ಪಾಲಕ್ ಸೊಪ್ಪನ್ನು ಹೆಚ್ಚಾಗಿ ತಿನ್ನೋದ್ರಿಂದ ನಿಮ್ಮ ಶರೀರಕ್ಕೆ ಇದೆ ಈ ಲಾಭಗಳು

0 20

ದೇಹದ ಆರೋಗ್ಯ ಕಾಪಾಡಿಕೊಳ್ಳಲು ಹಣ್ಣು, ತರಕಾರಿಗಳು ಹಾಗೂ ಸೊಪ್ಪುಗಳ ಸೇವನೆ ಬಹಳ ಮುಖ್ಯ. ಅದರಲ್ಲೂ ಪಾಲಾಕ್ ಸೊಪ್ಪು ಅತಿ ಹೆಚ್ಚು ಆರೋಗ್ಯವರ್ಧಕ ಗುಣಗಳನ್ನು ಹೊಂದಿದೆ. ಆಂಗ್ಲ ಭಾಷೆಯಲ್ಲಿ Spinach ಎಂದು ಕರೆಯಲ್ಪಡುವ ಪಾಲಾಕ್ ಸೊಪ್ಪಿನಲ್ಲಿ ಪ್ರೋಲೇಟ್, ಕ್ಯಾರೋಟಿನೈಡ್, ವಿಟಮಿನ್ ಅಂಶಗಳು ಹೆಚ್ಚಾಗಿರುವುದರಿಂದ ಚರ್ಮದ ಕಾಂತಿ ಹೆಚ್ಚುವುದಲ್ಲದೆ, ಮೊಡವೆ ಸಮಸ್ಯೆ, ದೃಷ್ಟಿ ಹಿನತೆ, ಅಧಿಕ ರಕ್ತದೊತ್ತದ ಸಮಸ್ಯೆಗಳಿಗೆ ರಾಮಬಾಣ ಎಂದೇ ಹೇಳಬಹುದು. ಹಾಗಿದ್ದರೆ ಪಾಲಕ್ ಸೊಪ್ಪಿನ ಉಪಯೋಗಗಳು ಏನು? ಎಂಬುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಪಾಲಕ್ ಸೊಪ್ಪಿನಿಂದ ನಾವು ವಿವಿಧ ರೀತಿಯ ಅಡುಗೆ ತಯಾರಿಕೆಗಳನ್ನು ಮಾಡುತ್ತೇವೆ. ಇದು ಕೇವಲ ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಕೂಡ ತುಂಬಾನೇ ಪ್ರಯೋಜನಗಳಿವೆ ಎಂದು ಹೇಳಬಹುದು.ಕೂದಲಿನ ಬೆಳವಣಿಗೆಗೆ ಪಾಲಾಕ್ ಸೊಪ್ಪು ಬಹಳ ಸಹಕಾರಿ. ಕಬ್ಬಿಣ, ವಿಟಮಿನ್ ಎ ಮತ್ತು ಸಿ ಹಾಗೂ ಪ್ರೊಟೀನ್ ಅಂಶಗಳು ಈ ಪಾಲಾಕ್ ಸೊಪ್ಪಿನಲ್ಲಿ ಹೇರಳವಾಗಿರುವುದರಿಂದ ಕೂದಲು ಉದುರುವುದನ್ನು ತಡೆದು, ನೈಸರ್ಗಿಕ ಕಾಂತಿ ನೀಡುತ್ತದೆ. ಇದರಲ್ಲಿ ಸಮೃದ್ಧವಾಗಿ ಕಬ್ಬಿಣಾಂಶ ಇರುವುದರಿಂದ ರಕ್ತದ ಕಣಗಳನ್ನು ಹೆಚ್ಚಿಸುತ್ತದೆ. ವಾರದಲ್ಲಿ 3 ಬಾರಿಯಾದರೂ ಪಾಲಕ್ ಸೊಪ್ಪನ್ನು ತಿಂದರೆ ಆರೋಗ್ಯದ ಜೊತೆಗೆ ಸೌಂದರ್ಯವನ್ನು ಹೆಚ್ಚಾಗಿ ವೃದ್ಧಿಸುತ್ತದೆ. ಇದರಲ್ಲಿ ವಿಟಮಿನ್ ಕೆ ಅಂಶವಿರುವುದರಿಂದ ಬಿಸಿಲಿನಿಂದ ಆಗಿರುವ ಕಪ್ಪು ಬಣ್ಣ ಮತ್ತು ಕಪ್ಪು ಕಲೆಗಳನ್ನು ನಿವಾರಿಸುತ್ತದೆ. ಇದರ ಸೋರಿಯಾಸಿಸ್ ಅಂಶವು ತುರಿಕೆ ಮತ್ತು ಒಣ ಚರ್ಮವನ್ನು ಕಡಿಮೆ ಮಾಡುತ್ತದೆ. ಪಾಲಾಕ್ ಸೊಪ್ಪನ್ನು ಆಗಾಗ ತಿನ್ನುತ್ತಿದ್ದರೆ ಡಯಾಬಿಟೀಸ್, ಕ್ಯಾನ್ಸರ್, ಅಸ್ತಮಾ, ರಕ್ತದೊತ್ತಡವನ್ನು ಕಡಿಮೆ ಮಾಡಿ ಮೂಳೆಗಳನ್ನು ಬಲಿಷ್ಠ ಮಾಡುತ್ತದೆ. ಹಾಗೆ ಇದರ ಜೊತೆಗೆ ಜೀರ್ಣಕ್ರಿಯೆಯನ್ನು ಸಹ ಉತ್ತಮವಾಗಿ ಮಾಡುತ್ತದೆ.

ಪಾಲಾಕ್ ಸೊಪ್ಪಿನಲ್ಲಿ ಕ್ಯಾಲ್ಷಿಯಂ, ಐರನ್, ವಿಟಮಿನ್ ಕೆ, ವಿಟಮಿನ್ ಸಿ, ವಿಟಮಿನ್ ಎ, ಫೋಲೇಟ್, ಝಿಂಕ್, ಮೆಗ್ನೇಷಿಯಂ, ವಿಟಮಿನ್ ಬಿ2, ಫೈಬರ್, ಪೊಟ್ಯಾಶಿಯಂ ತುಂಬ ಹೆಚ್ಚಾಗಿರುವುದರಿಂದ ನಮ್ಮ ದೇಹಕ್ಕೆ ನಾನಾ ರೀತಿ ಆರೋಗ್ಯದ ಪ್ರಯೋಜನಗಳನ್ನು ಕೊಡುತ್ತದೆ ಎಂದು ಹೇಳಬಹುದು. ಪಾಲಕ್ ಸೊಪ್ಪನ್ನು ನಿಯಮಿತವಾಗಿ ತಿನ್ನುವುದರಿಂದ ಮುಖದ ಮೇಲೆ ಮೊಡವೆಗಳು ಮಾಯವಾಗಿ, ಮುಖದಲ್ಲಿ ನೆರಿಗೆ ಕಡಿಮೆಯಾಗುತ್ತದೆ. ನರ ದೌರ್ಬಲ್ಯವಿದ್ದವರು ಪಾಲಕ್ ಸೊಪ್ಪನ್ನು ತಿನ್ನುವುದರಿಂದ ಸಮಸ್ಯೆ ನಿವಾರಣೆಯಾಗುತ್ತದೆ.

ಇದರಲ್ಲಿರುವ ಬೀಟಾ ಕ್ಯಾರೊಟಿನ್ ಅಂಶವು ಕಣ್ಣಿಗೆ ಒಳ್ಳೆಯ ಆರೋಗ್ಯವನ್ನು ನೀಡುತ್ತದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್ ಮತ್ತು ಆ್ಯಂಟಿ ಇನ್ ಫ್ಲಮೇಟರಿ ಗುಣಗಳು ಮಾಂಸ ಖಂಡಗಳಿಗೆ ಬಲಿಷ್ಠವನ್ನು ಕೊಡುತ್ತದೆ. ಇದರಲ್ಲಿರುವ ನಾರಿನಂಶ ಅಧಿಕ ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ಅಂಶವು ಶೀತ ಮತ್ತು ಕಫವನ್ನು ನಿವಾರಣೆ ಮಾಡುತ್ತದೆ. ಹಾಗೆ ವಿಟಮಿನ್ ಎ ಅಂಶವು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹಾಗೆ ಇದರಲ್ಲಿ ಕ್ಯಾಲ್ಷಿಯಂ ಗುಣವು ತುಂಬ ಹೇರಳವಾಗಿರುವುದರಿಂದ ಮೂಳೆಗಳಿಗೆ ಬಲಿಷ್ಠವನ್ನು ಕೊಡುತ್ತದೆ. ಇದರ ವಿಟಮಿನ್ ಬಿ6 ಮತ್ತು ಪೊಟಾಶಿಯಂ ಅಂಶಗಳು ಮಿದುಳು ಮತ್ತು ನರಗಳಿಗೆ ಒಳ್ಳೆಯ ಕಾರ್ಯಕ್ಷಮತೆಯನ್ನು ನೀಡುತ್ತದೆ. ಪಾಲಕ್ ಸೊಪ್ಪಿನಲ್ಲಿರುವ ಫೋಲಿಕ್ ಆಮ್ಲವು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಬಹುದು. ಝಿಂಕ್ ಅಂಶವು ಕ್ಯಾನ್ಸರ್ ಅನ್ನು ತಡೆದು ಚರ್ಮದ ಆರೈಕೆಯನ್ನು ಉತ್ತಮವಾಗಿ ಮಾಡಿಸುತ್ತದೆ. ಪಾಲಕ್ ಸೊಪ್ಪನ್ನು ತಿಂದರೆ ರಕ್ತದಲ್ಲಿ ಇನ್ಸುಲಿನ್ ಲೆವೆಲ್ ಅನ್ನು ಕಡಿಮೆ ಮಾಡುತ್ತದೆ ಹಾಗೂ ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ. ಇದರಲ್ಲಿರುವ ವಿಟಮಿನ್ ಇ ಅಂಶವು ಕೂದಲನ್ನು ಹೊಳಪಿನಂತೆ ಮಾಡುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲನ್ನು ಸಹ ಕಡಿಮೆ ಮಾಡುತ್ತದೆ.

ಇದರ ವಿಟಮಿನ್ ಬಿ6 ಮತ್ತು ಪೊಟಾಶಿಯಂ ಅಂಶಗಳು ಮಿದುಳು ಮತ್ತು ನರಗಳಿಗೆ ಒಳ್ಳೆಯ ಕಾರ್ಯಕ್ಷಮತೆಯನ್ನು ನೀಡುತ್ತದೆ. ಪಾಲಕ್ ಸೊಪ್ಪಿನಲ್ಲಿರುವ ಫೋಲಿಕ್ ಆಮ್ಲವು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಬಹುದು. ಝಿಂಕ್ ಅಂಶವು ಕ್ಯಾನ್ಸರ್ ಅನ್ನು ತಡೆದು ಚರ್ಮದ ಆರೈಕೆಯನ್ನು ಉತ್ತಮವಾಗಿ ಮಾಡಿಸುತ್ತದೆ.

ಪಾಲಕ್ ಸೊಪ್ಪನ್ನು ತಿಂದರೆ ರಕ್ತದಲ್ಲಿ ಇನ್ಸುಲಿನ್ ಲೆವೆಲ್ ಅನ್ನು ಕಡಿಮೆ ಮಾಡುತ್ತದೆ ಹಾಗೂ ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ. ಇದರಲ್ಲಿರುವ ವಿಟಮಿನ್ ಇ ಅಂಶವು ಕೂದಲನ್ನು ಹೊಳಪಿನಂತೆ ಮಾಡುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲನ್ನು ಸಹ ಕಡಿಮೆ ಮಾಡುತ್ತದೆ. ಮಕ್ಕಳಲ್ಲಿ ಅಥವಾ ವೃದ್ಧರಲ್ಲಿ ನೆನಪಿನ ಶಕ್ತಿ ಸಮಸ್ಯೆಯಿದ್ದರೆ ಪಾಲಾಕ್ ಸೊಪ್ಪು ಸೇವಿಸುವುದರಿಂದ ಮೆದುಳಿನ ನರಕೋಶಗಳ ವೃದ್ಧಿಯಾಗಿ ನೆನಪಿನ ಶಕ್ತಿ ಹೆಚ್ಚಿಸುತ್ತದೆ. ಸಂಧಿವಾತದ ಸಂಸ್ಯೆಯಿದ್ದವರೂ ಕೂಡ ಪಾಲಾಕ್ ಸೊಪ್ಪು ಸೇವಿಸಬಹುದು. ಹಾಗಿದ್ದರೆ ಇನ್ನೇಕೆ ತಡ. ಇಂದಿನಿಂದಲೇ ನಿಮ್ಮ ಆಹಾರ ಪದ್ಧತಿಯಲ್ಲಿ ಪಾಲಾಕ್ ಸೊಪ್ಪನ್ನು ಅಳವಡಿಸಿಕೊಂಡು ಆರೋಗ್ಯ ವೃದ್ಧಿಸಿಕೊಳ್ಳಿ.

Leave A Reply

Your email address will not be published.