ಒಬ್ಬ ನಟಿ ಯಾವುದಾದರೂ ಓಂದು ಭಾಷೆಯಲ್ಲಿ ನಟಿಸಬಹುದು ಹಾಗೇ ಯಾವುದಾದರೂ ಒಂದು ಭಾಷೆ ಹಾಗೂ ಅಲ್ಲಿನ ನಟರ ಜೊತೆ ಅವಿನಾಭಾವ ನಂಟನ್ನು ಹೊಂದಿರುತ್ತಾರೆ. ಜನರಲ್ಲಿ ಕೂಡಾ ಅಭಿಮಾನ ಬೆಳೆಸಿಕೊಂಡಿರುತ್ತಾರೆ. ಹೀಗೆ ಕನ್ನಡ ಮತ್ತು ಕನ್ನಡ ಭಾಷೆ ಮತ್ತು ಕನ್ನಡದ ನಟರ ಮೇಲೆ ಅಪಾರವಾದ ಅಭಿಮಾನವನ್ನು ಬೆಳೆಸಿಕೊಂಡವರು ನಟಿ ಮಾಧವಿ ಅವರು. ಇವರು ತನ್ನ ವೈಯಕ್ತಿಕ ವೆಬ್ಸೈಟ್ ಒಂದರಲ್ಲಿ ಡಾಕ್ಟರ್ ರಾಜಕುಮಾರ್ ಅವರಿಗೆ ನೀಡಿದಷ್ಟು ಮಹತ್ವ, ಪ್ರಾಮುಖ್ಯತೆಯನ್ನು ಇವರು ಬೇರೆ ಯಾವೊಬ್ಬ ನಟನಿಗೂ ಸಹ ನೀಡಿಲ್ಲ. ಅಷ್ಟೇ ಅಲ್ಲದೆ ಮಾಧವಿ ಅವರು ಬಹಳ ಧೈರ್ಯವಂತೆ. ಅಮೆರಿಕಾ ಮೂಲದ ರಾಲ್ಫ್ ಶರ್ಮಲ್ ಎಂಬವರ ಜೊತೆ ವಿವಾಹ ಆದ ಮಾಧವಿ ಅವರು ಈಗ ಸಾಕಷ್ಟು ಬೆಳೆದಿದ್ದಾರೆ.

ಪತಿ ರಾಲ್ಫ್ ಶರ್ಮಲ್ ಅವರಿಗೆ ದೊಡ್ಡ ಫಾರ್ಮಸಿಟಿಕಲ್ ಕಂಪನಿ ಇದೆ. ತನ್ನ ಪತಿಯ ಜೊತೆಗೆ ದೊಡ್ಡ ಕಂಪನಿಯಲ್ಲಿ ಕೆಲಸ ಆರಂಭಿಸಿದ ಮಾಧವಿ ಅವರು ತನ್ನ ಚಾಣಾಕ್ಷ ತನದಿಂದ ಕಂಪನಿಯನ್ನು ಅತೀ ಉತ್ತುಂಗದ ಮಟ್ಟಕ್ಕೆ ಒಯ್ದಿದ್ದಾರೆ. ಅಷ್ಟೇ ಅಲ್ಲದೇ ಕಂಪನಿಯ ಜವಾಬ್ಧಾರಿಯನ್ನು ಸಹ ತಾವೇ ಹೊತ್ತಿದ್ದಾರೆ. ಬೇರೆ ಬೇರೆ ನಗರಗಳಿಗೆ ಮೀಟಿಂಗ್ ಸಲುವಾಗಿ ಹೋಗಬೇಕಿರುವ ಕಾರಣ ಸ್ವಂತ ವಿಮಾನ ಖರೀದಿ ಮಾಡಿರುವ ಮಾಧವಿ ಅವರು ವಿಮಾನ ಓಡುಸುವುದನ್ನುಸಹ ಕಲಿತಿದ್ದಾರೆ.

ಬಹುಶಃ ಭಾರತೀಯ ಚಿತ್ರರಂಗದಲ್ಲಿ ವಿಮಾನ ಓಡಿಸಬಲ್ಲ ಏಕೈಕ ನಟಿ ಅಂದರೆ ಅದು ಮಾಧವಿ ಅವರು ಮಾತ್ರ ಇರಬೇಕು. ತಮ್ಮ ಪತಿಗೆ ವಿಶ್ರಾಂತಿ ನೀಡಿ 10 ಸಾವಿರ ಕೋಟಿ ಕಂಪನಿಯ ಜವಾಬ್ಧಾರಿಯನ್ನು ಹೊತ್ತಿರುವ ಮಾಧವಿ ಅವರು ಯಾವುದೇ ಸಮಸ್ಯೆಗಳನ್ನೂ ಸುಲಭವಾಗಿ ಬಗೆಹರಿಸಬಲ್ಲ ಸಾಮರ್ಥ್ಯವನ್ನು ಹೊಂದಿರುವ ಚಾಣಾಕ್ಷೆ.

ಆಫೀಸ್ ಮುಗಿದ ತಕ್ಷಣ ತಮ್ಮ ಮಕ್ಕಳಿಗೆ ನಾಟ್ಯ, ಅಡುಗೆ, ಭಾರತೀಯ ಸಂಸ್ಕೃತಿ, ಸಂಪ್ರದಾಯ ಇವುಗಳ ಬಗ್ಗೆ ತಪ್ಪದೇ ಪಾಠ ಮಾಡಿತ್ತಾರೆ. ಎಲ್ಲೇ ಇದ್ದರೂ ಹೇಗೆ ಇದ್ದರೂ ಎಷ್ಟೇ ಉನ್ನತ ಸ್ಥಾನಕ್ಕೆ ಏರಿದರೂ ತಾಯ್ನಾಡಿನ ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರಗಳನ್ನು ನಟಿ ಮಾಧವಿ ಅವರು ಮುಂದುವರೆಸಿಕೊಂಡು ಹೋಗುತ್ತಾ ಇದ್ದಾರೆ.

By

Leave a Reply

Your email address will not be published. Required fields are marked *