ಗಂಡಸರಿಗೆ ಹಾಗೂ ಹೆಂಗಸರಿಗೆ ಪ್ರಮುಖವಾಗಿ ಈ ಚೂರ್ಣ ಬೇಕೇ ಬೇಕು

0 9

ಅಶ್ವಗಂಧ ಎಂಬುದು ಒಂದು ಔಷಧಿಗಿಡ. ಹಿರಿಯರಿಂದ  ಹಿರೇಮದ್ದು ಎಂದೇ ಕರೆಸಿಕೊಳ್ಳುವ ಈ ಸಸ್ಯ. ನರಸಂಬಂಧಿ, ಕಫವಾತ ಸಂಬಂಧಿ ದೋಷಗಳನ್ನು ಕಿತ್ತು ಕಳೆಯಬಲ್ಲ ಗುಣವಿದೆ. ಈ ಗಿಡದ ಬೇರಿಗೆ ಲೈಂ’ ಗಿಕ ದೌರ್ಬಲ್ಯ ನಿವಾರಿಸುವ ಅದ್ಬುತ ಸಾಮರ್ಥ್ಯವಿದೆ. ಹಾವು, ಚೇಳು ಕಚ್ಚಿದಾಗ ಇದರ ಬೇರನ್ನು ನಿಂಬೆರಸದೊಂದಿಗೆ ಹಚ್ಚಲು ಉಪಯೋಗಿಸುತ್ತಾರೆ. ಇದರ ಬೇರನ್ನು ಸ್ವಚ್ಚಗೊಳಿಸಿ ಪುಡಿ ಮಾಡಿ ಸೇವಿಸಿದರೆ ಅಶ್ವದಂತೆ ಶಕ್ತಿಬಲ ಮತ್ತು ಉತ್ಸಾಹ ಬರುತ್ತದೆಯಾದ್ದರಿಂದ ಇದಕ್ಕೆ ಅಶ್ವಗಂಧಾ ಎಂಬ ನಾಮವು ಬಂದಿದೆ. ಆದ್ದರಿಂದ ನಾವು ಇಲ್ಲಿ ಈ ಗಿಡದ ಉಪಯೋಗಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಅಶ್ವಗಂಧದ ಎಲೆ ಹಣ್ಣು ಮತ್ತು ಬೇರು ಚಿಕಿತ್ಸೆಗಳಲ್ಲಿ ಉಪಯೋಗಿಸುವರು. ಇದು ಬಹು ಹಿಂದಿನ ಕಾಲದಿಂದಲೂ ಬಳಕೆಯಲ್ಲಿರುವ ಔಷಧಿ. ಬೇರಿನಲ್ಲಿ ಸೋಮ್ನಿಫೆರಸ್ ಅನ್ನುವ ಕ್ಷಾರವಿರುವುದು. ಈ ಕ್ಷಾರವು ನಿದ್ದೆ ಬರಿಸುವ ಸಾಮರ್ಥ್ಯ ಹೊಂದಿದೆ. ಸರ್ವ ರೋಗಕ್ಕೆ ಮದ್ದು ಹಿರೇಮದ್ದು ಎಂದು ನಾಣ್ನುಡಿ. ಸತ್ಯವೂ ಹೌದು. ಇದು ರಕ್ತ ಶುದ್ಧಿ ಮಾಡಿ ರಕ್ತ ವೃದ್ಧಿ ಮಾಡಿ ದೇಹಕ್ಕೆ ಕಾಂತಿ ಮತ್ತು ಪುಷ್ಟಿಯನ್ನು ಕೊಡುವುದು. ನಿಶ್ಶಕ್ತಿಯನ್ನು ನೀಗಿಸುವುದು ಹಾಗೂ ಗೆಲ್ಲುವ ಶಕ್ತಿಯಿದೆ. ಈ ವನೌಷಧಿ ಸೇವನೆಯಿಂದ ಸಂವೋಹಕಾರಿ ಚಿತ್ತ ಚಂಚಲತೆ, ಗಾಬರಿ ದೂರವಾಗುವುವು.

ಮಕ್ಕಳಿಗೆ ಪುಷ್ಟಿ ನೀಡುವುದು, ವೃದ್ಧಾಪ್ಯದ ದೌರ್ಬಲ್ಯಗಳನ್ನು ನೀಗಿ ಶಕ್ತಿ, ಸ್ಫೂರ್ತಿ ಮತ್ತು ಯೌವನವನ್ನು ಕೊಡುವುದು.ಆಯುರ್ವೇದ ಶಾಸ್ತ್ರದಲ್ಲಿ ಅಂದರೆ ಚರಕ ಮಹರ್ಷಿಗಳ ಚರಕ ಸಂಹಿತೆಯಲ್ಲಿ ರಸಾಯನ ವಾಚಿಕರಣ ಎಂಬ ಅಧ್ಯಾಯದಲ್ಲಿ ಲೈಂ ಗಿಕ ಸಮಸ್ಯೆ ಹಾಗೂ ಲೈಂ’ಗಿಕತೆಯ ವಿಚಾರವನ್ನು ವಿವರಿಸಿದ್ದಾರೆ. ಲೈಂ’ಗಿಕತೆಯನ್ನು ಸರಿಯಾದ ನೆಲೆಗಟ್ಟಿನಲ್ಲಿ ಉಪಯೋಗಿಸಿದರೆ ಮಾತ್ರ ಅದಕ್ಕೊಂದು ಯೋಗ್ಯತೆ ದೊರಕುತ್ತದೆ. ಇದಕ್ಕೆ ಆಧ್ಯಾತ್ಮದಲ್ಲಿ ವಾಜಿಕರಣ ಎನ್ನುತ್ತಾರೆ. ವಾಜಿಕರಣ ಚಿಕಿತ್ಸೆ ಎಂದರೆ 100 ವರ್ಷ ಕುದುರೆಯ ಹಾಗೆ ಲೈಂ’ಗಿಕ ಕ್ರಿಯೆ ನೆಡೆಸಲು ಸಾಮರ್ಥ್ಯನಾಗಿರುವುದಕ್ಕೆ ಚಿಕಿತ್ಸೆ ಪಡೆಯುವುದಾಗಿದೆ.

ಯಾವುದೇ ಒಂದು ದೇಹ ಸಾಮರ್ಥ್ಯ ದಲ್ಲಿ ಕುದುರೆ 1 ನೆ ಸ್ಥಾನದಲ್ಲಿರುತ್ತದೆ. ಇದೆ ಶಕ್ತಿಯನ್ನು ಈ ಗಿಡವು ನೀಡುತ್ತದೆ ಎಂದು ಆಯುರ್ವೇದ ಔಷದದಲ್ಲಿ ಉಲ್ಲೇಖಿಸಿದ್ದಾರೆ.
ಅಶ್ವಗಂಧವನ್ನು ಈ ಲೈಂಗಿ’ಕಕತೆಯ ವಿಚಾರದಲ್ಲಿ ಔಷಧ ರೂಪದಲ್ಲಿ ಬಳಕೆ ಮಾಡುತ್ತಾರೆ. ಅಶ್ವಗಂಧದ  ಬಳಕೆ ಹೇಗೆಂದರೆ ಇದರ ಬೇರುಗಳನ್ನು ಹಾಲಿನಲ್ಲಿ ಶುದ್ಧ ಮಾಡಿ ಒಣಗಿಸಿ ಚೂರ್ಣ ಮಾಡಿ ಶೋಧಿಸಿಟ್ಟುಕೊಳ್ಳುವುದು. ಹೊತ್ತಿಗೆ ಎರಡೂವರೆ ಗ್ರಾಂನಷ್ಟು ಚೂರ್ಣವನ್ನು ತಿಂದ ಮೇಲೆ ಸಕ್ಕರೆ ಸೇರಿಸಿದ ಹಾಲನ್ನು ಕುಡಿಯುವುದು. ಹೀಗೆ ಮಾಡುವುದರಿಂದ ಲೈಂ’ಗಿಕ ಶಕ್ತಿಯು ಹೆಚ್ಚುತ್ತದೆ. ಹೆಚ್ಚಿನ ಲೈಂಗಿ’ಕತೆಯ ಸಾಮರ್ಥ್ಯವನ್ನು ಮತ್ತು ಲೈಂಗಿಕತೆಯಲ್ಲಿ ಸ್ಥಿರತೆಯನ್ನು ನೀಡುತ್ತದೆ.

Leave A Reply

Your email address will not be published.