ಮಕ್ಕಳ ಕೆಮ್ಮು,ಕಫ ಶೀತ ನಿವಾರಣೆಗೆ ಇದೊಂದು ಎಲೆ ಸಾಕು

0 193

ಕೆಲವೊಮ್ಮೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ತುಂಬಾ ಕಡಿಮೆ ಇರುತ್ತದೆ. ಅದರಲ್ಲಿಯೂ ಕೆಲವು ಮಕ್ಕಳು ತರಕಾರಿ ತಿನ್ನುವುದಿಲ್ಲ ಹಣ್ಣನ್ನು ತಿನ್ನುವುದಿಲ್ಲ ಆರೋಗ್ಯಕ್ಕೆ ಯಾವುದು ತುಂಬಾ ಒಳ್ಳೆಯದು ಅದನ್ನು ತಿನ್ನುವುದಿಲ್ಲ ಊಟವನ್ನು ಸರಿಯಾಗಿ ಮಾಡುವುದಿಲ್ಲ. ಆಗ ಅವರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಾವೇನಾದರೂ ಮಾಡಬೇಕಾಗುತ್ತದೆ.

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದಾಗ ಪದೇ ಪದೇ ಜ್ವರ ಶೀತ ಕೆಮ್ಮು ಕಫ ಉಂಟಾಗುತ್ತದೆ ಐದು ವರ್ಷದ ಒಳಗಿನ ಮಕ್ಕಳಿಗೆ ಇದು ಪದೆ ಪದೆ ಬರುವಂಥದ್ದು ಹೀಗಿದ್ದಾಗ ಸದ್ಯದ ಪರಿಸ್ಥಿತಿಯಲ್ಲಿ ಮಕ್ಕಳನ್ನು ಕರೆದುಕೊಂಡು ಹೊರಗೆ ಹೋಗುವುದಕ್ಕೂ ಕಷ್ಟ ಆಗುತ್ತದೆ ತಕ್ಷಣ ಆಸ್ಪತ್ರೆಗೆ ಹೋಗುವುದಕ್ಕೆ ಆಗುವುದಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ನೋಡಿಕೊಂಡು ಮನೆಯಲ್ಲಿಯೇ ದೊಡ್ಡ ಪತ್ರೆ ಅಥವಾ ಸಾಂಬಾರ ಬಳ್ಳಿಯನ್ನು ಬಳಸಿಕೊಂಡು ಹೇಗೆ ಔಷಧಿಯನ್ನೂ ತಯಾರಿಸಬಹುದು ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳೋಣ.

ಮಕ್ಕಳು ತರಕಾರಿ ಹಣ್ಣು ಹಂಪಲುಗಳನ್ನು ತಿನ್ನದಿದ್ದಾಗ ಅವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ ಆಗ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತಿರುತ್ತದೆ ಮುಖ್ಯವಾಗಿ ಶೀತ ಮತ್ತು ಜ್ವರ ಇದಕ್ಕೆ ಪ್ರತಿಸಾರಿ ನಾವು ಔಷಧಿಗಳನ್ನು ತಂದು ಕೊಡುವುದಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಕ್ಕೆ ಆಗುವುದಿಲ್ಲ ಆಗ ನಾವು ಮನೆಯಲ್ಲಿಯೇ ಔಷಧಿಗಳನ್ನು ತಯಾರಿಸಬೇಕಾಗುತ್ತದೆ. ಈಗ ನಾವು ಸುಲಭವಾಗಿ ಮನೆಯಲ್ಲಿ ಹೇಗೆ ಔಷಧಿಯನ್ನು ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳೋಣ.

ಮನೆಯಲ್ಲಿಯೇ ಇರುವ ದೊಡ್ಡ ಪತ್ರೆ ಎಲೆಗಳನ್ನು ಬಳಸಿ ಸುಲಭವಾಗಿ ಔಷಧಿಗಳನ್ನು ತಯಾರಿಸಬಹುದು. ಸ್ವಲ್ಪ ದೊಡ್ಡ ಪತ್ರೆಯ ಎಲೆಗಳನ್ನು ಕೊಯ್ದು ಅದನ್ನು ನೀರಿನಲ್ಲಿ ತೊಳೆದು ಅದನ್ನು ಸ್ವಲ್ಪ ಹೊತ್ತು ಕಾಟನ್ ಬಟ್ಟೆ ಯ ಮೇಲೆ ಹಾಕಬೇಕು. ಮಕ್ಕಳಿಗೆ ತುಂಬಾ ಶೀತ ಆಗಿದ್ದರೆ ಅಂದರೆ ಚಿಕ್ಕ ಶಿಶುಗಳಿಗೆ ಅವರಿಗೆ ನಾವು ಮೂರು ನಾಲ್ಕು ತಿಂಗಳು ಅವರ ಸ್ನಾನ ಆದನಂತರ ಬಟ್ಟೆಯನ್ನು ಸುತ್ತಿ ಮಲಗಿಸುತ್ತೇವೆ ಶಿಶುವಿಗೆ ಶೀತವಾದಾಡಒಂದು ದೊಡ್ಡಪತ್ರೆ ಎಲೆಯನ್ನು ಒಲೆಯ ದಂಡೆಯ ಮೇಲೆ ಇಟ್ಟು ಅಥವಾ ಒಂದು ಕಾವಲಿಯಲ್ಲಿ ಆ ಎಯನ್ನು ಬಿಸಿ ಮಾಡಿ ಶಿಶ್ನವನ್ನು ಮಲಗಿಸುವಾಗ ಆ ಎಲೆಯನ್ನು ನೆತ್ತಿಯ ಮೇಲೆ ಬರುವಂತೆ ತಲೆಗೆ ಟೋಪಿಯನ್ನು ಕಟ್ಟಬೇಕು ಇದರಿಂದ ಶಿಶುಗಳಿಗೆ ಆದಷ್ಟು ಬೇಗ ಶೀತ ಒಣಗುತ್ತದೆ.

ಕೆಲವೊಮ್ಮೆ ಕಫ ಆಗಿ ಅದು ಗಟ್ಟಿ ಆದರೆ ಅಥವಾ ಮೂಗು ಕಟ್ಟಿದರೆ ಎರಡು ದೊಡ್ಡ ಪತ್ರೆಯ ಎಲೆಯನ್ನು ತೆಗೆದು ಕೊಂಡು ಅದನ್ನು ಸ್ವಲ್ಪ ಬಿಸಿ ಮಾಡಿ ಅಥವಾ ಹಸಿಯಾಗಿಯೇ ಅದನ್ನು ಕೈಯಿಂದ ಕಿವುಚ ಬೇಕು ಆಗ ಅದರಿಂದ ಸ್ವಲ್ಪ ರಸ ಬರುತ್ತದೆ ಅದನ್ನು ಮಕ್ಕಳಿಗೆ ಎದೆಗೆ ಹಣೆಗೆ ಮೂಗಿನ ಮೇಲೆ ಹಚ್ಚಬಹುದು.ಮಕ್ಕಳು ಮಲಗುವಾಗ ಇದನ್ನು ಹಚ್ಚಿದರೆ ಕಫ ಕರಗುತ್ತದೆ ಮತ್ತು ಅದರ ವಾಸನೆಗೆ ಕಟ್ಟಿಕೊಂಡ ಮೂಗು ಸಡಿಲವಾಗುತ್ತದೆ.

ಮಕ್ಕಳಿಗೆ ಶೀತ ಗಂಟಲು ನೋವು ಕಫ ಇದ್ದಾಗ ದೊಡ್ಡ ಪತ್ರೆಯ ಎರಡು ಎಲೆಯನ್ನು ತೆಗೆದು ಕೊಂಡು ಅದನ್ನು ಸ್ವಲ್ಪ ಬಿಸಿ ಮಾಡಿ ಕೈಯಿಂದ ಅದನ್ನು ಕಿವುಚಿ ಆಗ ಅದರಿಂದ ರಸ ಬರುತ್ತದೆ ಇದು ಒಂದು ಅರ್ಧ ಅಥವಾ ಕಾಲು ಚಮಚ ಆದರೆ ಸಾಕು ಯಾಕೆಂದರೆ ಚಿಕ್ಕ ಮಕ್ಕಳಿಗೆ ಇದನ್ನು ಹೆಚ್ಚು ಕೊಟ್ಟಾಗ ಅವರಿಗೆ ಉಷ್ಣ ಆಗಬಹುದು ನೀವು ಕಾಲು ಚಮಚ ರಸವನ್ನು ತೆಗೆದುಕೊಂಡಿದ್ದರೆ ಅಷ್ಟೇ ಪ್ರಮಾಣದ ಜೇನುತುಪ್ಪವನ್ನು ತೆಗೆದುಕೊಳ್ಳ ಬೇಕು ಅದನ್ನು ಚೆನ್ನಾಗಿ ಮಿಶ್ರಣ ಮಾಡಬೇಕು

ಇದರ ರಸ ಖಾರ ಇರುವುದರಿಂದ ಅದಕ್ಕೆ ಸ್ವಲ್ಪ ಜೇನು ತುಪ್ಪವನ್ನು ಸೇರಿಸುವುದರಿಂದ ಸಮವಾಗುತ್ತದೆ ಇದನ್ನು ಮಕ್ಕಳಿಗೆ ದಿನಕ್ಕೆ ಒಂದು ಅಥವಾ ಎರಡು ಬಾರಿ ಕುಡಿಸುವುದರಿಂದ ಕಫ ಕರಗಿ ಹೋಗುತ್ತದೆ. ಕೆಲವು ಮಕ್ಕಳು ಇದು ಖಾರ ಇರುವುದರಿಂದ ವಾಂತಿ ಮಾಡುತ್ತಾರೆ ಅದರಿಂದ ಕಫ ಹೊರಗೆ ಹೋಗುತ್ತದೆ.ಇದರಿಂದ ಶೀತದ ಪರಿಣಾಮ ಕಡಿಮೆ ಯಾಗುತ್ತದ

ಇನ್ನು ಸ್ವಲ್ಪ ದೊಡ್ಡ ಮಕ್ಕಳಿಗೆ ಶೀತ ಆದಾಗ ಎರಡು ಮೂರು ಎಲೆಗಳನ್ನು ಹಸಿಯಾಗಿ ಕಿವುಚಿ ಒಂದು ಬೌಲ್ ನಲ್ಲಿ ಹಾಕಿ ಅವರು ಮಲಗಿದಾಗ ಅವರ ದಿಂಬಿನ ಬಳಿ ಇದನ್ನು ಇಟ್ಟರೆ ಸಾಕು ಅದರ ವಾಸನೆಗೆ ಕಫ ಕರಗಿ ಮೂಗು ಕಟ್ಟಿರುವುದು ಸಡಿಲವಾಗಿ ಮಕ್ಕಳಿಗೂ ಚೆನ್ನಾಗಿ ನಿದ್ದೆ ಬರುತ್ತದೆ. ಸ್ವಲ್ಪ ನೀರನ್ನು ಬಿಸಿ ಮಾಡಿ ಅದಕ್ಕೆ ನಾಲ್ಕೈದು ಸಾಂಬಾರ ಎಲೆಗಳನ್ನು ಕಿವುಚಿ ಹಾಕಿ ಹಾಗೆಯೂ ಹಾಕಬಹುದು ಕಿವುಚುವುದರಿಂದ ಅದು ಬೇಗ ವಾಸನೆಯನ್ನು ಬಿಡುತ್ತದೆ ಚೆನ್ನಾಗಿ ಕುದಿಸಿದ ನಂತರ ಇದರಿಂದ ಮಕ್ಕಳಿಗೆ ಸ್ಟೀಮ್ ಕೊಡಬಹುದು ಇದರಿಂದ ಕಫ ಕರಗುತ್ತದೆ ಕೆಲವೊಮ್ಮೆ ಮೂಗು ಕಟ್ಟಿದಾಗ ಅದರಿಂದ ತಲೆ ನೋವು ಬರುತ್ತದೆ ಮಕ್ಕಳಿಗೆ ಅದನ್ನು ಹೇಳುವುದಕ್ಕೆ ಬರುವುದಿಲ್ಲ ಆಗ ಹೀಗೆ ದಿನಕ್ಕೆ ಎರಡು ಮೂರು ಸಲ ಸ್ಟೀಮ್ ನೀಡುವುದರಿಂದ ಆರಾಮ ಸಿಗುತ್ತದೆ.

ಈ ರೀತಿಯಾಗಿ ನಿವು ಮನೆಯಲ್ಲಿಯೇ ಔಷಧಿಯನ್ನು ತಯಾರಿಸುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಆಗದಂತೆ ಆದಷ್ಟು ಬೇಗ ಸಣ್ಣ ಪುಟ್ಟ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬೇಕು. ಎಲ್ಲದಕ್ಕೂ ಎಲ್ಲಾ ಸಮಯದಲ್ಲಿ ಆಸ್ಪತ್ರೆಗಳಿಗೆ ಹೋಗುವುದು ಕೆಲವರಿಗೆ ಕಷ್ಟ ಆಗಬಹುದು. ಹಾಗಾಗಿ ಮನೆಮದ್ದುಗಳನ್ನು ಮಾಡುವುದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.