ಅಂದು ಪುನೀತ್ ಜೊತೆ ನಟಿಸುವ ಅವಕಾಶ ಸಿಕ್ಕಿದ್ರು ಮೇಘನಾರಾಜ್ ನಿರಾಕಸಿದ್ದು ಯಾಕೆ?

0 0

ಸಿನಿ ಪ್ರಿಯರು ಸಾಕಷ್ಟು ಜನರಿದ್ದಾರೆ ಅದರಂತೆ ಸಿನಿಮಾದಲ್ಲಿ ನಟಿಸುತ್ತಾ ತಮ್ಮದೆ ಅಭಿಮಾನಿ ಬಳಗವನ್ನು ಹೊಂದಿರುವ ನಟ ನಟಿಯರು ನಮ್ಮ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟಿದ್ದಾರೆ. ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳಬೇಕೆಂಬ ಆಸೆ ನಟಿಯರಿಗೆ ಇರುತ್ತದೆ. ಕನ್ನಡ ಚಿತ್ರರಂಗದ ನಟಿ ಮೇಘನಾ ರಾಜ್ ಅವರಿಗೆ ಒಂದು ಕಾಲದಲ್ಲಿ ಪುನೀತ್ ರಾಜಕುಮಾರ್ ಅವರ ಜೊತೆ ಸಿನಿಮಾ ಮಾಡುವ ಅವಕಾಶ ಸಿಕ್ಕಿತ್ತು ಆದರೆ ಅವರು ನಟಿಸಲಿಲ್ಲ ಇದಕ್ಕೆ ಕಾರಣವೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಸಿನಿಮಾ ರಂಗದಲ್ಲಿ ನಾಯಕಿಯರು ಅದೆಷ್ಟೆ ಹೆಸರು ಮಾಡಿದ್ದರೂ ಸ್ಟಾರ್ ನಟರ ಜೊತೆ ನಟಿಸುವ ಅವಕಾಶ ಸಿಕ್ಕಾಗ ಯಾರೂ ಬೇಡ ಎನ್ನುವುದಿಲ್ಲ. ನಟನಾ ಕೆರಿಯರ್ ನಲ್ಲಿ ಒಂದು ಬಾರಿಯಾದರೂ ಸ್ಟಾರ್ ನಟರ ಜೊತೆ ನಟಿಸಬೇಕು ಅನ್ನುವ ಆಸೆ ಇಟ್ಟು ಕೊಂಡಿರುತ್ತಾರೆ, ಅದಕ್ಕಾಗಿ ಅವಕಾಶವನ್ನು ನೋಡುತ್ತಿರುತ್ತಾರೆ. ಕನ್ನಡ ಸಿನಿಮಾ ರಂಗದಲ್ಲಿ ಈ ಹಿಂದೆ ಡಾ ರಾಜ್ ಕುಮಾರ್ ಜೊತೆ, ಡಾ ವಿಷ್ಣುವರ್ಧನ್ ಜೊತೆ, ಅಂಬರೀಷ್ ಜೊತೆ, ರವಿಚಂದ್ರನ್ ಜೊತೆ ಹೀಗೆ ಅನೇಕರ ಜೊತೆ ನಟಿಸಲು ಅನೇಕ ನಟಿ ಮಣಿಯರು ಕಾಯುತ್ತಿದ್ದರು. ಆ ನಂತರದಲ್ಲಿ ಡಿ ಬಾಸ್ ದರ್ಶನ್, ಕಿಚ್ಚ ಸುದೀಪ್ ಅದೆ ರೀತಿ ಪುನೀತ್ ರಾಜಕುಮಾರ್ ಜೊತೆ ನಟಿಸಲು ನಟಿಯರು ಆಸೆ ಪಡುತ್ತಿದ್ದರು.

ಒಂದು ಕಾಲದಲ್ಲಿ ನಟಿ ಮೇಘನಾ ರಾಜ್ ಅವರಿಗೆ ಪುನೀತ್ ರಾಜ್ ಕುಮಾರ್ ಜೊತೆ ನಟಿಸಲು ಆಫರ್ ಬಂದಿತ್ತು ಆದರೆ ಅದನ್ನು ಅವರು ತಿರಸ್ಕರಿಸಿದ್ದರು. ಯಾರೆ ಆಗಲಿ ಪುನೀತ್ ರಾಜ್ ಕುಮಾರ್ ಜೊತೆ ನಟಿಸಲು ಅವಕಾಶ ಸಿಕ್ಕಾಗ ಹಿಂದೆ ಮುಂದೆ ನೋಡುವುದಿಲ್ಲ.‌ ಹಾಗಿರುವಾಗ ಮೇಘನಾ ರಾಜ್ ಯಾಕೆ ಹೀಗೆ ಮಾಡಿದರು ಎಂದು ಅಚ್ಚರಿ ಆಗುತ್ತದೆ ಆದರೆ ಇದಕ್ಕೆ ಕಾರಣವಿದೆ.

ಮೇಘನಾ ರಾಜ್ ಅವರಿಗೆ ಪುನೀತ್ ಜೊತೆ ನಟಿಸುವ ಅವಕಾಶ ಬಂದಾಗ ಅವರ ತಂದೆ ನಟ ಸುಂದರ್ ರಾಜ್ ಬೇಡ ಅಂದಿದ್ದರು. ಹೀಗೆಂದು ಇತ್ತೀಚೆಗೆ ಸುಂದರ್ ರಾಜ್ ಅವರೆ ಹೇಳಿಕೊಂಡಿದ್ದಾರೆ. ಆ ಸಮಯದಲ್ಲಿ ಮೇಘನಾ ರಾಜ್ ಒಂಭತ್ತನೆ ತರಗತಿಯಲ್ಲಿ ಓದುತ್ತಿದ್ದರು. ಆ ವಯಸ್ಸಿಗೆ ಸಿನಿಮಾ ನಟನೆ ಅಂತ ಹೋದರೆ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ತಿರಸ್ಕರಿಸಿದ್ದರು.

ನಟ ಸುಂದರ್‌ರಾಜ್ ಹಾಗೂ ನಟಿ ಪ್ರಮೀಳಾ ಜೋಷಾಯ್ ಅವರ ಮಗಳು ಮೇಘನಾ ರಾಜ್ ಅವರು ಇದೀಗ ಕನ್ನಡ ಚಿತ್ರರಂಗದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದರೂ ತಮ್ಮದೆ ಆದ ಸರಳ ನಟನೆಯಿಂದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.‌ ಚೈಲ್ಡ್ ಆರ್ಟಿಸ್ಟ್ ಆಗಿ ಮೊದಲು ತೆಲುಗು ಚಿತ್ರರಂಗದಲ್ಲಿ ನಟಿಸಿ ನಂತರ ಸ್ಯಾಂಡಲ್ ವುಡ್‌ ಪ್ರವೇಶ ಮಾಡಿದರು.‌ ಕನ್ನಡದಲ್ಲಿ ಆಟಗಾರ, ರಾಜಾಹುಲಿ, ಪುಂಡ ಮುಂತಾದ ಸಿನಿಮಾಗಳಲ್ಲಿ ನಟಿಯಾಗಿ ನಟಿಸಿದ್ದಾರೆ. ಇವರು ನಟ ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು ಆದರೆ ವಿಧಿ ಅವರ ಬಾಳಲ್ಲಿ ಕ್ರೂರಿಯಾಗಿ ಬಿಟ್ಟಿತ್ತು.

ಐದು ತಿಂಗಳ ಗರ್ಭಿಣಿಯಾಗಿರುವಾಗಲೆ ಚಿರು ಸರ್ಜಾ ಅವರು ಹೃದಯಾಘಾತದಿಂದ ಸಾವನ್ನಪ್ಪಿದರು. ಆ‌ನಂತರ ತೀರಾ ನೊಂದಿದ್ದ ಮೇಘನಾ‌ ರಾಜ್ ಮಗ ರಾಯನ್ ಹುಟ್ಟಿದ ನಂತರ ತನ್ನೆಲ್ಲಾ ನೋವುಗಳನ್ನು ‌ಮರೆತು‌‌ ಮಗನಿಗಾಗಿ ಖುಷಿ ಖುಷಿಯಿಂದ ಜೀವನ‌ ನಡೆಸುತ್ತಿದ್ದಾರೆ. ಮತ್ತೆ ಮೊದಲಿನಂತೆ ಲವ ಲವಿಕೆಯಿಂದ ಜನರ ಮುಂದೆ ಬಂದಿದ್ದಾರೆ. ಕೆಲವು ಸಿನಿಮಾಗಳಿಗೂ ಸಹಿ‌ ಹಾಕಿರುವ ಮೇಘನಾ ರಾಜ್ ಇದೀಗ ಡಾನ್ಸ್ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಮೇಘನಾ ರಾಜ್ ಅವರು ತಮ್ಮ ಜೀವನದಲ್ಲಿ ಯಶಸ್ಸನ್ನು ಪಡೆಯಲಿ.

Leave A Reply

Your email address will not be published.