ಒಬ್ಬ ರೈತ ಉತ್ತಮ ತಂತ್ರಜ್ಞಾನ ಉಪಯೋಗಿಸಿ ವ್ಯಸಾಯ ಮಾಡಿದರೆ ಅವನ ಮುಂದೆ ಬೇರೆ ಯಾರೂ ಸಾಟಿ ಇಲ್ಲ. ಇಲ್ಲೊಬ್ಬ ರೈತ ಒಂದು ಹಲಸಿನ ಮರದಿಂದ ಹತ್ತು ಲಕ್ಷಕ್ಕೂ ಹೆಚ್ಚು ಸಂಪಾದನೆ ಮಾಡುತ್ತಾ ಇದ್ದಾರೆ. ಅದು ಹೇಗೆ ಎಂಬುದರ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ.

ಒಂದು ಹಲಸಿನ ಮರದಿಂದ ಹತ್ತು ಲಕ್ಷ ಸಂಪಾದನೆಯನ್ನು ಮಾಡುವ ಈ ರೈತನನ್ನು ನೋಡಿ ಎಲ್ಲರೂ ಆಶ್ಚರ್ಯ ಪಡುತ್ತಾ ಇದ್ದಾರೆ. ಈ ರೈತ ಬೆಳೆಯುತ್ತಿರುವ ಹಲಸಿನ ಹಣ್ಣಿನ ತಳಿಯ ಹೆಸರು ಸಿದ್ದು ಹಲಸಿನ ಹಣ್ಣು. ಈ ಮರ ಇರುವುದು ತುಮಕೂರು ಜಿಲ್ಲೆಯ ಗುಬ್ಬಿತಾಲೂಕಿನ ಜೇಲೂರು ಎಂಬ ಗ್ರಾಮದಲ್ಲಿ. ಇದರ ಮಾಲೀಕ ಎಸ್ ಎಸ್ ಪರಮೇಶ ಅವರು. ತನ್ನ ತಂದೆ ಸಿದ್ದಪ್ಪ ಅವರ ನೆನಪಿಗಾಗಿ ಈ ಹಲಸಿನ ಮರವನ್ನು ನೆಟ್ಟು ಸಿದ್ದು ಎಂದು ನಾಮಕರಣ ಮಾಡಿದ್ದಾರೆ ಹಾಗಾಗಿ ಈ ತಳಿಯ ಹಲಸಿನ ಹಣ್ಣನ್ನು ಅವರ ಹೆಸರಿನಲ್ಲಿಯೇ ಕರೆಯಲಾಗುತ್ತದೆ. ಭಾರತದಲ್ಲಿ ಸುಮಾರು 137ಕ್ಕೂ ಅಧಿಕ ಹಲಸಿನ ಮರದ ತಳಿಗಳು ಇದ್ದು, ಎಲ್ಲ ತಳಿಗಳ ಪೈಕಿ ಸಿದ್ದು ತಳಿಯ ಹಲಸಿನ ಹಣ್ಣು ಎಲ್ಲಕ್ಕಿಂತ ಪ್ರಮುಖ, ಶ್ರೇಷ್ಠ, ವಿಶಿಷ್ಟ ಹಾಗೂ ಹಲಸಿನ ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಎರಡು ವರ್ಷಗಳ ಹಿಂದೆ ಸಿದ್ದು ಹಲಸಿನ ಹಣ್ಣನ್ನು ಪ್ರಯೋಗಾಲಯದಲ್ಲಿ ಪ್ರಯೋಗಕ್ಕೆ ಒಳಪಡಿಸಿದಾಗ ಅದರಲ್ಲಿ ಲಿಕೋಪಿನ್ ಅಂಶ ಹೆಚ್ಚಾಗಿ ಇರುವುದು ಕಂಡುಬಂದಿತ್ತು. 100 ಗ್ರಾಮ್ ಸಿದ್ದು ಹಲಸಿನ ಹಣ್ಣಿನಲ್ಲಿ 2mg ಲಿಕೋಪಿನ್ ಅಂಶ ಇದ್ದು ಬೇರೆ ಹಲಸಿನ ಹಣ್ಣಿಗೆ ಹೋಲಿಸಿದರೆ ಇದು 0.2mg ಮಾತ್ರ ಇರುತ್ತದೆ. ಈ ಲಿಕೋಪಿನ್ ಅಂಶವು ನಮ್ಮ ಹೃದಯ ಸಂಬಂಧಿತ ಕಾಯಿಲೆಗಳಿಗೆ ಸಹಾಯ ಮಾಡುತ್ತದೆ. ಈ ಕಾರಣದಿಂದ ಸಿದ್ದು ಹಲಸಿನ ಹಣ್ಣಿಗೆ ಹಾಗೂ ಸಸಿಗಳಿಗೆ ಭಾರೀ ಪ್ರಮಾಣದ ಬೇಡಿಕೆ ಸೃಷ್ಟಿ ಆಗಿದ್ದು ವರ್ಷಕ್ಕೆ ಸುಮಾರು ಹತ್ತು ಲಕ್ಷ ಸಂಪಾದನೆ ಮಾಡಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಈ ಸಸಿಗಳ ಬೇಡಿಕೆ ಹೆಚ್ಚುತ್ತಲೇ ಇದ್ದು ಒಂದು ಲಕ್ಷ ಸಸಿಗಳ ಬೇಡಿಕೆ ಬರುತ್ತಿದೆ.

ಈ ರೈತ ವರ್ಷಕ್ಕೆ ಸುಮಾರು 4500 ಸಸಿಗಳನ್ನು ಪೂರೈಕೆ ಮಾಡುತ್ತಿದ್ದು ಒಂದು ಸಸಿಗೆ ಸುಮಾರು 200 ರೂಪಾಯಿಗೆ ಮಾರಾಟ ಮಾಡಿ ಸಸಿಗಳಿಂದಲೇ ಸುಮಾರು 9 ಲಕ್ಷ ಆದಾಯ ಗಳಿಸುತ್ತಾ ಇದ್ದಾರೆ. ತನ್ನ ಜೀವನವನ್ನೇ ಬದಲಾಯಿಸಿದ ಈ ಹಲಸಿನ ಮರದ ರಕ್ಷಣೆಗೆ ಎಂದೇ ಈ ರೈತ ಸಿ ಸಿ ಟಿವಿಯನ್ನು ಸಹ ಅಳವಡಿಸಿದ್ದಾರೆ ಇದಕ್ಕೆ ಕಾರಣ ಕಳ್ಳರ ಕಾಟ. ಈ ಸಿದ್ದು ತಳಿಯ ಹಲಸಿನ ಹಣ್ಣಿನ ಅಭಿವೃದ್ಧಿ ಪಡಿಸಬೇಕು ಎಂದು ಆಸ್ಟ್ರೇಲಿಯಾದ ಕಂಪನಿಯು ಬಯಸಿತ್ತು. ಆದರೆ ಭಾರತೀಯ ತೋಟಗಾರಿಕಾ ನಿಯಮದ ಅನ್ವಯ ದೇಶೀಯ ತಳಿಗಳನ್ನ ವಿದೇಶೀಯರಿಗೆ ನೀಡಲು ಸಾಧ್ಯವಿಲ್ಲ ಎಂದು ನಿರಾಕರಿಸಲಾಗಿದೆ. ಸಾಧ್ಯವಾದರೆ ಸಿದ್ದು ತಳಿಯ ಹಲಸಿನ ಸಸಿಯನ್ನ ನೆಟ್ಟು ಬೆಳೆಸಿ.

By

Leave a Reply

Your email address will not be published. Required fields are marked *