ, ನನಗೆ ಅದರಲ್ಲಿ ಯಾವುದೇ ಬೇಸರವಿಲ್ಲ ಎಂದರು. ಇದರ ಜೊತೆಗೆ ನನ್ನ ಮೊದಲ ಸಿನಿಮಗಿಂತ ದುಪ್ಪಟ್ಟು ಸಂಭಾವನೆಯನ್ನು ನಾನು ಪಡೆದುಕೊಂಡಿದ್ದೇನೆ ಎಂಬ ಮಾಹಿತಿಯನ್ನು ವ್ಯಕ್ತಪಡಿಸಿದ್ದಾರೆ. ಹೀಗೆ ಸ್ವರಾಜ್ ಶೆಟ್ಟಿ ಅವರ ಈ ಹೇಳಿಕೆಯ ಮೂಲಕ ಇವರ ಸಂಭಾವನೆ 10 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಸ್ವರಾಜ್ ಶೆಟ್ಟಿ ರಂಗಭೂಮಿ ಕಲಾವಿದರಾಗಿದ್ದು, ಇವರು ಈವರೆಗೂ 450ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಇವರು ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಶಿವದೂತೆ ಗುಳಿಗೆ’ ನಾಟಕವೂ ದಕ್ಷಿಣ ಕನ್ನಡ ಮತ್ತು ಉಡುಪಿ ಜೆಲ್ಲೆಗಳಲ್ಲಿ ೧೦೦ಕ್ಕೂ ಹೆಚ್ಚು ಬಾರಿ ಯಶಸ್ವಿ ಪ್ರದರ್ಶನ ಕಂಡಿದೆ. ಈ ನಾಟಕದ ಮೂಲಕ ಸ್ವರಾಜ್ ಕರಾವಳಿಯಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಹಾಗೆಯೇ ಎಲ್ಲ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ‘ಕಾಂತಾರ’ ಸಿನಿಮಾ ಓಟಿಟಿಯಲ್ಲಿ ಪ್ರಸಾರ ಆರಂಭಿಸಬೇಕಿತ್ತು. ಆದರೆ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದ ಹಿನ್ನೆಲೆಯಲ್ಲಿ ಎರಡು ವಾರ ಪೋಸ್ಟ್ ಪೋನ್ ಮಾಡಲಾಗಿದೆ. ಸದ್ಯದ ಮಾಹಿತಿ ಪ್ರಕಾರ, ನವೆಂಬರ್ 24ರಿಂದ ಅಮೆಜಾನ್ ಪ್ರೈಮ್‌ನಲ್ಲಿ ‘ಕಾಂತಾರ’ ಸಿನಿಮಾ ಸ್ಟ್ರೀಮಿಂಗ್ ಆಗುವ ಸಾಧ್ಯತೆ ಇದೆ. ಈ ಮೊದಲು ಕಾಂತಾರ ಸಿನಿಮಾ ತೆರೆಕಂಡ ಆರು ವಾರಗಳ ಬಳಿಕ ಓಟಿಟಿಯಲ್ಲಿ ಚಿತ್ರವನ್ನು ಪ್ರಸಾರ ಮಾಡುವ ಕುರಿತು ಒಪ್ಪಂದವಾಗಿತ್ತಂತೆ. ‘ಕಾಂತಾರ’ ರಿಲೀಸ್‌ಗೂ ಮುನ್ನವೇ ಓಟಿಟಿ ಹಕ್ಕುಗಳ ವ್ಯವಹಾರ ಮುಗಿದುಹೋಗಿತ್ತು.

Leave a Reply

Your email address will not be published. Required fields are marked *