ಈ ಮೂರು ನಟರಿಗೆ ಕಂಟಕ ಆಯ್ತಾ ಜನನ ದಿನಾಂಕ ಸಂಖ್ಯೆ 17 ಅಭಿಮಾನಿಗಳು ಹೇಳ್ತಿರೋದೇನು?

0 1

ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರ ಮೆಚ್ಚಿನ ನಟನಾಗಿದ್ದ ಪುನೀತ್​ ರಾಜ್​ಕುಮಾರ್​ ಅವರು ಶುಕ್ರವಾರ ಅಕ್ಟೋಬರ್ 29 ನೇ ತಾರೀಖಿನಂದು ಹೃದಯಾಘಾತದಿಂದ ನಿಧನರಾಗಿರುವುದು ತೀವ್ರ ನೋವನ್ನು ತರುತ್ತದೆ ಅವರ ಅಪಾರ ಅಭಿಮಾನಿ ಬಳಗ ಕಣ್ಣೀರು ಸುರಿಸುತ್ತಿದೆ. ಅಂತಿಮ ದರ್ಶನ ಪಡೆಯಲು ಬಂದ ಅಭಿಮಾನಿಗಳು ಕರುಳು ಕಿತ್ತು ಬರುವಂತೆ ಅತ್ತಿರುವ ದೃಶ್ಯ ಕಣ್ಣಿಗೆ ಕಟ್ಟುವಂತಿದೆ. ಅಪ್ಪು ಅವರಂತೆ ಚಿರಂಜೀವಿ ಸರ್ಜಾ ಮತ್ತು ಸಂಚಾರಿ ವಿಜಯ್​ ಅವರು ಕೂಡ ಚಿಕ್ಕ ವಯಸ್ಸಿನಲ್ಲೆ ಆಕಸ್ಮಿಕವಾಗಿ ನಿಧನರಾಗಿದ್ದಾರೆ. ವಿಜಯ್, ಪುನೀತ್ ಹಾಗೂ ಚಿರು ಅವರ ಹುಟ್ಟಿದ ದಿನಾಂಕದಲ್ಲಿ ಸಾಮ್ಯತೆ ಇದೆ ಅದೇನೆಂದು ಈ ಲೇಖನದ ಮೂಲಕ ತಿಳಿಯೋಣ.

ಪುನೀತ್​ ರಾಜ್​ಕುಮಾರ್​ ಅವರು ಹೃದಯಾಘಾತದಿಂದ 4 ದಿನಗಳ ಹಿಂದೆ ಮರಣ ಹೊಂದಿರುವುದು ವಿಷಾದನೀಯ ಸಂಗತಿಯಾಗಿದೆ. ಪುನೀತ್ ಅವರಂತೆ ಕೆಲವು ದಿನಗಳ ಹಿಂದೆ ಸಂಚಾರಿ ವಿಜಯ್ ಹಾಗೂ ಚಿರು ಅವರು ಸಣ್ಣ ವಯಸ್ಸಿನಲ್ಲಿ ಅಕಾಲಿಕವಾಗಿ ಮರಣಹೊಂದಿದ್ದಾರೆ. ಪುನೀತ್ ಅವರು ಜನಿಸಿದ್ದು ಮಾರ್ಚ್​ 17ರಂದು ಅವರ ರೀತಿಯೆ ಹೃದಯಾಘಾತದಲ್ಲಿ ನಿಧನರಾದ ಚಿರಂಜೀವಿ ಸರ್ಜಾ ಅವರು ಜನಿಸಿದ್ದು ಕೂಡ ಅಕ್ಟೋಬರ್​ 17ರಂದು ಅಷ್ಟೆ ಅಲ್ಲದೆ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಂಚಾರಿ ವಿಜಯ್​ ಅವರ ಜನ್ಮ ದಿನಾಂಕವು ಜುಲೈ 17 ಈ ಮಾಹಿತಿಯನ್ನು ನೋಡಿದಾಗ ಇವರೆಲ್ಲರಿಗೂ 17ಎಂಬ ಸಂಖ್ಯೆಯೆ ಕಂಟಕವಾಯಿತೇ? ಎಂದು ಸೋಶಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ಕನ್ನಡದ ಖ್ಯಾತ ನಟ ರಘುವೀರ್​ ಜನಿಸಿದ್ದು ಕೂಡ ಮೇ 17ರಂದು. ಅವರು ಸಹ ಹೃದಯಾಘಾತದಿಂದಲೆ ಮೃತಪಟ್ಟಿದ್ದು ಎಂಬುದನ್ನು ಗಮನಿಸಬೇಕು. ಕನ್ನಡ ಚಿತ್ರರಂಗದಲ್ಲಿ ಇವರು ತಮ್ಮ ಪ್ರತಿಭೆಯಿಂದಲೆ ಗುರುತಿಸಿಕೊಂಡು ಸಾಧನೆ ಮಾಡಿದ್ದಾರೆ. ಯಾವ ಪಾತ್ರ ಕೊಟ್ಟರೂ ನಿಭಾಯಿಸಬಲ್ಲ ಸಾಮರ್ಥ್ಯ ಹೊಂದಿದ್ದರು.

ತಮ್ಮ ಅಭಿನಯದಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದರು. ಇವರು ಈ ರೀತಿ ಅಕಾಲಿಕ ಮರಣಕ್ಕೆ ಒಳಗಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ ಅದರಲ್ಲೂ ಫಿಟ್ನೆಸ್​ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಪುನೀತ್​ ರಾಜ್​ಕುಮಾರ್​ ಅವರು ಹೃದಯಾಘಾತದಲ್ಲಿ ನಿಧನರಾದರು ಎಂಬ ಸತ್ಯವನ್ನು ಯಾರಿಂದಲೂ ನಂಬಲಾಗುತ್ತಿಲ್ಲ.

ಫಿಟ್ನೆಸ್​ ವಿಚಾರದಲ್ಲಿ ಅವರು ಯುವಕರಿಗೆ ಮಾದರಿ ಆಗಿದ್ದರು ಜೊತೆಗೆ ತಮ್ಮ ಜಿಮ್​ ವರ್ಕೌಟ್​ ವಿಡಿಯೋಗಳನ್ನು ಆಗಾಗ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು. ಪುನೀತ್​ ನಿಧನಕ್ಕೆ ಕೋಟ್ಯಂತರ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಅಕ್ಕ-ಪಕ್ಕದ ರಾಜ್ಯಗಳ ಸೆಲೆಬ್ರಿಟಿಗಳು ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ.

ನಟ, ನಿರ್ದೇಶಕ ಪ್ರಭುದೇವ, ಟಾಲಿವುಡ್​ನ ಸ್ಟಾರ್​ ನಟ ನಂದಮೂರಿ ಬಾಲಕೃಷ್ಣ, ಬಹುಭಾಷಾ ನಟ ಶರತ್​ ಕುಮಾರ್​ ಸೇರಿದಂತೆ ಅನೇಕರು ಪುನೀತ್​ಗೆ ಅಂತಿಮ ನಮನ ಸಲ್ಲಿಸಿದ್ದಾರೆ. ರವಿವಾರ ಬೆಳಗ್ಗೆ ಕಂಠೀರವ ಸ್ಡುಡಿಯೋ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಿದೆ ಸೋಶಿಯಲ್​ ಮೀಡಿಯಾ ಮೂಲಕ ಇಡಿ ಭಾರತೀಯ ಚಿತ್ರರಂಗವೆ ಅಪ್ಪುಗೆ ಶ್ರದ್ಧಾಂಜಲಿ ಅರ್ಪಿಸಿದೆ. ಸುಮಾರು 25 ಲಕ್ಷಕ್ಕೂ ಅಧಿಕ ಜನರು ಪುನೀತ್ ಅವರಿಗೆ ಅಂತಿಮ ನಮನ ಸಲ್ಲಿಸಿದರು ಇದು ದಾಖಲೆಯನ್ನೆ ಸೃಷ್ಟಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಶಿಸೋಣ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.