ಹಲವಾರು ವಿಧದ ಅಣಬೆಗಳು ಇರುತ್ತದೆ ಅವುಗಳಲ್ಲಿ ಬಹುಪಾಲು ಅಣಬೆಗಳು ತಿನ್ನಲು ಯೋಗ್ಯವಾಗಿರುತ್ತದೆ ಇನ್ನೂ ಕೆಲವು ವಿಷಪೂರಿತವಾಗಿರುತ್ತದೆ ಇದರಲ್ಲಿ ಪ್ರೊಟೀನ್ ಜೀವಸತ್ವಗಳು ಖನಿಜಾಂಶಗಳು ಹೇರಳವಾಗಿದ್ದು ಶರ್ಕರ ಪಿಷ್ಠ ಕಡಿಮೆಯಿರುವುದರಿಂದ ಸಕ್ಕರೆ ರೋಗಿಗಳಿಗೆ ಒಳ್ಳೆಯ ಆಹಾರವಾಗಿದೆ ಅಣಬೆ ಹೆಚ್ಚು ಮೃದುವಾಗಿರುವುದರಿಂದ ಎಲ್ಲಾ ವಿಧದ ಮಸಾಲೆ ಪರಿಮಳವನ್ನು ಹೀರಿಕೊಳ್ಳುವ ಗುಣ ಇದಕ್ಕಿದೆ ಹಾಗಾಗಿ ಇದರಿಂದ ರುಚಿಕರ ತಿನಿಸುಗಳನ್ನು ತಯಾರಿಸಹುದು.

ಅತ್ಯಧಿಕ ಪ್ರೊಟೀನ್ ಇರುವ ಆಹಾರ ವರ್ಧಕ ಅಣಬೆಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ ಅಣಬೆ ಕೃಷಿಯಿಂದ ಕಡಿಮೆ ವೇಳೆಯಲ್ಲಿ ಹಾಗೂ ಅಲ್ಪ ಪ್ರದೇಶದಲ್ಲಿ ಅಧಿಕ ಇಳುವರಿ ಪಡೆಯಬಹುದು ಅಣಬೆ ಉತ್ಪಾದಿಸಲು ಭತ್ತದ ಹುಲ್ಲು ಅತ್ಯವಶ್ಯಕ ಹಾಗಾಗಿ ಭತ್ತದ ಹುಲ್ಲು ಲಭ್ಯವಿರುವ ಜಲಾನಯನ ಪ್ರದೇಶಗಳಲ್ಲಿ ಅದರಲ್ಲೂ ಮಲೆನಾಡು ಅರೆಮಲೆನಾಡು ಪ್ರದೇಶಗಳಲ್ಲಿ ಅಣಬೆ ಕೃಷಿಯನ್ನು ಉತ್ಪಾದನಾ ಚಟುವಟಿಕೆಯಾಗಿ ಕೈಗೊಳ್ಳಬಹುದು

ಈ ಕೃಷಿಯ ಬಗ್ಗೆ ತೋಟಗಾರಿಕಾ ಇಲಾಖೆ ಕೂಡಾ ತರಬೇತಿ ನೀಡುತ್ತದೆ ವರ್ಷವಿಡೀ ಅಣಬೆ ಬೆಳೆಯನ್ನು ಬೆಳೆಯಬಹುದು ನಾವು ಈ ಲೇಖನದ ಮೂಲಕ ವೀಣಾ ದೇವಿಯ ಅಣಬೆ ಕೃಷಿಯಲ್ಲಿ ಸಾಧನೆಯನ್ನು ತಿಳಿದುಕೊಳ್ಳೋಣ.

ಬೆಳಿಗ್ಗೆ ಎದ್ದು ಅಡುಗೆ ಮಾಡಿ ನಂತರ ಕೃಷಿ ಚಟುವಟಿಕೆಗಳನ್ನು ಮಾಡುವ ಮಹಿಳೆಯರು ಗಂಡಸರಿಗಿಂತ ಹೆಚ್ಚು ದುಡಿಯುತ್ತಾರೆ ವೀಣಾ ದೇವಿ ಅವರು ಬಿಹಾರ ರಾಜ್ಯದವರು ಹಾಗೆಯೇ ಎಲ್ಲರಂತೆಯೇ ಗಂಡನ ಮನೆಗೆ ಕಾಲಿಟ್ಟರು ಗಂಡನ ಮನೆಯಲ್ಲಿ ವ್ಯವಸಾಯ ಮಾಡಿ ಜೀವನ ನಡೆಸುತ್ತಿದ್ದರು ಆದರೆ ಜೀವನ ನಡೆಸಲು ಸಾಕಾಗುತ್ತಿರಲಿಲ್ಲ ತನ್ನ ಮಕ್ಕಳಿಗೆ ಈ ರೀತಿಯ ಕಷ್ಟ ಎದುರಾಗಬಾರದು ಎಂದು ಕೊಂಡು ತೀರ್ಮಾನಿಸಿದ್ದರು

ಕೃಷಿ ತಂತ್ರಜ್ಞಾನ ಇಲಾಖೆಯಲ್ಲಿ ಹೇಗೆ ಅಣಬೆ ಬೆಳೆಯಬೇಕು ಎಂದು ಹೇಳಿಕೊಟ್ಟರು ಹಾಗೆಯೇ ವೀಣಾ ದೇವಿಯವರು ಅಣಬೆ ಬೆಳೆಯಲು ನಿರ್ಧರಿಸಿದ್ದರು ಹಾಗೆಯೇ ತಮ್ಮ ಮನೆಯ ಪಕ್ಕದ ಗುಡಿಸಲಲ್ಲಿ ಅಣಬೆ ಕೃಷಿ ಆರಂಭಿಸಿ ಮೊದಲಿಗೆ ಒಂದು ಕೇಜಿ ಬೆಳೆದರು ಆಗ ವೀಣಾ ದೇವಿ ಅವರಿಗೆ ಧೈರ್ಯ ಬಂದಿತು ಹಾಗೆಯೇ ನೂರಾರು ಕೇಜಿ ಅಣಬೆ ಬೆಳೆಯಲು ಆರಂಭಿಸಿದರು .

ಹತ್ತಿರದ ಅಂಗಡಿ ಹಾಗೂ ತಮ್ಮ ಮನೆಯಲ್ಲೇ ಅಣಬೆ ವ್ಯಾಪಾರ ಮಾಡಲು ಮುಂದಾದರು ಹಾಗೆಯೇ ಅವರು ಅಣಬೆ ವ್ಯಾಪಾರ ಹಾಗೂ ವ್ಯವಸಾಯ ಮಾಡುವುದನ್ನು ಬಿಡದೆ ಅವರು ಇವೆರಡರಿಂದ ತಿಂಗಳಿಗೆ ಒಂದು ಲಕ್ಷ ಲಾಭ ಗಳಿಸುತ್ತಿದ್ದಾರೆ ಹಾಗೆಯೇ ತಮ್ಮ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ ಸುತ್ತ ಮುತ್ತಲಿನ ಮಹಿಳೆಯರಿಗೂ ಅಣಬೆ ಕೃಷಿ ಮಾಡಲು ಉತ್ತೇಜಿಸಿ ಮಾಹಿತಿ ನೀಡುತ್ತಾರೆ ಅಣಬೆಗೆ ಬಾರಿ ಬೇಡಿಕೆ ಇದೆ ಹಾಗೆಯೇ ಅದನ್ನು ಬೇಕೆಯುವುದು ಕಷ್ಟದ ಕೆಲಸವಲ್ಲ ಬೆಂಗಳೂರಿನ ಹೆಸರುಗಟ್ಟ ಬಳಿ ಭಾರತೀಯ ತೋಟಗಾರಿಕಾ ಸಂಶಧನಾ ಸಂಸ್ಥೆ ಇದೆ ಅಲ್ಲಿ ಮಾಹಿತಿ ನೀಡುತ್ತಾರೆ

ಅಣಬೆ ಕೃಷಿಗೆ ಜಮೀನಿನ ಅವಶ್ಯಕತೆ ಇರುವುದಿಲ್ಲ ಹತ್ತಿರದ ಅಂಗಡಿ ಗಳಲ್ಲಿ ಹಾಗೂ ಆನ್ಲೈನ್ ಮೂಲಕ ಅಣಬೆ ಮಾರಾಟ ಮಾಡಬಹುದು ಹಾಗೆಯೇ ಫ್ರೆಶ್ ಅಣಬೆ ಮಾರಾಟ ಆಗಲಿಲ್ಲ ಎಂದರೆ ಅಣಬೆಯನ್ನು ಒಣಗಿಸಿ ಮಾರಾಟ ಮಾಡುಬಹುದು ಹಾಗಾಗಿ ಅಣಬೆ ವ್ಯಾಪಾರದಲ್ಲಿ ಯಾವುದೇ ರೀತಿಯ ನಷ್ಟ ಇರುವುದಿಲ್ಲ.ಹಾಗಾಗಿ ಅಣಬೆ ವ್ಯಾಪಾರದಿಂದ ಅಣಬೆಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ ಅಣಬೆ ಕೃಷಿಯಿಂದ ಕಡಿಮೆ ವೇಳೆಯಲ್ಲಿ ಹಾಗೂ ಅಲ್ಪ ಪ್ರದೇಶದಲ್ಲಿ ಅಧಿಕ ಇಳುವರಿ ಪಡೆಯಬಹುದು.

Leave a Reply

Your email address will not be published. Required fields are marked *