Ultimate magazine theme for WordPress.

ದಮ್ಮು ಹಾಗೂ ಉಬ್ಬಸ ಸಮಸ್ಯೆಗೆ ಮನೆಮದ್ದು

0 62

ಧಮ್ಮು ಅಥವಾ ಉಬ್ಬಸ ಇದು ಅನೇಕರಲ್ಲಿ ಕಾಣುವ ಸಮಸ್ಯೆಯಾಗಿದೆ. ಇದರಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಹಾಗೆಯೇ ಇದು ಅನೇಕ ಕಾರಣಗಳಿಂದ ಬರುತ್ತದೆ. ಇದಕ್ಕೆ ಕಾರಣಗಳು ಹಲವಾರು ಇವೆ. ಇದನ್ನು ಸಣ್ಣ ಪ್ರಮಾಣದಲ್ಲಿ ಇದ್ದಾಗಲೇ ಕಡಿಮೆ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಸಾಯುವವರೆಗೂ ಇದು ಕಟ್ಟಿಟ್ಟಬುತ್ತಿ ಆಗಿರುತ್ತದೆ. ಆದ್ದರಿಂದ ನಾವು ಇಲ್ಲಿ ಧಮ್ಮು ಇರುವವರಿಗೆ ಸುಲಭದ ಮನೆಮದ್ದಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಧಮ್ಮು ಅಥವಾ ಉಬ್ಬಸ ಉಂಟಾಗಲು ಹಲವಾರು ಕಾರಣಗಳು ಇವೆ. ಧೂಳು, ಹೊಗೆ ಮತ್ತು ವಾಯುಮಾಲಿನ್ಯ ಇವುಗಳಿಂದ ಕೂಡ ಧಮ್ಮು ಬರುತ್ತದೆ. ಹಾಗೆಯೇ ಶೀತಲ ವಾತಾವರಣ, ಮಾನಸಿಕ ಒತ್ತಡ, ಚಿಂತೆ ಮತ್ತು ಅನುವಂಶಿಕವಾಗಿ ಧಮ್ಮು ಬರುತ್ತದೆ. ಗಟ್ಟಿಯಾದ ಕಫ ಹೊರಗೆ ಬರುತ್ತದೆ. ಉಸಿರಾಟ ಶಬ್ದದಿಂದ ಆಗುತ್ತದೆ. ಕೆಲವೊಮ್ಮೆ ಜ್ವರ ಕೂಡ ಕಾಣಿಸಿಕೊಳ್ಳುತ್ತದೆ. ಇವೆಲ್ಲ ಧಮ್ಮು ಮತ್ತು ಉಬ್ಬಸಕ್ಕೆ ಕಾರಣಗಳು ಎಂದು ಹೇಳಬಹುದು. ಮನೆ ಮದ್ದುಗಳು ದೇಹಕ್ಕೆ ಆರೋಗ್ಯ.

ಹಾಗೆಯೇ ಯಾವುದೇ ರೀತಿಯ ಅಡ್ಡ ಪರಿಣಾಮಗಳನ್ನು ಉಂಟು ಮಾಡುವುದಿಲ್ಲ. ಉಬ್ಬಸ ಉಂಟಾದಾಗ ಬಿಸಿಯಾದ ನೀರು ಅಥವಾ ಕಾಫಿಯನ್ನು ಸೇವನೆ ಮಾಡಬೇಕು. ಧಮ್ಮು ತೀವ್ರವಾಗಿ ಉಂಟಾದರೆ ಸಾಸಿವೆ ಎಣ್ಣೆಯಲ್ಲಿ ಸೈಂದವ ಲವಣವನ್ನು ಬೆರೆಸಿ ಅದನ್ನು ಚೆನ್ನಾಗಿ ಬಿಸಿ ಮಾಡಬೇಕು. ನಂತರದಲ್ಲಿ ಬೆನ್ನಿಗೆ ಹಚ್ಚಬೇಕು. ಜ್ಯೇಷ್ಠಮದ್ದು, ಹಿಪ್ಪಲಿಯ ಚೂರ್ಣ ಆಡುಸೋಗೆಯ ಎಲೆಯನ್ನು ತೆಗೆದುಕೊಂಡು ಚೆನ್ನಾಗಿ ಅರೆಯಬೇಕು. ನಂತರದಲ್ಲಿ ಜೇನುತುಪ್ಪ ಬೆರೆಸಿ ದಿನಕ್ಕೆ ಎರಡು ಬಾರಿ ಕುಡಿಯಬೇಕು. ಇದರಿಂದ ಯಾವುದೇ ಹಾನಿಯಿಲ್ಲ.

ಹಾಗೆಯೇ ಎಕ್ಕದ ಬೇರಿನ ತೊಗಟೆಯನ್ನು ಮತ್ತು ಜ್ಯೇಷ್ಠಮದ್ದನ್ನು ಸಮ ಪ್ರಮಾಣದಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಬೇಕು. ಅದಕ್ಕೆ ಜೇನುತುಪ್ಪ ಸೇರಿಸಿ ಒಂದು ಚಮಚ ಸೇವನೆ ಮಾಡಬೇಕು. ಹಾಗೆಯೇ ಎಕ್ಕದ ಎಲೆ ಅಥವಾ ಹೂವಿನ ಪುಡಿಯಿಂದ ಬತ್ತಿ ಮಾಡಬೇಕು. ಅದನ್ನು ಸೇದಿದರೆ ತಾತ್ಕಾಲಿಕವಾಗಿ ಉಬ್ಬಸವನ್ನು ಕಡಿಮೆ ಮಾಡಿಕೊಳ್ಳಬಹುದು. ಹಾಗೆಯೇ ಬಿಸಿಯಾದ ನೀರಿಗೆ ನೀಲಗಿರಿ ಎಣ್ಣೆಯನ್ನು ಇದರ ಆವಿಯನ್ನು ಉಸಿರಾಟದ ಮುಳ ದೇಹಕ್ಕೆ ತೆಗೆದುಕೊಳ್ಳಬೇಕು. ಇವುಗಳಿಂದ ಉತ್ತಮವಾದ ಪರಿಣಾಮವನ್ನು ಕಾಣಬಹುದು.

Leave A Reply

Your email address will not be published.