ಈತನನ್ನು ವಿಚಾರಣೆಗೆ ಕರೆದ ಪೊಲೀಸರು ಈ ವ್ಯಕ್ತಿಯ ಬ್ಯಾಗ್ರೌಂಡ್ ಕೇಳಿ ಫುಲ್ ಶಾ’ಕ್ ಅಷ್ಟಕ್ಕೂ ಈ ವ್ಯಕ್ತಿ ಯಾರು ಗೊತ್ತೇ?

0 3

ತುಂಬಿದ ಕೊಡ ತುಳುಕುವುದಿಲ್ಲ ಎನ್ನುವ ಗಾದೆಯನ್ನು ನಮ್ಮ ಹಿರಿಯರು ಹೇಳಿದ್ದಾರೆ. ಯಾವ ವ್ಯಕ್ತಿ ಸರಿಯಾದ ಜ್ಞಾನವನ್ನು ಹೊಂದಿರುತ್ತಾನೋ ಎಲ್ಲವನ್ನೂ ತಿಳಿದಿರುತ್ತಾನೋ ಅವನಿಗೆ ಅಹಂಕಾರ ಇರುವುದಿಲ್ಲ. ದಿನನಿತ್ಯದ ಜೀವನದಲ್ಲಿ ನಾವು ಎಷ್ಟೋ ವ್ಯಕ್ತಿಗಳನ್ನು ನೋಡುತ್ತಿರುತ್ತೇವೆ. ಕೆಲವರಿಗೆ ಅಧಿಕಾರದಿಂದ ಅಹಂಕಾರ ಬರುತ್ತದೆ. ಹಾಗೆಯೇ ಇನ್ನೂ ಕೆಲವರಿಗೆ ಹಣದಿಂದ ಅಹಂಕಾರ ಉಂಟಾಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಎಲ್ಲವೂ ಇದ್ದರೂ ಎಲ್ಲವನ್ನೂ ಬಿಟ್ಟು ಪರಿಸರ ಸಂರಕ್ಷಣೆ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ನಾವು ಇಲ್ಲಿ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಮಧ್ಯಪ್ರದೇಶದ ಗ್ರಾಮೀಣ ಭಾಗದಲ್ಲಿ ಅಲೋಪ್ ಸಾಗರ್ ಎನ್ನುವ ವ್ಯಕ್ತಿ ಇದ್ದಾರೆ. ಇವರ ಕುಟುಂಬ ಮೂಲತಃ ದೆಹಲಿಯದಾಗಿತ್ತು. ಇವರ ತಂದೆ ನಿವೃತ್ತ ಐಆರ್ ಎಸ್ ಆಫೀಸರ್ ಆಗಿದ್ದರು. ಹಾಗೆಯೇ ಇವರ ತಾಯಿ ದೆಹಲಿ ಯೂನಿವರ್ಸಿಟಿಯಲ್ಲಿ ನಿವೃತ್ತ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದರು. ಇವರು ಓದಲು ಬಹಳ ಬುದ್ಧಿವಂತ ಇದ್ದರು. ದೆಹಲಿಯ ಪ್ರತಿಷ್ಠಿತ ಐಐಟಿ ಎಂಬ ಪ್ರತಿಷ್ಠಿತ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪಡೆದಿದ್ದರು. ನಂತರ ಅಮೆರಿಕಾಕ್ಕೆ ಹಾರಿ ಹೌಸ್ಟನ್ ವೆವೆಯಲ್ಲಿ ಪಿಎಚ್ ಡಿ ಮಾಡುತ್ತಾರೆ. ಅಲ್ಲಿಯೇ ತರಗತಿ ಮತ್ತು ಉಪನ್ಯಾಸಗಳನ್ನು ನಡೆಸುತ್ತಿದ್ದರು. ಆಗ ರಂಗರಾಜನ್ ಅವರು ಇವರ ತರಗತಿಗೆ ಹೋಗುತ್ತಿದ್ದರು. ಇವರಿಂದ ಶಿಕ್ಷಣ ಪಡೆದ ಎಷ್ಟೋ ಜನ ಈಗ ದೊಡ್ಡ ದೊಡ್ಡ ಸ್ಥಾನವನ್ನು ಅಲಂಕರಿಸಿದ್ದಾರೆ.

ಇವರಿಗೆ ಪ್ರಕೃತಿಯ ಮೇಲೆ ಬಹಳ ಪ್ರೇಮವಿತ್ತು. ಮಧ್ಯಪ್ರದೇಶಕ್ಕೆ ಬಂದು ಬೆತನ್ ಹೌಸ್ ಎಂಬ ಹಸಿರು ಸಂಸ್ಥೆಯನ್ನು ತೆರೆಯುತ್ತಾರೆ. ಪ್ರತಿದಿನ ಹತ್ತರಿಂದ ಹನ್ನೆರಡು ಗಿಡಗಳನ್ನು ಇವರು ನೆಡುತ್ತಾರೆ. ಹಾಗೆಯೇ ಅಲ್ಲಿದ್ದವರಿಗೂ ಕೂಡ ಗಿಡ ಮರಗಳನ್ನು ಬೆಳೆಸುವ ಮನೋಭಾವ ಬೆಳೆಸಿದರು. ಈ ವರೆಗೂ 50,000 ಕ್ಕಿಂತ ಹೆಚ್ಚಿನ ಗಿಡಗಳನ್ನು ನೆಡಿಸಿದ್ದಾರೆ. ಇವರು ಧರಿಸುವ ಬಟ್ಟೆ ಎಂದರೆ ಹಳೆಯ ಬಿಳಿಯ ಪಂಜೆ ಮಾತ್ರ. ಹಾಗೆಯೇ ಇವರ ವಾಹನ ಸೈಕಲ್. ಬಿಳಿಯ ಗಡ್ಡ ಬಿಟ್ಟು ಅಲ್ಲಿಯೇ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ ಜೀವನ ಮಾಡುತ್ತಿದ್ದರು. ಇದು ಅಲ್ಲಿಯ ಅಧಿಕಾರಿಗಳ ಗಮನಕ್ಕೆ ಬರುತ್ತದೆ. ಹಾಗೆಯೇ ದಿನನಿತ್ಯದ ತಮ್ಮ ಕೆಲಸಗಳೊಂದಿಗೆ ಪ್ರತಿದಿನ ಹತ್ತಾರು ಗಿಡ ಮರಗಳಿಗೆ ನೀರುಣಿಸುವ ಕೆಲಸ ಮಾಡುತ್ತಿದ್ದರು.

2016ರಲ್ಲಿ ಕೋರಾಡೋಂಗ್ರಿ ಎನ್ನುವ ಪ್ರದೇಶದಲ್ಲಿ ಚುನಾವಣೆ ಇತ್ತು. ಆಗ ಅಲ್ಲಿಯೇ ವಾಸವಾಗಿದ್ದ ಅಲೋಕ್ ಸಾಗರ್ ಜೊತೆ ಸುಮಾರು 750 ಆದಿವಾಸಿಗಳು ಕೆಲಸ ಮಾಡುತ್ತಿದ್ದರು. ಆಗ ಚುನಾವಣಾ ಸಮಯದಲ್ಲಿ ಬಂದ ಪೊಲೀಸ್ ಅಧಿಕಾರಿಗಳ ಕಣ್ಣಿಗೆ ಇವರು ಬಿದ್ದರು. ಆಗ ಒಬ್ಬ ಅಧಿಕಾರಿ ಊರಿನಲ್ಲಿರುವವರ ಹತ್ತಿರ ಇವರ ಮಾಹಿತಿ ಪಡೆದು ಹೆಚ್ಚು ತಿಳಿಯದೆ ಅವರನ್ನೇ ತಮ್ಮ ಸ್ಟೇಷನ್ ಗೆ ಕರೆದೊಯ್ದರು. ಅಲೋಕ್ ಸಾಗರ್ ಅವರಿಗೆ ಸುಮಾರು 8 ಭಾಷೆಗಳು ಬರುತ್ತಿದ್ದವು. ಅಂದರೆ ಹಿಂದಿ, ಉರ್ದು, ಅಸ್ಸಾಮಿ ಇನ್ನೂ ಹೆಚ್ಚಿನ ಭಾಷೆಗಳಲ್ಲಿ ಹಿಡಿತ ಹೊಂದಿದ್ದರು. ಇವರು ದೆಹಲಿಯ ಐಐಟಿಯಲ್ಲಿ ಪ್ರೊಫೆಸರ್ ಆಗಿದ್ದು ಅಮೆರಿಕಾದಲ್ಲಿ ಪಿಎಚ್ ಡಿ ಮಾಡಿದ್ದೇನೆ ಎಂದು ಪೊಲೀಸ್ ರ ಹತ್ತಿರ ಹೇಳುತ್ತಾರೆ. ಆರ್.ಬಿ.ಐ. ಗವರ್ನರ್ ಆದ ರಂಗರಾಜನ್ ತಮ್ಮ ಶಿಷ್ಯರಲ್ಲಿ ಒಬ್ಬರು ಎಂದು ಹೇಳಿದರು.

ಇವರ ಮಾತುಗಳನ್ನು ಕೇಳಿ ಮಧ್ಯಪ್ರದೇಶದ ಪೊಲೀಸರಿಗೆ ತಲೆ ತಿರುಗಿದಂತಾಯಿತು. ಆ ಊರಿನಲ್ಲಿ ಯಾವುದೇ ರಸ್ತೆಗಳು ಇರಲಿಲ್ಲ. ಅಲೋಕ್ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ರಸ್ತೆಗಳು ಆಗುವ ಹಾಗೆ ಮಾಡುತ್ತಾರೆ. ಇವರಿಗೆ ಕಾರುಗಳಲ್ಲಿ ತಿರುಗುವುದಕ್ಕಿಂತ ಪರಿಸರದಲ್ಲಿ ಕೆಲಸ ಮಾಡುತ್ತಾ ಜೀವನ ಕಳೆಯುವುದು ಬಹಳ ಇಷ್ಟವಾಗಿತ್ತು. ಇವರಿಗೆ ಇಂತಹ ದೊಡ್ಡ ಹುದ್ದೆ ಬೇಕಾದರೂ ಸಿಗುತ್ತಿತ್ತು. ಆದರೆ ಇವರಿಗೆ ಅದು ಬೇಡವಾಗಿತ್ತು. ಇಂತಹ ಮನುಷ್ಯರಿಗೆ ಒಂದು ಸೆಲ್ಯೂಟ್ ಹೊಡೆಯಬೇಕು. ಏಕೆಂದರೆ ಈಗಿನ ಆಧುನಿಕ ಕಾಲದಲ್ಲಿ ಯಾರೂ ಇಂತಹ ಗುಣವನ್ನು ಹೊಂದಿರಲು ಸಾಧ್ಯವಿಲ್ಲ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.