ಮೇಷ ರಾಶಿಯವರಿಗೆ ಯಾವಾಗ ಒಳ್ಳೆಯ ಸಮಯ ಬರುತ್ತದೆ, ಯಾವಾಗ ಅಶುಭ ಸಮಯ ಬರುತ್ತದೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಜಾತಕದಲ್ಲಿ ದೆಶೆಭುಕ್ತಿ ಎನ್ನುವಂತದ್ದು ಇರುತ್ತದೆ. ಮೇಷ ರಾಶಿಯವರಿಗೆ ಕುಜ ದೆಶೆ ಕುಜ ಭುಕ್ತಿ ಇದ್ದಾಗ ಒಳ್ಳೆ ಸಮಯ ಬರುತ್ತದೆ. ಒಂದು ವೇಳೆ ಕುಜ ಗ್ರಹ ಬಲಿಷ್ಠನಾಗಿದ್ದರೆ. ಮಕರ ರಾಶಿಯಲ್ಲಿ ಕುಜ ಗ್ರಹ ಉಚ್ಛಸ್ಥಾನಕ್ಕೆ ಹೋಗುತ್ತಾನೆ ಸಿಂಹ ರಾಶಿಯಲ್ಲಿ, ಕಟಕ ರಾಶಿಯಲ್ಲಿ, ಮೀನ ಮತ್ತು ಧನಸ್ಸು ರಾಶಿಯಲ್ಲಿ ಕುಜ ಗ್ರಹ ಇದ್ದರೆ ಮಿತ್ರನ ಮನೆಯ ರಾಶಿ ಆಗುತ್ತದೆ ಆಗಲೂ ಸಹ ಕುಜ ಗ್ರಹ ಬಲಿಷ್ಟನಾಗಿತ್ತಾನೆ. ಮೇಷ ಲಗ್ನ ಅಥವಾ ವೃಶ್ಚಿಕ ಲಗ್ನ ಆದಂತಹ ಸಂದರ್ಭದಲ್ಲಿ ಕುಜ ಬಲಿಷ್ಟನಾಗುತ್ತಾನೆ ಹೀಗೆ ಕುಜ ಗ್ರಹ ಬಲಿಷ್ಟನಾಗಿದ್ದರೆ ಮೇಷ ರಾಶಿಯವರಿಗೆ ಒಳ್ಳೆಯದು. ಅಶುಭ ಗ್ರಹಗಳ ಭುಕ್ತಿ ನಡೆಯುತ್ತಿದ್ದು ಶುಭ ಗ್ರಹಗಳ ದೆಶೆ ನಡೆಯುತ್ತಿದ್ದಾಗಲೂ ಮೇಷ ರಾಶಿಯವರಿಗೆ ತೊಂದರೆಯಾಗಿತ್ತದೆ.

ಕುಜ ದೆಶೆ ಮತ್ತು ಕುಜ ಭುಕ್ತಿ ನಡೆಯುತ್ತಿದ್ದರೆ ಒಳ್ಳೆಯ ಸಮಯ. ಈ ಸಮಯದಲ್ಲಿ ಭೂಮಿಗೆ ಸಂಬಂಧಿಸಿದ ವ್ಯವಹಾರದಲ್ಲಿ ಲಾಭವಾಗುತ್ತದೆ, ಕೆಲಸದಲ್ಲಿ ಪ್ರಮೋಷನ್ ಸಿಗುವುದು, ಹಣಕಾಸಿನ ವಿಚಾರದಲ್ಲೂ ಅನುಕೂಲವಾಗುತ್ತದೆ. ಚಂದ್ರ, ರವಿ, ಗುರು ಗ್ರಹಗಳ ದೆಶೆ ಅಥವಾ ಭುಕ್ತಿಗಳಲ್ಲಿ ಅನುಕೂಲವಾಗುತ್ತದೆ. ಆದರೆ ಶತ್ರುಗಳು ದೆಶೆಯಲ್ಲಿದ್ದರೆ ಅನುಕೂಲವಾಗುವುದಿಲ್ಲ. ಶನಿ ದೆಶೆ ಶನಿ ಭುಕ್ತಿಯಲ್ಲಿ , ಬುಧ ದೆಶೆ ಬುಧ ಭುಕ್ತಿಯಲ್ಲಿ ಮೇಷ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಅಷ್ಟಮದಲ್ಲಿ, ಪಂಚಮದಲ್ಲಿ, ಸಪ್ತಮ ಶನಿಯಾಗಿದ್ದರೆ, ಸಾಡೇಸಾತಿ ನಡೆಯುವಾಗ ಮೇಷ ರಾಶಿಯವರಿಗೆ ಅನಾನುಕೂಲವಾಗಿರುತ್ತದೆ. ಯಾವುದೇ ಒಳ್ಳೆಯ ಕೆಲಸ ಮಾಡುವಾಗ ಒಮ್ಮೆ ಜಾತಕ ತೋರಿಸಿಕೊಳ್ಳುವುದು ಉತ್ತಮ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave a Reply

Your email address will not be published. Required fields are marked *