ಪಾರ್ವತಮ್ಮ ರಾಜ್‌ಕುಮಾರ್ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡ್ಸಿದು ಈ ನಟಿಯರನ್ನೆ

0 0

ಪಾರ್ವತಮ್ಮ ರಾಜ್‌ಕುಮಾರ್ ಹೆಸರಾಂತ ಕನ್ನಡ ಚಲನಚಿತ್ರ ನಿರ್ಮಾಪಕಿ. ಇವರು ಕನ್ನಡದ ನಾಯಕನಟರಾದ ಪದ್ಮಭೂಷಣ ಡಾ.ರಾಜ್‍ಕುಮಾರ್ ಅವರ ಪತ್ನಿ. ರಾಜ್‍ಕುಮಾರ್ ನಟಿಸಿರುವ ಹಲವಾರು ಸಿನಿಮಾಗಳನ್ನು ವಜ್ರೇಶ್ವರಿ ಮೂವೀಸ್ ನಿರ್ಮಾಣ ಸಂಸ್ಥೆಯ ಮೂಲಕ ಪಾರ್ವತಮ್ಮ ರಾಜ್‍ಕುಮಾರ್ ನಿರ್ಮಿಸಿ ವಿತರಿಸಿದ್ದಾರೆ. ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ರಾಜ್ ಕುಮಾರ್ ಅವರು ಆರಂಭಿಕ ದಿನಗಳಲ್ಲಿ ಚಿತ್ರರಂಗದಲ್ಲಿ ನೆಲೆಯೂರಲು ಸಾಕಷ್ಟು ಕಷ್ಟ ಅನುಭವಿಸಿದ್ದರು. ಈ ಹಂತದಲ್ಲಿ ಪಾರ್ವತಮ್ಮ ಅವರು ರಾಜ್ ಕುಮಾರ್ ಅವರ ಬೆನ್ನೆಲುಬಾಗಿದ್ದರು. ಆದ್ದರಿಂದ ನಾವು ಇಲ್ಲಿ ಇವರು ಪರಿಚಯಿಸಿರುವ ನಟಿಯರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ರಾಜ್ ಕುಮಾರ್ ಅವರಿಗೆ ಸಾಕಷ್ಟು ಬೇಡಿಕೆ ಇತ್ತಾದರೂ ನಿರ್ಮಾಪಕರು ಮಾತ್ರ ಕಡಿಮೆ ಸಂಭಾವನೆ ನೀಡುತ್ತಿದ್ದರು. ಈ ಹಂತದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರು ತಮ್ಮದೇ ನಿರ್ಮಾಣ ಸಂಸ್ಥೆ ಹುಟ್ಟುಹಾಕಲು ಮುಂದಾದರು. ಆಗ ತಲೆ ಎತ್ತಿದ್ದೇ ಪೂರ್ಣಿಮಾ ಎಂಟರ್ ಪ್ರೈಸಸ್ ಅಥವಾ ವಜ್ರೇಶ್ವರಿ ಕಂಬೈನ್ಸ್. 1975ರಲ್ಲಿ ತಲೆ ಎತ್ತಿದ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿತು. ಪಾರ್ವತಮ್ಮ ಅವರು ತಮ್ಮ ಮೂರು ಗಂಡು ಮಕ್ಕಳ ಚಿತ್ರ ವ್ರತ್ತಿಜೀವನವನ್ನು ಪ್ರಾರಂಭಿಸಿದರು. ಕೇವಲ ಯಶಸ್ವಿ ಚಿತ್ರಗಳನ್ನಷ್ಟೇ ಅಲ್ಲದೆ ಕನ್ನಡ ಚಿತ್ರರಂಗಕ್ಕೆ ಅನೇಕ ಖ್ಯಾತ ನಟಿಯರನ್ನು ಈ ಸಂಸ್ಥೆ ಪರಿಚಯಿಸಿದೆ.

ಸುಧಾರಾಣಿ ಯವರನ್ನು 1986 ರಲ್ಲಿ ಆನಂದ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿಸಿದರು. 1986ರಲ್ಲಿ ಆಶಾರಾಣಿ ಅವರನ್ನು ರಥಸಪ್ತಮಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿಸಿದ್ದಾರೆ. ಕನ್ನಡದ ಖ್ಯಾತ ನಟ ರಾಜೇಶ್ ಅವರ ಪುತ್ರಿಯಾಗಿರುವ ಇವರು ಅರ್ಜುನ್ ಸರ್ಜಾ ಅವರನ್ನು ವಿವಾಹವಾಗಿದ್ದಾರೆ. 1989 ರಲ್ಲಿ ತೆರೆಕಂಡ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಕನ್ನಡದ ಖ್ಯಾತ ನಟಿ ಮಾಲಾಶ್ರೀ ಅವರನ್ನು ಕನ್ನಡ ಚಿತ್ರರಂಗಕ್ಕೆ ತಂದಿದ್ದಾರೆ. ಮಲಯಾಳಂ ನಟಿ ಮೋಹಿನಿ ಅವರನ್ನು ಕಲ್ಯಾಣ ಮಂಟಪ ಚಿತ್ರದಿಂದ ಕನ್ನಡ ಸಿನಿರಂಗದ ಪ್ರವೇಶ ಮಾಡಿದ್ದಾರೆ.

ಇನ್ನೋರ್ವ ಕನ್ನಡದ ಖ್ಯಾತ ನಟಿ ಪ್ರೇಮಾ ಅವರನ್ನು 1995 ರಲ್ಲಿ ಸವ್ಯಸಾಚಿ ಎಂಬ ಚಿತ್ರದ ಮೂಲಕ ಕನ್ನಡ ಸಿನಿ ರಂಗವನ್ನು ಪ್ರವೇಶಿಸಿದರು. ಅನು ಪ್ರಭಾಕರ್ ಅವರು 1999 ರಲ್ಲಿ ತೆರೆ ಕಂಡ ಹೃದಯ ಹೃದಯ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಪ್ರವೇಶ ಮಾಡುತ್ತಾರೆ. ಖ್ಯಾತ ಛಾಯಾಗ್ರಾಹಕರು ಆದಂತಹ ಗೌರಿಶಂಕರ್ ಅವರ ಪುತ್ರಿ ಶ್ವೇತ ರಕ್ಷಿತಾ ಎಂಬ ಹೆಸರಿನಿಂದ 2002 ರಲ್ಲಿ ತೆರೆಕಂಡ ಅಪ್ಪು ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸುತ್ತಾರೆ. ಹೀಗೆ ಅನೇಕ ನಟಿಯರನ್ನು ಕನ್ನಡ ಚಿತ್ರರಂಗಕ್ಕೆ ಪಾರ್ವತಮ್ಮ ರಾಜಕುಮಾರ್ ಅವರು ಕರೆತಂದಿದ್ದಾರೆ.

Leave A Reply

Your email address will not be published.