ಸಿನಿಮಾ ಅನ್ನೋ ಬಣ್ಣದ ಲೋಕದಲ್ಲಿ ಹೀರೋ, ಹೀರೋಯಿನ್​​ಗಳಷ್ಟೇ ಸ್ಕೋಪ್ ಇರುವುದು ಪೋಷಕ ಪಾತ್ರಗಳಿಗೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಪೋಷಕ ಪಾತ್ರದಲ್ಲಿ ಮಿಂಚುವ ನಟರು ಸ್ಟಾರ್ ಹೀರೋಗಳಿಗಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಮ‌ೂಲಕ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಅಷ್ಟಕ್ಕೂ ಕನ್ನಡ ಚಿತ್ರರಂಗದಲ್ಲಿ ಪೋಷಕ ನಟರ ಸಂಭಾವನೆ ಸಿನಿಮಾದಿಂದ ಸಿನಿಮಾಕ್ಕೆ ಹೆಚ್ಚಾಗುತ್ತದೆ. ಸ್ಯಾಂಡಲ್​​ವುಡ್​​ನಲ್ಲಿ ಈ ಪೋಷಕ ನಟರು ಒಂದು ದಿನಕ್ಕೆ ಲಕ್ಷಗಟ್ಟಲೆ ಸಂಭಾವನೆ ಪಡೆಯುತ್ತಾರೆ ಅನ್ನೋದು ಅಚ್ಚರಿಯ ಸಂಗತಿ.

ರಂಗಾಯಣ ರಘು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ಕಲಾವಿದ.ತಮ್ಮ ಹಾಸ್ಯ ನಟನೆ ಮೂಲಕ ಕಚಗುಳಿ ಇಡುವುದರ ಜೊತೆಗೆ ಹಲವು ಭಾವಪೂರ್ಣ ಪಾತ್ರಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಇವರು ಮೈಸೂರಿನ ಖ್ಯಾತ ರಂಗಸಂಸ್ಥೆ ರಂಗಾಯಣದ ಪ್ರತಿಭೆ. ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕೊಟ್ಟುರು ಎಂಬ ಹಳ್ಳಿಯಲ್ಲಿರುವ ಚಿಕ್ಕರಂಗಪ್ಪ ಮತ್ತು ವೀರಮ್ಮರಿಗೆ ಒಂಬತ್ತನೆಯ ಮಗುವಿಗೆ ಕೊಟ್ಟೂರು ಚಿಕರಂಗಪ್ಪ ರಘುನಾಥ್ ಅವರು ಜನಿಸಿದರು.ಕೊಟ್ಟುರು ಚಿಕರಂಗಪ್ಪ ರಘುನಾಥ್ ಅವರು ೧೭ ಏಪ್ರಿಲ್ ನಲ್ಲಿ ಜನಿಸಿದರು.

ಅವರು ಮುಂದೆ ರಂಗಾಯಣ ರಘು ಎಂದು ಪ್ರಸಿದ್ಧರಾದರು, ಇವರು ಭಾರತೀಯ ಚಲನಚಿತ್ರ ಮತ್ತು ವೇದಿಕೆಯ ನಟ, ಸಿನಿಮಾದಲ್ಲಿ ಇವರ ಹೆಚ್ಚಾಗಿ ತಮಾಷೆ ಮತ್ತು ನಕಾರಾತ್ಮಕ ಮಸುಕಾದ ಪಾತ್ರಗಳನ್ನು ಚಿತ್ರಿಸಿರುವ ಇವರು ೨೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಲನಚಿತ್ರಗಳಲ್ಲಿ ಅಭಿನಯಿಸುವುದಕ್ಕೂ ಮುನ್ನ, ೧೯೮೮ ರಿಂದ ೧೯೯೯ ರವರೆಗೆ ಅವರು ಬಿ. ವಿ. ಕಾರಂತ್ ಅವರ ರಂಗಭೂಮಿ ಗುಂಪಿನಲ್ಲಿ ರಂಗಾಯಣ ರಘು ಅವರು ವೇದಿಕೆಯ ನಟನಾಗಿ ಕೆಲಸ ಮಾಡಿದರು.

1995 ರಲ್ಲಿ ಸುಗ್ಗಿ ಚಿತ್ರದಲ್ಲಿ ಅಭಿನಯಿಸಿದರು. ೨೦೦೭ ರ ದುನಿಯಾ ಚಿತ್ರದಲ್ಲಿನ ಅಭಿನಯಕ್ಕಾಗಿ ಅವರು ಅತ್ಯುತ್ತಮ ಪಾತ್ರ ವಹಿಸಿದ್ದಾರೆ. ಇದು ಅವರ ಅತ್ಯುತ್ತಮ ಕರ್ನಾಟಕ ನಟನೆಗಾಗಿ ಅವರ ಎರಡನೇ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರ ಇತರ ಗಮನಾರ್ಹ ಪಾತ್ರಗಳು ಸೈನೈಡ್, ರಾಮ್ ಮತ್ತು ಜಯಮ್ಮನ ಮಗ ಬಂದವು. ೧೯೮೮ ರಲ್ಲಿ ಮೈಸೂರಿನ ರಂಗಾಯಣ ರಂಗಭೂಮಿ ಗುಂಪಿನಲ್ಲಿ ಸೇರಿಕೊಂಡಾಗ ರಘು ರವರು ತಮ್ಮ ನಟನಾ ವೃತ್ತಿಯನ್ನು ರಂಗಭೂಮಿ ಕಲಾವಿದನಾಗಿ ಪ್ರಾರಂಭಿಸಿದರು.

ಅಲ್ಲಿ ಅವರು ತಿಂಗಳಿಗೆ ಸಂಬಳವಾಗಿ ೮೦೦ ಪಡೆಯುತ್ತಿದ್ದರು. ನಂತರ ೧೯೯೫ ರ ಕನ್ನಡ ಚಲನಚಿತ್ರ ಚಲನಚಿತ್ರ ಸುಗ್ಗಿಯಲ್ಲಿ ಅಭಿನಯಿಸಿದರು, ಆ ಚಲನಚಿತ್ರವನ್ನು ಹಂಸಲೇಖ ರವರು ನಿರ್ದೇಶಿಸಿದವರು. ಆರಂಭದಲ್ಲಿ ಅವರ ಅಭಿನಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿತ್ತೆ ಹೊರತು ಅಷ್ಟು ಅವಕಾಶಗಳೇನು ಸಿಗುತ್ತಿರಲಿಲ್ಲ. ಯೋಗರಾಜ್ ಭಟ್ ಅವರು ಮೊದಲು ನಿರ್ದೇಶಸಿದ ಮಣಿ ಸಿನಿಮಾದ ಅವರ ಪಾತ್ರ ವಿಮರ್ಶಕರ ಮೆಚ್ಚುಗೆ ಪಡೆಯಿತು. ಆದರೆ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಯಶಸ್ಸು ಪಡೆಯಲಿಲ್ಲ. ನಂತರ ಅವರು ೨೦೦೨ ರ ದಮ್ ಚಲನಚಿತ್ರದಲ್ಲಿ ಕಾಣಿಸಿಕೊಂಡರು, ನಂತರ ಮೇಘಾ ಬಂತು ಮೇಘಾ ಮತ್ತು ಮುಂತಾದ ಚಲನಚಿತ್ರದಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡರು.

ರಂಗ ಎಸ್.ಎಸ್.ಎಲ್.ಸಿ, ದುನಿಯಾ, ಅಲೆಮಾರಿ, ಮೊದಲಾಸಲಾ ಹಾಗೂ ಮುಂತಾದ ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ. ಅಲ್ಲಿಂದ ರಂಗಾಯಣ ರಘು ಅವರು ಹಿಂದಿರುಗಿ ನೋಡುವ ಪ್ರಮೇಯವೇ ಎದುರಾಗಲಿಲ್ಲ. ಒಂದಾದ ಮೇಲೆ ಒಂದು ಸಿನಿಮಾಗಳಲ್ಲಿ ಅಭಿನಯಿಸುತ್ತಲೇ ಹೋದ ರಂಗಾಯಣ ರಘು ಕಾಲ್ ಶೀಟ್ ಇಲ್ಲದೇ ಅನೇಕ ಸಿನಿಮಾಗಳನ್ನು ಬಿಡಬೇಕಾಗಿ ಬಂತು. ಅವರು ಅಷ್ಟೊಂದು ಬ್ಯುಸಿ ನಟರಾಗಿದ್ದರು. ಇದರಿಂದ ಅವರ ಸಂಭಾವನೆ ಎರುತ್ತಲೇ ಹೋಯಿತು. ಇವತ್ತಿಗೆ ಪೋಷಕ ನಟರ ಪೈಕಿ ರಂಗಾಯಣ ರಘು ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ಒಬ್ಬರಾಗಿದ್ದಾರೆ.

ಈಗಾಗಲೇ 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ರಂಗಾಯಣ ರಘು ವರ್ಷಕ್ಕೆ ಬಿಡುಗಡೆ ಆಗುವ ಸಿನಿಮಾಗಳಲ್ಲಿ ಕನಿಷ್ಠ ಹತ್ತು ಸಿನಿಮಾಗಳಲ್ಲಿ ನಟಿಸಿರುತ್ತಾರೆ. ಅವರ ಅಭಿನಯಕ್ಕೆ ಎಲ್ಲೆಡೆಯಿಂದಲೂ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ರಂಗಾಯಣ ರಘು ಅವರು ಒಂದು ಬಾರಿ ರಾಜ್ಯ ಪ್ರಶಸ್ತಿ ಹಾಗೂ ನಾಲ್ಕು ಬಾರಿ ಫಿಲಂ ಫೇರ್ ಅವಾರ್ಡ್ಸ್ ಪಡೆದಿದ್ದರೆ. ಇದರ ಜೊತೆಗೆ ಇನ್ನೂ ಹಲವು ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ. ಪ್ರಸ್ತುತ ರಂಗಾಯಣ ರಘು ಅವರಿಗೆ ಪ್ರತ್ಯೇಕವಾದ ಅಭಿಮಾನಿಗಳ ವರ್ಗವೇ ಇದೆ. ರಂಗಾಯಣ ರಘು ಅವರು ಬಿಡುವು ಇಲ್ಲದ ಕಲಾವಿದರು.

ದುನಿಯಾ ವಿಜಯ್ ಅವರ ಜೋಡಿ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಂದು. ಕನ್ನಡದಲ್ಲಿ ಪರಿಣಾಮಕಾರಿ ಪೋಷಕ ನಟರ ಪಾತ್ರಗಳಿಗೆ ಕೊರತೆಯಿದೆ. ರಂಗಾಯಣ ರಘು ಅವರು ಕಾಮಿಡಿ ಅಲ್ಲದೆ ಸೆಂಟಿಮೆಂಟ್ ರೀತಿಯ ಪಾತ್ರಗಳಿಗೂ ಚೆನ್ನಾಗಿ ಹೊಂದುತ್ತಾರೆ. ರಂಗಾಯಣ ರಘು, ರಂಗಾಯಣ ರಘು ಇವರು ಸಿನಿಮಾದಲ್ಲಿ ಹಾಸ್ಯ ನಟನಾಗಿ ಮಾತ್ರ ಕಾಣಿಸಿಕೊಳ್ಳುವುದಿಲ್ಲ. ಅದರ ಜೊತೆ ಖಳ ನಾಯಕನ ಪಾತ್ರ ಸೇರಿದಂತೆ, ಪೋಷಕ ಪಾತ್ರಗಳಲ್ಲಿ ನಟಿಸುವ ಅವರು ಒಂದು ದಿನದ ಕಾಲ್ ಶೀಟ್ ಗೆ 5 ರಿಂದ 8 ಲಕ್ಷ ಸಂಭಾವನೆ ಪಡೆಯುತ್ತಾರೆ. ಅವರ ವಿಶಿಷ್ಟ ಮ್ಯಾನರಿಸಂ, ಬಾಡಿ ಲ್ಯಾಂಗ್ವೇಜ್ ಅವರನ್ನು ಬೇಡಿಕೆಯ ನಟರನ್ನಾಗಿಸಿದೆ.

Leave a Reply

Your email address will not be published. Required fields are marked *