ಪುನೀತ್ ನಿಧನದ ವಿಚಾರ ನಾಗತ್ತೆಗೆ ಇನ್ನು ತಿಳಿದಿಲ್ಲ ಯಾಕೆ ಗೊತ್ತೆ

0 3

ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ‌ ಸೂತ್ರವ ಹರಿದ ಗೊಂಬೆಯ ಮುರಿದ ಮಣ್ಣಾಗಿಸಿದ.. ಪಾದರಸದಂತೆ ಚುರುಕಾದ ಅಭಿನಯ, ಅವರ ಡ್ಯಾನ್ಸ್, ಫೈಟ್ಸ್ ಗಳಿಗೆ ಮಾರು ಹೋಗದ ಜನಗಳೆ ಇಲ್ಲ. ನಾಡಿನ‌ ತುಂಬ ಎಲ್ಲಾ ವರ್ಗದ ಜನರ ಪ್ರೀತಿ ಗಳಿಸಿದ್ದ ವ್ಯಕ್ತಿ ಅವರು. ಅಜ್ಜ ಅಜ್ಜಿಯರಿಂದ ಹಿಡಿದು ಮಕ್ಕಳ ವರೆಗೆ ಪುನೀತ ರಾಜಕುಮಾರರೆಂದರೆ ತುಂಬಾ ಅಚ್ವುಮೆಚ್ಚು.

ನಮ್ಮ ಮನೆಯದೇ ಮಗನೋ ಅಥವಾ ಸಹೋದರನೊ ಎಂದು ತಿಳಿದು ಅವರ ಸಿನಿಮಾವನ್ನು ನೋಡುತ್ತಿದ್ದವಿ. ಇಷ್ಟೊಂದು ಪ್ರೀತಿ ಗಳಿಸಿದ ನಟರಲ್ಲಿ ಡಾ. ರಾಜಕುಮಾರ್ ಅವರನ್ನ ಬಿಟ್ಟರೆ ಅವರ ಮಗನೆ ಬರಬೇಕಾಯಿತು ಈ ರೀತಿಯ ನಾಡಿನ ಜನರ ಹೃದಯ ಗೆಲ್ಲೋಕೆ. ಭಾರತೀಯ ಚಿತ್ರರಂಗದಲ್ಲಿ ತುಂಬಾ ಒಳ್ಳೆಯ ಶ್ರೇಷ್ಠ ಕಲಾವಿದರಿದ್ದಾರೆ, ಅವರಗಳು ಕೂಡ ತುಂಬಾ ಅಬೀಮಾನಿಗಳನ್ನು ಹೊಂದಿದಾರೆ ಆದರೆ ಈ ರೀತಿಯ ಪ್ರೀತಿ ಅಭಿಮಾನ ಮತ್ತು ಹೃದಯ ಗೆಲ್ಲಲಿಕ್ಕೆ ಸಾಧ್ಯ ಆಗಲಿಲ್ಲವೇನೊ, ಆದರೆ ಈ ರೀತಿಯ ಹೃದಯ ಗೆಲ್ಲೋದು ಅಷ್ಟು ಬೇಗ ಆಗಲ್ಲ.

ಆದರೆ ಅದನ್ನು ಗೆದ್ದು ತೋರಿಸಿಬಿಟ್ಟಿದ್ದಾರೆ ನಮ್ಮ ಪ್ರೀತಿಯ ಅಪ್ಪು. ಆದರೆ ವಿಧಿಯು ಎಷ್ಟೊಂದು ಕ್ರೂರಿ ಆಗಿಬಿಟ್ಟ ಅವರ ವಿಚಾರದಲ್ಲಿ. ಇಂದು ನಮ್ಮ ಜೊತೆಗೆ ಇಲ್ಲದೆ ಹೋದರು ಅವರ ನೆನಪು ಮಾತ್ರ ನಮ್ಮ ಹೃದಯದಲ್ಲಿ ಯಾವಾಗಲೂ ಅಜರಾಮರ. ನಮಗೆಲ್ಲ ತಿಳಿದೇ ಇದೆ ಪುನೀತ್ ರಾಜಕುಮಾರ್ ಅವರು ಅಸ್ತಂಗತ ಆಗಿರುವ ವಿಷಯ ಆದರೆ ಇಡೀ ದೇಶದಾದ್ಯಂತ ಈ ವಿಷಯ ಕಾಡ್ಗಿಚ್ಚಿನಂತೆ ಪಸರಿಸಿದರೂ ರಾಜಕುಮಾರ್ ಕುಟುಂಬದಲ್ಲೇ ಒಬ್ಬರಿಗೆ ಇನ್ನೂ ಈ ವಿಷಯ ತಿಳಿದಿಲ್ಲ. ಹೌದೂ ಪುನೀತ್ ರಾಜಕುಮಾರ್ ಅವರ ಅತ್ತೆ ನಾಗತ್ತೆಗೆ ಇನ್ನು ಪುನೀತ್ ರಾಜಕುಮಾರ್ ಇನ್ನಿಲ್ಲ ಎನ್ನುವ ಸುದ್ದಿ ತಿಳಿದಿಲ್ಲ.

ಈಗೊಂದು ಮೂರು ದಿನದ ಹಿಂದೆ ನಮ್ಮೆಲ್ಲರ ಪ್ರೀತಿಯ ಅಪ್ಪು ಅವರಿಗೆ ಎದೆ ನೋವು ಕಾಣಿಸಿಕೊಂಡು, ಅದರ ಪರಿಣಾಮವಾಗಿ ಪುನೀತ್ ರಾಜ್ ಕುಮಾರ್ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ಸಿಕ್ಕಿತು. ಆದರೆ ಈ ಸುದ್ದಿ ಬಂದ ಕೆಲವೇ ಸಮಯಕ್ಕೆ ಅಪ್ಪು ಇನ್ನಿಲ್ಲ ಎನ್ನುವ ಸುದ್ದಿ ಸಹ ಬಂದಿತು. ಈ ಸುದ್ದಿ ಇಡೀ ಕರ್ನಾಟಕಕ್ಕೆ ಬಹಳ ದೊಡ್ಡ ಶಾಕ್ ನೀಡಿತು.

ಅಪ್ಪು ಅವರ ಮಗಳು ಧೃತಿ ವಿದೇಶದಿಂದ ತಂದೆಯನ್ನು ನೋಡಲು ಬಂದಿದ್ದರು. ಈ ಕ್ಷಣಕ್ಕೂ ಅಪ್ಪು ಇನ್ನಿಲ್ಲ ಎನ್ನುವ ಸುದ್ದಿಯನ್ನು ನಂಬಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಪುನೀತ್ ಅವರ ಪಾರ್ಥಿವ ಶರೀರವನ್ನು ಸದಾಶಿವ ನಗರದ ಮನೆಯಿಂದ ಕಂಠೀರವ ಕ್ರೀಡಾಂಗಣಕ್ಕೆ ಕರೆತಂದು, ಅಭಿಮಾನಿಗಳಿಗೆ ಮತ್ತು ಸಾರ್ವಜನಿಕರಿಗೆ ದರ್ಶನದ ವ್ಯವಸ್ಥೆ ಕಲ್ಪಿಸಿ ಕೊಡಲಾಗಿತ್ತು. ಎರಡು ದಿನ ಪೂರ್ತಿ ಅಭಿಮಾನಿಗಳಿಗೆ ಅಪ್ಪು ಅವರ ಅಂತಿಮ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗಿತ್ತು ಹಾಗೂ ಭಾನುವಾರ ಅಪ್ಪು ಅವರ ಅಂತ್ಯ ಸಂಸ್ಕಾರಗಳು ನಡೆಯಿತು. ಇಷ್ಟು ನಮಗೆಲ್ಲ ಈಗಾಗಲೇ ತಿಳಿದ ವಿಚಾರ.

ಆದರೆ, ನಿನ್ನೆಯವರೆಗೂ ದೊಡ್ಮನೆಯ ಇಡೀ ಕುಟುಂಬ ಕಂಠೀರವ ಸ್ಟೇಡಿಯಂ ನಲ್ಲಿ ಇತ್ತು. ಇನ್ನು ಅಸಂಖ್ಯಾತ ಅಭಿಮಾನಿಗಳು ಕಂಠೀರವ ಸ್ಟೇಡಿಯಂ ಗೆ ಬಂದು ಅಪ್ಪು ಅವರ ದರ್ಶನ ಪಡೆದಿದ್ದಾರೆ. ರಾತ್ರಿ, ಹಗಲು, ಮಧ್ಯರಾತ್ರಿ ಎನ್ನುವುದನ್ನು ನೋಡದ ಅಭಿಮಾನಿಗಳು, ಲಕ್ಷಾಂತರ ಸಂಖ್ಯೆಯಲ್ಲಿ ಬಂದು ಅಪ್ಪು ಅವರನ್ನು ಕೊನೆಯ ಬಾರಿಗೆ ನೋಡಿಕೊಂಡು ಹೋಗಿದ್ದಾರೆ.

ಅಪ್ಪು ಅವರನ್ನು ಈ ರೀತಿ ನೋಡುವ ಪರಿಸ್ಥಿತಿ ರಾಜ್ಯಕ್ಕೆ ಬರುತ್ತದೆ ಎಂದು ಕನಸಲ್ಲೂ ಯಾರು ನೆನೆಸಿರಲಿಲ್ಲ. ಇಡೀ ರಾಜ್ಯವೆ ಅಪ್ಪು ಇಲ್ಲ ಎಂದು ಕೊರಗುತ್ತಿದೆ, ಆದರೆ ಡಾ.ರಾಜ್ ಕುಮಾರ್ ಅವರ ತಂಗಿ ನಾಗಮ್ಮ, ಅಪ್ಪು ಅವರ ಪ್ರೀತಿಯ ನಾಗತ್ತೆ ಅವರಿಗೆ ಈ ವಿಚಾರ ಇನ್ನು ತಿಳಿದಿಲ್ಲ. ಮನೆಯವರು ಅಪ್ಪು ಇಲ್ಲ ಎನ್ನುವ ಸುದ್ದಿಯನ್ನು ನಾಗತ್ತೆ ಅವರಿಗೆ ತಿಳಿಸಿಲ್ಲ, ಕಾರಣ ನಾಗತ್ತೆ ಅವರಿಗೆ ವಯಸ್ಸು 90 ದಾಟಿದೆ, ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಹಾಸಿಗೆ ಹಿಡಿದಿದ್ದಾರೆ.

ಅವರಿಗೆ ಅಪ್ಪು ಅಂದ್ರೆ ಪ್ರಾಣ, ಅಪ್ಪು ಅವರಿಗೆ ಅತ್ತೆ ಅಂದ್ರೆ ತುಂಬಾ ಪ್ರೀತಿ ಮತ್ತು ಗೌರವ ಇತ್ತು. ಈ ವಿಚಾರವನ್ನು ತಡೆಯುವ ಶಕ್ತಿ ಅವರಿಗೆ ಇಲ್ಲ ಎನ್ನುವ ಕಾರಣಕ್ಕೆ ನಾಗತ್ತೆ ಅವರಿಗೆ ಈ ವಿಚಾರ ತಿಳಿಸಿಲ್ಲ, ಗಾಜನೂರಿನಲ್ಲೇ ಅವರನ್ನು ಇರಿಸಲಾಗಿದೆ. ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.