ನಮಗೆ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಇದೆ ಎಂದು ಹೇಳುತ್ತೇವೆ ಆದರೆ ಅದರಂತೆ ನಡೆಯುವುದಿಲ್ಲ. ಕನ್ನಡ ಚಿತ್ರರಂಗದಲ್ಲಿ ಕನ್ನಡಿಗರಿಗೆ ಹೆಚ್ಚಿನ ಅವಕಾಶಗಳನ್ನು ಕೊಡುವುದರಿಂದ ಬಹಳಷ್ಟು ಕನ್ನಡಿಗರು ಬೆಳೆಯುತ್ತಾರೆ. ಈ ಮಾತುಗಳನ್ನು ಕೋಬ್ರಾ ನಾಗರಾಜ್ ಅವರು ಸಿನಿಮಾ ನಟರಿಗೆ ಹೇಳಿದ್ದಾರೆ. ಅವರು ಏನೆಲ್ಲಾ ಹೇಳಿದ್ದಾರೆ ಹಾಗೂ ಯಾರಿಗೆ ಹೇಳಿದ್ದಾರೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಕೋಬ್ರಾ ನಾಗರಾಜ್ ಎಂಬುವವರು ದರ್ಶನ್, ಪುನೀತ್ ರಾಜಕುಮಾರ್, ಶಿವರಾಜ್ ಕುಮಾರ್ ಅವರಿಗೆ ವಾರ್ನಿಂಗ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಟಿವಿ ಚಾನೆಲ್ ಗಳ ಮುಂದೆ ತಮಿಳಿನಿಂದ ಬಂದವರ ಹತ್ತಿರ ತಮಿಳಿನಲ್ಲಿ ಮಾತನಾಡುತ್ತೇವೆ, ತೆಲುಗಿನವರು ಬಂದರೆ ತೆಲುಗಿನಲ್ಲಿ ಮಾತನಾಡುತ್ತೇವೆ, ಅವರಿಗೆ ಭಾಷಾಭಿಮಾನ ಹೆಚ್ಚಿದೆ ಎಂದು ಹೇಳಿದರು ಅದಕ್ಕೆ ಕೋಬ್ರಾ ನಾಗರಾಜ್ ಅವರು ಮಾತಿನಲ್ಲಿ ಹೇಳುವ ಬದಲು ಅದರಂತೆ ನಡೆದುಕೊಳ್ಳಬೇಕು ನಿಮ್ಮ ಸಿನಿಮಾಗಳಲ್ಲಿ ಅನ್ಯ ಭಾಷಿಕರಿಗೆ ಅವಕಾಶ ಕೊಡಬಾರದು. ದರ್ಶನ್ ಅವರು ನಟಿಸಿದ್ದಾರೆ ಎಂದು ಜನರು ಸಿನಿಮಾ ನೋಡಲು ಥಿಯೇಟರಿಗೆ ಬರುತ್ತಾರೆಯೇ ಹೊರತು ಆ ಸಿನಿಮಾದಲ್ಲಿ ತಮಿಳು ಅಥವಾ ತೆಲುಗು ಭಾಷೆಯ ವಿಲನ್ ಇದ್ದಾರೆ ಎಂದಲ್ಲ. ಕರ್ನಾಟಕದಲ್ಲಿ 6 ಕೋಟಿ ಜನರಿದ್ದಾರೆ ಅವರಲ್ಲಿ ವಿಲನ್ ಪಾತ್ರ ಮಾಡಲು ಒಬ್ಬರು ಸಿಕ್ಕೆ ಸಿಗುತ್ತಾರೆ. ಕರ್ನಾಟಕದಲ್ಲಿ ಎಂತೆಂಥ ಪ್ರತಿಭೆಗಳಿದ್ದಾರೆ ಅವರಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿ ಎಂದು ಹೇಳಿದರು.

ಡೈರೆಕ್ಟರ್ ಹತ್ತಿರ ನೀವೆ ಹೇಳಿ ನನ್ನ ಕಾಲ್ ಶೀಟ್ ಸಿಗಬೇಕೆಂದರೆ ಕನ್ನಡದವರೇ ವಿಲನ್ ಪಾತ್ರ ಮಾಡಲಿ ಎಂದು ಆಗ ಕನ್ನಡದವರು ಹೆಚ್ಚು ಬೆಳೆಯುತ್ತಾರೆ, ಹೊಸಬರಿಗೆ, ಪ್ರತಿಭಾವಂತರಿಗೆ ಅವಕಾಶ ಸಿಕ್ಕ ಹಾಗಾಗುತ್ತದೆ ಎಂದು ನಾಗರಾಜ್ ಅವರು ಸ್ವಲ್ಪ ಖಾರವಾಗಿ ಹೇಳಿದ್ದಾರೆ. ಅಲ್ಲದೆ ಅವರು ದರ್ಶನ್, ಪುನೀತ್ ರಾಜಕುಮಾರ್, ಶಿವಣ್ಣ ಅವರಿಗೆ ಅನ್ಯ ಭಾಷಿಕರಿಗೆ ಅವಕಾಶ ಕೊಡುತ್ತೀರಾ. ಕನ್ನಡದವರು ಅದೆಷ್ಟೋ ಜನ ಪ್ರತಿಭೆ ಇದ್ದು, ನಟಿಸಲು ಆಸಕ್ತಿ ಇದ್ದು ಅವಕಾಶ ಸಿಗದೇ ಮನೆಯಲ್ಲಿ ಕುಳಿತಿದ್ದಾರೆ. ಮೊದಲಿಗೆ ನೀವು ನಮ್ಮ ಕನ್ನಡಿಗರನ್ನು ಬೆಳೆಸುತ್ತಿಲ್ಲ, ಮೊದಲು ನೀವು ಸರಿಯಾಗಿ ನಡೆದುಕೊಳ್ಳಿ ನಂತರ ಅದರ ಬಗ್ಗೆ ಮಾತನಾಡುವಿರಂತೆ ಎಂದು ಕನ್ನಡ ಸಿನಿಮಾ ನಟರಿಗೆ ನಾಗರಾಜ್ ಅವರು ತಿಳಿಸಿದ್ದಾರೆ. ಅಲ್ಲದೆ ಅವರು ಡಾಕ್ಟರ್ ರಾಜಕುಮಾರ್ ಅವರು ಹೇಳುತ್ತಿದ್ದರು ಜನ ನನ್ನನ್ನು ನೋಡಿ ಥಿಯೇಟರ್ ಗೆ ಬರುತ್ತಾರೆ, ನಮ್ಮವರನ್ನು ಹಾಕಿ ಕನ್ನಡಿಗರಿಗೆ ಅವಕಾಶ ಕೊಡಿ ಆಗಲಿಂದ ಡಾಕ್ಟರ್ ರಾಜಕುಮಾರ್ ಅವರ ಸಿನಿಮಾದಲ್ಲಿ ಶಿವರಾಮ, ತೂಗುದೀಪ ಶ್ರೀನಿವಾಸ್, ಅಶ್ವತ್ಥ ಇವರಿಗೆಲ್ಲಾ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಅವಕಾಶ ದೊರೆಯಿತು. ಅದೇ ರೀತಿ ಪುನೀತ್ ರಾಜಕುಮಾರ್, ಶಿವರಾಜ್ ಕುಮಾರ್, ದರ್ಶನ್ ಅವರು ಮಾಡಲಿ. ದರ್ಶನ್ ಅವರಿಗೆ ಕನ್ನಡದ ಬಗ್ಗೆ ಹೆಚ್ಚು ಅಭಿಮಾನವಿದೆ ಅದರ ಬಗ್ಗೆ ನನಗೆ ಹೆಮ್ಮೆ ಅನಿಸುತ್ತದೆ ಎಂದು ನಾಗರಾಜ್ ಅವರು ಹೇಳಿಕೊಂಡರು.

ಯಾರೇ ಕನ್ನಡ ನಟರು ನಿಮ್ಮ ಸಿನಿಮಾಗಳಲ್ಲಿ ಅನ್ಯ ಭಾಷಿಕರನ್ನು ಬಿಟ್ಟು ಕನ್ನಡಿಗರಿಗೆ ಅವಕಾಶ ಕೊಡಿ ಅವರನ್ನು ಬೆಳೆಸಿ ಎಂದು ಹೇಳುವುದರೊಂದಿಗೆ ಅವರು ನನ್ನ ಮಾತಿನಲ್ಲಿ ತಪ್ಪಿದ್ದರೆ, ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ ಎಂದು ವಿಡಿಯೋ ಕೊನೆಯಲ್ಲಿ ಹೇಳಿದ್ದಾರೆ. ನಾಗರಾಜ್ ಅವರ ಕನ್ನಡಾಭಿಮಾನವನ್ನು ಮೆಚ್ಚಲೇ ಬೇಕು.

Leave a Reply

Your email address will not be published. Required fields are marked *