ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ರೈತರು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ ಸಾವಯವ ಹಾಗೂ ನ್ಯಾನೋ ಗೊಬ್ಬರಗಳ ಬಳಕೆಯನ್ನು ಹೆಚ್ಚಿಸಬೇಕು. ರಸಗೊಬ್ಬರಗಳ ಬಳಕೆಯ ಬದಲು ಸಾವಯವ ಹಾಗೂ ನ್ಯಾನೋ ಗೊಬ್ಬರ ಬಳಸುವುದರಿಂದ ರೈತರಿಗೆ ಖರ್ಚು ಕಡಿಮೆಯಾಗುತ್ತದೆ ಹಾಗೂ ಮಣ್ಣಿನ ಆರೋಗ್ಯ ಹೆಚ್ಚುತ್ತದೆ. ರಾಸಾಯನಿಕ ರಸಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ, ಮಣ್ಣಿನ ಆರೋಗ್ಯವನ್ನುಹೆಚ್ಚಿಸುವ ಹಾಗೂ ಉತ್ತಮ ಇಳುವರಿಗೆ ಕಾರಣವಾಗುವ ನ್ಯಾನೋ ತಂತ್ರಜ್ಞಾನದ ಬೆಳೆ ಪೋಷಕಾಂಶ ನಿರ್ವಹಣೆ ಮತ್ತು ನ್ಯಾನೋ ಗೊಬ್ಬರಗಳಂತಹ ಉಪಕ್ರಮಗಳನ್ನು ಇಫ್ಕೋ ಅಭಿವೃದ್ಧಿಪಡಿಸಿದೆ. ಮಾರುಕಟ್ಟೆಯಿಂದ ರಸಗೊಬ್ಬರ ಖರೀದಿ ಮಾಡುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಈಗಾಗಲೇ ಮುಂಗಾರು ಬೆಳೆಗಳು ಬಿತ್ತನೆ ಮಾಡುತ್ತಿದ್ದೀರಿ, ಆದರೆ ಯಾವ ಬೆಳೆಗಳಿಗೆ ಯಾವ ಗೊಬ್ಬರ ಹಾಕಬೇಕು ಎಂಬುದನ್ನು ನಿಮ್ಮ ತಲೆಯಲ್ಲಿ ಗೊಂದಲ ಇದ್ದಿರಬಹುದು. ಗೊಂದಲ ಇದ್ದರೂ ಸಹ ಯಾವ ಗೊಬ್ಬರಗಳು ತೆಗೆದುಕೊಂಡರೆ ಕಡಿಮೆ ಖರ್ಚಿನಲ್ಲಿ ಎಲ್ಲಾ ಗೊಬ್ಬರಗಳನ್ನು ತರಬೇಕಾಗುತ್ತದೆ ಎಂಬುದನ್ನು ನಿಮಗೆ ಗೊತ್ತಿಲ್ಲದೇ ಇರಬಹುದು ಆದರೆ ನೀವು ಇವತ್ತು ಯಾವ ರೀತಿಯಾಗಿ ಗೊಬ್ಬರಗಳನ್ನು ಕಡಿಮೆ ದರದಲ್ಲಿ ಎಲ್ಲಾ ರೀತಿಯ ವಿವರಗಳನ್ನು ಹೇಗೆ ತರುವುದರ ಬಗ್ಗೆ ತಿಳಿಯಿರಿ. ಗೊಬ್ಬರಗಳಲ್ಲಿ ಪ್ರಮುಖವಾಗಿ ಸಾಮಾನ್ಯವಾಗಿ ಯೂರಿಯಾ ಹಾಗೂ ಡಿಎಪಿ ಹಾಗೂ ಸೂಪರ್ ಫಾಸ್ಪೇಟ್ ಗೊಬ್ಬರಗಳನ್ನು ಕೃಷಿಯಲ್ಲಿ ಅಧಿಕವಾಗಿ ಬಳಸುತ್ತಾರೆ. ಇದರೊಂದಿಗೆ ಪೊಟ್ಯಾಶ್ ಸಹ ಅಧಿಕವಾಗಿ ಕೃಷಿಕ್ಷೇತ್ರದಲ್ಲಿ ಬಳಕೆಯಾಗುತ್ತದೆ. ಇದಕ್ಕಿಂತ ನೀವು ಸಾವಯವ ಕೃಷಿ ಮಾಡುತ್ತಾರೆ ಯಾವ ಗೊಬ್ಬರಗಳ ಬಳಸುವುದು ಅವಶ್ಯಕತೆ ಇಲ್ಲ ನಿಮ್ಮ ಕೃಷಿ ಚಟುವಟಿಕೆಗಳಲ್ಲಿ ಬಂದ ತ್ಯಾಜ್ಯವನ್ನು ಗೊಬ್ಬರವನ್ನಾಗಿಸಿ ನೇರವಾಗಿ ಅದನ್ನು ಭೂಮಿಗೆ ನೀಡಬಹುದು.

ಗೊಬ್ಬರ ಸಾಮಾನ್ಯವಾಗಿ ನೀವು ಯಾವುದಾದರೂ ಹೊಂದಾಣಿಕೆಯನ್ನು ಆಯ್ಕೆಮಾಡಿಕೊಳ್ಳಬಹುದು, ಉದಾಹರಣೆಗೆ ಕಡಿಮೆ ಹಣದಲ್ಲಿ ಎಲ್ಲಾ ಗೊಬ್ಬರಗಳು ತರಬೇಕೆಂದರೆ ಒಂದು ಚೀಲ ಯೂರಿಯಾ ಗೊಬ್ಬರ ಹಾಗೂ ಒಂದು ಚೀಲ ಸೂಪರ್ ಫಾಸ್ಪೇಟ್, ಹಾಗೂ ಒಂದು ಚೀಲ ಪೊಟ್ಯಾಶ್ ಇವುಗಳೆಲ್ಲವೂ ಸೇರಿ ಕೇವಲ 1800 ಹಣ ಖರ್ಚಾಗಬಹುದು. ಆದರೆ ನೀವು 10 26 26 ಅಥವಾ 19 19 19 ಈ ಗೊಬ್ಬರಗಳು ಖರೀದಿ ಮಾಡಬೇಕಾದರೆ 50ಕೆಜಿ ಗೆ ಸುಮಾರು ಎರಡುಸಾವಿರ ವರೆಗೆ ಖರ್ಚಾಗುತ್ತದೆ. ಮೇಲೆ ಹೇಳಿರುವಂತೆ ಮೂರು ಗೊಬ್ಬರಗಳು ಸೇರಿ 150 ಕೆಜಿ ಗೊಬ್ಬರವನ್ನು ಕಡಿಮೆ ಹಣದಲ್ಲಿ ಖರೀದಿಸಬಹುದು ಹಾಗೂ ಈ ಗೊಬ್ಬರವನ್ನು ಬೆಳೆಗಳಿಗೆ ತಕ್ಕಂತೆ ಉದಾಹರಣೆಗೆ ತೊಗರಿ ಬೆಳೆಯನ್ನು ನೋಡಿದರೆ 10:20:20 ಅಂದರೆ ಪ್ರತಿ ಎಕರೆಗೆ 10 ಕೆಜಿ ಸಾರಜನಕ ಅಂದರೆ ಯೂರಿಯಾ ಗೊಬ್ಬರ ಅದೇ ರೀತಿಯಾಗಿ 20 ಕೆಜಿ ಸೂಪರ್ ಫಾಸ್ಪೇಟ್ ಹಾಗೂ 20 ಕೆಜಿ ಪೊಟ್ಯಾಶ್ ತಗಲುತ್ತದೆ. ಅದೇ ನೀವು 10 26 26 ಗೊಬ್ಬರವನ್ನು ಹಾಕಿದರೆ 50 ಕೆಜಿ ರಸಗೊಬ್ಬರ ಒಂದು ಎಕರೆಗೆ ಸೀಮಿತವಾಗುತ್ತದೆ.

ಅಂದರೆ 2000 ರೂಪಾಯಿಗಳಲ್ಲಿ ನೀವು ತೊಗರಿ ಬೆಳೆಗೆ ಕೇವಲ ಒಂದು ಮಾತ್ರ ಸಮಯದಲ್ಲಿ ಗೊಬ್ಬರವನ್ನು ನೀಡಬಹುದು ಆದರೆ ಮೊದಲೇ ತಿಳಿಸಿರುವಂತೆ ಸಾರಜನಕ ಸೂಪರ್ ಫಾಸ್ಪೇಟ್ ಹಾಗೂ ಪೊಟ್ಯಾಶ್ ಗೊಬ್ಬರಗಳನ್ನು ಕೃತಕವಾಗಿ ಅಂದರೆ ಬೇರೆ ಬೇರೆಯಾಗಿ ಖರೀದಿ ಮಾಡಿದರೆ ಅದಕ್ಕಿಂತ ಕಡಿಮೆ ಕರ್ಚಿನಲ್ಲಿ ನಿಮ್ಮ ಬೆಳೆ ಆಗುವರೆಗೆ ಗೊಬ್ಬರವನ್ನು ನೀಡಬಹುದು ಉದಾಹರಣೆಗೆ ನೀವು ಈಗಾಗಲೇ ಒಂದು ಚೀಲ ಯೂರಿಯಾವನ್ನು ತೆಗೆದುಕೊಂಡಿದ್ದೀರಿ ಅದರಲ್ಲಿ ಕೇವಲ 10 ಕೆಜಿ ಮಾತ್ರ ಬಿತ್ತನೆ ಸಮಯದಲ್ಲಿ ಕೊಡಬೇಕಾಗುತ್ತದೆ. ಉಳಿದ ಗೊಬ್ಬರವನ್ನು ನಂತರದ ದಿನಗಳಲ್ಲಿ ಅಂದರೆ 25 ದಿನಗಳ ನಂತರ ಮಳೆಯಾದ ನಂತರ ಹತ್ವ ಮಳೆಯಾಗದಿದ್ದರೆ ಸ್ವಲ್ಪ ನೀರನ್ನು ಹಾಯಿಸಿ ಮತ್ತೆ ಪ್ರತಿ ಎಕರೆಗೆ 10 ಕೆಜಿ ಯೂರಿಯಾವನ್ನು ಹಾಕಬೇಕು.

ಈ ರೀತಿಯಾಗಿ ಗೊಬ್ಬರವನ್ನು ಖರೀದಿ ಮಾಡಿದ್ದೆ ಆದರೆ ಖಂಡಿತವಾಗಿಯೂ ನಿಮಗೆ ಹಣ ಕಡಿಮೆಯಾಗುವುದಲ್ಲದೆ ಭೂಮಿಗೆ ಯಾವ ಕೊರತೆಗಳನ್ನು ಇವೆ ಅವುಗಳನ್ನು ನಿವಾಹರಣೆ ಮಾಡಿದಂತಾಗುತ್ತದೆ. ಅದಕ್ಕಾಗಿ ಗೊಬ್ಬರ ಖರೀದಿ ಮಾಡುವಾಗ ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಸಾಮಾನ್ಯವಾಗಿ ಪೋಷಕಾಂಶದ ಕೊರತೆಯನ್ನು ಗಿಡದ ಕೆಳಭಾಗದ ಹಳೆ ಎಲೆಗಳಲ್ಲಿ ಅನ್ನಬಹುದು. ಇದರ ಕೊರತೆಯಿಂದಾಗಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ. ಹಾಗೂ ಇದರ ನಿರ್ವಹಣೆಗಾಗಿ ನೀವು ಭೂಮಿಗೆ ನೇರವಾಗಿ ಕೊಡಬಹುದು ಅಥವಾ ಎರಡು ಪ್ರತಿಶತದಷ್ಟು ಎಲೆಗಳ ಮೇಲೆ ಸಿಂಪರಣೆ ಮಾಡಬಹುದಾ ಇದರಿಂದಾಗಿ ತಕ್ಷಣವೇ ಇದರ ಕೊರತೆಯನ್ನು ನಿವಾರಿಸಬಹುದು.

ಸಾಮಾನ್ಯವಾಗಿ ಬೆಳೆಗಳಲ್ಲಿ ಹೂವು ಮತ್ತು ಬೇರುಗಳ ನಿರ್ವಹಣೆಗಾಗಿ ಇದು ಅತ್ಯಂತ ಪ್ರಮುಖವಾದ ಪಾತ್ರವಹಿಸುತ್ತದೆ. ಬೆಳೆಗಳ ಬೇರು ಭೂಮಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವಂತೆ ಮಾಡುವುದರ ಜೊತೆಗೆ ಹೂವಿನ ಹಂತದಲ್ಲಿ ಬೆಳೆಗಳಲ್ಲಿ ಹೂವಿನ ಸಂಖ್ಯೆ ಹೆಚ್ಚಾಗಿ ಮಾಡುವ ಕಾರ್ಯ ಇದರದಾಗಿದೆ. ಇದರ ಕೊರತೆಯನ್ನು ನೇರವಾಗಿ ಭೂಮಿಗೆ ನೀಡುವುದರಿಂದ ಹೋಗಲಾಡಿಸಬಹುದು. ಆದರೆ ಎಲೆಗಳ ಮೇಲೆ ಸಿಂಪರಣೆ ಗಾಗಿ ಇನ್ನೂ ಯಾವುದೇ ರೀತಿಯ ಕ್ರಮಗಳು ನಂದು ಇಲ್ಲ ಆದರೆ ಭೂಮಿಗೆ ನೇರವಾಗಿ ನೀಡುವುದರಿಂದ ಇದರ ನಿವಾರಣೆಯನ್ನು ಸುಲಭವಾಗಿ ಮಾಡಬಹುದು.

ತಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಪೊಟ್ಯಾಷ್ ಗೊಬ್ಬರ ಬೆಳೆಗಳ ಕಾಯಿ ಹಂತಗಳಲ್ಲಿ ಬೆಳೆಸಲಾಗುತ್ತದೆ. ಮೊದಲು ಬಿತ್ತನೆಯ ನಂತರ ಕಾಯಿ ಕಟ್ಟುವ ಹಂತದಲ್ಲಿ ಕೊಠಾರಿ ಗೊಬ್ಬರವನ್ನು ಬಳಸಲಾಗುತ್ತದೆ ಕಾರಣ ಬೆಳೆಗಳ ಸಂತಾನೋತ್ಪತ್ತಿ ಹೆಚ್ಚಿಸುತ್ತದೆ ಹಾಗೂ ಕಾಯಿ ಹಣ್ಣುಗಳ ಗಾತ್ರವನ್ನು ಹೆಚ್ಚಿಸುತ್ತದೆ.
ಇದರ ನಿರ್ವಹಣೆಗಾಗಿ ಪೊಟ್ಯಾಶ್ ಗೊಬ್ಬರವನ್ನು ನೀವು ಭೂಮಿಗೆ ನೇರವಾಗಿ ನೀಡಬಹುದು ಅಥವಾ ಮಾರುಕಟ್ಟೆಯಲ್ಲಿ ಇದನ್ನು ಸಿಂಪರಣೆ ಗಾಗಿಯೂ ಸಹ ಮಾರಾಟಕ್ಕೆ ಲಭ್ಯವಿದೆ ಅದನ್ನು ಪೊಟ್ಯಾಷಿಯಂ ನೈಟ್ರೇಟ್ ಎಂದು ಕರೆಯಲಾಗುತ್ತದೆ. ಬೆಳಗಳು ಹೂ ಮತ್ತು ಕಾಯಿ ಹಂತದಲ್ಲಿದ್ದಾಗ ಸಿಂಪರಣೆ ಮಾಡುವುದರಿಂದ ಅವುಗಳ ಗಾತ್ರ ಹೆಚ್ಚಿಸುತ್ತದೆ ಹಾಗೂ ಬೇಗನೆ ಬೆಳವಣಿಗೆ ಹೊಂದುತ್ತವೆ.

ಈ ರೀತಿಯಾಗಿ ನೀವು ಗೊಬ್ಬರಗಳನ್ನು ಖರೀದಿ ಮಾಡಿದರೆ ಕಡಿಮೆ ಹಣದಲ್ಲಿ ಯಾವ ರೀತಿಯಾಗಿ ಬೆಳೆಗಳಿಗೆ ಗೊಬ್ಬರಗಳ ಅವಶ್ಯಕತೆ ಇದೆಯೋ ಗೊಬ್ಬರಗಳನ್ನು ನೀಡಿದಂತಾಗುತ್ತದೆ ಹಾಗೂ ನಿಮ್ಮ ಬಳಿ ಇರುವ ಹಣವನ್ನು ಉಳಿಸಬಹುದು. ಕೃಷಿಯಲ್ಲಿ ಆದ ಹೆಚ್ಚಿಸಬೇಕಾದರೆ ನಾವು ಖರ್ಚನ್ನು ಕಡಿಮೆ ಮಾಡಿ ಆದಾಯವನ್ನು ಹೆಚ್ಚಿಸಬೇಕು ಅಂದಾಗ ಮಾತ್ರ ಕೃಷಿಯಲ್ಲಿ ಮುಂದು ಬರಲು ಸಾಧ್ಯ ಇಲ್ಲವಾದರೆ ಹಾಕುವ ಖರ್ಚು ಬರುವ ವೆಚ್ಚ ಸಮ ವಾದರೆ ಯಾವುದೇ ಪ್ರಯೋಜನವಿಲ್ಲ. ಅದಕ್ಕಾಗಿ ರೈತರು ಆಧುನಿಕ ದಿನಗಳಲ್ಲಿ ಹೆಚ್ಚಾಗಿ ಗೊಬ್ಬರಗಳನ್ನು ಬಳಸುತ್ತಾರೆ ಆದರೆ ಈ ರೀತಿಯಾಗಿ ಕಡಿಮೆ ಹಣದಲ್ಲಿ ಎಲ್ಲ ಗೊಬ್ಬರವನ್ನು ಮತ್ತು ಹೆಚ್ಚಿನ ಪ್ರಮಾಣದಲ್ಲಿ ತರಬೇಕು ಎಂಬುದರ ಬಗ್ಗೆ ನಿಮಗೆ ತಿಳಿಯಬೇಕು.

Leave a Reply

Your email address will not be published. Required fields are marked *