ಚಿಕ್ಕ ವಯಸ್ಸಲ್ಲೇ ಗಂಡನನ್ನು ಕಳೆದುಕೊಂಡ ನಟಿ ವಿನಯ್ ಪ್ರಸಾದ್ ಅವರಿಗೆ ಜೊತೆಯಾಗಿ ನಿಂತಿದ್ದು ಯಾರು ಗೊತ್ತಾ,

0 3

ಸಿನಿ ಜರ್ನಿಯಲ್ಲಿ ಬಿಗ್ ಸಕ್ಸಸ್ ಕಂಡ ನಟಿ ಅಂದ್ರೆ ವಿನಯ ಪ್ರಸಾದ್. ನಟನೆ ಮಾತ್ರವಲ್ಲದೆ ನಿರೂಪಣೆ ಹಾಗೂ ಗಾಯನದ ಮೂಲಕ ಎಲ್ಲರ ಮನೆ ಗೆದ್ದಿದ್ದಾರೆ. ಆದರೆ ತಮ್ಮ ವೈಯಕ್ತಿಕ ಜೀವನದಲ್ಲಿ ಮಾತ್ರ ಅಷ್ಟೇ ಕಹಿ ಘಟನೆಗಳನ್ನು ಎದುರಿಸಿದ್ದಾರೆ. 1988 ರಲ್ಲಿ ಸಂಕಲನಕಾರ ಹಾಗೂ ನಿರ್ದೇಶಕರಾದ ಮೊದಲ ಪತಿ ವೈಲಾಯ ಕೃಷ್ಣ ಪ್ರಸಾದ್ ರನ್ನು ಪ್ರೀತಿಸಿ ಮದುವೆಯಾದರು. ಈ ಸುಖಮಯ ದಾಂಪತ್ಯ ಜೀವನ ಕೆಲ ವರ್ಷಗಳಷ್ಟೇ ನಡೆಯಿತು. ಆನಂತರ ಪ್ರಸಾದ್ ರನ್ನು ಕಳೆದುಕೊಳ್ಳುತ್ತಾರೆ. ವಿನಯಾ ಪ್ರಸಾದ್ ದಕ್ಷಿಣ ಭಾರತದ ಜನಪ್ರಿಯ ಚಿತ್ರನಟಿ. ಇವರು ದೂರದರ್ಶನ ವಾಹಿನಿಗಳಲ್ಲಿಯೂ ನಟಿಸುತ್ತಾರೆ. ೧೯೮೮ ರಲ್ಲಿ ಜಿ.ವಿ. ಅಯ್ಯರ್ ರವರ ಮಧ್ವಾಚಾರ್ಯ ಚಿತ್ರದಲ್ಲಿ ಒಂದು ಸಣ್ಣ ಪಾತ್ರದೊಂದಿಗೆ ಚಿತ್ರರಂಗ ಪ್ರವೇಶಿಸಿದರು.

ಮುಂದೆ ಅನಂತನಾಗ್ ಎದುರಿಗೆ ‘ಗಣೇಶನ ಮದುವೆ’ ಚಿತ್ರದಲ್ಲಿ ನಾಯಕಿ ಆದರು. ಚಿತ್ರವು ಯಶಸ್ವಿ ಅಯಿತು. ಮುಂದೆ ಅವರು ಕನ್ನಡ, ತೆಲುಗು,ತಮಿಳು ಮತ್ತು ಮಲಯಾಳಂ ಭಾಷೆಗಳ ೬೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ಅವರ ಪ್ರಮುಖ ಕನ್ನಡ ಚಿತ್ರಗಳಲ್ಲಿ ನೀನು ನಕ್ಕರೆ ಹಾಲು ಸಕ್ಕರೆ, ಗಣೇಶನ ಮದುವೆ, ಗೌರಿ ಗಣೇಶ, ಮೈಸೂರು ಜಾಣ ಮತ್ತು ಸೂರ್ಯೋದಯ ಸೇರಿವೆ. ಆತಂಕ ಮತ್ತು ಬಣ್ಣದ ಹೆಜ್ಜೆ ಚಿತ್ರಗಳಲ್ಲಿ ಅವರ ನಟನೆಗಾಗಿ ಕರ್ನಾಟಕ ರಾಜ್ಯದ ಉತ್ತಮನಟಿ ಪ್ರಶಸ್ತಿಗಳು ದೊರಕಿವೆ.

ವಿನಯಾ ಕರ್ನಾಟಕದ ಉಡುಪಿ ಜಿಲ್ಲೆಯವರು ಮತ್ತು ಉಡುಪಿಯಲ್ಲಿ ಬೆಳೆದವರು. ಅವರು ಕಾರ್ಹಡೆರು. ಅವರು ೧೯೮೮ ರಲ್ಲಿ ವಿ.ಆರ್.ಕೆ.ಪ್ರಸಾದ್ ಅವರನ್ನು ವಿವಾಹವಾದರು, ಅವರು ಕನ್ನಡ ಚಲನಚಿತ್ರಗಳ ಸಂಪಾದಕರಾಗಿದ್ದರು, ಅವರು ೧೯೯೫ ರಲ್ಲಿ ಚಿಕ್ಕ ವಯಸ್ಸಿನಲ್ಲಿ ನಿಧನರಾದರು. ದಂಪತಿಗೆ ಪ್ರತಿಮಾ ಪ್ರಸಾದ್ ಎಂಬ ಮಗಳು ಇದ್ದಾಳೆ.

ನಾಯಕಿಯಾಗಿ ಯಶಸ್ವೀ ವೃತ್ತಿಯ ನಂತರ ಅವರ ಚಾರಿತ್ರ್ಯಪಾತ್ರಗಳನ್ನು ದಕ್ಷಿಣ ಭಾರತದ ಭಾಷೆಯ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು ಬೇಡಿಕೆಯಲ್ಲಿರುವ ನಟಿಯಾಗಿದ್ದಾರೆ. ಅವರು ಉತ್ತಮ ಗಾಯಕಿಯೂ ಅಲ್ಲದೆ ನೃತ್ಯಗ್ರಾಮದಲ್ಲಿ ವಸಂತಹಬ್ಬ ಮತ್ತು ಮೈಸೂರು ದಸರಾದಂಥ ಕಾರ್ಯಕ್ರಮಗಳನ್ನು ನಡೆಸಿಯೂ ಕೊಡುತ್ತಾರೆ.

ಮಧ್ವಾಚಾರ್ಯ’ ಚಿತ್ರದ ವೇಳೆ ವಿನಯಾರಿಗೆ ಪ್ರಸಾದ್ ಗುಣ ನೋಡಿ ಫುಲ್ ಲವ್ ಆಗಿತ್ತಂತೆ. ಅಲ್ಲಿಂದ ಅರಳಿತು ಪ್ರೀತಿಯ ಅಲೆ. ವೃತ್ತಿ ಜೀವನದಲ್ಲಿ ದೊಡ್ಡ ಸಕ್ಸಸ್ ಕಂಡ ವಿನಯಾರಿಗೆ ಮದುವೆಯಾದ ಮೇಲೂ ಕೆಲಸ ಮಾಡುವ ಆಸೆ ಇತ್ತು. ಅಷ್ಟೇ ಅಲ್ಲದೇ ಪತ್ನಿಯನ್ನು ಮನೆಯಲ್ಲಿ ಕೂರಿಸುವ ಗಂಡ ಕಂಡರೆ ವಿನಯರಿಗೆ ಇಷ್ಟವಿಲ್ಲ. ತಾನು ಜೀವನದಲ್ಲಿ ಇಷ್ಟಪಟ್ಟ ಗುಣವೆಲ್ಲಾ ಪ್ರಸಾದ್ ನಲ್ಲಿ ಕಂಡು ಇಬ್ಬರು ಪ್ರೀತಿಸಿ ಮದುವೆಯಾದರು.

ಆದರೆ ಕೆಲವೊಮ್ಮೆ ಸಣ್ಣ ಪುಟ್ಟ ಮಾತುಳಿಂದ ಇಬ್ಬರ ನಡುವೆ ಮನಸ್ತಾಪ ಆಗಿರುವುದುಂಟು.
ಅದರಲ್ಲೂ ಮದುವೆಯಾದ ನಂತರ ನೋಡಿದವರೆಲ್ಲಾ ಪ್ರಸಾದ್ ರನ್ನು ವಿನಯ ಗಂಡ ಎಂದೇ ಪರಿಚಯ ಮಾಡಿಕೊಡುತ್ತಿದ್ದರು. ಈ ವಿಚಾರದ ವೇಳೆ ಆಗುತ್ತಿದ್ದ ಮಾತುಗಳಿಂದ ಇವರಿಬ್ಬರ ನಡುವೆ ಅಸಮಾಧಾನ ಉಂಟಾಗುತ್ತಿತ್ತು.

ತದನಂತರ ಪ್ರಥಮ ಎನ್ನುವ ಒಂದು ಹೆಣ್ಣು ಮಗು ಕೂಡ ಇವರಿಗೆ ಜನನವಾಯಿತು. ಏಳು ವರ್ಷ ವೈವಾಹಿಕ ಜೀವನ ತುಂಬಾ ಚೆನ್ನಾಗಿತ್ತು. ಆದರೆ ಇದ್ದಕ್ಕಿದ್ದ ಹಾಗೆ ಪತಿಯ ಹಿರಿಮೆ ಚಿತ್ರರಂಗದಲ್ಲಿ ಕಡಿಮೆ ಆಗುತ್ತಿದ್ದಂತೆ, ಅವಕಾಶಗಳು ಕಡಿಮೆ ಆಗುತ್ತಿದ್ದಂತೆ, ಎಲ್ಲಿ ಹೋದರೂ ವಿ ಆರ್ ಕೆ ಪ್ರಸಾದ್ ಅವರನ್ನ ನಟಿ ವಿನಯ್ ಪ್ರಸಾದ್ ಗಂಡ ಎಂದು ಹೆಚ್ಚು ಜನರು ಗುರುತಿಸುತ್ತಿದ್ದರಂತೆ.
ಇದನ್ನ ನೋಡಿ ವಿ ಆರ್ ಕೆ ಪ್ರಸಾದ್ ಬೇಸತ್ತು ಹೋಗಿ ಇರಿಸು ಮುರಿಸು ಆಗುತ್ತಿತ್ತಂತೆ.

ವಿನಯ್ ಪ್ರಸಾದ್ ಹಾಗೂ ವಿ ಆರ್ ಕೆ ಪ್ರಸಾದ್ ನಡುವೆ ವೈಮನಸ್ಸು ಸಹ ಉಂಟಾಗಿತ್ತು ಎನ್ನಲಾಗಿದೆ. ನಂತರ ನಟಿ ವಿನಯ್ ಪ್ರಸಾದ್ ಅವರ ಪತಿ ವಿ ಆರ್ ಕೆ ಪ್ರಸಾದ್ ಅವರು ಕಾಲವಾಗುತ್ತಾರೆ. ಅಂದಿನ ದಿನಗಳಲ್ಲಿ ಗಂಡ ಇಲ್ಲ ಎಂದರೆ ಹೆಣ್ಣನ್ನು ನೋಡುವ ರೀತಿಯೇ ಬೇರೆಯಾಗಿತ್ತು. ಎಲ್ಲವನ್ನು ಎದುರಿಸಿ ಕುಗ್ಗದೆ, ಅಂಜದೆ, ಈ ಚಿತ್ರರಂಗದಲ್ಲಿ ತಮಗೆ ತಾವೇ ಧೈರ್ಯ ಹೇಳಿಕೊಂಡು, ತಮ್ಮ ಮಗಳನ್ನು ಬೆಳೆಸುತ್ತ, ಯಾರಿಗೂ ಹೆದರದೇನೆ ಗಟ್ಟಿಗಿತ್ತಿ ಜೀವನವನ್ನ ಮಾಡಿದವರು ನಟಿ ವಿನಯಪ್ರಸಾದ್ ಅವರು. ಆನಂತರ 2001ರಲ್ಲಿ ವಿನಯ ಪ್ರಸಾದ್ ಅವರು ಮಹಾರಾಷ್ಟ್ರದ ಕವಿ ಸಾಹಿತ್ಯಗಾರ ಹಿಂದಿ ಮರಾಠಿ ಹಾಡುಗಳಲ್ಲಿ ಹಾಡುತ್ತಿದ್ದ ಹಾಡುಗಾರ ಜ್ಯೋತಿ ಪ್ರಕಾಶ್ ಎಂಬವರನ್ನು ಮದುವೆ ಆಗುತ್ತಾರೆ.

ಆಗಲೇ ಒಂದು ಮದುವೆಯಾಗಿ ಹೆಂಡತಿಯನ್ನು ಕಳೆದುಕೊಂಡಿದ್ದ ಪ್ರಕಾಶ್ ಅವರಿಗೆ ಒಬ್ಬ ಮಗನು ಕೂಡ ಇದ್ದು, ನಟಿ ವಿನಯ ಪ್ರಸಾದ್ ಅವರು ಜ್ಯೋತಿ ಪ್ರಕಾಶ್ ಅವರ ಗುಣಗಳನ್ನು ಮೆಚ್ಚಿ 2002 ರಲ್ಲಿ ಮದುವೆಯಾಗುತ್ತಾರೆ. ಇಂದು ಇವರಿಬ್ಬರ ಸುಖ ಸಂಸಾರ ಜೀವನ ಚೆನ್ನಾಗಿ ನಡೆಯುತ್ತಿದೆ. ಹಾಗೆ ನಟಿಯ ವಿನಯ್ ಪ್ರಸಾದ್ ಇದ್ದ ಹೆಸರು ಇದೀಗ ವಿನಯ್ ಪ್ರಕಾಶ್ ಆಗಿದೆ ಎಂದು ಹೇಳಲಾಗುತ್ತಿದೆ. ವಿನಯಾ ಪ್ರಸ್ತುತ ಬೆಂಗಳೂರಿನಲ್ಲಿ ಪತಿ ಜ್ಯೋತಿಪ್ರಕಾಶ್ ಮತ್ತು ಮಗಳು ಪ್ರತಿಮಾ ಪ್ರಸಾದ್ ಅವರೊಂದಿಗೆ ವಾಸಿಸುತ್ತಿದ್ದಾರೆ. ಜ್ಯೋತಿಪ್ರಕಾಶ್ ಅವರ ಹಿಂದಿನ ಮದುವೆಯಿಂದ ಜೈ ಅತ್ರೆ ಎಂಬ ಮಗನಿದ್ದಾನೆ, ಇವರು ಮುಂಬೈನಲ್ಲಿ ಚಲನಚಿತ್ರ ನಿರ್ದೇಶನ ಮತ್ತು ಚಿತ್ರಕಥೆಯಲ್ಲಿದ್ದಾರೆ.

Leave A Reply

Your email address will not be published.