ಮನೆಯಲ್ಲಿ ಗಡಿಯಾರ ಯಾವ ದಿಕ್ಕಿನಲ್ಲಿ ಇಟ್ಟರೆ ಶುಭಕರ ತಿಳಿಯಿರಿ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಮನೆಯಲ್ಲಿ ಸಾಮಾನ್ಯವಾಗಿ ಒಂದು ಗಡಿಯಾರ ಇಡಲೆಬೇಕು ಆಗಲೇ ಆ ಮನೆಗೆ ಒಂದು ಕಳೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗಡಿಯಾರವನ್ನು ಯಾವ ದಿಕ್ಕಿಗೆ ಇಡಬೇಕು. ಯಾವ ಶೇಪ್ ನ ಗಡಿಯಾರ ಇಡಬೇಕು ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

ಮನೆಯಲ್ಲಿ ಗಡಿಯಾರವನ್ನು ಹಾಲ್ ನಲ್ಲಿ ಹಾಕಬೇಕು. ಬೆಳಗ್ಗೆ ಎದ್ದ ತಕ್ಷಣ ಕಾಣುವಂತೆ ಹಾಕಿಕೊಳ್ಳಬಾರದು ಅಂದರೆ ಮಲಗುವ ಕೋಣೆಯಲ್ಲಿ ಹಾಕದೆ ಇರುವುದು ಒಳ್ಳೆಯದು. ಉತ್ತರ ಮತ್ತು ಪೂರ್ವ ದಿಕ್ಕಿಗೆ ಗಡಿಯಾರಗಳನ್ನು ಇಡಬೇಕು. ಬಹಳ ದಿನಗಳಿಂದ ಮಾಡಬೇಕು ಅಂದುಕೊಂಡಿರುವ ಕೆಲಸ ಆಗದೆ ಇದ್ದರೆ, ಬರಬೇಕಾದ ಹಣ ಬರದೆ ಇದ್ದರೆ ಮನೆಯಲ್ಲಿ ಗಡಿಯಾರ ಉತ್ತರ ದಿಕ್ಕಿಗೆ ಇಡಬೇಕು. ನಿಂತಿರುವ ಕೆಲಸಗಳಿಗೆ ಚಾಲನೆ ಸಿಕ್ಕಂತಾಗುತ್ತದೆ.

ಮನೆಯಲ್ಲಿ ಪೂರ್ವ ದಿಕ್ಕಿಗೆ ಗಡಿಯಾರವನ್ನು ಇಟ್ಟರೆ ಮನೆಯವರ ಆರೋಗ್ಯ ಸುಧಾರಿಸುತ್ತದೆ, ಪ್ರತಿಯೊಬ್ಬರ ಏಳ್ಗೆಯಾಗುತ್ತದೆ. ಕೆಲವರು ಗಡಿಯಾರವನ್ನು ಐದು ನಿಮಿಷ ಮುಂದೆ ಅಥವಾ ಐದು ನಿಮಿಷ ಹಿಂದೆ ಇಡುತ್ತಾರೆ ಹೀಗೆ ಮಾಡಬಾರದು ಏಕೆಂದರೆ ನಿಮಗೆ ಗೊತ್ತಿರುತ್ತದೆ ಗಡಿಯಾರ ಫಾಸ್ಟ್ ಇದೆ ಎಂದು ಇದರಿಂದ ನೀವು ಆರಾಮಾಗಿ ಕೆಲಸ ಮಾಡುತ್ತೀರಾ. ಮನೆಯ ಗಡಿಯಾರ ಮುಂದೆಯೂ ಇಡಬಾರದು, ನಿಧಾನವು ಇಡಬಾರದು ಸರಿಯಾದ ಸಮಯಕ್ಕೆ ಇಡಬೇಕು.

ನಿಂತಿರುವ ಗಡಿಯಾರವನ್ನು ಮನೆಯಲ್ಲಿ ಇಡಬಾರದು ಸಮಯದ ಚಲನೆಯ ಗಡಿಯಾರವನ್ನು ಮನೆಯಲ್ಲಿ ಇಡುವುದರಿಂದ ಮನೆಯವರ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಗಡಿಯಾರವನ್ನು ಯಾರಿಗೂ ದಾನವಾಗಿ ಕೊಡಬಾರದು. ಗಡಿಯಾರವನ್ನು ದಾನವಾಗಿ ಕೊಟ್ಟರೆ ನಮ್ಮ ಒಳ್ಳೆತನ ದಾನವಾಗಿ ಕೊಟ್ಟಂತಾಗುತ್ತದೆ. ಮನೆಯಲ್ಲಿ ಗಡಿಯಾರವನ್ನು ದಕ್ಷಿಣಕ್ಕೆ ಹಾಕಬಾರದು ಪಶ್ಚಿಮಕ್ಕೆ ಹಾಕಿದರೆ ಸಮಸ್ಯೆ ಇಲ್ಲ ಹಾಕದೆ ಇರುವುದು ಒಳ್ಳೆಯದು.

ಮೆಟಲ್ ಫ್ರೇಮ್ ಹೊಂದಿರುವ ಗಡಿಯಾರವನ್ನು ಹಾಕುವುದು ಒಳ್ಳೆಯದು. ಉತ್ತರ ದಿಕ್ಕಿಗೆ ಸಿಲ್ವರ್ ಫ್ರೇಮ್ ಇರುವ ಗಡಿಯಾರವನ್ನು ಹಾಕುವುದು ಒಳ್ಳೆಯದು. ಮನೆಯ ಬಾಗಿಲಿನ ಮೇಲೆ ಗಡಿಯಾರವನ್ನು ಹಾಕಬಾರದು. ಒಟ್ಟಿನಲ್ಲಿ ಗಡಿಯಾರವನ್ನು ಪೂರ್ವ ಮತ್ತು ಉತ್ತರ ದಿಕ್ಕಿಗೆ ಇಡಬೇಕು ಇದರಿಂದ ಮನೆಯವರಿಗೆ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *