Qualities of Virgo women: ಕನ್ಯಾರಾಶಿಯು ಸ್ತ್ರೀ ಲಿಂಗಕ್ಕೆ ಸೇರಿದ ರಾಶಿಯಾಗಿದ್ದು, ಈ ರಾಶಿಯಲ್ಲಿ ಜನಿಸಿದ ಸ್ತ್ರೀಯರು ಬಹಳ ಭಾಗ್ಯಶಾಲಿಗಳಾಗುತ್ತಾರೆ. ಕನ್ಯಾರಾಶಿಗೆ ಬುಧನು ಅಧಿಪತಿಯಾಗಿದ್ದಾನೆ ಹಾಗೂ ಬ್ರಹಸ್ಪತಿ ಗ್ರಹವು ಯೋಗವನ್ನು ತರುವಂತದ್ದಾಗಿದೆ. ಈ ರಾಶಿಯವರು ಬಹಳ ರೂಪವಂತರು ಹಾಗೂ ಗುಣವಂತರಾಗಿರುತ್ತಾರೆ. ಕನ್ಯಾರಾಶಿಯಲ್ಲಿ ಜನಿಸಿದಂತ ಸ್ತ್ರೀಯು ಬಹಳ ಗಟ್ಟಿ ಮನಸ್ಸನ್ನು ಹೊಂದಿದವಳಾಗಿದ್ದು, ಈಕೆ ನೇರಾನೇರ ಮಾತಿನ ಹೆಣ್ಣಾಗಿರುತ್ತಾಳೆ. ಈಕೆಗೆ ಮನದೊಳಗೆ ಒಂದು ಮಾತು, ಎದುರು ಇನ್ನೊಂದು ಮಾತು ಆಡಲು ಬರುವುದಿಲ್ಲ. ಇವಳದು ಸ್ಪಷ್ಟ ಹಾಗೂ ಶುಭ್ರ ವ್ಯಕ್ತಿತ್ವವಾಗಿರುತ್ತದೆ.
ಕನ್ಯಾರಾಶಿಯಲ್ಲಿ ಹುಟ್ಟಿದಂತಹ ಹೆಣ್ಣು ಶಾಂತ ಸ್ವಾಭಾವದವಳಾಗಿದ್ದು, ಏಕಾಂತ ಪ್ರಿಯಳಾಗಿರುತ್ತಾಳೆ. ಯಾವುದೇ ರೀತಿಯ ಗೌಜು-ಗಲಾಟೆಗಳಿಂದ ಈಕೆ ದೂರವಿದ್ದು, ತನ್ನದೇ ರೀತಿಯ ಮಾಲಿನ್ಯ ರಹಿತ ಜೀವನವನ್ನು ನಡೆಸಲು ಇಚ್ಛಿಸುತ್ತಾಳೆ. ಇದು ಈ ರಾಶಿಯ ಮುಖ್ಯವಾದ ಗುಣಲಕ್ಷಣವಾಗಿದೆ. ಇವಳು ಮನೆ ನಡೆಸುವುದರಲ್ಲಿ ಬಹಳ ಶಿಸ್ತನ್ನು ರೂಢಿಸಿಕೊಂಡು, ಎಲ್ಲವನ್ನೂ ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗುತ್ತಾಳೆ. ಹಾಗಾಗಿ ಇವಳೆಂದರೆ ಮನೆಯವರಿಗೂ ಸಹ ಅಚ್ಚುಮೆಚ್ಚಾಗಿರುತ್ತದೆ.
ವ್ಯಾಪಾರ ವ್ಯವಹಾರಗಳಲ್ಲಿ ಕನ್ಯಾರಾಶಿಯ ಸ್ತ್ರೀಗೆ ಅತ್ಯಂತ ಉತ್ತಮ ವಿಚಾರಧಾರೆಗಳಿದ್ದು, ಆಕೆ ಯಾವ ವ್ಯವಹಾರವನ್ನು ಮನಸ್ಸಿಟ್ಟು ಮಾಡುತ್ತಾಳೋ ಆ ವ್ಯವಹಾರವು ಉನ್ನತಿ ಹೊಂದುತ್ತದೆ. ಯಾಕೆಂದರೆ ಆಕೆಗೆ ವ್ಯಾಪಾರದ ಲಾಭ-ನಷ್ಟಗಳನ್ನು ಸರಿಯಾಗಿ ಲೆಕ್ಕಾಚಾರ ಮಾಡುವ ಮನಸ್ಥಿತಿ ಉತ್ತಮವಾಗಿ ಇರುತ್ತದೆ. ಒಳ್ಳೆಯದು ಕೆಟ್ಟದ್ದನ್ನು ಲಾಭದಾಯಕವಾಗಿ ಚಿಂತಿಸಿ, ತನಗೆ ಬೇಕಾದ ಹಾಗೆ ವ್ಯವಹರಿಸುವ ಚತುರೆ ಇವಳಾಗಿರುತ್ತಾಳೆ.
ಕನ್ಯಾರಾಶಿಯಲ್ಲಿ ಹುಟ್ಟಿದಂತಹ ಹೆಣ್ಣಿಗೆ ಜನ್ಮತಃ ನಾಯಕತ್ವದ ಗುಣಗಳು ಬೆಳೆದು ಬಂದಿರುತ್ತವೆ. ಹಾಗಾಗಿ ಆಕೆ ಎಲ್ಲಿಯೇ ಹೋದರು ಸಹ ಬಹುಬೇಗ ಜನರ ನಡುವೆ ಗುರುತಿಸಿಕೊಳ್ಳುತ್ತಾಳೆ. ತನ್ನ ಸುತ್ತಲಿನ ಜನರ ಮನಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಈಕೆಗೆ ಇರುವುದರಿಂದ, ಎಲ್ಲರನ್ನು ತನ್ನ ವಶದಲ್ಲಿ ಇಟ್ಟುಕೊಳ್ಳುತ್ತಾಳೆ. ಸರಿ ತಪ್ಪುಗಳ ನಿರ್ಣಯವನ್ನು ನ್ಯಾಯಬದ್ಧವಾಗಿ ಮಾಡುವುದರಿಂದ ಜನರ ಮನ್ನಣೆಗೆ ಪಾತ್ರಳಾಗುತ್ತಾಳೆ. ಈ ರಾಶಿಯ ಜನ ಬಹುತೇಕರು ಲವಲವಿಕೆಯಿಂದ ಕೂಡಿದ ಮನಸ್ಸುಳ್ಳವರಾದರೂ, ಬೆರಳೆಣಿಕೆಯ ಜನರು ಉದಾಸೀನ ವ್ಯಕ್ತಿತ್ವದವರು ಸಿಗುತ್ತಾರೆ.
ಇದನ್ನೂ ಓದಿ..ವೃಷಭ ರಾಶಿ ಒಂದು ಹೆಣ್ಣಿನಿಂದ ನಿಮ್ಮ ಜೀವನ ಕಂಪ್ಲೀಟ್ ಬದಲಾಗುತ್ತೆ ಹೇಗೆ ಗೊತ್ತಾ..
ಬೇರೆಯವರು ಸಮಸ್ಯೆಗಳನ್ನು ನೋಡಿದರೆ ಇವಳು ಸಮಸ್ಯೆಯ ಮೂಲವನ್ನು ಹುಡುಕಿ, ಅದಕ್ಕೆ ಪರಿಹಾರವನ್ನು ಒದಗಿಸುತ್ತಾಳೆ. ಈಕೆಯ ಶಕ್ತಿ ಸಾಮರ್ಥ್ಯಗಳು ಅಪಾರವಾದಂತದ್ದು. ಕನ್ಯಾರಾಶಿಯಲ್ಲಿ ಜನಿಸಿದ ಹೆಣ್ಣಿನ ನೆನಪಿನ ಶಕ್ತಿ ಉತ್ತಮಾಗಿರುವುದರಿಂದ, ಇವಳಿಗೆ ಯಾರೂ ಸಹ ಮೋಸ ಮಾಡುವುದು ಸಾಧ್ಯವಿಲ್ಲ. ಕನ್ಯಾರಾಶಿಗೆ ಚಂದ್ರನು ಉತ್ತಮ ರೀತಿಯಿಂದ ಇರುವುದರಿಂದ ಇವರಿಗೆ ಮನಸ್ಸನ್ನು ನಿಯಂತ್ರಿಸುವ ಕಲೆ ಹುಟ್ಟಿನಿಂದಲೇ ಬಂದಿರುತ್ತದೆ. ಸ್ನೇಹ ಜೀವಿಯಾದರೂ ಸಹ, ಇವರ ಆಪ್ತವಲಯದಲ್ಲಿ ಕೇವಲ ನಂಬಿಕಸ್ಥ ಜನರಿಗಷ್ಟೇ ಸ್ಥಾನ ದೊರೆಯುತ್ತದೆ.
ಇವರು ಸುಲಭವಾಗಿ ಯಾರನ್ನು ನಂಬುವುದಿಲ್ಲವಾದ್ದರಿಂದ, ಪ್ರೀತಿ ಪ್ರೇಮದ ವಿಷಯದಲ್ಲಿ ಕಟ್ಟುನಿಟ್ಟಿನಿಂದ ಇರುತ್ತಾರೆ. ಮನದಾಳದಿಂದ ಪ್ರೀತಿಸಿದ್ದರು ಸಹ ಇವರು ತಮ್ಮ ಪ್ರೀತಿಯನ್ನು, ಕಾಳಜಿಯನ್ನು ತೋರ್ಪಡಿಸುವುದಿಲ್ಲ. ತಮ್ಮ ನೋವುಗಳನ್ನು, ಕಷ್ಟನಷ್ಟಗಳನ್ನು ಇನ್ನೊಬ್ಬರ ಎದುರಲ್ಲಿ ಎಂದು ಹೇಳಿಕೊಳ್ಳಲು ಕನ್ಯಾರಾಶಿಯವರು ಇಚ್ಛಿಸುವುದಿಲ್ಲ. ಇಂತಹ ಕನ್ಯೆಯನ್ನು ವಿವಾಹವಾಗಲು ಪುರುಷರು ಪೂರ್ವಸುಕೃತಗಳನ್ನು ಹೊಂದಿರಬೇಕಾಗುತ್ತದೆ. ಕನ್ಯಾರಾಶಿಯ ಸ್ತ್ರೀಗೆ ಕನ್ಯಾರಾಶಿಯ ಪುರುಷರೊಡನೆ ವಿವಾಹವಾದಲ್ಲಿ, ಅನ್ಯೋನ್ಯ ದಾಂಪತ್ಯವನ್ನು ನಡೆಸುತ್ತಾರೆ. ಇವರು ಹೆಚ್ಚಾಗಿ ಹೊಂದಿಕೊಳ್ಳುವ ಮನಸ್ಥಿತಿಯನ್ನು ಹೊಂದಿರುವುದರಿಂದ ವಿವಾಹ ಜೀವನದಲ್ಲಿ ಸಮಸ್ಯೆಗಳು ಇವರನ್ನು ಬಾಧಿಸಲಾರವು.
ಕನ್ಯಾರಾಶಿಯ ಸ್ತ್ರೀಯು ತನ್ನ ಆರೋಗ್ಯದ ಮೇಲೆ ಅತೀವ ಕಾಳಜಿಯನ್ನು ಹೊಂದಿರುತ್ತಾಳೆ. ತನ್ನ ಊಟೋಪಚಾರಗಳಲ್ಲಿ ಬಹಳವೇ ಶಿಸ್ತನ್ನು ರೂಢಿಸಿಕೊಳ್ಳುವುದರ ತತ್ ಪರಿಣಾಮವಾಗಿ ಆಕೆ ದೀರ್ಘಕಾಲ ಸುಖವಾಗಿ ಬಾಳುತ್ತಾಳೆ. ಆಹಾರ, ಪಾನೀಯಗಳ ಬಗ್ಗೆ ಎಚ್ಚರಿಕೆಯಿಂದ ಇರುವುದರಿಂದ ಇವಳ ಸೌಂದರ್ಯವು ಮಾಸದೆ, ಚಿರಯೌವ್ವನೆಯಾಗಿ ಕಾಣಿಸುತ್ತಾಳೆ.
ಕನ್ಯಾರಾಶಿಯಲ್ಲಿ ಜನಿಸಿದ ಇವರು ಬಹಳ ಪರಿಶ್ರಮದ ಜೀವಿಗಳಾದ ಕಾರಣ ವಿಶ್ರಾಂತಿಯಿಲ್ಲದೆ ದುಡಿದ ಪರಿಣಾಮ ಇವರಿಗೆ ಉದರ ಸಂಬಂಧಿ ಖಾಯಿಲೆಗಳು ಸ್ವಲ್ಪ ಮಟ್ಟಿಗೆ ಬಾಧಿಸುತ್ತವೆ. ಶ್ವಾಸಕೋಶದ ತೊಂದರೆ ಹಾಗೂ ಭುಜದ ನೋವಿನಿಂದ ಕೆಲ ಕಾಲ ಬಳಲಬೇಕಾಗಬಹುದು.
ಇಂತಹ ಸಮಯದಲ್ಲಿ ವಿಶ್ರಾಂತಿಯ ಅಗತ್ಯವಿದ್ದು, ಆದಷ್ಟು ಮನೆಯ ಆಹಾರವನ್ನು ಸೇವಿಸುವುದು ಒಳಿತು. ಸಾಕಷ್ಟು ನೀರನ್ನು ಕುಡಿಯುವುದು ಹಾಗೂ ಸೂರ್ಯನ ಬೆಳಕಿನಲ್ಲಿ ಕೆಲಸ ಮಾಡುವುದು ಇವರ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಕನ್ಯಾರಾಶಿಯ ಫಲಗಳು ಅತ್ಯುತ್ತಮವಾಗಿದೆ.
ಇದನ್ನೂ ಓದಿ..ಸಿಂಹ ರಾಶಿಯವರಿಗೆ ಈ ವರ್ಷ 4 ಯೋಗಗಳಿವೆ ಇವರ ಲೈಫ್ ಹೇಗಿರುತ್ತೆ ಗೊತ್ತಾ..
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ