ಈ ವ್ಯವಹಾರವು ಸರಿಯಾಗಿ ನೆಡೆದರೆ ಲಾಭದಾಯಕವಾಗಿದೆ, ಈ ವ್ಯವಹಾರವವನ್ನು ಪ್ರಾರಂಭಿಸುವ ಮೊದಲು ಇದಕ್ಕೆ ಸಂಬಂಧಿಸಿದ ಸಮೀಕ್ಷೆಯನ್ನು ಮಾಡಿ. ಕಪ್ ನ ಬೇಡಿಕೆಯ ಗಾತ್ರದ ಸಮೀಕ್ಷೆ ಅಂದರೆ ನೀವು ಯಾವ ಗಾತ್ರದ ಕಪ್ ಅನ್ನು ತಯಾರಿಸಲು ಬಳಸುತ್ತಿರಿ,, ನಿಮ್ಮ ಪ್ರದೇಶದಲ್ಲಿ ಕಪ್ ನ  ಮಾರಾಟ ಬೆಲೆ,ನುರಿತ ನಿರ್ವಹಕಾರ ಲಭ್ಯತೆ,, ತಂತ್ರಜ್ಞರಾ ಲಭ್ಯತೆ,, ಸಾರಿಗೆ ಸೌಲಭ್ಯ,ನಿಮ್ಮ ಪ್ರದೇಶದಲ್ಲಿ ಸ್ಪರ್ಧೆ ಹಾಗೂ ಇನ್ನೂ ಅನೇಕ.ಪೇಪರ್ ಪ್ಲೇಟ್ ಮತ್ತು ಕಪ್ ತಯಾರಿಕೆ ಅತ್ಯಂತ ಸುರಕ್ಷಿತ ಮತ್ತು ದೀರ್ಘವಧಿಯ ಉದ್ಯಮಗಳಲ್ಲಿ ಒಂದಾಗಿದೆ,1-2 ಲಕ್ಷ ರೂ ಹೂಡಿಕೆ ಮಾಡಿ ಸಣ್ಣದಾಗಿ ಪೇಪರ್ ಪ್ಲೇಟ್ ಘಟಕ ಆರಂಭಿಸಬಹುದು. ಅಥವಾ ಕೋಟ್ಯಂತರ ರೂ ಹೂಡಿಕೆ ಮಾಡಿ ದೊಡ್ಡ ಉದ್ಯಮ ಕಟ್ಟುತ್ತೇವೆ ಎನ್ನುವವರಿಗೆ ಈ ಕ್ಷೇತ್ರದಲ್ಲಿ ಅವಕಾಶಗಳಿವೆ

ಮದುವೆ, ಸಭೆ ಸಮಾರಂಭಗಳು, ಹೋಟೆಲ್ ಗಳು, ಚಾಟ್ಸ್ ಸೆಂಟರ್ ಗಳು, ಫುಡ್ ಟ್ರಕ್ ಗಳು, ಆಫೀಸ್ ಕ್ಯಾಂಟೀನ್ಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಪೇಪರ್ ಪ್ಲೇಟ್ ಗಳಿಗೆ ಹೆಚ್ಚು ಬೇಡಿಕೆ ಇದೆ.ಪೇಪರ್ ಪ್ಲೇಟ್ ಬಿಸಿನೆಸ್ ಅನ್ನು ನೀವೊಬ್ಬರೇ ಮಾಡುತ್ತಿದ್ದರೆ ಪೊಪ್ರೈಟರ್ ಶಿಪ್ ಅಡಿಯಲ್ಲಿ ನೋಂದಣಿ ಮಾಡಿಸಬೇಕಾಗುತ್ತದೆ, ಪಾಟ್ನರ್ ಶಿಪ್ ನಲ್ಲಿ ಪೇಪರ್ ಪ್ಲೇಟ್ ಬಿಸಿನೆಸ್ ಆರಂಭಿಸುವುದಾದರೆ ರಿಜಿಸ್ಟರ್ ಆಫ್ ಕಂಪನಿಯಲ್ಲಿ ಲಿಮಿಟೆಡ್ ಲೈಯಬಲಿಟಿ ಪಾಟ್ನರ್ ಶಿಪ್ ಅಥವಾ ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.ಜಿಎಸ್ ಟಿ ನೋಂದಣಿ, ಟ್ರೇಡ್ ಲೈಸೆನ್ಸ್ ಪಡೆದುಕೊಳ್ಳಬೇಕಾಗುತ್ತದೆ. ಸಣ್ಣ ಕೈಗಾರಿಕೆಗಳಡಿ ನೋಂದಣಿ ಮಾಡಿಸಿಕೊಂಡರೆ ಸರ್ಕಾರದ ಕೆಲ ಸವಲತ್ತುಗಳು ನಿಮ್ಮ ಪೇಪರ್ ಪ್ಲೇಟ್ ಬಿಸಿನೆಸ್ ಘಟಕಕ್ಕೆ ದಕ್ಕುತ್ತವೆ.

ಈ ಬಿಸಿನೆಸ್ ಶುರು ಮಾಡಲು 600 ಚದರಡಿ ಜಾಗವಿದ್ದರೂ ಘಟಕ ಆರಂಭಿಸಬಹುದು, ಮನೆಯಲ್ಲಿ ಸ್ಥಳವಕಾಶವಿದ್ದರೆ ಅಲ್ಲೇ ಸಣ್ಣ ಘಟಕ ಮಾಡಲು ಕೂಡ ಸಾಧ್ಯವಿದೆ. ಘಟಕದಲ್ಲಿ ಕಚ್ಚಾ ವಸ್ತುಗಳ ಶೇಖರಣೆಗೆ ಯಂತ್ರದ ಕಾರ್ಯಚರಣೆಗೆ, ಉತ್ಪನ್ನಗಳ ಸಂಗ್ರಹಕ್ಕೆ ಪ್ರತ್ಯೇಕ ಜಾಗ ನೋಡಿಕೊಳ್ಳಬೇಕು. ಸ್ಕ್ರಯಪ್ ಪೇಪರ್ ಜತೆ ಪಾಲಿತಿನ್ ಶಿಟ್ ಗಳ ಪೇಪರ ತಯಾರಿಕೆ ಘಟಕದ ಮುಖ್ಯ ಕಚ್ಚಾ ವಸ್ತುಗಳು.ಪೇಪರ್ ಪ್ಲೇಟ್ ಘಟಕಕ್ಕೆ ಸೆಮಿ ಆಟೊಮೆಟಿಕ್ ಮಷಿನ್ ಅಥವಾ ಫುಲ್ ಆಟೋಮೆಟಿಕ್ ಮಿಷಿನ್ ಗಳನ್ನು ಬಳಸಬಹುದು.ಇದರ ಜೊತೆ ಪೇಪರ್ ಕಟಿಂಗ್ ಯಂತ್ರ, ಡಬಲ್ ಡೈ ಪ್ರೆಸ್ ಮಿಷಿನ್, ವೈಯಿಂಗ್ ಸ್ಕೇಲ್  ಪ್ಯಾಂಕಿಂಗ್ ಮಷಿನ್ ಗಳನ್ನು ಖರೀಧೀಸುವುದು ಸೂಕ್ತ.

ಅಂದಾಜಿನ ಪ್ರಕಾರ ಬೆಂಗಳೂರಿನಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಪೇಪರ್ ಪ್ಲೇಟ್ ಬಿಸಿನೆಸ್ ನಲ್ಲಿ ತೊಡಗಿದ್ದಾರೆ, ಮೈಸೂರಿನಲ್ಲಿ 2 ಸಾವಿರಕ್ಕೂ ಹೆಚ್ಚು ಜನ ಈ ಉದ್ಯಮದ ಮೂಲಕ ಜೀವನ ಕಟ್ಟಿಕೊಂಡಿದ್ದಾರೆ.ಪ್ಲಾಸ್ಟಿಕ್ ಕಪ್ ಸುಮಾರು ದಿನಗಲಾದರೂ ಹಾಗೆ ಇರುತ್ತೆ ಆದರೆ ಪೇಪರ್ ಕಪ್ ಬೇಗನೆ ಕೊಳೆತು ಹೋಗುತ್ತೆ ಆದ್ದರಿಂದ ಎಲ್ಲಾ ಕಡೆ ಇದರ ಉಪಯೋಗ ಜಾಸ್ತಿ ಆಗಿದೆ.ಇದರ ಬಗ್ಗೆ ಇನ್ನೂ ಹೆಚ್ಚು ತಿಳಿದು ಕೊಳ್ಳಲು ಫೈನಾನ್ಸಿಯಲ್ ಫ್ರೀಡಂ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.

Leave a Reply

Your email address will not be published. Required fields are marked *