ಪೋಡಿ ಅಂದ್ರೇನು, ನಿಮ್ಮ ಜಮೀನುಗಳ ಪೋಡಿ ಮಾಡಿಸೋದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

0 10

ಪ್ರತಿಯೊಬ್ಬರೂ ಅವರದೇ ಆದ ಜಮೀನುಗಳನ್ನು ಹೊಂದಿರುತ್ತಾರೆ. ಎಕರೆವಾರು ಜಮೀನುಗಳ ಮಾಹಿತಿಯನ್ನು ಹೊಂದಿರುತ್ತಾರೆ. ಆದರೆ ಅದರ ಸರಿಯಾದ ವಿಸ್ತೀರ್ಣದ ಬಗ್ಗೆ ಹೆಚ್ಚು ಜನರಿಗೆ ತಿಳಿದಿರುವುದಿಲ್ಲ. ಯಾವುದೇ ಸಮಸ್ಯೆಗಳು ಬಂದಲ್ಲಿ ಅದರ ಬಗ್ಗೆ ಯೋಚಿಸುತ್ತಾರೆ. ಸರ್ವೇಗಳನ್ನು ಮಾಡಿಸುತ್ತಾರೆ. ಪ್ರತಿಯೊಬ್ಬರೂ ಅವರ ಜಮೀನಿನ ಸುತ್ತಳತೆಯನ್ನು ತಿಳಿದುಕೊಳ್ಳುವುದು ಬಹುಮುಖ್ಯವಾಗಿದೆ. ಆದ್ದರಿಂದ ನಾವಿಲ್ಲಿ ಇದರ ಬಗ್ಗೆ ಎಂದರೆ ಪೋಡಿ ಮಾಡುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಪೋಡಿ ಮಾಡುವುದು ಎಂದರೆ ಒಂದುಸಮೀಕ್ಷೆಯ  ಸಂಖ್ಯೆಯನ್ನು ಕಾನೂನಿನ ಪ್ರಕಾರ ವಿಂಗಡಿಸುವ ಪ್ರಕ್ರಿಯೆ ಎಂದು ಹೇಳಬಹುದು. ಹೀಗೆ ಒಮ್ಮೆ ವಿಭಾಗಿಸಿದ ಭಾಗಗಳನ್ನು ತಾತ್ಕಾಲಿಕ ಪೋಡಿಸಂಖ್ಯೆ ಹಾಗೂ ಹಿಸಾಗಳನ್ನು ನೀಡಲಾಗುತ್ತದೆ. ಹಾಗೆಯೇ ರೆವೆನ್ಯೂ ರೆಕಾರ್ಡ್ಸ್ ಗಳನ್ನು ತಯಾರು ಮಾಡುವುದಾಗಿರುತ್ತದೆ. ಅದಕ್ಕೆ ಉದಾಹರಣೆಗೆ ಯಾವುದೇ ಒಂದು ಗ್ರಾಮದಲ್ಲಿ ಜಮೀನಿನ ಸಮೀಕ್ಷೆ ಸಂಖ್ಯೆ ನಾಲ್ಕು ಇರುತ್ತದೆ ಎಂದಾದಾಗ ಅದರಲ್ಲಿ ನಾಲ್ಕು ಜನ ಅನುಭವದಲ್ಲಿ ಇದ್ದಾರೆ ಎಂದಾದಾಗ ಆ ಹತ್ತು ಎಕರೆ ಜಮೀನನ್ನು ಗುರುತಿಸಿ ಅವರು ಹೇಗೆ ಅನುಭವ ಹೊಂದಿದ್ದಾರೆ ಮತ್ತು ಹೇಗೆ ವ್ಯವಸಾಯ ಮಾಡುತ್ತಾರೆ ಎಂದು ತಿಳಿದು ನಂತರ ಆ ಜಮೀನಿನ ಬೌಂಡರಿ ಫಿಕ್ಸ್ ಮಾಡಿ ಟಿಪ್ಪಣಿಗಳನ್ನು ತಯಾರಿಸಿಕೊಂಡು ರೆಕಾರ್ಡ್ಸ್ ತಯಾರಿ ಮಾಡುತ್ತಾರೆ.
ಈ ರೀತಿ ರೆವೆನ್ಯೂ ರೆಕಾರ್ಡ್ಸ್ ತಯಾರಿ ಮಾಡಿ ಜಮೀನನ್ನು ಹಂಚಿಕೆ ಮಾಡುತ್ತಾರೆ.

ಇದನ್ನು ಪೋಡಿ ಎಂದು ಕರೆಯಲಾಗುತ್ತದೆ. ಪೋಡಿಯಲ್ಲಿ ನಾಲ್ಕು ವಿಧಗಳಿವೆ. ಮೊದಲನೆಯದು ದ್ರಕಾಸ್ತ ಪೋಡಿ ಆಗಿದೆ. ಎರಡನೆಯದು ಅಲಿನೇಷನ್ ಪೋಡಿ ಆಗಿದೆ. ಮೂರನೆಯದು ಮ್ಯೂಟೇಶನ್ ಪೋಡಿ ಆಗಿದೆ. ನಾಲ್ಕನೆಯದು ತತ್ಕಾಲ್ ಪೋಡಿ ಆಗಿದೆ. ಜಮೀನನ್ನು ಹತ್ತು ವರ್ಷಗಳಿಂದ ಹೊಂದಿದ್ದು ಕೆಲಸದ ಅನುಭವ ಇದ್ದರೆ ಪೋಡಿ ಅರ್ಜಿಯನ್ನು ತಹಶೀಲ್ದಾರ್ ಕಚೇರಿಗೆ ಕೊಡಬೇಕು. ಈ ಅರ್ಜಿಯನ್ನು ತಾಲೂಕಾ ದಂಡಾಧಿಕಾರಿಗಳು ಕಛೇರಿಯಲ್ಲಿ ಜಮೀನಿನ ಬಗ್ಗೆ ಇದ್ದ ರೆಕಾರ್ಡ್ಸ್ ಗಳನ್ನು ತೆಗೆದು ನೋಡುತ್ತಾರೆ. ಇವೆಲ್ಲವನ್ನೂ ಪರಿಶೀಲಿಸಿ ಸ್ಥಳೀಯ ಕಂದಾಯಧಿಕಾರಿಗಳಾದವರು ಫಾರ್ಮ್ ಗಳನ್ನು ಅಂದರೆ ಒಂದರಿಂದ ಐದು ಫಾರ್ಮ್ ಗಳನ್ನು ಅಂದರೆ ಜಮೀನಿನ ವಿಸ್ತೀರ್ಣ, ಅನುಭೋಗದಾರರು ಯಾರು, ಮಂಜೂರಾತಿ ಮಾಹಿತಿ, ಯಾವ ತರಹದ ಮಂಜೂರಿ, ಜಮೀನಿನ ನಕ್ಷೆ ಈ ಎಲ್ಲವನ್ನೂ ತುಂಬಿ ಅಸಿಸ್ಟೆಂಟ್ ಕಮಿಷನರ್ ಗಳಿಗೆ ಕಳುಹಿಸುತ್ತಾರೆ.

ಇವರು ಈ ಎಲ್ಲಾ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡುತ್ತಾರೆ. ಅಸಿಸ್ಟೆಂಟ್ ಕಮಿಷನರ್ ನಂತರ ಅನುಮತಿ ನೀಡುತ್ತಾರೆ. ಈ ಅನುಮತಿ ಪಡೆದ ನಂತರ ತಹಶೀಲ್ದಾರರು 6 ರಿಂದ 7 ಪಾರ್ಮ್ ಗಳನ್ನು ತಯಾರಿಸಲು ಎಡಿಎಲಾರ್ ದೊಂದಿಗೆ ಸ್ಥಳ ಪರಿಶೀಲನೆ ಮಾಡುತ್ತಾರೆ. ಅವರಲ್ಲಿ ಅನುಭವ ಹೊಂದಿದ್ದವರು ಎಷ್ಟು ಯಾರು ಯಾರು ಇದ್ದಾರೆ ಎನ್ನುವುದರ ಬಗ್ಗೆ ಮಾಹಿತಿಯನ್ನು ಪಡೆಯುತ್ತಾರೆ. ಜಮೀನಿನ ವಿಸ್ತೀರ್ಣವನ್ನು ತೆಗೆದುಕೊಂಡು ಎಲ್ಲವನ್ನೂ ಲೆಕ್ಕ ಹಾಕಿ ನಕ್ಷೆಯನ್ನು ತಯಾರಿಸಿ ಡಿಡಿಎಲ್ಆರ್ ನಿಂದ ಅನುಮತಿ ಪಡೆದು ಹೊಸ ಸರ್ವೇ ನಂಬರ್ ನೀಡುತ್ತಾರೆ. ಈ ಸರ್ವೇ ನಂಬರ್ ನೀಡುವ ಮೂಲಕ ಪೋಡಿ ಪ್ರಕ್ರಿಯೆ ಮುಗಿಯುತ್ತದೆ. ಈ ಪೋಡಿಯು ಸುಮಾರು ಆರು ತಿಂಗಳಿನಿಂದ ಐದು ವರ್ಷಗಳವರೆಗೆ ನಡೆಯಬಹುದು. ಪ್ರಸ್ತುತ ಕರ್ನಾಟಕದಲ್ಲಿ ಯಾವುದೇ ಕೃಷಿ ಭೂಮಿಯನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಮೊದಲು ಪೋಡಿ ಮಾಡುವುದು ಕಡ್ಡಾಯವಾಗಿದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.