pistachio seed benefits for Good Health: ಪಿಸ್ತಾ ಬೀಜಗಳು ತಿನ್ನಲು ರುಚಿ ಮಾತ್ರವಲ್ಲ, ಆರೋಗ್ಯಕರ ತಿನಿಸು ಹೌದು. ಪಿಸ್ತಾಸಿಯಾ ವೆರಾ ಮರದಿಂದ ದೊರೆಯುವ ಈ ಬೀಜಗಳು ಆರೋಗ್ಯಕರ ಕೊಬ್ಬುಗಳನ್ನು ಹೊಂದಿರುತ್ತವೆ. ಅಷ್ಟೇ ಅಲ್ಲ, ಇದು ಪ್ರೋಟೀನ್, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ.

ಹಲವಾರು ಅಗತ್ಯ ಪೋಷಕಾಂಶಗಳನ್ನು ಸಹ ಒಳಗೊಂಡಿರುವ ಪಿಸ್ತಾ ತೂಕ ನಷ್ಟ ಮತ್ತು ಹೃದಯ ಮತ್ತು ಕರುಳಿನ ಆರೋಗ್ಯ ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಕುತೂಹಲಕಾರಿ ವಿಷಯವೆಂದರೆ ಕ್ರಿ.ಪೂ. 7000 ರಿಂದಲೂ ಜನರು ಪಿಸ್ತಾ ತಿನ್ನುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಐಸ್ ಕ್ರೀಮ್, ಸಿಹಿತಿಂಡಿಗಳು ಸೇರಿದಂತೆ ಅನೇಕ ಭಕ್ಷ್ಯಗಳಲ್ಲಿ ಇವುಗಳನ್ನು ಬಳಸಲಾಗುತ್ತಿದೆ. ಇಲ್ಲಿ ಪಿಸ್ತಾ ಸೇವನೆಯ ಆರೋಗ್ಯ ಪ್ರಯೋಜನಗಳನ್ನು ಕೊಡಲಾಗಿದೆ.

ಪಿಸ್ತಾ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು (LDL) ಕಡಿಮೆ ಮಾಡಲು ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು (HDL) ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ವಿವಿಧ ಸಂಶೋಧನೆಗಳು ತಿಳಿಸಿವೆ. ಈ ಪ್ರಯೋಜನಗಳು ಪಾರ್ಶ್ವವಾಯುಗಳಂತಹ ದೀರ್ಘಕಾಲದ ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪಿಸ್ತಾ ಒಣಹಣ್ಣಿನಲ್ಲಿ ಅರ್ಜಿನೈನ್ ಎಂಬ ಅಮೈನೋ ಆಮ್ಲವಿದೆ. ಈ ಅರ್ಜಿನೈನ್ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ.

Pista Health
pista Health

ಪಿಸ್ತಾ ಆರೋಗ್ಯಕರ ಕೊಬ್ಬುಗಳನ್ನು ಹೊಂದಿದ್ದು ನಿಮ್ಮ ಹೃದಯದ ನಾಳಗಳನ್ನು ಸ್ವಚ್ಚಗೊಳಿಸಲು ಸಹಾಯ ಮಾಡುತ್ತದೆ. ಪಿಸ್ತಾಗಳು ಫೈಬರ್‌ಗಳು ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿವೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಪಿಸ್ತಾವು ಹೆಚ್ಚಿನ ಪ್ರಮಾಣದ ನಾರಿನಾಂಶಗಳನ್ನು ಹೊಂದಿದ್ದು ಅದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.

ಕರುಳಿನಲ್ಲಿ ಒಳ್ಳೆಯ ಬ್ಯಾಕ್ಷೀರಿಯಾಗ ಬೆಳವಣಿಗೆಯನ್ನು ಪಿಸ್ತಾ ಉತ್ತೇಜಿಸುತ್ತದೆ. ಈ ನಾರಿನಾಂಶ ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಪಿಸ್ತಾ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಇದರರ್ಥ ರಕ್ತಕ್ಕೆ ಗ್ಲೂಕೋಸ್ ಅಥವಾ ಸಕ್ಕರೆಯನ್ನು ಬೇಗ ಬಿಟ್ಟುಕೊಡುವುದಿಲ್ಲ. ಹಾಗಾಗಿ ಮಧುಮೇಹವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಅಲ್ಲದೆ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುವ ಹಾರ್ಮೋನಗಳ ಬಿಡುಗಡೆಯನ್ನು ಹೆಚ್ಚಿಸುತ್ತದೆ.

ಪಿಸ್ತಾಗಳು ಮೊನೊ-ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿವೆ. ಇದು ಉರಿಯೂತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಪಿಸ್ತಾಗಳು ನಿಮ್ಮ ಕಣ್ಣಿನ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿದೆ. ಇದು ಮಾನವನ ಕಣ್ಣಿನ ರೆಟಿನಾದಲ್ಲಿ ಇರುವ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಎಂಬ ನಿರೋಧಕ ಅಂಶವನ್ನು ಹೊಂದಿರುತ್ತದೆ. ಈ ಉತ್ಕರ್ಷಣ ನಿರೋಧಕಗಳನ್ನು ಸೇವಿಸುವುದರಿಂದ ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ ಮತ್ತು ಕಣ್ಣಿನ ಪೊರೆಗಳಂತಹ ದೃಷ್ಟಿ ಸಮಸ್ಯೆಗಳನ್ನು ತಡೆಯುತ್ತದೆ.

ಜೊತೆಗೆ ಇದರಲ್ಲಿರುವ ಸತು ಅಂಶವು ರಾತ್ರಿ ಕುರುಡುತನದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಪ್ರತಿದಿನ ಪಿಸ್ತಾ ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಪಿಸ್ತಾದಲ್ಲಿರುವ ವಿಟಮಿನ್ ಬಿ 6 ಪ್ರತಿರಕ್ಷಣಾ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸಲು ಮುಖ್ಯವಾಗಿದೆ. ಇದು ಉತ್ಕರ್ಷಣ ನಿರೋಧಕಗಳನ್ನು ಸಹ ಹೊಂದಿದ್ದು ಶೀತ,ಜ್ವರ, ಕೆಮ್ಮು ಮುಂತಾದ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಹೆಚ್ಚಿನ ಪೋಷಕಾಂಶಗಳ ಅಗತ್ಯವಿರುತ್ತದೆ.

ಪಿಸ್ತಾ B6, A, C ಮತ್ತು K ಯಂತಹ ವಿಟಮಿನ್‌ಗಳನ್ನು ಹೊಂದಿದೆ, ಇದು ಆರೋಗ್ಯಕರ ರಕ್ತದ ಮಟ್ಟವನ್ನು ಕಾಪಾಡಿಕೊಳ್ಳುತ್ತದೆ, ಭ್ರೂಣದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಪುರುಷರಲ್ಲಿ ಫಲವತ್ತತೆ ಮತ್ತು ಲೈಂಗಿಕ ಆರೋಗ್ಯವನ್ನು ಹೆಚ್ಚಿಸುವ ಮೂಲಕ ಪಿಸ್ತಾ ಕಾಮೋತ್ತೇಜಕವಾಗಿ ಕೆಲಸ ಮಾಡುತ್ತದೆ.

ಇದನೊಮ್ಮೆ ಓದಿ..ಸಕ್ಕರೆಕಾಯಿಲೆ ಇದ್ದವರು ಇವುಗಳನ್ನು ತಿನ್ನೋದ್ರಿಂದ ಏನಾಗುತ್ತೆ ಗೊತ್ತಾ..

ಪಿಸ್ತಾಗಳು ಈಸ್ಟ್ರೊಜೆನ್ ಮಟ್ಟವನ್ನು ಹೆಚ್ಚಿಸುತ್ತದೆ. ವಿರ್ಯಾಣುಗಳ ಉತ್ಪತ್ತಿ ಮತ್ತು ವಿರ್ಯಾಣುಗಳ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಪಿಸ್ತಾವು ವಿಟಮಿನ್ ಇ, ಫೀನಾಲಿಕ್ ಆಮ್ಲಗಳು ಮತ್ತು ಫ್ಲೇವನಾಯ್ಡ್‌ಗಳಿಂದ ಕೂಡಿದೆ, ಇದು ಅತ್ಯುತ್ತಮವಾದ ಉತ್ಕರ್ಷಣ ನಿರೋಧಕವಾಗಿದೆ. ಇದು ಹೊಸ ಚರ್ಮದ ಕೋಶಗಳ ಪುನರುತ್ಪಾದನೆಯನ್ನು ಉತ್ತೇಜಿಸುತ್ತದೆ, ರೇಖೆಗಳು, ಸುಕ್ಕುಗಳು ಮತ್ತು ವಯಸ್ಸಾಗುವಿಕೆಯನ್ನು ನಿಧಾನಗೊಳಿಸುತ್ತದೆ.

Leave a Reply

Your email address will not be published. Required fields are marked *