ಕಾಡಿನಿಂದ ನಾಡಿಗೆ ಬಂದು 60 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಈ ಪ್ರಶಾಂತ್ ಸಿದ್ದಿ ಬಗ್ಗೆ ನಿಮಗೆ ಗೊತ್ತೇ? ಓದಿ ಇಂಟ್ರೆಸ್ಟಿಂಗ್ ಸ್ಟೋರಿ

0 0

ಕಲೆ ಯಾರ ಸ್ವತ್ತು ಅಲ್ಲ, ಅದು ಯಾರಿಗೆ ಬೇಕಾದರೂ ಒಲಿಯುತ್ತದೆ, ಅದಕ್ಕೆ ಯಾವುದೇ ರೂಪ, ಜಾತಿ, ಬಡತನ, ಸಿರಿತನ ಎಂಬ ಭೇದವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿರುವ ಪ್ರಶಾಂತ್ ಸಿದ್ದಿ ಅವರು ಕಾಡಿನ ಜನಾಂಗದಲ್ಲಿ ಹುಟ್ಟಿ ಕನ್ನಡ ಚಿತ್ರರಂಗದ ಹಲವು ಸಿನಿಮಾಗಳಲ್ಲಿ ಕಾಮಿಡಿಯನ್ ಆಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅವರ ಮನೆ ಹಾಗೂ ಅವರ ಸಿನಿ ಪ್ರಯಾಣದ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಕಡು ಬಡತನದಲ್ಲಿ ಹುಟ್ಟಿ ಕನ್ನಡ ಚಿತ್ರರಂಗದ ಸುಮಾರು 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಮಿಡಿಯನ್ ಆಗಿ ನಟಿಸಿರುವ ಪ್ರಶಾಂತ್ ಸಿದ್ದಿ ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆದಹಕ್ಲ ಎಂಬ ಪುಟ್ಟ ಗ್ರಾಮದವರು. ಅವರ ಮನೆಯಲ್ಲಿ ತಾಯಿ ಇಬ್ಬರು ಅಕ್ಕಂದಿರು ಇದ್ದಾರೆ. ಅವರ ತಾಯಿ ಬಹಳ ಕಷ್ಟಪಟ್ಟು ಇವರನ್ನು ಬೆಳೆಸಿ, ಓದಿಸಿದ್ದಾರೆ. ಅವರು ಕಾಲೇಜಿಗೆ ಹೋಗುವಾಗ ಅವರಿಗೆ ನಟನೆಯಲ್ಲಿ ಆಸಕ್ತಿ ಇತ್ತು ಅವರ ಸಿಸ್ಟರ್ ಒಬ್ಬರು ನೀನಾಸಂ ಮುಗಿಸಿದ್ದರು ಅವರ ಸಲಹೆಯಂತೆ ನೀನಾಸಂ ಪರೀಕ್ಷೆ ಹಾಗೂ ಪೊಲೀಸ್ ಪರೀಕ್ಷೆಯನ್ನು ಬರೆದಿದ್ದರು ಎರಡರಲ್ಲೂ ಆಯ್ಕೆಯಾಗುತ್ತಾರೆ, ನಿನಾಸಂಗೆ ಹೋಗುತ್ತಾರೆ. ಪ್ರಶಾಂತ್ ಅವರ ತಾಯಿ ಒಮ್ಮೆ ಶಿಬಿರಕ್ಕೆ ಹೋದಾಗ ಅಲ್ಲಿ ನಟಿಸಲು ದೂರದ ಊರುಗಳಿಂದ ಬಂದಿದ್ದರು ಅವರನ್ನು ನೋಡಿ ನನ್ನ ಮಗನು ಹೀಗೆ ಆಗಬೇಕು, ಈ ಊರಿನಲ್ಲಿ ಸಣ್ಣ ಕೆಲಸ ಮಾಡಬಾರದು ಹೊರಗಡೆ ಇರಬೇಕು ಎಂದು ಆಸೆ ಪಡುತ್ತಾರೆ. ಪ್ರಶಾಂತ್ ಅವರು ಶಾಲೆಗೆ ಹೋಗುತ್ತಿರುವಾಗಿನಿಂದಲೂ ಅವರನ್ನು ನೋಡುವ ರೀತಿ ಬೇರೆಯಾಗಿತ್ತು ಅವರ ತಲೆ ಕೂದಲನ್ನು ಮುಟ್ಟುವುದು, ನೀನು ನಿಗ್ರೋ ಇದ್ದ ಹಾಗಿದಿಯಾ, ಕಪ್ಪಗಿದ್ದೀಯಾ ಎಂದೆಲ್ಲಾ ಹೇಳುತ್ತಿದ್ದರು ಆಗ ಬೇಸರದಿಂದ ಅವರ ತಾಯಿಯ ಬಳಿ ಬಂದು ಶಾಲೆಯಲ್ಲಿ ನನ್ನ ಎಲ್ಲರೂ ವಿಚಿತ್ರವಾಗಿ ನೋಡುತ್ತಾರೆ ಯಾಕೆ ಹೀಗೆ ಎಂದು ಕೇಳಿದಾಗ ಅವರ ತಾಯಿ ದೇವರ ಮಕ್ಕಳು ಹೀಗೆ ಇರುತ್ತಾರೆ, ನೀನು ದೇವರ ಮಗು ತಲೆಕೆಡಿಸಿಕೊಳ್ಳಬೇಡ ಎನ್ನುತ್ತಾರೆ. ಸಿದ್ದಿ ಜನಾಂಗವನ್ನು ಕೀಳುಜಾತಿ ಎನ್ನುವ ರೀತಿ ಎಲ್ಲರೂ ನೋಡುತ್ತಿದ್ದರು ಇದರಿಂದ ಪ್ರಶಾಂತ್ ಅವರಿಗೆ ಬಹಳ ಬೇಸರವಾಗಿ ಈ ಜೀವನ ಬೇಡ ಎಂದು ಅಂದುಕೊಂಡಿದ್ದರು. ಸಿದ್ದಿ ಜನಾಂಗದವರಲ್ಲಿ ಕೆಂದಿರುವೆ ಚಟ್ನಿಯನ್ನು ತಿಂದರೆ ಮಕ್ಕಳು ಶಾರ್ಪ್ ಆಗುತ್ತಾರೆ, ಕಣ್ಣು ಶಾರ್ಪ್ ಆಗುತ್ತದೆ ಎಂಬ ನಂಬಿಕೆ ಇದೆ. ಬಹಳಷ್ಟು ಜನರಿಗೆ ಸಿದ್ದಿ ಜನಾಂಗವೆನ್ನುವುದು ಕರ್ನಾಟಕದಲ್ಲಿ ಇದೆ ಎಂಬುದಾಗಲಿ, ಅವರು ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುತ್ತಾರೆ ಎಂಬುದಾಗಲಿ ಗೊತ್ತಿಲ್ಲ. ನೀನಾಸಂನಲ್ಲಿ ಎರಡು ವರ್ಷ ತರಬೇತಿ ಪಡೆಯುತ್ತಾರೆ. ಒಂದು ನಾಟಕದಲ್ಲಿ ಅಭಿನಯಿಸುತ್ತಾರೆ ಆ ನಾಟಕವನ್ನು ಜಯಂತ್ ಕಾಯ್ಕಿಣಿ ಅವರು ನೋಡಿ ಪ್ರಶಾಂತ್ ಅವರಿಗೆ ಚೆನ್ನಾಗಿ ಮಾಡಿದ್ದೀರಾ, ನೀವು ಸಿನಿಮಾ ಇಂಡಸ್ಟ್ರಿಗೆ ಬನ್ನಿ ಎಂದು ಅವರ ನಂಬರ್ ಕೊಟ್ಟಿದ್ದರು.

ನಂತರ ಪ್ರಶಾಂತ್ ಬೆಂಗಳೂರಿಗೆ ಹೋಗುತ್ತಾರೆ, ಪ್ರಾರಂಭದಲ್ಲಿ ಅವರಿಗೆ ಬಹಳ ಹಿಂಸೆ ಆಗುತ್ತದೆ. ಅವಕಾಶಗಳು ಸಿಗುವುದಿಲ್ಲ, ಸೀರಿಯಲ್ ಗಳಲ್ಲಿ ಅವಕಾಶ ಸಿಗದೇ ನೀವು ಸಿನಿಮಾಕ್ಕೆ ಹೋಗಿ ಎಂದು ಹೇಳುತ್ತಿದ್ದರು. ಜಯಂತ್ ಕಾಯ್ಕಿಣಿ ಅವರ ಮೂಲಕ ಪುನೀತ್ ರಾಜಕುಮಾರ್ ಅವರ ಪರಮಾತ್ಮ ಸಿನಿಮಾದಲ್ಲಿ ನಟಿಸಲು ಮೊದಲ ಬಾರಿಗೆ ಅವಕಾಶ ಸಿಕ್ಕಿತು. ಅಣ್ಣಾಬಾಂಡ್, ಗಜಕೇಸರಿ, ಲೂಸಿಯಾ, ಲೈಫು ಇಷ್ಟೇನೆ ಮುಂತಾದ ಸಿನಿಮಾಗಳಲ್ಲಿ ಪ್ರಶಾಂತ್ ಅವರು ನಟಿಸಿದ್ದಾರೆ. ಕಾಗೆಬಂಗಾರ ಎಂಬ ಸಿನಿಮಾದಲ್ಲಿ ಪ್ರಶಾಂತ್ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಶಾಂತ್ ಅವರು ಸೂರಿ ಸರ್ ಜೊತೆ ಕೆಲಸ ಮಾಡುತ್ತಿರುವುದು ನನಗೆ ಬಹಳ ಖುಷಿ ಕೊಟ್ಟಿದೆ ಎಂದು ಹೇಳಿಕೊಂಡರು. ಪ್ರಶಾಂತ್ ಅವರು ಕೇವಲ ಕನ್ನಡ ಚಿತ್ರರಂಗದಲ್ಲಿ ನಟಿಸುವುದಲ್ಲದೆ, ತೆಲುಗು ಚಿತ್ರದಲ್ಲಿ ಕೂಡ ನಟಿಸಿದ್ದಾರೆ ಕನ್ನಡ ಚಿತ್ರರಂಗದ ಡೈರೆಕ್ಟರ್ ಒಬ್ಬರ ಸಹಾಯದಿಂದ ತೆಲುಗು ಚಿತ್ರರಂಗದಲ್ಲಿ ಅವಕಾಶ ಸಿಕ್ಕಿತು. ಮೊದಲು ಪ್ರಶಾಂತ್ ಅವರು ಅವರ ರೂಪ, ಬಣ್ಣ ನೋಡಿ ಬೇಸರ ಪಟ್ಟುಕೊಳ್ಳುತ್ತಿದ್ದರು ಈಗ ಅದರಿಂದಲೇ ಅವರು ಕಾಮಿಡಿಯನ್ ಆಗಿ ನಟಿಸುವಂತಾಯಿತು. ಬಡತನವಿದ್ದರೂ ಅವರ ತಾಯಿ ಮನೆಗೆ ಯಾರೇ ಬಂದರೂ ಊಟ ಹಾಕದ ಕಳುಹಿಸುತ್ತಿರಲಿಲ್ಲ ಆದ್ದರಿಂದ ಅವರ ಮನೆಗೆ ಅನ್ನಪೂರ್ಣೇಶ್ವರಿ ಎಂದು ಹೆಸರಿಟ್ಟಿದ್ದಾರೆ. ಅವರನ್ನು ಮಾತನಾಡಿಸಲು ಹಿಂದೆ ಮುಂದೆ ನೋಡುವವರು ಇಂದು ಪ್ರಶಾಂತ್ ಅವರನ್ನು ನೋಡಲು ಬರುತ್ತಿದ್ದಾರೆ.

ಬೆಂಗಳೂರಿನಲ್ಲಿ ನಿರ್ಮಲಾ ನಾದನ್ ಅವರೊಂದಿಗೆ ರಂಗ ಪ್ರಹರಿ ಎಂಬ ತಂಡ ಕಟ್ಟಿದರು. ರಂಗಭೂಮಿಯಲ್ಲಿ ಹಲವು ಚಟುವಟಿಕೆಗಳಲ್ಲಿ ಪ್ರಶಾಂತ್ ಅವರು ತೊಡಗಿಸಿಕೊಂಡಿದ್ದಾರೆ. ಅವರು ಸಿನಿಮಾ, ನಾಟಕ, ವಿಚಾರ ಸಂಕಿರಣ, ಶಿಬಿರಗಳಲ್ಲಿ ಕೆಲಸ ಮಾಡುತ್ತಾರೆ. ಇದೀಗ ತೆಲುಗು, ಕನ್ನಡ ಸೇರಿದಂತೆ 6 ಸಿನಿಮಾಗಳಲ್ಲಿ ನಟಿಸಿದ್ದಾರೆ ಆ ಸಿನಿಮಾಗಳು ಬಿಡುಗಡೆಯಾಗಬೇಕಿದೆ ಅವರಿಗೆ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡುವ ಆಸೆಯಿದೆ. ಪ್ರಶಾಂತ್ ಅವರು ಬಡತನದ ಕಷ್ಟ ನೋಡಿರುವುದರಿಂದ ಅಂತಹ ಮಕ್ಕಳಿಗೆ ಸಹಾಯ ಮಾಡುತ್ತಾರೆ. ಪ್ರಶಾಂತ್ ಅವರು ತಮ್ಮ ಜನಾಂಗದವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಕಾಡಿನ ಹುಡುಗ ಪ್ರಶಾಂತ್ ಅವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಪ್ರಶಾಂತ್ ಅವರು ತಮ್ಮ ಅಭಿಮಾನಿಗಳಿಗೆ ಹೀಗೆ ಇಷ್ಟಪಡುತ್ತಿರಿ, ನಿಮಗೆ ಬೇಕಾಗುವ ನಟನೆಯನ್ನು ನಾನು ಮಾಡುತ್ತೇನೆ, ನಿಮ್ಮ ಬೆಂಬಲದಿಂದ ನಾವು ಬೆಳೆಯಲು ಸಾಧ್ಯ, ಇದೆ ರೀತಿ ಬೆಳೆಸಿ ಹರಸಿ ಎಂದು ಕೇಳಿಕೊಂಡಿದ್ದಾರೆ. ಅವರಿಗೆ ಹೆಚ್ಚಿನ ಸಿನಿಮಾದಲ್ಲಿ ನಟಿಸಬೇಕು, ಅನಾಥಾಶ್ರಮ ಮತ್ತು ವೃದ್ದಾಶ್ರಮವನ್ನು ಕಟ್ಟಿ ಸಹಾಯ ಮಾಡಬೇಕು ಹಾಗೂ ನಟನಾ ಶಾಲೆಯನ್ನು ಪ್ರಾರಂಭಿಸಬೇಕು ಎಂಬ ಕನಸಿದೆ. ಕಲೆಗೆ ಯಾವುದೇ ಜಾತಿ, ರೂಪದ ಗಡಿ ಇರುವುದಿಲ್ಲ ಎನ್ನಲು ಪ್ರಶಾಂತ ಸಿದ್ದಿ ಅವರು ಉತ್ತಮ ಸಾಕ್ಷಿಯಾಗಿದ್ದಾರೆ, ಅವರು ಚಿತ್ರರಂಗದಲ್ಲಿ ಹೆಚ್ಚು ಜನಪ್ರಿಯರಾಗಲಿ ಎಂದು ಆಶಿಸೋಣ.

Leave A Reply

Your email address will not be published.