Ultimate magazine theme for WordPress.

ಇವರು FDA ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದು ಹೇಗೆ ಗೊತ್ತೇ?

0 0

ಜನವರಿ ಇಪ್ಪತ್ನಾಲ್ಕರಂದು ನಡೆಯಬೇಕಿದ್ದ ಕರ್ನಾಟಕ ಲೋಕಸೇವಾ ಆಯೋಗದ ಪ್ರಥಮ ದರ್ಜೆ ಸಹಾಯಕ ಪರೀಕ್ಷೆಗಳ ಸೋರಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ರಾಜ್ಯದಾದ್ಯಂತ ಜನವರಿ 24 ನಡೆಯಬೇಕಿದ್ದ ಎಫ್‌ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಸಂಗತಿಯನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದು, ಈ ಸಂಬಂಧ ಆರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಗಳ ಪೈಕಿ ರಾಚಪ್ಪ ಚಂದ್ರ ಎಂಬುವವರ ಮಾಹಿತಿ ಪತ್ತೆಯಾಗಿದ್ದು, ಉಳಿದ ನಾಲ್ವರ ಹೆಸರು ಇನ್ನೂ ತಿಳಿದುಬಂದಿಲ್ಲ. ಬಂಧಿತರಿಂದ ಪ್ರಶ್ನೆಪತ್ರಿಕೆಗಳನ್ನು ಮತ್ತು ಇಪ್ಪತ್ನಾಲ್ಕು ಲಕ್ಷ ರೂಪಾಯಿ ನಗದು ಹಣನ್ನು ಜಪ್ತಿ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ್ ಅವರು ಕರ್ನಾಟಕ ಲೋಕಸೇವಾ ಆಯೋಗದಿಂದ (ಕೆಪಿಎಸ್‌ಸಿ) ನಡೆಯಬೇಕಿದ್ದ ಎಫ್‌ಡಿಎ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ಬಗ್ಗೆ ಮಾಹಿತಿ ಬಂದಿತ್ತು. ವಿಶೇಷ ತಂಡವೊಂದನ್ನು ರಚಿಸಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಶ್ನೆಪತ್ರಿಕೆ ಹಂಚಲು ಬಳಕೆ ಮಾಡುತ್ತಿದ್ದ ಮೂರು ವಾಹನಗಳನ್ನೂ ಜಪ್ತಿ ಮಾಡಲಾಗಿದೆ. ಸೋರಿಕೆ ಸಂಗತಿಯನ್ನು ಕೆಪಿಎಸ್‌ಸಿ ಅಧಿಕಾರಿಗಳಿಗೂ ತಿಳಿಸಲಾಗಿದೆ. ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು. ಸೋರಿಕೆ ಎಲ್ಲಿಂದ ಆಯಿತು ಎಂಬುದು ಇನ್ನಷ್ಟೇ ತಿಳಿಯಬೇಕಿದೆ ಎಂದು ತಿಳಿಸಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಮಾಹಿತಿ ಪಡೆದ ಬೆನ್ನಲ್ಲೇ ಕೆಪಿಎಸ್ ಸಿ ಜನವರಿ ಇಪ್ಪತ್ನಾಲ್ಕಕ್ಕೆ ನಡೆಯಬೇಕಿದ್ದ ಎಫ್‌ಡಿಎ ಪರೀಕ್ಷೆಯನ್ನು ಮುಂದೂಡಿತ್ತು. ಈ ಬಗ್ಗೆ ಮಾಹಿತಿ ನೀಡಿದ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕಾರ್ಯದರ್ಶಿ ಜಿ ಸತ್ಯವತಿ ಅವರು 2019ನೇ ಸಾಲಿನ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಗಳ ನೇಮಕಾತಿಗಾಗಿ ಜನವರಿ ಇಪ್ಪತ್ನಾಲ್ಕು ಹಾಗೂ ಜನವರಿ ಇಪ್ಪತ್ತೈದರಂದು ಪರೀಕ್ಷೆ ನಡೆಯಬೇಕಿತ್ತು. ಆದರೆ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ದುಷ್ಕರ್ಮಿಗಳ ಕೈಗೆ ಸಿಕ್ಕಿರುವುದು ಮೂಲಗಳಿಂದ ಗೊತ್ತಾಗಿದೆ. ಈ ಕಾರಣಕ್ಕೆ ಪರೀಕ್ಷೆಯನ್ನು ಮುಂದೂಡಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕವನ್ನು ಮರು ನಿಗದಿಪಡಿಸಲಾಗುವುದು. ಆ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದೂ ಹೇಳಿದ್ದಾರೆ. ಬೆಂಗಳೂರಿನ ಕೆಲವು ಕಡೆ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಮಾಹಿತಿ ಸಿಸಿಬಿ ಮೂಲಕ ನಮಗೆ ಸಿಕ್ಕಿದೆ. ಭಾನುವಾರ ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಪರೀಕ್ಷೆ ನಡೆಯಬೇಕಿತ್ತು. ಆದರೆ ಬೆಳಿಗ್ಗೆ ನಡೆಯಬೇಕಿದ್ದ ಕನ್ನಡ ಪತ್ರಿಕೆ ಸೋರಿಕೆಯಾಗಿದೆ ಎಂದು ಗೊತ್ತಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸುವಂತೆ ನಾವು ಕೂಡಾ ದೂರು ಕೊಟ್ಟಿದ್ದೇವೆ ಎಂದು ಪರೀಕ್ಷಾ ನಿಯಂತ್ರಕರಾದ ದಿವ್ಯಾಪ್ರಭು ತಿಳಿಸಿದ್ದಾರೆ

ಇನ್ನು ಪ್ರಶ್ನೆ ಪತ್ರಿಕೆ ಲೀಕ್ ಮಾಡಿದವರು ಯಾರು? ಯಾಕಾಗಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದರು ಮತ್ತು ಹೇಗೆ ಎಂದೆಲ್ಲ ನೋಡುವುದಾದರೆ , ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬೂದಿಹಾಳ ಗ್ರಾಮದ ರಮೇಶ್ ಎಂಬ ವ್ಯಕ್ತಿ ಕೆಪಿಎಸ್ಸಿಯಲ್ಲಿ s.d.a. ಆಗಿ ಕೆಲಸ ಮಾಡುತ್ತಿದ್ದ. ಈತನ ಜೊತೆ ಕೆಪಿಎಸ್ಸಿ ಯಲ್ಲಿ ಕಂಟ್ರೋಲ್ ಆಫ್ ಎಕ್ಸಾಮ್ ಡಿವಿಷನ್ ನಲ್ಲಿ ಕೆಲಸಮಾಡುತ್ತಿದ್ದ ಸನಾ ಬೇಡಿ ಇವರಿಬ್ಬರೂ ಸೇರಿ ಸ್ನೇಹದ ನೆಪದಲ್ಲಿ ಎಫ್ಡಿಎ ಪ್ರಶ್ನೆಪತ್ರಿಕೆಯನ್ನು ಮಾಡಿದ್ದಾರೆ. ರಮೇಶ್ ಭಾವನಾತ್ಮಕವಾಗಿ ತನ್ನ ಕೆಲಸ ಸಾಧಿಸಿ ಕೊಂಡಿದ್ದಾನೆ. ಸನಾ ಕೆಪಿಎಸ್ಸಿಯಲ್ಲಿ ಕ್ವಶ್ಚನ್ ಪೇಪರ್ ಟೈಪ್ ಮಾಡುವ ಕಾರ್ಯನಿರ್ವಹಿಸುತ್ತಿದ್ದಳು. ರಮೇಶ್ ಆಕೆಯ ಬಳಿ ತಾನು ಒಂದು ಬಡ ಕುಟುಂಬದಿಂದ ಬಂದವನು ನಾನು ಸಹ ಎಫ್ ಡಿ ಎ ಪರೀಕ್ಷೆಗೆ ಕಟ್ಟಿದ್ದೇನೆ ಮತ್ತು ನಮ್ಮ ಮನೆಯಲ್ಲಿ ಇನ್ನೂ ಇಬ್ಬರು ಪರೀಕ್ಷೆಗೆ ಕಟ್ಟುವವರು ಇದ್ದಾರೆ. ನೀನು ಈಗ ಪ್ರಶ್ನೆಪತ್ರಿಕೆಯನ್ನು ನೀಡಿದರೆ ನಿನ್ನ ಸಹಾಯವನ್ನು ನಾನು ಎಂದಿಗೂ ಮರೆಯುವುದಿಲ್ಲ ನಿಮ್ಮಿಂದ ದೊಡ್ಡ ಉಪಕಾರವಾಗುತ್ತದೆ ಎಂದು ಸ್ನೇಹದ ನೆಪವೊಡ್ಡಿ ಭಾವನಾತ್ಮಕವಾಗಿ ಮಾತುಗಳನ್ನಾಡಿ ಪ್ರಶ್ನೆ ಪತ್ರಿಕೆ ಪಡೆದುಕೊಂಡಿದ್ದಾನೆ. ಸನಾ ಮೊದಲು ಪ್ರಶ್ನೆಪತ್ರಿಕೆ ಕಾಪಿ ನೀಡಲು ನಿರಾಕರಿಸಿದರೂ ನಂತರದಲ್ಲಿ ಪ್ರಶ್ನೆಪತ್ರಿಕೆಯನ್ನು ನೀಡಿದ್ದಾಳೆ.

ಸನಾಳ ಕಡೆಯಿಂದ ಪ್ರಶ್ನೆಪತ್ರಿಕೆಯನ್ನು ತೆಗೆದುಕೊಂಡು ಅದನ್ನು ಪ್ರಿಂಟ್ ತೆಗೆದು ಚಂದ್ರು ಎಂಬ ವ್ಯಕ್ತಿಗೆ ನೀಡಿದ್ದಾನೆ ರಮೇಶ್. ಚಂದ್ರು ಎಂಬ ವ್ಯಕ್ತಿ ಪ್ರಶ್ನೆಪತ್ರಿಕೆಯನ್ನು ಉತ್ತರದ ಸಮೇತ ಜೆರಾಕ್ಸ್ ತೆಗೆದು ಒಂದು ಪ್ರಶ್ನೆ ಪತ್ರಿಕೆಗೆ 10 ಲಕ್ಷ ರೂಪಾಯಿಯಂತೆ ಬೇರೆ ಬೇರೆ ಜಿಲ್ಲೆಗಳಿಗೆ ಪ್ರಶ್ನೆಪತ್ರಿಕೆಯನ್ನು ರವಾನಿಸಿದ್ದಾನೆ. ಹೀಗೆ ಹಲವಾರು ಜನರಿಗೆ ಪ್ರಶ್ನೆಪತ್ರಿಕೆಯನ್ನು ಒದಗಿಸಿದ್ದಾನೆ ಚಂದ್ರು. ಅಷ್ಟೇ ಅಲ್ಲದೆ ಚಂದ್ರು ತನ್ನ ಪರಿಚಯಸ್ಥರಿಗೆ ಮಾತ್ರ ಉತ್ತರಪತ್ರಿಕೆ ಸಮೇತ ಕಳುಹಿಸಿದ್ದಾನೆ. ಈಗ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದವರು ಸಿಸಿಬಿ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ. ಆದರೆ ಇವೆಲ್ಲದರ ಹಿಂದೆ ಇನ್ನು ಯಾವ ಯಾವ ವ್ಯಕ್ತಿಗಳ ಕೈವಾಡ ಇದೆ ಎನ್ನುವುದು ಮಾತ್ರ ತಿಳಿದುಬಂದಿಲ್ಲ. ಸಣ್ಣದೊಂದು ಸಂಶಯದ ಎಳೆಯನ್ನು ಹಿಡಿದುಕೊಂಡು ಮಫ್ತಿಯಲ್ಲಿ ಹೋಗಿ ಸಿಸಿಬಿ ಪೊಲೀಸರು ಪ್ರಶ್ನೆಪತ್ರಿಕೆ ಸೋರಿಕೆ ಜಾಲವನ್ನು ಬಿಡಿಸಿರುವುದನ್ನು ಎಲ್ಲರೂ ಮೆಚ್ಚಲೇಬೇಕು. ಆದರೆ ಕೆಪಿಎಸ್ಸಿ ಮಾತ್ರ ಅಕ್ರಮದಲ್ಲಿ ಮುಳುಗಿ ಕೊಂಡಿರುವುದು ಮಾತ್ರ ವಿಪರ್ಯಾಸವೇ ಆಗಿದೆ.

Leave A Reply

Your email address will not be published.