ಪೇಪರ್ ಬ್ಯಾಗ್ ಬಿಸಿನೆಸ್ ಮಾಡುವುದರಿಂದ ಲಾಭವಿದೆಯೇ?

0 3

ಪ್ಲಾಸ್ಟಿಕ್ ಬ್ಯಾಗ್ ಗಳ ಬಿಸಿನೆಸ್ ಲಾಭದಾಯಕವಾಗಿ ಮಾಡಿಕೊಳ್ಳುವುದು ಹೇಗೆ ಹಾಗೂ ಅದರ ಖರ್ಚುಗಳು ಮುಂತಾದ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಪ್ಲಾಸ್ಟಿಕ್ ಬ್ಯಾಗ್ ಗಳನ್ನು ಸರ್ಕಾರ ಬ್ಯಾನ್ ಮಾಡುತ್ತಿರುವುದರಿಂದ ಪೇಪರ್ ಬ್ಯಾಗ್ ಗಳ ಬೇಡಿಕೆ ಹೆಚ್ಚಾಗಿರುವುದರಿಂದ ಪೇಪರ್ ಬ್ಯಾಗ್ ಬಿಸಿನೆಸ್ ಲಾಭ ತಂದುಕೊಡುತ್ತದೆ. ಈ ಬಿಸಿನೆಸ್ ಮಾಡಲು ಒಂದು ಮಷೀನ್ ಬೇಕಾಗುತ್ತದೆ. ಇದು 3 ವರೆ ಲಕ್ಷಕ್ಕೆ ಸಿಗುತ್ತದೆ. ಇದಕ್ಕೆ ಬೇಕಾದ ರಾ ಮಟೀರಿಯಲ್ ಬ್ರೌನ್ ಕ್ರಾಫ್ಟ್ ಪೇಪರಗಳು ಇದು ಕೆ.ಜಿ 23 ರೂಪಾಯಿಗೆ ಸಿಗುತ್ತದೆ. ಗಮ್ ಹಾಗೂ ಫೆವಿಕೋಲ್ ಬೇಕಾಗುತ್ತದೆ. ಮಷೀನ್ ನಲ್ಲಿ ಮೊದಲು ಜಂಬೋ ಪೇಪರ್ ಗಳನ್ನು ಸೆಟ್ ಮಾಡಲಾಗಿರುತ್ತದೆ.ನಂತರ ಮಷೀನ್ ಅನ್ನು ಆಪರೇಟ್ ಮಾಡಬೇಕಾಗುತ್ತದೆ ಮತ್ತು ಗಮ್ಮನ್ನು ಫಿಲ್ ಮಾಡಬೇಕು ಗಮ್ ಪೇಪರ್ ಜೊತೆ ಮಿಕ್ಸಾಗಿ ಫೋಲ್ಡಿಂಗ್ ಮಷೀನ್ ಹತ್ತಿರ ಬರುತ್ತದೆ. ನಿಮಗೆ ಯಾವ ಸೈಜ್ ಬೇಕು ಆ ಸೈಜ್ ನಲ್ಲಿ ನೀಟಾಗಿ ಫೋಲ್ಡ್ ಮಾಡುತ್ತದೆ ಫೋಲ್ಡಿಂಗ್ ಆಗುತ್ತಾ ಕಟಿಂಗ್ ಮಷೀನ್ ಹತ್ತಿರ ಬರುತ್ತದೆ ಇಲ್ಲಿಯೂ ಯಾವ ಸೈಜ್ ಬೇಕು ಆ ಸೈಜ್ ನಲ್ಲಿ ಮಷೀನ್ ಕಟ್ ಮಾಡುತ್ತದೆ ಈ ಮಷೀನ್ ಆಟೋಮೆಟಿಕ್ ಆಗಿರುವುದರಿಂದ ಹೆಚ್ಚು ಕಾರ್ಮಿಕರ ಅವಶ್ಯಕತೆ ಇರುವುದಿಲ್ಲ ನಂತರ ಪೇಪರ್ ಬ್ಯಾಗ್ ದೊರೆಯುತ್ತದೆ.

ಗಂಟೆಗೆ 500 ಬ್ಯಾಗ್ ಇದು ತಯಾರಿಸುತ್ತದೆ. ಕೇವಲ ಸಣ್ಣ ಬ್ಯಾಗ್ ಅಲ್ಲದೇ ದೊಡ್ಡ ಸೈಜ್ ಬ್ಯಾಗಗಳು ಬರುತ್ತದೆ. ಈ ಬ್ಯಾಗ್ ಗಳ ಮೇಲೆ ಬ್ರ್ಯಾಂಡಿಂಗ್ ಮಾಡಿಸಿ ಸೇಲ್ ಮಾಡಬಹುದು. ಅಥವಾ ಐದು ಲಕ್ಷ ರೂಪಾಯಿಗೆ ಮಷೀನ್ ಜೊತೆ ಇನ್- ಬಿಲ್ಟ್ ಪ್ರಿಂಟರ್ ಬರುತ್ತದೆ. ಈ ಬಿಸಿನೆಸ್ ಮಾಡಲು ಜಿ.ಎಸ್.ಟಿ ರಿಜಿಸ್ಟ್ರೇಷನ್ ಮಾಡಿಸಬೇಕು. ಹೋಲ್ ಸೇಲಾಗಿ 50 ರೂಪಾಯಿಗೆ ಮಾರಬೇಕು ಇದರಿಂದ ನಮಗೆ ಒಂದು ಕೆಜಿಗೆ 20 ರೂಪಾಯಿ ಪ್ರಾಫಿಟ್ ಸಿಗುತ್ತದೆ. ಈ ಮಷೀನ್ ಗಂಟೆಗೆ 500 ಬ್ಯಾಗ್ ಗಳನ್ನು ತಯಾರಿಸುವುದರಿಂದ ಗಂಟೆಗೆ ಹತ್ತು ಸಾವಿರ ರೂಪಾಯಿ ಸಂಪಾದನೆ ಮಾಡಬಹುದು. ಮಾರ್ಕೆಟಿಂಗ್ ಮುಖ್ಯವಾಗಿದೆ. ಪೇಪರ್ ಬ್ಯಾಗ್ ಗಳ ಬಿಸಿನೆಸ್ ಮಾಡುವುದರಿಂದ ಲಾಭ ಗಳಿಸಬಹುದು. ಈ ಮಾಹಿತಿಯನ್ನು ತಪ್ಪದೆ ತಿಳಿಸಿ ತಿಳಿಸಿ.

Leave A Reply

Your email address will not be published.