ಬೇಸಿಗೆ ಕಾಲ ಪ್ರಾರಂಭವಾಗಿದೆ ಎಂದರೆ ಆ ಋತುವಿನಲ್ಲಿ ಎಲ್ಲರಿಗೂ ಪ್ರಿಯವಾಗುವ ಹಣ್ಣು ಎಂದರೆ ಮಾವಿನ ಹಣ್ಣು.  ಪ್ರತಿಯೊಬ್ಬರೂ ಬೇಸಿಗೆಯಲ್ಲಿ ಮಾವಿನ ಹಣ್ಣಿನ ರೆಸಿಪಿಗಳನ್ನು ಇಷ್ಟಪಡುತ್ತಾರೆ. ಆದರೆ ಸಾಮಾನ್ಯವಾಗಿ ಮಾವಿನ ಹಣ್ಣನ್ನು ಬಳಸುವಾಗ ಅದರ ಸಿಪ್ಪೆಯನ್ನು ಬಿಸಾಡಲಾಗುತ್ತದೆ. ಸಿಪ್ಪೆಯಿಂದ ಸಹ ಅನೇಕ ತಿಂಡಿಗಳನ್ನು ಮಾಡುತ್ತಾರೆ. ಹಾಗೆಯೇ ಮಾವಿನ ಎಲೆಗಳು ಔಷಧೀಯ ಗುಣಗಳನ್ನು ಹೊಂದಿವೆ. ಹಬ್ಬ ಹರಿದಿನಗಳಲ್ಲಿ ಮನೆಯ ಬಾಗಿಲಿಗೆ ಮಾವಿನ ಎಲೆಯ ತೋರಣ ಮಾಡುತ್ತಾರೆ. ಆದರೆ ನಾವಿಲ್ಲಿ ಮಾವಿನ ಹಣ್ಣಿನಿಂದ ಗಳಿಸಿದ ಸಾಧನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಜಾರ್ಖಂಡ್ ನ ಜೇಮ್ ,ಷೆಡ್ಪುರದ ಒಂದು ಹುಡುಗಿಯ ಕುಟುಂಬದಲ್ಲಿ ಬಹಳ ಬಡತನವಿತ್ತು. ದಿನನಿತ್ಯದ ದುಡಿಮೆಯಲ್ಲಿ ಹೊಟ್ಟೆಗೆ ಮತ್ತು ಬಟ್ಟೆಗೆ ನಡೆಯುತ್ತಿತ್ತು. ಆದರೆ ಬಡತನದಲ್ಲಿ ತುಂಬಿದ್ದ ಹುಡುಗಿಗೆ ಶಿಕ್ಷಣ ಎಂದರೆ ಬಹಳ ಇಷ್ಟವಿತ್ತು. ಸರ್ಕಾರಿ ಶಾಲೆಗೆ ದಿನನಿತ್ಯ ಇವಳು ಹೋಗುತ್ತಿದ್ದಳು. ಹಾಗೆಯೇ ಓದಲು ಬಹಳ ಚತುರೆ ಇವಳು. ಆದರೆ ಕೊರೊನಾ ಬಂದ ಕಾರಣದಿಂದ ಲಾಕ್ ಡೌನ್ ಆಗಿ ಶಾಲೆಗಳು ಮುಚ್ಚಿದವು. ಹಾಗೆಯೇ ಕೊರೊನಾ ಬಂದ ಕಾರಣ ಎಲ್ಲಾ ಕ್ಷೇತ್ರಗಳು ಒಂದು ಬಾರಿ ಇಳಿಕೆಯನ್ನು ಕಂಡವು.

ಆದ್ದರಿಂದ ಶಾಲೆಗಳಲ್ಲಿ ತರಗತಿಗಳನ್ನು ನಡೆಸುವುದನ್ನು ನಿಲ್ಲಿಸಲಾಯಿತು. ಹೀಗಾಗಿ ಆನ್ಲೈನ್ ಕ್ಲಾಸ್ ಗಳನ್ನು ಶುರು ಮಾಡಿದರು. ಈ ಹುಡುಗಿಯ ಮನೆಯಲ್ಲಿ ಬಹಳ ಬಡತನ ಇರುವುದರಿಂದ ಮೊಬೈಲ್ ಖರೀದಿ ಮಾಡುವುದು ಕನಸಿನ ಮಾತು ಆಗಿತ್ತು. ಹಾಗಾಗಿ ಶಾಲೆ ಇಲ್ಲದ ಕಾರಣ ಹೇಗಾದರೂ ಮೊಬೈಲ್ ಖರೀದಿ ಮಾಡಬೇಕು ಎನ್ನುವ ಉದ್ದೇಶದಿಂದ ವ್ಯಾಪಾರ ಶುರು ಮಾಡಿದಳು. ಚೀಲಗಳನ್ನು ಹಾಕಿಕೊಂಡು ಅದರ ಮೇಲೆ ಮಾವಿನಹಣ್ಣು ಇಟ್ಟುಕೊಂಡು ಮಾರಾಟ ಮಾಡಲು ಶುರು ಮಾಡಿದಳು.

ಇವಳ ಅದೃಷ್ಟ ಚೆನ್ನಾಗಿತ್ತು. ಒಂದು ದಿನ ಖ್ಯಾತ ಮುಂಬೈ ಉದ್ಯಮಿಯೊಬ್ಬರು ಇವಳ ಹತ್ತಿರ ಖರೀದಿ ಮಾಡಲು ಬಂದರು. ಆಗ ಇವಳ ಜೊತೆ ಸಂಭಾಷಣೆ ನಡೆಸಿದಾಗ ಇವಳ ಓದುವ ಹತಾಶೆ ನೋಡಿ ಸಹಾಯ ಮಾಡಬೇಕು ಎಂದು ಯೋಚಿಸಿದರು. ಅವಳ ಬಳಿ 12 ಮಾವಿನಹಣ್ಣುಗಳು ಇದ್ದವು. ಹಾಗಾಗಿ ಒಂದು ಹಣ್ಣಿಗೆ 12, 000 ರೂಪಾಯಿ ಕೊಟ್ಟು ಖರೀದಿ ಮಾಡಿದರು.ಒಟ್ಟಾಗಿ ಇವರ ಬಳಿ ಬಳಿ ಇದ್ದ ಹಣ್ಣುಗಳನ್ನು 1ಲಕ್ಷದ 20 ಸಾವಿರಕ್ಕೆ ಖರೀದಿ ಮಾಡಲಾಗುತ್ತದೆ ಆ ಹಣವನ್ನು ಅವಳ ಅಪ್ಪನ ಖಾತೆಗೆ ಹಾಕಿದಳು. ಇದರಿಂದ ಅವಳು 13,000 ರೂಗಳನ್ನು ಕೊಟ್ಟು ಮೊಬೈಲ್ ಖರೀದಿ ಮಾಡಿ ಈಗ ಆನ್ಲೈನ್ ಕ್ಲಾಸ್ ಗಳನ್ನು ಕಲಿಯುತ್ತಿದ್ದಾಳೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!