ಬಹುದಿನದ ನಂತರ ರಕ್ಷಿತ್ ಶೆಟ್ಟಿ ಹಾಗೂ ಅಂಕಿತಾ ಕಡೆಯಿಂದ ಅಭಿಮಾನಿಗಳಿಗೆ ಸಿಹಿಸುದ್ದಿ

0 0

ಕನ್ನಡ ಕಿರುತೆರೆಯ ಲೋಕದಲ್ಲಿ ಸಾಕಷ್ಟು ಕಲಾವಿದರು ಅವರದೇ ಆದ ಅಭಿನಯದ ಮೂಲಕ ಹೆಚ್ಚು ಜನರಿಗೆ ತಲುಪುವಲ್ಲಿ ಯಶಸ್ವಿಯಾಗುತ್ತಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನಮ್ಮನೆ ಯುವರಾಣಿ ಎಂಬ ಸೀರಿಯಲ್ ಮೂಲಕ ಎಲ್ಲರ ಮನೆ ಮಾತಾದ ನಟಿ ಅಂಕಿತ ಅಮರ್ ಅವರು ಇದೀಗ ಹೆಚ್ಚು ಸಕ್ರಿಯ ಆಗಿರುವ ನಟಿ. ಅತ್ತ ತೆಲುಗು ಕಿರುತೆರೆ ಧಾರಾವಾಹಿಯೊಂದರಲ್ಲಿ ಚಂದನ್ ಅವರ ಜೊತೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಾ ಅಂಕಿತ ಅಮರ್ ಅವರು ಸಿನಿಮಾ ಕೆಲಸಗಳಲ್ಲಿಯೂ ಹೆಚ್ಚು ಬ್ಯುಸಿ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಜೊತೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ನಟಿ ಅಂಕಿತ ಅಮರ್. ನಮ್ಮನೆ ಯುವರಾಣಿ ಸೀರಿಯಲ್ ನಿಂದ ಹೊರ ಬಂದ ನಟಿ ಮೀರಾ ಪಾತ್ರದಲ್ಲಿ ಹೆಚ್ಚು ಜನರ ಮನಸ್ಸಿನಲ್ಲಿ ಇಂದಿಗೂ ಉಳಿದು ಗುರುತಿಸಿಕೊಳ್ಳುತ್ತಿರುವುದು ವಿಶೇಷ.

ಕನ್ನಡ ಕಿರುತೆರೆ ಲೋಕದಲ್ಲಿ ತಮ್ಮ ಮುಗ್ಧತೆ ಮತ್ತು ತಮ್ಮ ನಗುವಿಂದಲೇ ಎಲ್ಲರ ಗಮನ ಸೆಳೆದವರು ನಟಿ ಅಂಕಿತಾ ಅಮರ್. ಕಲರ್ಸ್ ಕನ್ನಡ ವಾಹಿನಿಯ ನಮ್ಮನೆ ಯುವರಾಣಿ ಧಾರವಾಹಿ ಮೂಲಕ ಮನೆಮಾತಾಗಿದ್ದರು. ಈಗ ನಮ್ಮನೆ ಯುವರಾಣಿ ಧಾರವಾಹಿಯಿಂದ ಅಂಕಿತಾ ಅವರು ಹೊರಬಂದಿದ್ದರು ಸಹ ಅಭಿಮಾನಿಗಳು ಇಂದಿಗೂ ಕೋಳಿಮರಿ ಮೀರಾ ಪಾತ್ರವನ್ನು ಮರೆಯದೆ, ಅಂಕಿತಾ ಅವರ ಎಲ್ಲಾ ಪೋಸ್ಟ್ ಗಳಲ್ಲೂ ಕಮೆಂಟ್ಸ್ ಮೂಲಕ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ತಿಳಿಸುತ್ತಾರೆ. ಇದೀಗ ಅಂಕಿತಾ ಅವರ ಅಭಿಮಾನಿಗಳಿಗೆ ಒಂದು ಭರ್ಜರಿಯಾದ ಗುಡ್ ನ್ಯೂಸ್ ಸಿಕ್ಕಿದ್ದು, ಅದನ್ನು ಅಂಕಿತಾ ಅಮರ್ ಮತ್ತು ಖ್ಯಾತ ನಟ ರಕ್ಷಿತ್ ಶೆಟ್ಟಿ ಜೊತೆಯಾಗಿ ನೀಡಿದ್ದಾರೆ.

ನಮ್ಮನೆ ಯುವರಾಣಿ ಧಾರವಾಹಿಯಿಂದ ಕೋಳಿಮರಿ ಮತ್ತು ಗುಗ್ಗು ಪಾತ್ರ ಬಹಳ ಫೇಮಸ್ ಆಗಿತ್ತು. ಇವರಿಬ್ಬರ ಮುದ್ದಿನ ಕೋಳಿಜಗಳ ನೋಡಲು ಕಿರುತೆರೆ ವೀಕ್ಷಕರು ಕಾದು ಕುಳಿತಿರುತ್ತಿದ್ದರು. ಸಾಕೇತ್, ಅನಿಕೇತ್ ಮತ್ತು ಮೀರಾ ಮೂವರ ಕಾಂಬಿನೇಷನ್ ದೃಶ್ಯಗಳು ಸಹ ಚೆನ್ನಾಗಿ ಮೂಡಿಬರುತ್ತಿದ್ದವು. ಅನಿಕೇತ್ ಮೀರಾ ಧಾರವಾಹಿಯಿಂದ ಹೊರಬಂದ ಬಳಿಕ, ನಮ್ಮನೆ ಯುವರಾಣಿ ಧಾರವಾಹಿ ಕಳೆಗುಂದಿದೆ ಎನ್ನುತ್ತಾರೆ ಅಭಿಮಾನಿಗಳು. ನಮ್ಮನೆ ಯುವರಾಣಿ ಬಳಿಕ ಅಂಕಿತಾ ಅವರು ಎದೆ ತುಂಬಿ ಹಾಡುವೆನು ಶೋ ನಿರೂಪಣೆ ಮಾಡಿ, ನಿರೂಪಕಿಯಾಗಿ ಎಲ್ಲರ ಮನಗೆದ್ದರು.

ಅಂಕಿತಾ ಅವರು ಒಳ್ಳೆಯ ಗಾಯಕಿ. ಇತ್ತೀಚೆಗೆ ತೆಲುಗು ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ ಅಂಕಿತಾ. ಕನ್ನಡದ ಕಿರುತೆರೆಯ ಖ್ಯಾತ ನಟ ಚಂದನ್ ಕುಮಾರ್ ಮತ್ತು ಅಂಕಿತಾ ಅವರು ಒಂದೇ ಧಾರವಾಹಿಯಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಜೊತೆಗೆ ಕನ್ನಡ ಸಿನಿಮಾಗಳಲ್ಲಿ ಸಹ ಬ್ಯುಸಿ ಆಗಿದ್ದಾರೆ ಅಂಕಿತಾ. ಪೃಥ್ವಿ ಅಂಬಾರ್ ಅವರಿಗೆ ನಾಯಕಿಯಾಗಿ ಅಬ ಜಬ ದಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಮುಹೂರ್ತ ಇತ್ತೀಚೆಗೆ ನೆರವೇರಿತು. ಇತ್ತೀಚೆಗೆ ಅಂಕಿತಾ ಅವರ ಹುಟ್ಟುಹಬ್ಬ ಇತ್ತು, ಸಿನಿಮಾ ಮತ್ತು ಧಾರವಾಹಿ ಎರಡರ ಚಿತ್ರೀಕರಣದಲ್ಲಿ ಬ್ಯಸಿ ಆಗಿರುವ ಅಂಕಿತಾ, ಅದರ ನಡುವೆಯೂ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡರು.

ಈ ಬಾರಿ ಅಂಕಿತಾ ಅವರ ಹುಟ್ಟುಹಬ್ಬವನ್ನು ಸಾಕೇತ್ ಮತ್ತು ಅನಿಕೇತ್ ಇಬ್ಬರು ಸಹ ಅಂಕಿತಾ ಅವರ ಮನೆಗೆ ಬಂದು ಆಚರಿಸಿದ್ದಾರೆ. ಈ ಮೂವರನ್ನು ಸಹ ಜೊತೆಯಾಗಿ ನೋಡಿ ಅಭಿಮಾನಿಗಳಿಗೂ ಬಹಳ ಸಂತೋಷವಾಗಿತ್ತು. ಅನಿಕೇತ್ ಮೀರಾ ಮತ್ತೆ ಜೊತೆಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿ ಎನ್ನುವುದು ಅಭಿಮಾನಿಗಳ ಆಸೆ. ಅಂಕಿತಾ ಅವರ ಹುಟ್ಟುಹಬ್ಬದಂದು ಅವರ ಅಭಿಮಾನಿಗಳೆಲ್ಲರು ಸಹ ಸೋಷಿಯಲ್ ಮೀಡಿಯಾ ಮೂಲಕ ವಿಶ್ ಮಾಡಿದ್ದರು. ಜೊತೆಗೆ ಅಂಕಿತಾ ನಾಯಕಿಯಾಗಿರುವ ಅಬ ಜಬ ದಬ ಸಿನಿಮಾ ತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿ ಅಂಕಿತಾ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದರು.

ಜೊತೆಗೆ ನಟ ರಕ್ಷಿತ್ ಶೆಟ್ಟಿ ಅವರ ಕಡೆಯಿಂದ ಸಹ ಅಂಕಿತಾ ಅವರಿಗೆ ಒಂದು ಸರ್ಪ್ರೈಸ್ ಸಿಕ್ಕಿದೆ. ರಕ್ಷಿತ್ ಶೆಟ್ಟಿ ಅವರು ನಿರ್ಮಾಣ ಮಾಡಲಿರುವ ಹೊಸ ಸಿನಿಮಾಗೆ, ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಅಂಕಿತಾ. ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋ ಕಡೆಯಿಂದ ಅಂಕಿತಾ ಅವರಿಗೆ ಸ್ವಾಗತ ಮಾಡಿ, ತಮ್ಮ ಸಂಸ್ಥೆಗೆ ಬರಮಾಡಿಕೊಂಡು ಜೊತೆಗೆ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಈ ಗುಡ್ ನ್ಯೂಸ್ ಅಂಕಿತಾ ಅವರ ಅಭಿಮಾನಿಗಳಿಗೆ ಬಹಳ ಸಂತೋಷ ಆಗಿದ್ದು, ಇಂತಹ ಒಳ್ಳೆಯ ಅವಕಾಶಗಳು ಅಂಕಿತಾ ಅವರಿಗೆ ಸಿಗಲಿ ಎನ್ನುವುದು ಅಭಿಮಾನಿಗಳ ಆಶಯ.

Leave A Reply

Your email address will not be published.