ಹಲವು ಗಿಡ ಮರಗಳಲ್ಲಿ ನಮ್ಮ ಆಯುರ್ವೇದ ಗಿಡ ಮೂಲಿಕೆಗಳು ಇವೆ, ಆದ್ರೆ ಅವುಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು ಹಿಂದಿ ಕಾಲದಲ್ಲಿ ಎಲ್ಲದಕ್ಕೂ ಆಸ್ಪತ್ರೆಯ ಮೊರೆ ಹೋಗುತ್ತಿರಲಿಲ್ಲ, ಹಲವು ನಾಟಿ ಔಷಧಿ ಗಿಡಮೂಲಿಕೆಗಳ ಮೂಲಕ ಸೂಕ್ತ ಪರಿಹಾರ ಕಂಡುಕೊಳ್ಳುತ್ತಿದ್ದರು. ಹಾಗೆಯೆ ಇಂದಿಗೂ ಸಹ ಕೆಲವೊಮ್ಮೆ ವೈದ್ಯರಿಂದ ಆಗದೆ ಇರುವಂತ ಕಾಯಿಲೆ ರೋಗಗಳಿಗೆ ಗಿಡಮೂಲಿಕೆಗಳಿಂದ ವಾಸಿಮಾಡಿಕೊಂಡಿರುವಂತ ಉದಾಹರಣೆಗಳಿವೆ.

ಈ ಮೂಲಕ ಮಂಡಿ ನೋವು ಕೀಲು ನೋವು ನಿವಾರಣೆಗೆ ಈ ಪಾರಿಜಾತ ಅನ್ನೋ ಸಸ್ಯ ಹೇಗೆ ಸಹಕಾರಿಯಾಗಿದೆ ಹಾಗೂ ಇದನ್ನು ಹೇಗೆ ಬಳಸಬಹುದು ಅನ್ನೋದನ್ನ ತಿಳಿದುಕೊಳ್ಳೋಣ ನಿಮಗೆ ಈ ಉಪಯುಕ್ತ ಮಾಹಿತಿ ಇಷ್ಟ ಆದಲ್ಲಿ ನಿಮ್ಮ ಸ್ನೇಹಿತರಿಗೂ ಕೂಡ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

ಪಾರಿಜಾತ ಗಿಡದಲ್ಲಿ ಬಿಳಿ ಬಣ್ಣದ ಹೂವನ್ನು ಕಾಣಬಹುದು ಈ ಹೂವು ಔಷಧಿಯಾಗಿ ಕೆಲಸ ಮಾಡುತ್ತದೆ. ಇದು ಬಹಳಷ್ಟು ಜನಕ್ಕೆ ಚಿರಪರಿಚಿತವಾಗಿರುವಂತ ಗಿಡವಾಗಿದ್ದು ಇದರಲ್ಲಿ ಅನೇಕ ಔಷಧಿ ಗುಣಗಳನ್ನು ಕಾಣಬಹುದು. ಈ ಗಿಡವನ್ನು ದೇವಸ್ಥಾನ ಹಾಗೂ ಬೆಟ್ಟ ಗುಡ್ಡಗಳಲ್ಲಿ ಹೆಚ್ಚಾಗಿ ಕಾಣಬಹದು ಇನ್ನು ಕೆಲವರು ಇದನ್ನು ಮನೆಯ ಮುಂದೆ ಬೆಳೆಸಿರುತ್ತಾರೆ.

ಮನೆಮದ್ದು: 6 ರಿಂದ8 ಪಾರಿಜಾತ ಗಿಡದ ಎಲೆಗಳನ್ನು ತಗೆದುಕೊಂಡು ಅದನ್ನು ಶುದ್ಧವಾದ ನೀರಿನಲ್ಲಿ ತೊಳೆದು ನುಣ್ಣಗೆ ಅರೆದು ಪೇಸ್ಟ್ ರೀತಿ ಮಾಡಿಕೊಳ್ಳಬೇಕು, ಈ ಪೇಸ್ಟ್ ಅನ್ನು ಒಂದು ಗ್ಲಾಸ್ ನೀರಿನಲ್ಲಿ ಹಾಕಿ ಕುದಿಸಬೇಕು. ನಂತರ ಆ ನೀರು ಅರ್ಧ ಆಗುವವರೆಗೂ ಕಷಾಯದಂತೆ ಮಾಡಿಕೊಳ್ಳಬೇಕು, ಆ ಕಷಾಯವನ್ನು ರಾತ್ರಿಯೆಲ್ಲ ಹಾಗೆಯೇ ಇಟ್ಟು ಬೆಳಿಗ್ಗೆ ತಣ್ಣಗೆ ಇರುವಾಗಲೇ ಕುಡಿಯಬೇಕು. ಈ ಕಷಾಯದ ವಿಶೇಷತೆ ಏನು ಅನ್ನೋದನ್ನ ನೋಡುವುದಾದರೆ ಇದು ರುಮಟಾಯಿಡ್, ಅರ್ಥರೈಟಿಸ್ ನೋವುಗಳಿಗೆ ಉತ್ತಮವಾದ ಔಷಧವಾಗಿ ಕೆಲಸ ಮಾಡುತ್ತದೆ. ಇದನ್ನು ತಯಾರಿಮಾಡಿಕೊಂಡು ಪ್ರತಿದಿನ ತೆಗೆದುಕೊಂಡರೆ ಒಂದು ತಿಂಗಳಿನಲ್ಲಿ ಎಂತಹ ಕೀಲು ನೋವು ಇದ್ರು ನಿವಾರಣೆಯಾಗುವುದು ಅಷ್ಟೇ ಅಲ್ಲದೆ ಮೂಳೆಗಳು ಸವೆದು ಹೋಗಿದ್ದರೆ ಕಾರ್ಟಿಲೆಜ್ ಎಂಬ ಅಂಶ ಮತ್ತೆ ಉತ್ಪತ್ತಿಯಾಗುತ್ತದೆ. ಒಟ್ಟಾರೆಯಾಗಿ ಈ ಪಾರಿಜಾತಾ ಹೂವಿನ ಕಷಾಯ ಮೂಳೆಗಳ ಸಮಸ್ಯೆ ನಿವಾರಿಸುವ ಜೊತೆಗೆ ಮೂಳೆಗಳ ಆರೋಗ್ಯವನ್ನು ವೃದ್ಧಿಸುವಂತ ಕೆಲಸ ಮಾಡುತ್ತದೆ ಅನ್ನೋದನ್ನ ಹೇಳಲಾಗುತ್ತದೆ.

By

Leave a Reply

Your email address will not be published. Required fields are marked *