ಈ 3 ಸಮಸ್ಯೆ ಇರೋರು ನಿಜವಾಗಿಯೂ ಪೇರಳೆಹಣ್ಣು ಸೇವಿಸಬಾರದು ಏನಾಗುತ್ತೆ ತಿಳಿಯಿರಿ

0 110

ಪೇರಳೆ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದರಲ್ಲಿ ಪೊಟ್ಯಾಶಿಯಂ ಐರನ್ ಪಾಸ್ಪರಸ್ ಸೋಡಿಯಂ ಕ್ಯಾಲ್ಸಿಯಂ ಹೀಗೆ ತುಂಬಾ ನ್ಯೂಟ್ರಿಯನ್ಸ ಇದೆ ಜೊತೆಗೆ ಲೋ ಕ್ಯಾಲೊರಿ ಇದೆ ಜೊತೆಗೆ ವಿಟಮಿನ್ಸ್ ಇದೆ. ಈ ಪೇರಳೆ ಹಣ್ಣಿನಲ್ಲಿ ಬಿಳಿ ಮತ್ತು ಗುಲಾಬಿ ಬಣ್ಣದ ಹಣ್ಣುಗಳಿರುತ್ತವೆ. ಇದರಲ್ಲಿ ಬಿಳಿ ಹೆಣ್ಣಿಗಿಂತ ಗುಲಾಬಿ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ತುಂಬಾ ಹೆಚ್ಚಿರುತ್ತದೆ. ಒಂದು ಪೇರಳೆ ಹಣ್ಣನ್ನು ತಿಂದರೆ ನಿಮಗೆ ನಾಲ್ಕು ದಿನಕ್ಕೆ ಸಾಕಾಗುವಷ್ಟು ವಿಟಮಿನ್ ಸಿ ದೊರೆಯುತ್ತದೆ. ಈ ಪೇರಳೆ ಹಣ್ಣು ಹೃದಯಕ್ಕೆ ತುಂಬಾ ಒಳ್ಳೆಯದು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಮತ್ತು ಡಯಾಬಿಟಿಕ್ ಇರುವವರಿಗೂ ಒಳ್ಳೆಯದು ಮತ್ತು ಕಣ್ಣಿಗೂ ಒಳ್ಳೆಯದು. ಆದರೆ ಇಷ್ಟೆಲ್ಲಾ ಗುಣಗಳು ಪೇರಳೆ ಹಣ್ಣಿನಲ್ಲಿದ್ದರು ಕೆಲವು ಕಾಯಿಲೆ ಇರುವವರು ಈ ಹಣ್ಣನ್ನು ಸೇವಿಸುವುದು ಒಳ್ಳೆಯದಲ್ಲ ಹಾಗಾದರೆ ಯಾವ ಕಾಯಿಲೆ ಇರುವವರು ಇದನ್ನು ತಿನ್ನಬಾರದು ಯಾರು ಇದನ್ನು ತಿನ್ನಬಹುದು ಇದರ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೊಣ.

ಮೂಲವ್ಯಾಧಿ ಸಮಸ್ಯೆಯಿಂದ ಬಳಲುವವರು ಈ ಹಣ್ಣನ್ನು ತಿನ್ನಬಾರದು ತಿಂದರೆ ಜೀರ್ಣ ಸರಿಯಾಗಿ ಆಗುವುದಿಲ್ಲ ಹೊಟ್ಟೆಯಲ್ಲಿ ಗ್ಯಾಸ್ ಆಗುವ ಸಾದ್ಯತೆ ಇರುತ್ತದೆ. ಕೆಲವರಿಗೆ ಪದೆ ಪದೆ ಬೇದಿ ಆಗುತ್ತಿರುತ್ತದೆ ಏನಾದರೂ ತಿಂದಾಗ ದಿನದಲ್ಲಿ ಮೂರರಿಂದ ನಾಲ್ಕು ಸಾರಿ ಬಾತರೂಮಿಗೆ ಹೋಗುತ್ತಿರುತ್ತಾರೆ ಅಂತವರು ಪೇರಳೆ ಹಣ್ಣನ್ನು ತಿನ್ನಬಾರದು ಮತ್ತು ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆ ಇರುವವರು ಈ ಹಣ್ಣನ್ನು ತಿನ್ನಬಾರದು ಅದರಲ್ಲೂ ಪೇರಳೆ ಹಣ್ಣನ್ನು ತಿಂದರೂ ಬೀಜವನ್ನು ತಿನ್ನಬಾರದು. ಹೊಟ್ಟೆ ಸಮಸ್ಯೆ ಇರುವವರು ಜೀರ್ಣ ಸಮಸ್ಯೆ ಇರುವವರು ಇದನ್ನು ಕಡಿಮೆ ಪ್ರಮಾಣದಲ್ಲಿ ತಿನ್ನಬೇಕು.

ರಾತ್ರಿ ಸಮಯದಲ್ಲಿ ಈ ಹಣ್ಣನ್ನು ತಿನ್ನಬಾರದು ಮತ್ತು ತುಂಬಾ ಹೆಚ್ಚು ಊಟ ಮಾಡಿದಾಗ ಪೇರಳೆ ಹಣ್ಣನ್ನು ತಿನ್ನಬಾರದು ಗ್ಯಾಸ್ ಸಮಸ್ಯೆ ಇರುವವರು ಇದರಲ್ಲಿ ವಿಟಮಿನ್ ಸಿ ಹೆಚ್ಚಿರುವುದರಿಂದ ಕಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನಬಾರದು. ಆರೋಗ್ಯವಂತರು ಕೂಡ ತುಂಬಾ ಊಟ ಮಾಡಿದ ನಂತರ ಪೇರಳೆ ಹಣ್ಣನ್ನು ತಿನ್ನುವುದರಿಂದ ಅಜೀರ್ಣ ಆಗುವ ಸಾದ್ಯತೆ ಇರುತ್ತದೆ. ಪೇರಳೆ ಹಣ್ಣನ್ನು ತಿನ್ನಬೇಕು ಎನಿಸಿದಾಗ ಕಡಿಮೆ ಊಟ ಮಾಡಿ ಹಣ್ಣನ್ನು ತಿನ್ನುವುದರಿಂದ ಎಲ್ಲ ನ್ಯೂಟ್ರಿಯನ್ಸ ನಮ್ಮ ದೇಹಕ್ಕೆ ಹಿಡಿಯುತ್ತದೆ. ಕೆಲವರಿಗೆ ಉಬ್ಬಸ ಸಮಸ್ಯೆ ಇರುತ್ತದೆ ಪದೆ ಪದೆ ಶಿತವಾಗುತ್ತಿರುತ್ತದೆ ಅಂತವರು ಮಳೆಗಾಲದಲ್ಲಿ ಈ ಹಣ್ಣನ್ನು ತಿನ್ನಲೆ ಬಾರದು. ಒಂದು ವೇಳೆ ತಿಂದರೂ ಸಹಿತ ಉಪ್ಪು ಅಥವಾ ಸೈಂಧವ ಲವಣ ವನ್ನು ಹಣ್ಣಿಗೆ ಹಚ್ಚಿ ತಿನ್ನ ಬೇಕು. ಹಣ್ಣನ್ನು ಹಾಗೆ ತಿನ್ನುವುದರಿಂದ ಶೀತ ಬಹಳ ಬೇಗ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಇನ್ನು ಯಾರು ಶುಗರ್ ಕಾಯಿಲೆ ಇರುವವರು ಪೇರಳೆ ಹಣ್ಣನ್ನು ಆರಾಮವಾಗಿ ತಿನ್ನಬಹುದು. ಹಾಗಂತ ತುಂಬಾ ಹಣ್ಣಾಗಿರುವ ಸಿಹಿಯಾದಂತಹ ಹಣ್ಣನ್ನು ತಿನ್ನಬಾರದು ಸ್ವಲ್ಪ ಕಾಯಿ ಇರುವ ಹಣ್ಣನ್ನು ದಿನಕ್ಕೆ ಎರಡು ತಿನ್ನಬಹುದು ಇದರಿಂದ ಅವರಿಗೆ ತುಂಬಾ ವಿಟಮಿನ್ಸ್ ಸಿಗುತ್ತದೆ. ಎನ್ನು ಹೃದಯ ಸಮಸ್ಯೆ ಇರುವವರಿಗೆ ಪೇರಳೆ ಹಣ್ಣು ತುಂಬಾ ಒಳ್ಳೆಯದು ಯಾಕೆಂದರೆ ಇದರಲ್ಲಿ ಫೈಬರ್ ಅಂಶ ತುಂಬಾ ಇದೆ. ಒಂದು ಮಾಹಿತಿಯ ಪ್ರಕಾರ ಪೇರಳೆ ಹಣ್ಣನ್ನು ದಿನನಿತ್ಯ ತಿನ್ನುತ್ತಾ ಬಂದರೆ ಹೃದಯ ಸಂಬಂಧಿ ಸಮಸ್ಯೆಗಳು ಬರುವುದಿಲ್ಲ. ಹಣ್ಣುಗಳಲ್ಲಿ ನಂಬರ್ ಒನ್ ಹಣ್ಣು ಯಾವುದು ಎಂದರೆ ಸೇಬು ಅಥವಾ ದಾಳಿಂಬೆ ಹಣ್ಣು ಎನ್ನುತ್ತಾರೆ. ಅದು ತಪ್ಪು ಹಣ್ಣುಗಳಲ್ಲಿ ನಂಬರ್ ಒನ್ ಹಣ್ಣು ಯಾವುದು ಎಂದರೆ ಅದು ಪೇರಳೆ ಹಣ್ಣು ಯಾಕೆಂದರೆ ಇದರಲ್ಲಿ ಅಷ್ಟೊಂದು ಪೋಷಕಾಂಶಗಳು ಇದೆ ಮತ್ತು ಇದನ್ನು ಪ್ರತಿದಿನ ತಿನ್ನಬಹುದು.

ಪೇರಳೆ ಹಣ್ಣಿನಲ್ಲಿ ಲೋ ಕ್ಯಾಲೋರಿ ಇರುವುದರಿಂದ ತೂಕವನ್ನು ಕಡಿಮೆ ಮಾಡಲು ಇದನ್ನು ಬಳಸಬಹುದು ಇದನ್ನು ಹೊಟ್ಟೆ ತುಂಬಾ ತಿಂದು ಊಟವನ್ನು ಸ್ವಲ್ಪ ಕಡಿಮೆ ಮಾಡಬಹುದು ಇದರಿಂದ ಬೊಜ್ಜು ಕರಗುತ್ತದೆ. ಪೇರಳೆ ಹಣ್ಣನ್ನು ತಿನ್ನುವುದರಿಂದ ಕಣ್ಣಿನ ಸಮಸ್ಯೆ ಬರುವುದಿಲ್ಲ ಚಿಕ್ಕ ಮಕ್ಕಳಿಗೂ ಪೇರಳೆ ಹಣ್ಣನ್ನು ತಿನ್ನುವುದನ್ನು ಅಭ್ಯಾಸ ಮಾಡಬೇಕು ಮತ್ತು ದೊಡ್ಡವರು ಪ್ರತಿದಿನ ಪೇರಳೆ ಹಣ್ಣನ್ನು ತಿನ್ನುತ್ತಾ ಬಂದರೆ ಇದರಲ್ಲಿರುವ ಪೋಷಕಾಂಶದಿಂದ ಕಣ್ಣಿನ ಸಮಸ್ಯೆ ಬರುವುದಿಲ್ಲ ಹತ್ತಿರ ದೃಷ್ಟಿ ದೂರ ದೃಷ್ಟಿ ಸಮಸ್ಯೆಗಳಿಂದ ದೂರ ಇರಬಹುದು.

ಪೇರಳೆ ಹಣ್ಣನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಈಗಿನ ವಾತಾವರಣದಲ್ಲಿ ನಾವು ಪ್ರತಿದಿನ ಪೇರಳೆ ಹಣ್ಣನ್ನು ತಿನ್ನಬೇಕು ಯಾಕೆಂದರೆ ಚಿಕ್ಕ ಪುಟ್ಟ ಜ್ವರ ಆಗಲಿ ಕೆಮ್ಮು ಶಿತವನ್ನು ತಡೆಯಬಹುದು ಇದರಲ್ಲಿರುವ ಪೋಷಕಾಂಶ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಯಾವುದೇ ಆರೋಗ್ಯ ಸಮಸ್ಯೆ ಆದಾಗ ನಾವು ಅದನ್ನು ಬೇಗ ಗುಣಪಡಿಸಿಕೊಳ್ಳಬಹುದು.

ಈ ಪೇರಳೆ ಹಣ್ಣನ್ನು ತಿನ್ನುತ್ತಾ ಬಂದರೆ ಕ್ಯಾನ್ಸರ್ ಸಮಸ್ಯೆ ಬರುವುದಿಲ್ಲ ಎಂದು ಹೇಳುತ್ತಾರೆ ಯಾರಿಗೆ ಹೈ ಬಿಪಿ ಇದೆ ಅವರು, ಮಲಬದ್ಧತೆ ಇರುವವರು ಈ ಹಣ್ಣನ್ನು ತಿನ್ನುವುದರಿಂದ ಒಳ್ಳೆಯದಾಗುತ್ತದೆ. ಪೇರಳೆ ಹಣ್ಣು ಮಾತ್ರವಲ್ಲ ಪೇರಳೆ ಎಲೆ ಸಹಿತ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಯಾರಿಗೆ ಬಾಯಿ ತುಂಬಾ ವಾಸನೆ ಬರುತ್ತದೆ ಅಂತವರು ಒಂದು ಐದು ದಿನ ಈ ಪೇರಳೆ ಎಲೆಯನ್ನು ತಂದು ಅದನ್ನು ಕಷಾಯ ಮಾಡಿ ಅದರಿಂದ ಬಾಯಿಯನ್ನು ಮುಕ್ಕಳಿಸಿದರೆ ಬಾಯಿಯಿಂದ ಬರುವ ವಾಸನೆ ಕಡಿಮೆ ಆಗುತ್ತದೆ. ಇನ್ನು ಯಾರಿಗೆ ವಿಪರೀತ ಹಲ್ಲು ನೋವು ಬರುತ್ತದೆ ಅವರು ಎರಡು ಕಪ್ಪು ನೀರಿಗೆ ಐದರಿಂದ ಆರು ಪೇರಳೆ ಎಲೆಯನ್ನು ಹಾಕಿ ಎರಡರಿಂದ ಮೂರು ಲವಂಗವನ್ನು ಹಾಕಿ ಚೆನ್ನಾಗಿ ಕುದಿಸಬೇಕು ಅದು ಒಂದು ಲೋಟ ಆಗುವವರೆಗೂ ಕುದಿಸಿ ಅದರಿಂದ ನೀವು ಬಾಯಿಯನ್ನು ಮುಕ್ಕಳಿಸಿದರೆ ಹಲ್ಲು ನೋವು ಬೇಗ ಕಡಿಮೆ ಆಗುತ್ತದೆ.

ಇನ್ನು ಬಾಯಿಯ ಒಳಗೆ ಗುಳ್ಳೆ ಅಥವಾ ನಾಲಿಗೆಯ ಮೇಲೆ ಗುಳ್ಳೆ ಆದಾಗ ಪೇರಳೆ ಎಲೆಯ ಚಿಗುರನ್ನು ಆಗಾಗ ತಿನ್ನ ಬಹುದು ಇದರಿಂದ ಬಾಯಿಯಲ್ಲಿ ಆಗಿರುವ ಗುಳ್ಳೆ ಗುಣವಾಗುತ್ತದೆ. ನೊಡಿದಿರಲ್ಲ ಸ್ನೇಹಿತರೆ ಪೇರಳೆಹಣ್ಣನ್ನು ಯಾರು ತಿನ್ನ ಬೇಕು ಯಾರು ತಿನ್ನಬಾರದು ಮತ್ತು ಅದರಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ನೀವು ದಿನನಿತ್ಯ ಪೇರಳೆ ಹಣ್ಣನ್ನು ಸೇವಿಸಿ ಆರೋಗ್ಯವಂತರಾಗಿರಿ.

Leave A Reply

Your email address will not be published.