ಬ್ಯಾಚುಲರ್ ಜೀವನಕ್ಕೆ ಗುಡ್ ಬೈ ಹೇಳಿ, ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ JK ಹುಡುಗಿ ಯಾರು ಗೊತ್ತಾ

0 1

ಕನ್ನಡ ಕಿರುತೆರೆಯಲ್ಲಿ ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ಫೇಮಸ್ ಆದ ಕಾರ್ತಿಕ್ ಜಯರಾಮ್ ಅವರು ಮದುವೆಯಾಗುತ್ತಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜೆಕೆ ಅವರನ್ನು ಮದುವೆಯಾಗುವ ಹುಡುಗಿ ಯಾರು ಹಾಗೂ ಅವರ ಪರಿಚಯದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಕನ್ನಡ ಕಿರುತೆರೆಯ ಎವರ್ ಗ್ರೀನ್ ಹೀರೊ ಎನ್ನಲಾಗುವ ನಟ ಜೆಕೆ ಇದೀಗ ತಮ್ಮ ಬ್ಯಾಚುಲರ್ ಜೀವನಕ್ಕೆ ಗುಡ್ ಬೈ ಹೇಳುತ್ತಿದ್ದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ನಟ ಜೆಕೆ ತಮ್ಮ ನಟನೆಯ ಮೂಲಕ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾದರು. ಅಶ್ವಿನಿ ನಕ್ಷತ್ರ ಧಾರಾವಾಹಿ ಜೆಕೆಗೆ ದೊಡ್ಡ ಮಟ್ಟದಲ್ಲಿ ಹೆಸರು ಹಾಗೂ ಯಶಸ್ಸನ್ನು ತಂದುಕೊಟ್ಟಿತು.

ಧಾರಾವಾಹಿಯ ಪಾತ್ರದ ಹೆಸರು ಸಹ ಜೆಕೆಯೆ ಆಗಿದ್ದು ನಿಜ ಜೀವನದಲ್ಲಿಯೂ ಜೆಕೆ ಎಂದೆ ಕರೆಯಲ್ಪಡುವ ಕಾರ್ತಿಕ್ ಜಯರಾಮ್ ಅವರು ಕನ್ನಡ ಕಿರುತೆರೆಯಲ್ಲಿ ಅಶ್ವಿನಿ‌ ನಕ್ಷತ್ರ ಧಾರಾವಾಹಿಯ ಮೂಲಕ ಕಿರುತೆರೆಯ ಸೂಪರ್ ಸ್ಟಾರ್ ಎನಿಸಿಕೊಂಡರು. ಸುದೀಪ್ ಅವರಿಗೆ ಆಪ್ತರಾಗಿದ್ದ ಜೆಕೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದರೂ ಸಹ ಅವರಿಗೆ ಕಿರುತೆರೆಯಷ್ಟು ಯಶಸ್ಸನ್ನು ನೀಡಲಿಲ್ಲ.

ಅಶ್ವಿನಿ ನಕ್ಷತ್ರದಲ್ಲಿ ಜೆಕೆ ಹೆಂಡತಿಯನ್ನು ಕರೆಯುತ್ತಿದ್ದ ಹೆಂಡ್ತಿ ಎಂಬ ಪದ ಒಂದು ರೀತಿ ಟ್ರೆಂಡ್ ಆಗಿತ್ತು. ಈಗಲೂ ಸಾಕಷ್ಟು ಮಂದಿ ಹಾಗೆ ಕರೆಯುತ್ತಾರೆ. ಇನ್ನು ನಂತರದಲ್ಲಿ ಹಿಂದಿ ಕಿರುತೆರೆಗೆ ಕಾಲಿಟ್ಟ ನಟ ಜೆಕೆ ಸಿಯಾ ಕಿ ರಾಮ್ ಧಾರಾವಾಹಿಯಲ್ಲಿ ರಾವಣನಾಗಿ ಮಿಂಚಿದರು. ಆ ಧಾರಾವಾಹಿ ಹಿಂದಿ ಕಿರುತೆರೆಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದಲ್ಲದೆ ಅವರಿಗೆ ಹೆಸರನ್ನು ಸಹ ತಂದುಕೊಟ್ಟಿತ್ತು. ಇನ್ನೂ ಕೆಲವು ವರ್ಷಗಳ ಹಿಂದೆ ಬಿಗ್ ಬಾಸ್ ನಲ್ಲಿಯೂ ಭಾಗವಹಿಸಿದ ಜೆಕೆ ಆಗಲೆ ವಯಸ್ಸು ಮೂವತ್ತಾರು ದಾಟಿದ್ದರೂ ಸಹ ಮದುವೆಯಾಗುವ ಮನಸ್ಸು ಮಾಡಿರಲಿಲ್ಲ.

ಬ್ಯಾಚುಲರ್ ಜೀವನವನ್ನೆ ಎಂಜಾಯ್ ಮಾಡುತ್ತಿದ್ದ ಜೆಕೆ ಸಧ್ಯ ಇದೀಗ ತಮ್ಮ ಒಂಟಿ ಜೀವನಕ್ಕೆ ಗುಡ್ ಬೈ ಹೇಳುತ್ತಿದ್ದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಅಧಿಕೃತವಾಗಿ ಸಂತೋಷ ಹಂಚಿಕೊಂಡಿದ್ದಾರೆ. ಜೆಕೆ ಅವರನ್ನು ಸಾಕಷ್ಟು ಜನರು ಅವರ ಮದುವೆಯ ಬಗ್ಗೆ ಬಹಳಷ್ಟು ಬಾರಿ ಕೇಳಿತ್ತಿದ್ದರು. ಅದಕ್ಕೆಲ್ಲಾ ಉತ್ತರ ಈಗ ಸಾಮಾಜಿಕ ಜಾಲತಾಣದ ಮೂಲಕ ನೀಡಿದ್ದಾರೆ. ಜೆಕೆ ತಾವು ಮದುವೆಯಾಗುತ್ತಿರುವ ಹುಡುಗಿಯ ಫೋಟೊ ಜೊತೆಗೆ ಲೈಫ್ ಲೈನ್ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಜೆಕೆ ಮದುವೆಯಾಗುತ್ತಿರುವ ಹುಡುಗಿ ಬೇರೆಯಾರೂ ಅಲ್ಲ. ಫ್ಯಾಷನ್ ಲೋಕದ ಖ್ಯಾತ ಡಿಸೈನರ್ ಅರ್ಪಣ ಸಮಂತ್, ಅವರು ಫ್ಯಾಷನ್ ಲೋಕದ ಖ್ಯಾತ ಡಿಸೈನರ್ ಆಗಿದ್ದು ಸಾಕಷ್ಟು ಸೆಲಿಬ್ರೆಟಿಗಳಿಗೆ ಮಾಡೆಲ್ ಗಳಿಗೆ ಹೊಸ ಹೊಸ ವಿಭಿನ್ನ ರೀತಿಯ ವಸ್ತ್ರ ವಿನ್ಯಾಸ ಮಾಡುವಲ್ಲಿ ಪ್ರಖ್ಯಾತರಾಗಿದ್ದಾರೆ. ಸಾಕಷ್ಟು ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಅರ್ಪಣ ಅವರದ್ದೆ ವಸ್ತ್ರ ವಿನ್ಯಾಸವಿರುತ್ತದೆ. ಇನ್ನು ನಟನೆಯ ಜೊತೆಗೆ ಮಾಡೆಲ್ ಕೂಡ ಆಗಿರುವ ಜೆಕೆ ಅವರಿಗೂ ಸಹ ಸಾಕಷ್ಟು ವರ್ಷಗಳಿಂದ ಅವರೆ ವಸ್ತ್ರ ವಿನ್ಯಾಸಕಿಯಾಗಿದ್ದು‌ ಇಬ್ಬರ ನಡುವೆ ಒಳ್ಳೆಯ ಒಡನಾಟವಿತ್ತು.

ಆ ಸಮಯದಿಂದಲೆ ಇಬ್ಬರ ನಡುವಿನ ಸ್ನೇಹ ಪ್ರೀತಿಯಾಗಿದೆ. ಇದೀಗ ಆ ಪ್ರೀತಿಗೆ ದಾಂಪತ್ಯ ಜೀವನದ ಅರ್ಥ ನೀಡುತ್ತಿದ್ದು ಇಬ್ಬರು ಸಪ್ತಪದಿ ತುಳಿಯುತ್ತಿದ್ದಾರೆ. ಸಧ್ಯದಲ್ಲಿಯೆ ಜೆಕೆ ಹಾಗೂ ಅರ್ಪಣ ಅವರ ಮದುವೆ ನೆರವೇರಲಿದ್ದು ಅಂತೂ ಬ್ಯಾಚುಲರ್ ಜೀವನಕ್ಕೆ ಗುಡ್ ಬೈ ಹೇಳುತ್ತಿರುವ ಜೆಕೆಗೆ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. ಜೆಕೆ ಹಾಗೂ ಅರ್ಪಣ ಅವರಿಗೆ ನಮ್ಮ ಕಡೆಯಿಂದಲೂ ಶುಭಾಶಯವನ್ನು ಈ ಮೂಲಕ ತಿಳಿಸೋಣ.

Leave A Reply

Your email address will not be published.