1987ರಿಂದಲೂ ಡಾ| ರಾಜ್‌ ಕುಟುಂಬದ ವೈದ್ಯನಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಡಾಕ್ಟರ್ ರಮಣ ರಾವ್ ಅವರು ಪುನೀತ್ ರಾಜಕುಮಾರ್ ಅವರ ದಿಡೀರ್ ಸಾವಿನ ಬಗ್ಗೆ ಕೆಲವು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ವೈದ್ಯರು ಹೇಳಿರುವ ಮಾತುಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಡಾಕ್ಟರ್ ರಮಣ ರಾವ್ ಅವರು ಡಾ/ರಾಜ್‌ಕುಮಾರ್‌ ಅವರು ತಮ್ಮ ಕ್ಲಿನಿಕ್ ಗೆ ಚಿಕಿತ್ಸೆಗೆ ಬರುತ್ತಿದ್ದರು. ಅಪ್ಪು ಅವರು 8 ವರ್ಷ ಇದ್ದಾಗಿನಿಂದ ಚಿಕಿತ್ಸೆಗೆ ಬರುತ್ತಿದ್ದರು. ಡಾ| ರಾಜ್‌ಕುಮಾರ್‌ ಆರೋಗ್ಯದ ವಿಷಯವಾಗಿ ಎಲ್ಲರಿಗೂ ಮಾದರಿಯಾಗಿದ್ದರು ಎಂದು ಭಾವುಕರಾದರು. ಪುನೀತ್‌ ರಾಜಕುಮಾರ್‌ ಅವರು ಆರೋಗ್ಯವಾಗಿದ್ದರು ಅಲ್ಲದೆ ಅವರು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದರು. ಅವರಿಗೆ ಹೃದಯಾಘಾತವಾಗಿಲ್ಲ ಹೃದಯವೆ ನಿಂತು ಹೋಗಿದೆ ಅಂದರೆ ಹೃದಯ ತನ್ನ ಕೆಲಸವನ್ನು ನಿಲ್ಲಿಸಿತು ಎಂದು ಡಾ|ರಾಜ್‌ಕುಮಾರ್‌ ಅವರ ಕುಟುಂಬ ವೈದ್ಯ ಡಾ|ರಮಣರಾವ್‌ ಅವರು ಭಾವುಕರಾಗಿ ಹೇಳಿಕೊಂಡಿದ್ದಾರೆ.

ಶುಕ್ರವಾರ ಬೆಳಗ್ಗೆ 11.20ರ ಸುಮಾರಿಗೆ ನಮ್ಮ ಚಿಕಿತ್ಸಾಲಯಕ್ಕೆ ಪುನೀತ್‌ ರಾಜಕುಮಾರ್ ಹಾಗೂ ಅಶ್ವಿ‌ನಿ ಬಂದಿದ್ದರು. ನಾನು ಅವರನ್ನು ತಕ್ಷಣ ಒಳಗೆ ಕರೆದು ಏನಾಯಿತು ಅಪ್ಪು ಎಂದು ವಿಚಾರಿಸಿದೆ. ಆಗ ಅಪ್ಪು ಅವರು ದೇಹಕ್ಕೆ ಸ್ವಲ್ಪ ಸುಸ್ತು ಹಾಗೂ ಆಯಾಸವಾದಂತಿದೆ ಎಂದರು. ಏಕೆ ಇಷ್ಟೊಂದು ಬೆವರುತ್ತಿದ್ದೀರಿ ಎಂದು ಕೇಳಿದಾಗ ಜಿಮ್‌, ಬಾಕ್ಸಿಂಗ್‌ ಹಾಗೂ ನಿತ್ಯದ ವ್ಯಾಯಾಮವನ್ನು ಮುಗಿಸಿ ನೇರವಾಗಿ ಇಲ್ಲಿಗೆ ಬಂದಿದ್ದೇನೆ, ವ್ಯಾಯಾಮ ಮಾಡಿದ ನಂತರ ಬೆವರುವುದು ಸಹಜ ಎಂದು ಹೇಳಿದರು.

ನಂತರ ಅವರ ಆರೋಗ್ಯ ತಪಾಸಣೆ ಮಾಡಿದಾಗ ರಕ್ತದೊತ್ತಡ, ಹೃದಯದ ಬಡಿತ ಇತ್ಯಾದಿ ನಾರ್ಮಲ್‌ ಇತ್ತು. ತಕ್ಷಣವೆ ಇ.ಸಿ.ಜಿ.ಯನ್ನು ಮಾಡಲಾಯಿತು. ಆಗ ಹೃದಯ ಬಡಿತ ಸರಿಯಿದ್ದರೂ ಸ್ಟ್ರೈನ್‌ ಕಾಣಿಸಿಕೊಂಡಿತು. ತಕ್ಷಣ ಮುಂದಿನ ಚಿಕಿತ್ಸೆಗೆ ವಿಕ್ರಂ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು ಎಂದು ಡಾ|ರಮಣರಾವ್‌ ಮಾಹಿತಿ ನೀಡಿದ್ದಾರೆ.

ನಂತರ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಯಿತು ಆದರೆ ದುರಾದೃಷ್ಟವಶಾತ್ ಪುನೀತ್ ರಾಜಕುಮಾರ್ ಅವರು ಉಳಿಯಲಿಲ್ಲ. ಅಪ್ಪು ಈಗ ನಮ್ಮೊಂದಿಗೆ ಇಲ್ಲ ಆದರೆ ಅಪ್ಪು ಅವರ ನೆನಪು ಶಾಶ್ವತವಾಗಿ ನಮ್ಮೆಲ್ಲರೊಂದಿಗೂ ಇರುತ್ತದೆ. ಅಪ್ಪುಗೆ ಹೃದಯಾಘಾತವಾಗಿದ್ದಲ್ಲ ಬದಲಾಗಿ ಹೃದಯವೆ ನಿಂತು ಹೋಗಿದೆ. ಇದಕ್ಕೆ ವೈದ್ಯ ಭಾಷೆಯಲ್ಲಿ ಸಡನ್‌ ಡೆತ್ ದಿಢೀರ್ ಸಾವು ಅಥವಾ ಕಾರ್ಡಿಯಕ್‌ ಅರೆಸ್ಟ್‌ ಎನ್ನುತ್ತಾರೆ.

ದಿಢೀರ್‌ ಸಾವಿಗೆ ಹಲವು ಕಾರಣಗಳು ಇರುತ್ತದೆ. ಅಪ್ಪು ಅವರು ಯಾವ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಏಕೆಂದರೆ ಸಡನ್‌ ಡೆತ್‌ಗೆ ಮುನ್ಸೂಚನೆ ಇರುವುದಿಲ್ಲ. ಈ ಸಂದರ್ಭದಲ್ಲಿ ದಿಢೀರ್‌ಆಗಿ ವಿವಿಧ ಚಟುವಟಿಕೆ ಅದರಲ್ಲೂ ದೇಹಕ್ಕೆ ಆಯಾಸವಾಗುವಂತಹ ಚಟುವಟಿಕೆಗಳನ್ನು ಮಾಡಿದರೆ ಹೃದಯದಲ್ಲಿರುವ ಕರನರಿ ಆಟ್ರಿಸ್‌ ಒಳಗೆ ಮೈನರ್‌ ಟೇರ್‌, ರಫ‌ರ್‌ ಆಗುತ್ತದೆ. ಅದರ ಮೇಲೆ ಹೊಸದಾಗಿ ಕ್ಲಾಟ್‌ ಅಂದರೆ ಹೆಪ್ಪುಗಟ್ಟುವುದು ಆಗುತ್ತದೆ.

ನಂತರ ಒಂದು ಅಥವಾ ಎರಡು ಗಂಟೆಯಲ್ಲಿ ಕ್ಲಾಟ್‌ ದೊಡ್ಡದಾಗಿ ಬ್ಲಾಕ್‌ ಮಾಡುತ್ತದೆ ಇದರಿಂದ ಸಮಸ್ಯೆ ಹೆಚ್ಚಿಸುತ್ತದೆ ಆದರೆ ಪುನೀತ್‌ಗೆ ಈ ರೀತಿ ಆಗಲು ಸಾಧ್ಯವಿಲ್ಲ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ ಕಾರಣ ಪುನೀತ್ ನಿತ್ಯವೂ ವ್ಯಾಯಾಮ ಮಾಡುತ್ತಿದ್ದರು ಹಾಗೂ ಎಷ್ಟು ಸಮಯ ಯಾವ ವ್ಯಾಯಾಮ ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅವರು ತಿಳಿದಿದ್ದರು ಅಲ್ಲದೆ ಅದನ್ನು ನಿತ್ಯ ಅನುಸರಿಸುತ್ತಿದ್ದರು. ಅವರ ಆರೋಗ್ಯದಲ್ಲಿ ಯಾವುದೆ ಸಮಸ್ಯೆ ಇರಲಿಲ್ಲ ಆದ್ದರಿಂದ ಕಾರಣವನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಅಪ್ಪುಗೆ ಯಾವುದೆ ರೀತಿಯ ಆರೋಗ್ಯ ಸಮಸ್ಯೆ ಇರಲಿಲ್ಲ. ಆಗಾಗ ಅವರು ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳುತ್ತಿದ್ದರು. ಜ್ವರ, ಶೀತ ಬಂದಾಗ ಕ್ಲಿನಿಕ್‌ಗೆ ಬರುತ್ತಿದ್ದರು. ಅದನ್ನು ಬಿಟ್ಟರೆ ಹೆಚ್ಚಿನ ಪ್ರವಾಸ ಮಾಡಿದಾಗ ಕ್ಲಿನಿಕ್‌ಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದರು. ಇದನ್ನು ಹೊರತುಪಡಿಸಿ ಅವರಿಗೆ ಬೇರೆ ಯಾವುದೆ ಸಮಸ್ಯೆ ಇರಲಿಲ್ಲ. ಇಡಿ ಕುಟುಂಬದಲ್ಲಿ ಹೆಚ್ಚು ಆರೋಗ್ಯವಾಗಿದ್ದ ವ್ಯಕ್ತಿಯಾಗಿದ್ದ ಅಪ್ಪು ಅವರಿಗೆ ಹೀಗೆ ಆಗಿದೆ ಎಂದರೆ ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ ಎಂದು ತಮ್ಮ ನೋವನ್ನು ಹಂಚಿಕೊಂಡರು.

ಅಪ್ಪು ಆರೋಗ್ಯವಾಗಿರುವುದಲ್ಲದೆ ಅವನ ಚಿಂತನೆ, ಯೋಚನೆಗಳು ಸಂಪೂರ್ಣ ಸಕಾರಾತ್ಮಕವಾಗಿದ್ದವು. ನಕಾರಾತ್ಮಕ ಭಾವನೆ, ಯೋಚನೆಗಳು ಅವರ ಹತ್ತಿರ ಸುಳಿಯುತ್ತಿರಲಿಲ್ಲ. ಡಾ|ರಾಜ್‌ ಅವರ ಪ್ರತಿ ಗುಣವೂ ಪುನೀತ್ ಅವರಲ್ಲಿತ್ತು ಮತ್ತು ಅಪ್ಪುವನ್ನು ನೋಡಿದಾಗಲೆಲ್ಲ ಅಣ್ಣಾವ್ರ ನೆನಪಾಗುತ್ತಿತ್ತು. ಪುನೀತ್ ಅವರ ಸಿನಿಮಾವನ್ನು ನೋಡಿದರೆ ಅಣ್ಣಾವ್ರ ಸಿನಿಮಾ ನೋಡಿದಂತೆ ಆಗುತ್ತಿತ್ತು. ಅವನಲ್ಲಿರುವ ವಿನಯತೆ ಎಲ್ಲರಿಗೂ ಸ್ಫೂರ್ತಿ, ಪ್ರೇರಣೆಯಾಗಿತ್ತು ಎಂದು ವೈದ್ಯರು ಹೇಳಿದರು. ಪುನೀತ್ ರಾಜಕುಮಾರ್ ಅವರ ಸಾವು ಎಲ್ಲರನ್ನು ದುಃಖಕ್ಕೆ ಕಾರಣವಾಗಿದೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *