Ultimate magazine theme for WordPress.

ಪುನೀತ್ ಅವರ ಅಕ್ಕ ಲಕ್ಷ್ಮಿ ಗೋವಿದರಾಜ್ ಸಿನಿಮಾದಿಂದ ದೂರ ಉಳಿದಿದ್ಯಾಕೆ, ಇವರ ಮಕ್ಕಳು ಏನ್ ಮಾಡ್ತಿದಾರೆ ಗೊತ್ತಾ

0 1

ಸಾಮಾನ್ಯವಾಗಿ ಎಲ್ಲರಿಗೂ ದೊಡ್ಡಮನೆಯ ಬಹುತೇಕ ವಿಚಾರಗಳ ಬಗ್ಗೆ ತಿಳಿದಿರುತ್ತದೆ ಡಾಕ್ಟರ್ ರಾಜಕುಮಾರ್ ಅವರ ಮಕ್ಕಳು ಅವರ ಹಿನ್ನೆಲೆ ಬಹುತೇಕ ವಿಚಾರಗಳು ಪ್ರತಿಯೊಬ್ಬರಿಗೂ ತಿಳಿದಿರುತ್ತದೆ ಆದರೆ ರಾಜಕುಮಾರ್ ಅವರ ಮಗಳಾಗಿರುವಂತಹ ಲಕ್ಷ್ಮಿ ಗೋವಿಂದ್ ರಾಜ್ ಅವರ ಬಗ್ಗೆ ಹೆಚ್ಚಿನ ವಿಚಾರಗಳು ಬಹುತೇಕರಿಗೆ ಗೊತ್ತಿಲ್ಲ.

ಜೊತೆಗೆ ಲಕ್ಷ್ಮಿ ಗೋವಿಂದರಾಜ್ ಅವರ ಬಗ್ಗೆ ಎಲ್ಲೂ ಹೆಚ್ಚು ಚರ್ಚೆಯಾಗಿಲ್ಲ ಕಾರಣ ಅವರು ಯಾವುದೇ ವಿವಾದಗಳನ್ನು ಮಾಡಿಕೊಂಡಂತವರಲ್ಲ ಯಾವುದೇ ಚರ್ಚೆಗೆ ಗ್ರಾಸವಾದಂತವರಲ್ಲ. ತಮ್ಮ ಪಾಡಿಗೆ ತಾವು ಇದ್ದಂತವರು. ಇವತ್ತು ನಾವು ಲಕ್ಷ್ಮಿ ಗೋವಿಂದ್ ರಾಜ್ ಅವರ ಕುರಿತಾದ ಒಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.

ಲಕ್ಷ್ಮಿ ಗೋವಿಂದರಾಜ್ ಅವರು ರಾಜಕುಮಾರ್ ಅವರ ಎರಡನೇ ಮಗಳು ರಾಜಕುಮಾರ್ ಅವರ ಮುದ್ದಿನ ಮಗಳು ಕೂಡ ಹೌದು. ಆ ಕಾಲದಲ್ಲಿ ಅವರು ಹೈಸ್ಕೂಲ್ ಶಿಕ್ಷಣವನ್ನು ಮುಗಿಸಿದ್ದಾರೆ. ರಾಜಕುಮಾರ್ ಅವರ ಸರಳತೆ ಮುಗ್ಧತೆ ಪ್ರಾಮಾಣಿಕತೆ ಎಲ್ಲವನ್ನೂ ಕೂಡ ಲಕ್ಷ್ಮಿ ಗೋವಿಂದರಾಜ್ ಅವರು ಪಡೆದುಕೊಂಡು ಬಂದಿದ್ದರು.

ಯಾವುದೇ ಕಾರ್ಯಕ್ರಮವಿರಲಿ ಯಾವುದೇ ಸಂದರ್ಶನದಲ್ಲಿ ಕಾಣಿಸಿಕೊಂಡರು ಅವರಿಗೆ ಯಾವುದೇ ಹಮ್ಮುಬಿಮ್ಮು ಇಲ್ಲ ಅಹಂಕಾರವು ಕೂಡ ಇಲ್ಲ. ಅವರು ಕೆಲವೊಂದು ಸಂದರ್ಭ ಸಂದರ್ಶನಗಳಲ್ಲಿ ತಾವೇ ಹೇಳಿಕೊಂಡಿದ್ದಾರೆ ಅವರು ಚೆನ್ನೈನಲ್ಲಿ ಇರುವಂತಹ ಸಂದರ್ಭದಲ್ಲಿ ತನ್ನ ತಂದೆ ಒಬ್ಬ ಹೆಸರಾಂತ ನಟ ಎಂಬುದೇ ಅವರಿಗೆ ತಿಳಿದಿರಲಿಲ್ಲವಂತೆ. ಕರ್ನಾಟಕಕ್ಕೆ ಬಂದಾಗ ಅಭಿಮಾನಿಗಳು ರಾಜಕುಮಾರ್ ಅವರನ್ನ ಮುತ್ತಿಗೆ ಹಾಕಿಕೊಂಡಾಗ ಅವರಿಗೆ ಆಶ್ಚರ್ಯವಾಗುಟ್ಟಿತ್ತಂತೆ ತನ್ನ ತಂದೆ ಇಷ್ಟು ದೊಡ್ಡ ನಟ ಎಂದು.

ಇಷ್ಟೊಂದು ಜನ ಅವರನ್ನು ಪ್ರೀತಿಸುತ್ತಾರೆ ಆದರೆ ಅವರು ಮನೆಯಲ್ಲಿ ತುಂಬಾ ಸರಳವಾಗಿ ಇರುತ್ತಾರೆ ನಾನೊಬ್ಬ ಸೂಪರ್ಸ್ಟಾರ್ ಅನ್ನೋದನ್ನ ತೋರಿಸಿಕೊಳ್ಳುತ್ತಿರಲಿಲ್ಲ ಎಂದು ಸಾಕಷ್ಟು ಸಂದರ್ಶನಗಳಲ್ಲಿ ಹೇಳಿದ್ದಾರೆ. ಅವರದೇ ಬುದ್ಧಿ ಲಕ್ಷ್ಮಿ ರಾಜಕುಮಾರ್ ಅವರನ್ನು ಸೇರಿದಂತೆ ರಾಜಕುಮಾರ್ ಅವರ ಎಲ್ಲ ಮಕ್ಕಳಿಗೂ ಕೂಡ ಆ ಗುಣ ಬಂದಿದೆ. ಲಕ್ಷ್ಮಿ ಅವರು ಎಲ್ಲೂ ಕೂಡ ತಮ್ಮ ತಂದೆ ಹೆಸರನ್ನು ದುರುಪಯೋಗಪಡಿಸಿಕೊಳ್ಳಲಿಲ್ಲ. ಎಲ್ಲೂ ತನ್ನ ತಂದೆ ಒಬ್ಬ ದೊಡ್ಡ ನಟ ಎಂದು ಗರ್ವವನ್ನು ತೋರಿಸಿಕೊಳ್ಳಲಿಲ್ಲ.

ರಾಜಕುಮಾರ್ ಅವರ ಕುಟುಂಬದಲ್ಲಿ ಸಿನಿಮಾರಂಗದಿಂದ ಸಂಪೂರ್ಣವಾಗಿ ದೂರ ಉಳಿದವರಲ್ಲಿ ಲಕ್ಷ್ಮಿ ರಾಜಕುಮಾರ್ ಕೂಡ ಒಬ್ಬರು. ರಾಜಕುಮಾರ್ ಅವರು ಬಾಲನಟಿಯಾಗಿ ಇವರಿಗೆ ನಟಿಸುವುದಕ್ಕೆ ಅವಕಾಶವನ್ನು ನೀಡಿದರು ಅವರು ಆಸಕ್ತಿಯನ್ನು ತೋರಲಿಲ್ಲವಂತೆ. ಪಾರ್ವತಮ್ಮ ರಾಜಕುಮಾರ್ ಅವರು ಪ್ರೊಡ್ಯೂಸ್ ಮಾಡುತ್ತಿದ್ದಂತಹ ಚಿತ್ರ ಚಿತ್ರಗಳ ಚಿತ್ರೀಕರಣ ನಡೆಯುವ ಸಮಯದಲ್ಲಿ ಆ ಸ್ಥಳಗಳಿಗೆ ಮಾತ್ರ ಹೋಗುತ್ತಿದ್ದರಂತೆ.

ಇವರಿಗೆ ಬಹಳ ಚಿಕ್ಕವಯಸ್ಸಿನಲ್ಲೇ ಮದುವೆಯನ್ನು ಮಾಡಲಾಗುತ್ತದೆ ರಾಜಕುಮಾರ್ ಅವರ ಕುಟುಂಬದಲ್ಲಿ ಮಕ್ಕಳು ಎಲ್ಲೂ ದಾರಿ ತಪ್ಪಬಾರದು ಎಂಬ ಉದ್ದೇಶದಿಂದ ಬೇಗ-ಬೇಗ ಮದುವೆಯನ್ನು ಮಾಡುತ್ತಿದ್ದರು. ಲಕ್ಷ್ಮಿ ಅವರನ್ನ ಗೋವಿಂದರಾಜ್ ಅವರೊಂದಿಗೆ ವಿವಾಹ ಮಾಡುತ್ತಾರೆ. ಗೋವಿಂದರಾಜ್ ಅವರು ಪಾರ್ವತಮ್ಮ ರಾಜಕುಮಾರ್ ಅವರಿಗೆ ಎಲ್ಲಾ ರೀತಿಯಲ್ಲಿಯೂ ಬೆನ್ನೆಲುಬಾಗಿ ನಿಂತು ಕೊಳ್ಳುತ್ತಾರೆ

ರಾಜಕುಮಾರ್ ಅವರ ಕುಟುಂಬದಲ್ಲಿ ಏನೇ ಕಾರ್ಯಕ್ರಮಗಳಾಗಲಿ ಬೆಳವಣಿಗೆಗಳಾಗಲಿ ಎಲ್ಲದಕ್ಕೂ ಕೂಡ ಗೋವಿಂದರಾಜ್ ಅವರು ಸಾಕ್ಷಿಯಾಗಿದ್ದರು. ಅವರು ಕೂಡ ಒಂದಷ್ಟು ಸಿನಿಮಾಗಳನ್ನು ಪ್ರೊಡ್ಯೂಸ್ ಮಾಡಿದ್ದರು. ಲಕ್ಷ್ಮಿ ಗೋವಿಂದರಾಜ್ ಅವರು ಸಂಕಟವನ್ನು ಅನುಭವಿಸಿದಂತಹ ಪ್ರಸಂಗವು ಅವರ ಜೀವನದಲ್ಲಿ ನಡೆದಿದ್ದು ಅದು ರಾಜಕುಮಾರ್ ಅವರ ಅಪಹರಣವಾದಂತಹ ಸಂದರ್ಭ. ಆ ಸಮಯದಲ್ಲಿ ಇಡೀ ರಾಜ್ಯವೇ ಭಯವನ್ನು ಪಟ್ಟಿತ್ತು ವೀರಪ್ಪನ್ ಎಂದರೆ ಕಟುಕ ಹಾಗೆ ಹೀಗೆ ಎನ್ನುವ ಸುದ್ದಿ ಇತ್ತು.

ಲಕ್ಷ್ಮಿ ಅವರು ಒಂದು ಕಡೆ ದೇವರೆಂದು ಪೂಜಿಸುವಂತಹ ತಂದೆಯನ್ನ ವೀರಪ್ಪನವರು ಅಪಹರಿಸಿದ್ದರು ಮತ್ತೊಂದು ಕಡೆ ಜೀವಕ್ಕೆ ಜೀವವಾಗಿದ್ದಂತಹ ಅವರ ಪತಿ ಗೋವಿಂದರಾಜ್ ಅವರು ಕೂಡ ರಾಜಕುಮಾರ್ ಅವರೊಂದಿಗೆ ಹೋಗಿದ್ದರು ಸಹಜವಾಗಿ ಅವರಿಗೂ ಒಂದು ರೀತಿಯ ಆತಂಕ ಇತ್ತು. ಒಂದಿಷ್ಟು ದಿನ ಪ್ರತಿದಿನ ಅವರು ವೇದನೆಯನ್ನು ಸಂಕಟವನ್ನು ಅನುಭವಿಸಿದ್ದರು. ಇನ್ನು ಇವರ ಮಕ್ಕಳ ವಿಚಾರಕ್ಕೆ ಬರುವುದಾದರೆ ರಾಜಕುಮಾರ್ ಅವರು ತನ್ನ ಮೊಮ್ಮಗಳ ಮದುವೆಯನ್ನು ತಾನು ಬದುಕಿದ್ದಾಗಲೇ ನೋಡಬೇಕು ಎಂದು ಆಸೆಯನ್ನು ಪಟ್ಟಿದ್ದರಂತೆ ಮಗಳಿಗೆ ಮದುವೆ ಮಾಡುವಂತಹ ತಯಾರಿಯನ್ನು ಕೂಡ ಮಾಡಿದ್ದರು ಆದರೆ ಆ ಸಮಯಕ್ಕೆ ರಾಜಕುಮಾರ್ ಅವರು ವಿಧಿವಶರಾದರು.

ನಂತರ ಅವರ ಮಗ ಮತ್ತು ಮಗಳು ಇಬ್ಬರ ಮದುವೆ ಕೂಡ ಆಗುತ್ತದೆ ಆದರೆ ಇವರ ಮಕ್ಕಳು ಕೂಡ ಸಿನಿಮಾ ರಂಗದಿಂದ ದೂರವೇ ಇದ್ದಾರೆ. ಒಟ್ಟಾರೆಯಾಗಿ ಲಕ್ಷ್ಮಿ ಗೋವಿಂದ್ ರಾಜ್ ಅವರು ಯಾವುದೇ ವಿವಾದಗಳಿಗೆ ಗುರಿಯಾಗದೆ ಚರ್ಚೆಗೆ ಒಳಗಾಗದೆ ತಂದೆಗೆ ತಕ್ಕ ಮಗಳಾಗಿ ಜೀವನವನ್ನು ನಡೆಸುತ್ತಿದ್ದಾರೆ.

Leave A Reply

Your email address will not be published.